ಗಡ್ಡೆ ಗೆಣಸು ನೂರಾರು, ಪ್ರಯೋಜನಗಳು ಹಲವಾರು: ಜೋಯಿಡಾದಲ್ಲಿ ನಡೆದ ಪ್ರಸಿದ್ಧ ಗಡ್ಡೆ ಗೆಣಸು ಮೇಳದ ವೈಭವ ಇಲ್ಲಿದೆ

ಗಡ್ಡೆ ಗೆಣಸು ನೂರಾರು, ಪ್ರಯೋಜನಗಳು ಹಲವಾರು: ಜೋಯಿಡಾದಲ್ಲಿ ನಡೆದ ಪ್ರಸಿದ್ಧ ಗಡ್ಡೆ ಗೆಣಸು ಮೇಳದ ವೈಭವ ಇಲ್ಲಿದೆ

ಸೂರಜ್​, ಮಹಾವೀರ್​ ಉತ್ತರೆ
| Updated By: ಸಾಧು ಶ್ರೀನಾಥ್​

Updated on: Jan 04, 2024 | 12:44 PM

ಜೊಯಿಡಾ ತಾಲೂಕಿನಲ್ಲಿ ಕುಣಬಿ ಸಮುದಾಯದ ಸಾವಿರಾರು ಕುಟುಂಬಗಳು ಗಡ್ಡೆ ಗೆಣಸುಗಳನ್ನೇ ಬೆಳೆದು ಜೀವನ ಸಾಗಿಸುತ್ತಿವೆ. ಪ್ರತೀ ವರ್ಷ ಮೇಳದ ಸಂದರ್ಭ ಮಾತ್ರ ಈ‌ ಗಡ್ಡೆ ಗೆಣಸುಗಳು ಭರ್ಜರಿ ಪ್ರದರ್ಶನ, ಮಾರಾಟ‌ ಕಾಣುತ್ತವೆ. ಆದರೆ, ಉಳಿದ ಸಮಯದ ಕೇಳುವವರೇ ಇಲ್ಲದಂತಾಗಿದೆ. ಸರ್ಕಾರ ಗೆಡ್ಢೆ ಗೆಣಸು ಬೆಳೆಯುವ ರೈತ ಸಮುದಾಯಕ್ಕೆ ಉತ್ತೇಜನ ನೀಡಬೇಕಿದೆ.

ಜೊಯಿಡಾ ತಾಲೂಕಿನಲ್ಲಿ ಕುಣಬಿ ಸಮುದಾಯದ ಸಾವಿರಾರು ಕುಟುಂಬಗಳು ಗಡ್ಡೆ ಗೆಣಸುಗಳನ್ನೇ ಬೆಳೆದು ಜೀವನ ಸಾಗಿಸುತ್ತಿವೆ. ಪ್ರತೀ ವರ್ಷ ಮೇಳದ ಸಂದರ್ಭ ಮಾತ್ರ ಈ‌ ಗಡ್ಡೆ ಗೆಣಸುಗಳು ಭರ್ಜರಿ ಪ್ರದರ್ಶನ, ಮಾರಾಟ‌ ಕಾಣುತ್ತವೆ. ಆದರೆ, ಉಳಿದ ಸಮಯದ ಕೇಳುವವರೇ ಇಲ್ಲದಂತಾಗಿದೆ. ಸರ್ಕಾರ ಗೆಡ್ಢೆ ಗೆಣಸು ಬೆಳೆಯುವ ರೈತ ಸಮುದಾಯಕ್ಕೆ ಉತ್ತೇಜನ ನೀಡಬೇಕಿದೆ.

ಗಡ್ಡೆ ಗೆಣಸು ಎಂದ್ರೆ ಕೆಲವೇ ಕೆಲವು ಗಡ್ಡೆಗಳು ಮಾತ್ರ ನಮ್ಮ ನೆನಪಿಗೆ ಬರುತ್ತೆ, ಆದ್ರೆ ಉತ್ತರ ಕನ್ನಡ ಜಿಲ್ಲೆಯ ಜೋಯಿಡಾದಲ್ಲಿ (Joida Uttara Kannada) ನಡೆದ ಪ್ರಸಿದ್ಧ ಗಡ್ಡೆ ಗೆಣಸು ಮೇಳದಲ್ಲಿ 150ಕ್ಕೂ ಹೆಚ್ಚು ಗಡ್ಡೆ ಗೆಣಸುಗಳ ಮಾರಾಟ ಪ್ರದರ್ಶನಗೊಂಡವು (Sweet Potato Village Fair). ಹಾಗಾದ್ರೆ, ಅವು ಯಾವ್ಯಾವ ಗಡ್ಡೆ ಗೆಣಸು? ಅವನ್ನ ಯಾವುದಕ್ಕಾಗಿ ಬಳಸಲಾಗುತ್ತದೆ, ಅದರ ಉಪಯೋಗ ಏನು.. (Health) ಎಂಬುವುದರ ಡಿಟೇಲ್ ವರದಿ ಇಲ್ಲಿದೆ ನೋಡಿ.

