Iran Hijab Protest: ಅತ್ಯಾಚಾರವನ್ನೂ ಪ್ರತಿಭಟನೆ ಹತ್ತಿಕ್ಕುವ ಅಸ್ತ್ರವಾಗಿಸಿಕೊಂಡ ಇರಾನ್ ಪೊಲೀಸರು, ಲೈಂಗಿಕ ದೌರ್ಜನ್ಯದ ಆರೋಪ

|

Updated on: Nov 23, 2022 | 9:34 AM

ಬಂಧಿತರಾದ ಪ್ರತಿಭಟನಾಕಾರರು ಚಿತ್ರಹಿಂಸೆ, ಲೈಂಗಿಕ ದೌರ್ಜನ್ಯದಂತಹ ನರಕಯಾತನೆಯನ್ನು ಅನುಭವಿಸುತ್ತಿದ್ದಾರೆ ಎಂದು ಸ್ವಯಂ ಸೇವಕರ ಸಮಿತಿಯೊಂದು ತನಿಖೆ ನಡೆಸಿ ಬೆಚ್ಚಿಬೀಳಿಸುವ ಸತ್ಯ ಬಯಲು ಮಾಡಿದೆ.

Iran Hijab Protest: ಅತ್ಯಾಚಾರವನ್ನೂ ಪ್ರತಿಭಟನೆ ಹತ್ತಿಕ್ಕುವ ಅಸ್ತ್ರವಾಗಿಸಿಕೊಂಡ ಇರಾನ್ ಪೊಲೀಸರು, ಲೈಂಗಿಕ ದೌರ್ಜನ್ಯದ ಆರೋಪ
ಇರಾನ್ ಪ್ರತಿಭಟನೆ
Image Credit source: AFP
Follow us on

ತೆಹರಾನ್: ಇರಾನ್​ನಲ್ಲಿ ಹಿಜಾಬ್ ವಿರೋಧಿ ಹೋರಾಟಗಳು ದಿನೇ ದಿನೇ ಹೆಚ್ಚು ಹಿಂಸಾತ್ಮಕ ಸ್ವರೂಪ ಪಡೆದುಕೊಳ್ಳುತ್ತಿದೆ. ಮಹಿಳೆಯರ ಮೇಲೆ ದೌರ್ಜನ್ಯ, ಹಿಂಸೆ, ಸಾವು ಎಲ್ಲವೂ ಹೆಚ್ಚಾಗುತ್ತಿದೆ. ಇದರ ನಡುವೆ ಪ್ರತಿಭಟನೆಗಳಲ್ಲಿ ಭಾಗವಹಿಸಿದ್ದ 21 ವರ್ಷದ ಇರಾನ್ ಯುವತಿ ಅರ್ಮಿತಾ ಅಬ್ಬಾಸಿ ಅವರ ಜೀವಕ್ಕೆ ಅಪಾಯವಿದೆ ಎಂದು ಹೇಳಿ ಯುವತಿಯ ತಾಯಿ ಇನ್‌ಸ್ಟಾಗ್ರಾಮ್‌ನಲ್ಲಿ ತಮ್ಮ ಮಗಳ ಫೋಟೋ ಪೋಸ್ಟ್ ಮಾಡಿದ್ದಾರೆ. ಅರ್ಮಿತಾ ಕೊನೆಯದಾಗಿ ಇಮಾಮ್ ಅಲಿ ಕರಾಜ್ ಆಸ್ಪತ್ರೆಯಲ್ಲಿ ಕಾಣಿಸಿಕೊಂಡಿದ್ದಳು, ಅಲ್ಲಿಂದ ಅಕ್ಟೋಬರ್ 18 ರಂದು ಐಆರ್‌ಜಿಸಿಗೆ (ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್) ಸೇರಿದವರು ನನ್ನ ಮಗಳನ್ನು ಅಪಹರಿಸಿದ್ದಾರೆ. ಆಕೆಯನ್ನು ಅಜ್ಞಾತ ಸ್ಥಳಕ್ಕೆ ಕರೆದೊಯ್ದಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಅರ್ಮಿತಾ ಅಬ್ಬಾಸಿಗೆ ಅತ್ಯಾಚಾರ ಮಾಡಿ ಚಿತ್ರಹಿಂಸೆ ನೀಡಲಾಗಿದೆ

