
ಕುವೈತ್, ಜುಲೈ 21: ಕುವೈತ್ ಮತ್ತು ಬಹ್ರೇನ್‌ನಲ್ಲಿರುವ ಅಮೆರಿಕ ಮಿಲಿಟರಿ ತಾಣಗಳು ಹಾಗೂ ವಾಯು ರಕ್ಷಣಾ ವ್ಯವಸ್ಥೆಗಳನ್ನು ಗುರಿಯಾಗಿಸಿಕೊಂಡು ಮಂಗಳವಾರ ಭೀಕರ ದಾಳಿ ನಡೆಸಿರುವುದಾಗಿ ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾಪ್ಸ್ (IRGC) ಪ್ರಕಟಿಸಿದೆ. ಅಮೆರಿಕದ ಸೇನಾ ಪಡೆಗಳು ಇರಾನ್ ಮೇಲಿನ ಸರಣಿ ದಾಳಿಗಳನ್ನು ಮುಂದುವರಿಸಿರುವ ಬೆನ್ನಲ್ಲೇ, ಇರಾನ್ (Iran Attack) ಈ ಪ್ರತಿದಾಳಿ ನಡೆಸಿದ್ದು ಮುಂಬರುವ ದಿನಗಳಲ್ಲಿ ಮತ್ತಷ್ಟು ಭೀಕರ ಡ್ರೋನ್ ಮತ್ತು ಕ್ಷಿಪಣಿ ದಾಳಿಗಳನ್ನು ಎದುರಿಸಲು ಸಿದ್ಧರಾಗಿ ಎಂದು ಇರಾನ್ ಎಚ್ಚರಿಕೆ ನೀಡಿದೆ.
ಕುವೈತ್: ಅಲಿ ಅಲ್-ಸೇಲಂ ವಾಯು ನೆಲೆ ಮತ್ತು ‘ಕ್ಯಾಂಪ್ ಆರಿಫ್‌ಜಾನ್’ನಂತಹ ಅಮೆರಿಕ ಪಡೆಗಳ ಪ್ರಮುಖ ವಾಯುನೆಲೆಗಳ ಮೇಲೆ ದಾಳಿ ನಡೆದಿದೆ.
ಬಹ್ರೇನ್: ಅಮೆರಿಕದ ನೌಕಾಪಡೆಯ ಅತ್ಯಂತ ಪ್ರಮುಖ ಯುದ್ಧ ಕೇಂದ್ರವಾದ ಯುಎಸ್ ನೇವಿ 5ನೇ ಫ್ಲೀಟ್ ಕೇಂದ್ರ ಕಚೇರಿ ಇರುವ ಜುಫೈರ್ ಪ್ರದೇಶವನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗಿದೆ.
ಇದನ್ನೂ ಓದಿ: ಮೊಜ್ತಬಾ ಖಮೇನಿ ಇರಾನ್‌ನಲ್ಲಿಯೇ ಇಲ್ಲವಂತೆ; ಇಸ್ರೇಲ್ ಹೇಳಿದ್ದೇನು?
ಈ ದಾಳಿ ನಡೆಸಿದ ಬೆನ್ನಲ್ಲೇ ಇರಾನ್‌ನ ಮಿಲಿಟರಿ ಕಾರ್ಯಾಚರಣೆ ಆಡಳಿತ ಮಂಡಳಿಯು ಅಧಿಕೃತ ಪ್ರಕಟಣೆ ಹೊರಡಿಸಿದ್ದು, ಅಮೆರಿಕಕ್ಕೆ ಖಡಕ್ ಎಚ್ಚರಿಕೆ ನೀಡಿದೆ. “ಅಮೆರಿಕವು ನಮ್ಮ ಭೂಪ್ರದೇಶ, ನಮ್ಮ ಹಿತಾಸಕ್ತಿಗಳು ಅಥವಾ ನಮ್ಮ ಸಾರ್ವಭೌಮತ್ವದ ಮೇಲೆ ದಾಳಿ ಮಾಡಲು ಯತ್ನಿಸಿದರೆ ಅಥವಾ ಈ ಪ್ರದೇಶದಲ್ಲಿರುವ ತನ್ನ ನೆಲೆಗಳನ್ನು ನಮ್ಮ ವಿರುದ್ಧ ಬಳಸಿದರೆ, ನಾವು ಅಮೆರಿಕದ ಪ್ರತಿಯೊಂದು ನೆಲೆಯನ್ನು ಧೂಳಿಪಟ ಮಾಡುತ್ತೇವೆ. ಅಷ್ಟೇ ಅಲ್ಲದೆ, ಅಮೆರಿಕಕ್ಕೆ ಸಹಕರಿಸುವ ಅಥವಾ ತನ್ನ ಭೂಪ್ರದೇಶವನ್ನು ಅಮೆರಿಕದ ಮಿಲಿಟರಿಗೆ ಬಿಟ್ಟುಕೊಡುವ ಎಲ್ಲ ನೆರೆಹೊರೆಯ ರಾಷ್ಟ್ರವನ್ನೂ ನಾವು ಇರಾನ್‌ನ ಶತ್ರು ಎಂದು ಪರಿಗಣಿಸಿ, ಅವರ ಮೇಲೆಯೂ ಭೀಕರ ದಾಳಿ ನಡೆಸುತ್ತೇವೆ” ಎಂದು ಇರಾನ್ ಎಚ್ಚರಿಕೆ ನೀಡಿದೆ.