ಸಾಮಾನ್ಯವಾಗಿ ಗೆಡ್ಡೆ ಗೆಣಸುಗಳು ಅಂದಾಕ್ಷಣ ನಮ್ಮ ನೆನಪಿಗೆ ಹೆಚ್ಚೆಂದರೆ ಐದರಿಂದ ಹತ್ತು ಗೆಡ್ಡೆಗಳ ಹೆಸರು ನೆನಪಿಗೆ ಬರುತ್ತೆ. ಆದರೆ, ಉತ್ತರಕನ್ನಡ ಜಿಲ್ಲೆಯ ಜೊಯಿಡಾ ಪಟ್ಟಣದ ಕುಣಬಿ ಭವನಕ್ಕೆ ಬಂದಿದ್ದ ಗೆಡ್ಡೆಗಳನ್ನು ನೋಡಿದ್ರೆ ನಿಜವಾಗಿಯೂ ಇಷ್ಟೊಂದು ಗೆಡ್ಡೆ ಗೆಣಸುಗಳಿದೆಯೇ ?ಎಂದು‌ ನೀವು ಬೆರಳು ಮೂಗಿನ ಮೇಲೇರಿಸುವುದರಲ್ಲಿ ಎರಡು ಮಾತಿಲ್ಲ. ಯಾಕಂದ್ರೆ ನಾವೆಂದೂ ಕೇಳಿರದ ಕಂಡಿರದ ಗೆಡ್ಡೆ ಗೆಣಸುಗಳ ಸಂತೆಯೇ ಅಲ್ಲಿ ಬಂದು ಮೈಳೈಸಿತ್ತು.

ಹೌದು, ಜೋಯಿಡಾದ ಗೆಡ್ಡೆ ಗೆಣಸು ಮೇಳ ಆಸಕ್ತರ ಕಿವಿ ನೆಟ್ಟಗಾಗಿಸುತ್ತವಲ್ಲದೇ, ನೂರಾರು ಜನರು ಇಲ್ಲಿಗೆ ಭೇಟಿ ನೀಡುವಂತೆ ಮಾಡುತ್ತದೆ. ಪ್ರತೀ ವರ್ಷ ಸಂಕ್ರಾಂತಿ ಮುನ್ನಾ ದಿನ ನಡೆಯುವ ಈ ಮೇಳದಲ್ಲಿ ಮೂರರಿಂದ ಐದುಕೆಜಿಗಿಂತ ಅಧಿಕ ತೂಗುವ ಗೆಡ್ಡೆಗಳ ರಾಶಿಯೇ ಕಾಣೋದು ಹೆಚ್ಚು. ವಿಭಿನ್ನ ಗಾತ್ರ, ವಿಭಿನ್ನ ರುಚಿಯ ಔಷಧಿಯ ಗುಣವುಳ್ಳ ಗೆಡ್ಡೆಗಳ ಸಂಗ್ರಹವೇ ಈ ಮೇಳದಲ್ಲಿ ಕಾಣುತ್ತದೆ. ಅಲ್ಲದೇ, ಅವುಗಳಿಂದ ಮಾಡಲ್ಪಟ್ಟ ವಿವಿಧ ಬಗೆಯ ತಿಂಡಿ ತಿನಿಸುಗಳ ಸಂಗ್ರಹವೂ ಇಲ್ಲಿರುತ್ತವೆ.

ಇಲ್ಲಿ ರೈತರಿಗೆ ಸ್ಪರ್ಧೆಗಳನ್ನು ಕೂಡಾ ಏರ್ಪಡಿಸಲಾಗುತ್ತಿದ್ದು, ಗೆಡ್ಡೆ ಪ್ರಬೇಧ ಮತ್ತು ಗಾತ್ರಕ್ಕೆ ಅನುಗುಣವಾಗಿ ಬಹುಮಾನ ಕೂಡಾ ನೀಡಲಾಗುತ್ತದೆ. ಕಳೆದ ಎಂಟು ಹತ್ತು ವರ್ಷಗಳಿಂದ ಈ ಮೇಳ ಆಯೋಜಿಸಲಾಗುತ್ತಿದ್ದು, ಪ್ರಸ್ತುತ, ಜೋಯ್ಡಾದ ಈ ಗೆಡ್ಡೆಗಳು ಹೊರ ರಾಜ್ಯದಲ್ಲೂ ಸಾಕಷ್ಟು ಖ್ಯಾತಿ ಪಡೆದುಕೊಂಡಿವೆ. ಕುಣಬಿ ಜನಾಂಗದ ಸಾಕಷ್ಟು ಜನರಿಂದ ಇಲ್ಲಿ ಗೆಡ್ಡೆ- ಗೆಣಸುಗಳ ಪ್ರದರ್ಶನ ನಡೆಯುತ್ತಿದ್ದು, ಇಂತಹ‌ ಕಾರ್ಯಕ್ರಮಗಳನ್ನು ಹೆಚ್ಚೆಚ್ಚು ನಡೆಸಬೇಕು ಅಂತಾರೆ ಇಲ್ಲಿನ ಜನರು.