ಇನ್ನು ಆಸ್ಪತ್ರೆಯ ಸಿಬ್ಬಂದಿ ಪ್ರಕಾರ ಅರ್ಮಿತಾ ತೀವ್ರ ರಕ್ತಸ್ರಾವದಿಂದ ಬಳಲುತ್ತಿದ್ದು ಆಕೆಯ ಮೇಲೆ ನಿರಂತರ ಅತ್ಯಾಚಾರ ಎಸಗಲಾಗಿದೆ ಹಾಗೂ ಚಿತ್ರಹಿಂಸೆ ನೀಡಲಾಗಿದೆ ಎಂದು ತಿಳಿಸಿದ್ದಾರೆ. ತಮ್ಮ ಮಗಳು ಆಸ್ಪತ್ರೆಯಲ್ಲಿ ಇರುವುದನ್ನು ತಿಳಿದು ಆಸ್ಪತ್ರೆಗೆ ಬರುವರ್ಷರಲ್ಲಿ ಅರ್ಮಿತಾಳನ್ನು ಐಆರ್‌ಜಿಸಿ ಅಪಹರಿಸಿದ್ದಾರೆ ಎನ್ನಲಾಗಿದೆ.

ಪ್ರತಿಭಟನೆಯಲ್ಲಿ ಬಂಧಿತರಾದವರಿಗೆ ಚಿತ್ರಹಿಂಸೆ

ಮತ್ತೊಂದೆಡೆ ಇರಾನ್​​ ಹೋರಾಟದಲ್ಲಿ ಭಾಗಿಯಾಗಿ ಬಂಧಿತರಾದ ಪ್ರತಿಭಟನಾಕಾರರು ಚಿತ್ರಹಿಂಸೆ, ಲೈಂಗಿಕ ದೌರ್ಜನ್ಯದಂತಹ ನರಕಯಾತನೆಯನ್ನು ಅನುಭವಿಸುತ್ತಿದ್ದಾರೆ ಎಂದು ಸ್ವಯಂ ಸೇವಕರ ಸಮಿತಿಯೊಂದು ತನಿಖೆ ನಡೆಸಿ ಬೆಚ್ಚಿಬೀಳಿಸುವ ಸತ್ಯ ಬಯಲು ಮಾಡಿದೆ.

ಇರಾನ್​ನಲ್ಲಿ ಬಂಧಿತ ಪ್ರತಿಭಟನಾಕಾರರ ಸ್ಥಿತಿಯ ಬಗ್ಗೆ ಸ್ವಯಂ ತನಿಖೆಗೆ ಇಳಿದ ಸಮಿತಿಯೊಂದು, ಅಲ್ಲಿ ಬಂಧಿತರಾದ ಪ್ರತಿಭಟನಾಕಾರರ ಮೇಲೆ ಲೈಂಗಿಕ ದೌರ್ಜನ್ಯ, ಕಿರುಕುಳ, ಅತ್ಯಾಚಾರ ಎಸಗಲಾಗುತ್ತಿದೆ, ಚಿತ್ರಹಿಂಸೆ ನೀಡಿ ನರಳುವಂತೆ ಮಾಡುತ್ತಿದ್ದಾರೆ. ವೈದ್ಯಕೀಯ ಸೇವೆಗಳನ್ನೂ ಬಂದು ಬಂದಿದ್ದಾರೆ. ಕೆಲವು ಬಂಧಿತರನ್ನು ರಹಸ್ಯ ಸ್ಥಳಗಳಲ್ಲಿ ಇರಿಸಲಾಗಿದೆ. ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ ಎಂದು ವರದಿ ನೀಡಿದೆ. 65 ಅಪ್ರಾಪ್ತ ವಯಸ್ಕರು ಸೇರಿದಂತೆ 1,600 ಕ್ಕೂ ಹೆಚ್ಚು ಪ್ರತಿಭಟನಾಕಾರರನ್ನು ಕೈದಿಗಳಂತೆ ಬಂಧಿಸಿಟ್ಟಿದ್ದಾರೆ ಎಂದು ಸಮಿತಿ ತಿಳಿಸಿದೆ.

ಇದನ್ನೂ ಓದಿ: Iran Terror Attack: ಇರಾನ್​ನ ಷಿಯಾ ಯಾತ್ರಾ ಸ್ಥಳದಲ್ಲಿ ಉಗ್ರರಿಂದ ಗುಂಡಿನ ದಾಳಿ; 15 ಮಂದಿ ಸಾವು