ಇದನ್ನೂ ಓದಿ: ಕುವೈತ್‌ನ ಪ್ರಮುಖ ವಿದ್ಯುತ್ ಸ್ಥಾವರದ ಮೇಲೆ ಇರಾನ್ ದಾಳಿ: ದಟ್ಟ ಹೊಗೆ, ಭಾರಿ ಬೆಂಕಿ
ಇರಾನ್‌ನ ದಾಳಿ ತೀವ್ರಗೊಳ್ಳುತ್ತಿದ್ದಂತೆ ಕುವೈತ್ ಮತ್ತು ಬಹ್ರೇನ್ ಸೇರಿದಂತೆ ಗಲ್ಫ್ ಪ್ರದೇಶದಾದ್ಯಂತ ನಾಗರಿಕ ವಿಮಾನ ಸಂಚಾರವನ್ನು ರದ್ದುಗೊಳಿಸಲಾಗಿದೆ ಮತ್ತು ವಾಯುಪ್ರದೇಶವನ್ನು ಹೈ ಅಲರ್ಟ್‌ನಲ್ಲಿ ಇರಿಸಲಾಗಿದೆ. ಈ ದಾಳಿಯ ನಂತರ ಅಮೆರಿಕದ ಮೈಕ್ರೋ-ಡಿಫೆನ್ಸ್ ಏರ್ ಸಿಸ್ಟಮ್‌ಗಳು ಕ್ಷಿಪಣಿಗಳನ್ನು ತಡೆಯಲು ಯತ್ನಿಸಿವೆ. ಅಮೆರಿಕ ತಕ್ಷಣವೇ ಪ್ರತಿದಾಳಿ ನಡೆಸುವ ಮುನ್ಸೂಚನೆ ನೀಡಿದೆ. ಈ ಸರಣಿ ದಾಳಿಗಳಿಂದಾಗಿ ಇಡೀ ಗಲ್ಫ್ ಪ್ರದೇಶವು ಸಂಪೂರ್ಣ ಯುದ್ಧಭೂಮಿಯಾಗಿ ಮಾರ್ಪಡುವ ಭೀತಿ ಎದುರಾಗಿದ್ದು, ಜಾಗತಿಕ ತೈಲ ಪೂರೈಕೆ ಮತ್ತು ಅಂತಾರಾಷ್ಟ್ರೀಯ ಷೇರು ಮಾರುಕಟ್ಟೆಗಳ ಮೇಲೆಯೂ ತೀವ್ರ ಪರಿಣಾಮ ಬೀರುವ ಸಾಧ್ಯತೆಯಿದೆ.
ಟ್ರಂಪ್ ಬೆದರಿಕೆ:
ಕುವೈತ್, ಜೋರ್ಡಾನ್ ಮತ್ತು ಬಹ್ರೇನ್‌ನಲ್ಲಿರುವ ಅಮೆರಿಕ ಸೇನಾ ನೆಲೆಗಳ ಮೇಲಿನ ಇರಾನ್ ದಾಳಿಯಲ್ಲಿ ಮತ್ತೊಬ್ಬ ಅಮೆರಿಕನ್ ಸೈನಿಕ ಮೃತಪಟ್ಟಿದ್ದು, ಒಟ್ಟು ಮೃತರ ಸಂಖ್ಯೆ 17ಕ್ಕೆ ಏರಿಕೆಯಾಗಿದೆ. ಇದಕ್ಕೆ ತಮ್ಮ ಟ್ರುತ್ ಸೋಶಿಯಲ್ ಜಾಲತಾಣದಲ್ಲಿ ಪ್ರತಿಕ್ರಿಯಿಸಿರುವ ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್, “ಇರಾನ್ ಪ್ರತಿ ಬಾರಿ ಒಬ್ಬ ಅಮೆರಿಕನ್ ಸೈನಿಕನನ್ನು ಕೊಂದಾಗಲೂ, ಅದಕ್ಕೆ ಹಲವು ಪಟ್ಟು ಹೆಚ್ಚಿನ ಬೆಲೆಯನ್ನು ತೆರಬೇಕಾಗುತ್ತದೆ!” ಎಂದು ಬೆದರಿಕೆ ಹಾಕಿದ್ದಾರೆ.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:33 pm, Tue, 21 July 26