ಅಂದಹಾಗೆ, ಈ ಮೇಳದ ವಿಶೇಷತೆಯಂದ್ರೆ ಕಾಡು ಮತ್ತು ಕಪ್ಪು ಮಣ್ಣಲ್ಲಿ ಬೆಳೆಯುವ ಗೆಡ್ಡೆಗಳ ಗುಚ್ಚವೇ ಇಲ್ಲಿ ರಾರಾಜಿಸುತ್ತಿತ್ತು. ಬಿಳಿ ಕೋನ್ ಗೆಡ್ಡೆ, ಕೆಂಪ್ ಕೋನ್ ಗೆಡ್ಡೆ, ಅಂಬೆಹಳದ್ ಗೆಡ್ಡೆ, ಸೂರನಗೆಡ್ಡೆ, ದವೆಗೆಡ್ಡೆ, ಕಚ್ಚಿಪುಗೆಡ್ಡೆ, ಕುಸುಗೆಡ್ಡೆ, ವೈಕನ್ಗೆಡ್ಡೆ, ಒಕಾಟೆ ಗೆಡ್ಡೆ, ಚಿರಗೆಗೆಡ್ಡೆ, ಗುಟ್ಟುಗೆಡ್ಡೆ, ಕಾಯಿಮಡಿಗೆಡ್ಡೆ, ಜಾಡ್ಕಣಗೆಡ್ಡೆ, ಗೆಣಸುಗೆಡ್ಡೆ, ಮುಡ್ಲಿಗೆಡ್ಡೆ, ತಂಬಡೆ ಗೆಡ್ಡೆ, ದುಕ್ಕನ್ ಗೆಡ್ಡೆ, ಕೆಂಪು ಗೆಣಸು, ಹಸಿರು ಗೆಣಸು, ಕಪ್ ಗೆಣಸು, ಚಿರಕಾಟೆ ಗೆಡ್ಡೆ ಮುಂತಾದವುಗಳು ಸೇರಿ ಸುಮಾರು 150ಕ್ಕೂ ಅಧಿಕ ಜಾತಿಯ ಗೆಡ್ಡೆಗಳನ್ನು ಈ ಮೇಳದಲ್ಲಿ ಕಾಣಬಹುದು. ವಿಶೇಷವಾಗಿ ಕುಣಬಿ ಜನಾಂಗದ ಮಹಿಳೆಯರೇ ಬೆಳೆಯುವ ಬಗೆ ಬಗೆಯ ಗೆಡ್ಡೆಗಳು ಭರ್ಜರಿ ಮಾರಾಟವಾಗಿದ್ದು, ಗೋವಾ ಮತ್ತು ಮಹಾರಾಷ್ಟ್ರ ರಾಜ್ಯಗಳಿಂದಲೂ ಜನರು ಬಂದು ಇಲ್ಲಿಂದ ಗೆಡ್ಡೆ-ಗೆಣಸು ಖರೀದಿಸುತ್ತಾರೆ.

ಜೊಯಿಡಾ ತಾಲೂಕಿನಲ್ಲಿ ಸಾವಿರಾರು ಕುಣಬಿ ಸಮುದಾಯ ಗಡ್ಡೆ ಗೆಣಸುಗಳನ್ನೇ ಬೆಳೆದು ಜೀವನ ಸಾಗಿಸುತ್ತಿವೆ. ಪ್ರತೀ ವರ್ಷ ಮೇಳದ ಸಂದರ್ಭ ಮಾತ್ರ ಈ‌ ಗಡ್ಡೆ ಗೆಣಸುಗಳು ಭರ್ಜರಿ ಪ್ರದರ್ಶನ, ಮಾರಾಟ‌ ಕಾಣುತ್ತವೆ. ಆದರೆ, ಉಳಿದ ಸಮಯಗಳಲ್ಲಿ ಅವರ ಉತ್ಪನ್ನಗಳನ್ನು ಯಾರೂ ಕೇಳುವವರೇ ಇಲ್ಲದಂತಾಗಿದೆ. ಈ ಕಾರಣದಿಂದ ಸರ್ಕಾರ ಗೆಡ್ಢೆ ಗೆಣಸುಗಳನ್ನು ಬೆಳೆಯುವ ರೈತ ಸಮುದಾಯಕ್ಕೆ ಮತ್ತಷ್ಟು ಉತ್ತೇಜನ ನೀಡಿದ್ದಲ್ಲಿ ಈ ಸಾವಯವ ಗೆಡ್ಡೆ ಬೆಳೆಯುವ ಕುಣಬಿ ಜನಾಂಗದ ಬದುಕು ಹಸನಾಗುತ್ತದೆ.

ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