ಈ ಬಂಧಿತ ಪ್ರತಿಭಟನಾಕಾರರಲ್ಲಿ 969 ಸಾಮಾನ್ಯ ನಾಗರಿಕರು, 393 ವಿದ್ಯಾರ್ಥಿಗಳು, 145 ನಾಗರಿಕ ಕಾರ್ಯಕರ್ತರು, 42 ಪತ್ರಕರ್ತರು, 40 ರಾಜಕೀಯ ಕಾರ್ಯಕರ್ತರು, 38 ಮಹಿಳಾ ಹಕ್ಕುಗಳ ಕಾರ್ಯಕರ್ತರು ಮತ್ತು 26 ವಕೀಲರು ಸೇರಿದ್ದಾರೆ. ಈ ಸಮಿತಿಯ ಪ್ರಕಾರ, ಇನ್ನೂ ಕೆಲವರಿಗೆ ಬಂಧನ ಮತ್ತು ಅವರ ಕುಟುಂಬ ಸದಸ್ಯರ ಕಿರುಕುಳದ ಬೆದರಿಕೆ ಇದೆ ಎನ್ನಲಾಗಿದೆ.

ವಾರದಲ್ಲೇ 70 ಸಾವು

ಇರಾನ್ ಭದ್ರತಾ ಪಡೆಗಳು ಕುರ್ದಿಷ್ ಜನನಿಬಿಡ ಪ್ರದೇಶಗಳಲ್ಲಿ ಕಳೆದ ಒಂದು ವಾರದಲ್ಲೇ ಸುಮಾರು 56ರಿಂದ72 ಜನರನ್ನು ಕೊಂದಿದ್ದಾರೆ ಎಂದು ಎನ್​ಜಿಒ ಒಂದು ವರದಿ ನೀಡಿದೆ.

ಪೊಲೀಸ್ ಕಸ್ಟಡಿಯಲ್ಲಿದ್ದಾಗ 22 ವರ್ಷ ವಯಸ್ಸಿನ ಅಮಿನಿ ಸಾವಿನಿಂದ ಸೆಪ್ಟೆಂಬರ್ ಮಧ್ಯದಲ್ಲಿ ಹುಟ್ಟಿಕೊಂಡ ಈ ಹಿಜಾಬ್ ಪ್ರತಿಭಟನೆ ಜನಾಂಗೀಯತೆ, ಸಾಮಾಜಿಕ ವರ್ಗಗಳು ಮತ್ತು ಪ್ರಾಂತೀಯ ಗಡಿಗಳನ್ನು ಕತ್ತರಿಸಿ 1979 ರ ಇಸ್ಲಾಮಿಕ್ ಕ್ರಾಂತಿಯ ನಂತರ ಇರಾನ್‌ನ ಪಾದ್ರಿಗಳ ನಾಯಕತ್ವಕ್ಕೆ ದೊಡ್ಡ ಸವಾಲಾಗಿ ಮಾರ್ಪಟ್ಟಿವೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಆಕ್ರೋಶವನ್ನು ಹುಟ್ಟುಹಾಕಿರುವ ಈ ಹಿಜಾಬ್ ವಿರೋಧಿ ಪ್ರತಿಭಟನೆಗೆ ಇರಾನ್ ಭದ್ರತಾ ಪಡೆಗಳು ಹಿಂಸಾತ್ಮಕ ರೀತಿಯಲ್ಲಿ ಪ್ರತಿಕ್ರಿಯಿಸುತ್ತಿವೆ. ಕಳೆದ 2 ತಿಂಗಳಿಂದ ನಡೆಯುತ್ತಿರುವೆ ಈ ಹಿಂಸಾತ್ಮಕ ಪ್ರತಿಭಟನೆಯಲ್ಲಿ ಸಾವಿರಾರು ಜನ ಬಂಧನಕ್ಕೊಳಗಾಗಿ ಚಿತ್ರ ಹಿಂಸೆ ಅನುಭವಿಸುತ್ತಿದ್ದಾರೆ. ನೂರಾರು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.

ಇನ್ನು ಪ್ರತಿಭಟನೆಗಳಲ್ಲಿ ಭಾಗವಹಿಸಿದ 40 ವಿದೇಶಿಯರನ್ನು ಬಂಧಿಸಿರುವುದಾಗಿ ಇರಾನ್ ಘೋಷಿಸಿದೆ. ಬಂಧಿತ ವಿದೇಶಿ ಪ್ರಜೆಗಳನ್ನು ದೇಶದ ಆಂತರಿಕ ಕಾನೂನುಗಳ ಪ್ರಕಾರ ವಿಚಾರಣೆಗೆ ಒಳಪಡಿಸಲಾಗುವುದು ಎಂದು ಇರಾನ್‌ನ ನ್ಯಾಯಾಂಗ ವಕ್ತಾರ ಮಸೂದ್ ಸತೈಶಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 9:08 am, Wed, 23 November 22