ಗೃಹ ನಿರ್ಮಾಣ ಯೋಜನೆ ವಿರೋಧಿಸಿ ಬಂಡಾಯವೆದ್ದ 47 ಸಂಸದರು, ರಿಷಿ ಸುನಕ್ಗೆ ಮತ್ತೊಂದು ಸಂಕಷ್ಟ?
ಸಾಂಪ್ರದಾಯಿಕವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಪ್ರಾಬಲ್ಯ ಹೊಂದಿರುವ ಕನ್ಸರ್ವೇಟಿವ್ ಪಕ್ಷದೊಳಗೆ ಮನೆ ನಿರ್ಮಾಣವು ಬಹಳ ಹಿಂದಿನಿಂದಲೂ ಘರ್ಷಣೆ ನಡೆದು ಬರುತ್ತಿದೆ. ಬಂಡಾಯಗಾರರಿಗೆ ತಮ್ಮ ಕ್ಷೇತ್ರದಲ್ಲಿ ಟೀಕೆಗಳು ಕೇಳಿ ಬರಬಹುದು ಎಂಬ ಆತಂಕದಿಂದ ಮನೆಗಳನ್ನು ಎಲ್ಲಿ ನಿರ್ಮಿಸಬೇಕು ಎಂಬುದರ ಕುರಿತು ಸ್ಥಳೀಯ ಸಮುದಾಯಗಳೇ ಹೇಳಬೇಕು ಎಂದು ವಾದಿಸುತ್ತಾರೆ.
ಯುಕೆ(UK Prime Minister) ಪ್ರಧಾನಿ ರಿಷಿ ಸುನಕ್ (Rishi Sunak) ಈಗ ತಮ್ಮ ಪಕ್ಷದ ಸಂಸದರ ಬಂಡಾಯವನ್ನು ಎದುರಿಸುತ್ತಿದ್ದಾರೆ. ಈ ಸಂಸದರು ಸರ್ಕಾರದ ಗೃಹನಿರ್ಮಾಣ ಯೋಜನೆಗಳನ್ನು ವಿರೋಧಿಸುತ್ತಿದ್ದು ಕೌನ್ಸಿಲ್‌ಗಳಿಗೆ ನೀಡಲಾದ ಗುರಿಗಳನ್ನು ಕೊನೆಗೊಳಿಸಬೇಕೆಂದು ಒತ್ತಾಯಿಸುತ್ತಿದ್ದಾರೆ.ಮಾಜಿ ಕ್ಯಾಬಿನೆಟ್ ಸಚಿವೆ ಥೆರೆಸಾ ವಿಲಿಯರ್ಸ್ ನೇತೃತ್ವದ 47 ಟೋರಿ ಸಂಸದರು ಕಡ್ಡಾಯವಾದ ಸ್ಥಳೀಯ ವಸತಿ ಗುರಿಗಳನ್ನು ತೆಗೆದುಹಾಕಲು ಮತ್ತು ತಮ್ಮನ್ನು ಸಲಹೆಗಾರರನ್ನಾಗಿ ಮಾತ್ರ ಮಾಡಲು ತಿದ್ದುಪಡಿಗೆ ಸಹಿ ಹಾಕಿದ್ದಾರೆ ಎಂದು ದಿ ಗಾರ್ಡಿಯನ್ ವರದಿ ಮಾಡಿದೆ.ಈ ಕ್ರಮವನ್ನು ಡಾಮಿಯನ್ ಗ್ರೀನ್, ಎಸ್ತರ್ ಮೆಕ್ವೆ, ಪ್ರೀತಿ ಪಟೇಲ್, ಕ್ರಿಸ್ ಗ್ರೇಲಿಂಗ್ ಮತ್ತು ಇಯಾನ್ ಡಂಕನ್ ಸ್ಮಿತ್ ಸೇರಿದಂತೆ ಮಾಜಿ ಕ್ಯಾಬಿನೆಟ್ ಸಚಿವರು ಬೆಂಬಲಿಸಿದ್ದಾರೆ. ಟ್ರೇಸಿ ಕ್ರೌಚ್, ಖಜಾನೆ ಆಯ್ಕೆ ಸಮಿತಿ ಅಧ್ಯಕ್ಷ ಹ್ಯಾರಿಯೆಟ್ ಬಾಲ್ಡ್ವಿನ್, ವಿದೇಶಾಂಗ ವ್ಯವಹಾರಗಳ ಸಮಿತಿ ಅಧ್ಯಕ್ಷ ಅಲಿಸಿಯಾ ಕಿರ್ನ್ಸ್ ಮತ್ತು ಮರಿಯಾ ಮಿಲ್ಲರ್ ಸೇರಿದಂತೆ ಇತರ ಪ್ರಮುಖ ಸದಸ್ಯರು ವಿರೋಧಿಸಿದ್ದಾರೆ ಎಂದು ಮಾಧ್ಯಮ ವರದಿ ಮಾಡಿದೆ. ಬಂಡುಕೋರರೊಂದಿಗಿನ ಬಿಕ್ಕಟ್ಟು,ಕಳವಳಗಳ ನಡುವೆಯೇ ಸರ್ಕಾರ ಸೋಮವಾರ ಮಸೂದೆಯ ಮೇಲೆ ಮತ ಚಲಾಯಿಸಲು ಸಿದ್ಧವಾಗಿದೆ. ಲೇಬರ್ ಮತ್ತು ಇತರ ವಿರೋಧ ಪಕ್ಷಗಳು ಬಂಡುಕೋರರನ್ನು ಬೆಂಬಲಿಸಿದರೆ ಸರ್ಕಾರ ಸೋಲು ಅನುಭವಿಸಬಹುದು.
