ಆದಿಕಾಲದಿಂದಲೂ ಭಾರತವೊಂದು ಹಿಂದೂ ರಾಷ್ಟ್ರ, ಯತೀಂದ್ರಗೆ ಅರಿವಿನ ಕೊರತೆ: ಸಿಟಿ ರವಿ, ಬಿಜೆಪಿ ನಾಯಕ

ಆದಿಕಾಲದಿಂದಲೂ ಭಾರತವೊಂದು ಹಿಂದೂ ರಾಷ್ಟ್ರ, ಯತೀಂದ್ರಗೆ ಅರಿವಿನ ಕೊರತೆ: ಸಿಟಿ ರವಿ, ಬಿಜೆಪಿ ನಾಯಕ

ಅರುಣ್​ ಕುಮಾರ್​ ಬೆಳ್ಳಿ
|

Updated on: Jan 04, 2024 | 11:53 AM

ಪಾಕಿಸ್ತಾನ ಮತ್ತು ಅಪಘಾನಿಸ್ತಾನದ ಹಾಗೆ ಆಗದಂತಿರಲು ಹಿಂದೂ ರಾಷ್ಟ್ರದಲ್ಲಿ ಹಿಂದೂತ್ವದಿಂದ ವ್ಯವಹರಿಸಬೇಕು, ಹಿಂದೂಗಳೆಲ್ಲ ಒಗ್ಗಟ್ಟಾಗಿರಬೇಕು, ಅಲ್ಲಿ ಜಾತೀಯತೆ ಮತ್ತು ಅಸ್ಪೃಶ್ಯತೆಗೆ ಅವಕಾಶ ಇರಬಾರದು. ವಿಷಯ ಯಾವುದೇ ಅಗಿರಲಿ ಹಿಂದೂತ್ವದ ಭಾವದಲ್ಲಿ ನಿರ್ಣಯಗಳನ್ನು ತೆಗೆದುಕೊಳ್ಳಬೇಕು ಎಂದು ಸಿಟಿ ರವಿ ಹೇಳಿದರು.

ಚಿಕ್ಕಮಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಪುತ್ರ ಯತೀಂದ್ರ ಸಿದ್ದರಾಮಯ್ಯ (Yatindra Siddaramaiah) ನಿನ್ನೆ ದಾವಣಗೆರೆಯಲ್ಲಿ, ಬಿಜೆಪಿ ಮತ್ತು ಆರ್ ಎಸ್ ಎಸ್ ಭಾರತವನ್ನು ಹಿಂದೂ ರಾಷ್ಟ್ರ ಮಾಡುವ ಪ್ರಯತ್ನ ನಡೆಸಿದೆ ಅಂತ ಹೇಳಿರುವುದು ರಾಜ್ಯ ಬಿಜೆಪಿ ನಾಯಕರನ್ನು ಕೆರಳಿಸಿದೆ. ನಗರದಲ್ಲಿಂದು ಟಿವಿ9 ವರದಿಗಾರನೊಂದಿಗೆ ಮಾತಾಡಿದ ಮಾಜಿ ಶಾಸಕ ಸಿಟಿ ರವಿ (CT Ravi), ಯತೀಂದ್ರ ಸಿದ್ದರಾಮಯ್ಯ ಅವರಿಗೆ ಭಾರತದ ಸನಾತನ ಸಂಸ್ಕೃತಿ ಮತ್ತು ಧರ್ಮದ ಬಗ್ಗೆ ಅರಿವಿನ ಕೊರತೆ ಇರೋದು ನಿಚ್ಚಳವಾಗಿ ಗೊತ್ತಾಗುತ್ತಿದೆ ಎಂದು ಹೇಳಿದರು. ಭಾರತ ಆದಿಕಾಲದಿಂದಲೂ ಒಂದು ಹಿಂದೂ ರಾಷ್ಟ್ರವಾಗೇ ಗುರುತಿಸಿಕೊಂಡಿದೆ, ಸಾವಿರಾರು ವರ್ಷಗಳಿಂದ ಈ ದೇಶದಲ್ಲಿ ಹಿದೂಗಳು ವಾಸಮಾಡಿಕೊಂಡು ಬಂದಿದ್ದಾರೆ, ಹಿಂದೂಗಳೇ ಇರುವ ದೇಶವನ್ನು ಹಿಂದೂ ರಾಷ್ಟ್ರ ಮಾಡುವ ಪ್ರಶ್ನೆ ಎಲ್ಲಿಂದ ಉದ್ಭವಿಸುತ್ತದೆ? ಇದು ಹಿಂದೂ ರಾಷ್ಟ್ರವೇ ಇಂದು ರವಿ ಹೇಳಿದರು. ಮುಖ್ಯಮಂತ್ರಿ ಸಿದ್ದರಾಮಯ್ಯನವರ ಹುಟ್ಟೂರನ್ನು ಯಾವ ಹೆಸರಿನಿಂದ ಗುರುತಿಸುತ್ತಾರೆ? ಎಂದು ಕೇಳಿದ ರವಿ, ಯತೀಂದ್ರಗೆ ಇತಿಹಾಸದ ಜ್ಞಾನ ಇಲ್ಲ ಅಂತ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