
ಟೆಹ್ರಾನ್, ಜೂನ್ 16: ಇಸ್ರೇಲ್ ಇರಾನ್ ಮೇಲೆ ಪರಮಾಣು ಬಾಂಬ್ ಹಾಕಿದರೆ ಪಾಕಿಸ್ತಾನವು (Pakistan) ಇಸ್ರೇಲ್ (Israel) ಮೇಲೆ ಪರಮಾಣು ದಾಳಿ ನಡೆಸುತ್ತದೆ ಎಂದು ಇರಾನ್‌ನ ಉನ್ನತ ಅಧಿಕಾರಿಯೊಬ್ಬರು ಹೇಳಿದ್ದಾರೆ. ಯಹೂದಿ ರಾಷ್ಟ್ರವಾದ ಇಸ್ರೇಲ್ ಇರಾನ್ (Iran) ಮೇಲೆ ಪರಮಾಣು ಶಸ್ತ್ರಾಸ್ತ್ರಗಳನ್ನು ಬಳಸಿದರೆ ಪಾಕಿಸ್ತಾನ ಇಸ್ರೇಲ್ ಮೇಲೆ ಪರಮಾಣು ದಾಳಿ ನಡೆಸುತ್ತದೆ ಎಂದು ಇರಾನಿನ ಹಿರಿಯ ಅಧಿಕಾರಿಯೊಬ್ಬರು ಹೇಳಿಕೊಂಡಿದ್ದಾರೆ. ಆದರೆ ಈ ಹೇಳಿಕೆಯನ್ನು ಇಸ್ಲಾಮಾಬಾದ್ ತಕ್ಷಣವೇ ತಿರಸ್ಕರಿಸಿದೆ.
ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆಯ ನಡುವೆ ಇರಾನಿನ ಈ ಹೇಳಿಕೆ ಹೊರಬಿದ್ದಿದೆ. ಇರಾನ್ ಮತ್ತು ಇಸ್ರೇಲ್ ನಡುವೆ ಕ್ಷಿಪಣಿಗಳ ಸುರಿಮಳೆಯಾದಾಗ ಇರಾನ್ ದೂರದರ್ಶನಕ್ಕೆ ನೀಡಿದ ಸಂದರ್ಶನದಲ್ಲಿ ಜನರಲ್ ಮೊಹ್ಸೆನ್ ರೆಝಾಯ್ ಈ ಹೇಳಿಕೆ ನೀಡಿದ್ದಾರೆ. ಇಲ್ಲಿಯವರೆಗೆ, ಎರಡೂ ದೇಶಗಳಲ್ಲಿ ಸುಮಾರು 248 ಸಾವುಗಳು (ಇರಾನ್- 230 ಮತ್ತು ಇಸ್ರೇಲ್ – 18) ವರದಿಯಾಗಿವೆ.
ಇದನ್ನೂ ಓದಿ: Israel-Iran conflict: ಇಸ್ರೇಲ್ನಲ್ಲಿ ಸಿಲುಕಿದ 40 ಸಾವಿರ ಪ್ರವಾಸಿಗರು, ಸೈರನ್ ಸದ್ದು, ಕ್ಷಿಪಣಿ ದಾಳಿಗೆ ಬೆದರಿದ ಜನ
“ಇಸ್ರೇಲ್ ಇರಾನ್ ಮೇಲೆ ಪರಮಾಣು ಬಾಂಬ್ ಬಳಸಿದರೆ ನಾವು ಇಸ್ರೇಲ್ ಮೇಲೆ ಪರಮಾಣು ಬಾಂಬ್ ದಾಳಿ ಮಾಡುವುದಾಗಿ ಪಾಕಿಸ್ತಾನ ನಮಗೆ ಭರವಸೆ ನೀಡಿದೆ” ಎಂದು ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಹಿರಿಯ ಅಧಿಕಾರಿ ಮತ್ತು ಇರಾನ್‌ನ ರಾಷ್ಟ್ರೀಯ ಭದ್ರತಾ ಮಂಡಳಿಯ ಸದಸ್ಯ ರೆಝಾಯ್ ಹೇಳಿದ್ದಾರೆ.
“ಇಸ್ರೇಲ್ ಇರಾನ್ ಮೇಲೆ ಪರಮಾಣು ಬಾಂಬ್ ಬಳಸಿದರೆ, ಪಾಕಿಸ್ತಾನ ಕೂಡ ಇಸ್ರೇಲ್ ಮೇಲೆ ಪರಮಾಣು ಬಾಂಬ್ ದಾಳಿ ಮಾಡುತ್ತದೆ ಎಂದು ಪಾಕಿಸ್ತಾನ ನಮಗೆ ತಿಳಿಸಿದೆ” ಎಂದು ಇರಾನ್‌ನ ರಾಷ್ಟ್ರೀಯ ಭದ್ರತಾ ಮಂಡಳಿಯ ಸದಸ್ಯ ಮತ್ತು ಇಸ್ಲಾಮಿಕ್ ಕ್ರಾಂತಿಕಾರಿ ಗಾರ್ಡ್ ಕಾರ್ಪ್ಸ್ (IRGC)ನ ಉನ್ನತ ಕಮಾಂಡರ್ ಜನರಲ್ ಮೊಹ್ಸೆನ್ ರೆಜೈ ಹೇಳಿದರು. ಕಳೆದ 3 ದಿನಗಳಿಂದ ಎರಡೂ ರಾಷ್ಟ್ರಗಳು ನೇರ ಕ್ಷಿಪಣಿ ವಿನಿಮಯದಲ್ಲಿ ತೊಡಗಿರುವ ಇರಾನ್ ಮತ್ತು ಇಸ್ರೇಲ್ ನಡುವೆ ಹಗೆತನ ಹೆಚ್ಚುತ್ತಿರುವ ಮಧ್ಯೆ ಈ ಹೇಳಿಕೆ ಬಂದಿದೆ.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:18 pm, Mon, 16 June 25