ಸಾಂಪ್ರದಾಯಿಕವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಪ್ರಾಬಲ್ಯ ಹೊಂದಿರುವ ಕನ್ಸರ್ವೇಟಿವ್ ಪಕ್ಷದೊಳಗೆ ಮನೆ ನಿರ್ಮಾಣವು ಬಹಳ ಹಿಂದಿನಿಂದಲೂ ಘರ್ಷಣೆ ನಡೆದು ಬರುತ್ತಿದೆ. ಬಂಡಾಯಗಾರರಿಗೆ ತಮ್ಮ ಕ್ಷೇತ್ರದಲ್ಲಿ ಟೀಕೆಗಳು ಕೇಳಿ ಬರಬಹುದು ಎಂಬ ಆತಂಕದಿಂದ ಮನೆಗಳನ್ನು ಎಲ್ಲಿ ನಿರ್ಮಿಸಬೇಕು ಎಂಬುದರ ಕುರಿತು ಸ್ಥಳೀಯ ಸಮುದಾಯಗಳೇ ಹೇಳಬೇಕು ಎಂದು ವಾದಿಸುತ್ತಾರೆ. ಕೇಂದ್ರ ಗುರಿಯು ದೇಶದ ವಿವಿಧ ಭಾಗಗಳಲ್ಲಿನ ವಿಭಿನ್ನ ಒತ್ತಡಗಳನ್ನು ಗುರುತಿಸಲು ಸಾಧ್ಯವಿಲ್ಲ ಎಂದು ಸಂಭಾವ್ಯ ಬಂಡಾಯಗಾರ ಡಾಮಿಯನ್ ಗ್ರೀನ್ ಕನ್ಸರ್ವೇಟಿವ್ ಹೋಮ್ ವೆಬ್‌ಸೈಟ್‌ನಲ್ಲಿ ಬರೆದಿದ್ದಾರೆ.
ವಾಸ್ತವ ಪ್ರಪಂಚದಲ್ಲಿ ಮನೆ ಬೆಲೆಗಳ ರಾಷ್ಟ್ರೀಯ ಸರಾಸರಿ ಅರ್ಥವಿಲ್ಲದ್ದು. ಏಕೆಂದರೆ ಅದೇ ಮನೆಯು ಸುಂದರ್‌ಲ್ಯಾಂಡ್‌ನ ಹೊರವಲಯದಲ್ಲಿ ಮತ್ತು ಸೆವೆನೋಕ್ಸ್‌ನ ಹೊರವಲಯದಲ್ಲಿರುವ ಬೆಲೆಗಿಂತ ಹಲವು ಪಟ್ಟು ಹೆಚ್ಚಾಗಿರುತ್ತದೆ. ಇದಕ್ಕಾಗಿಯೇ ನಮಗೆ ಪ್ರತಿ ಪ್ರದೇಶದಲ್ಲಿ ಅಗತ್ಯವಿರುವ ಅಭಿವೃದ್ಧಿಯ ಪ್ರಮಾಣದ ಬಗ್ಗೆ ಸ್ಥಳೀಯ ಯೋಜನೆಗಳಲ್ಲಿ ವ್ಯಕ್ತಪಡಿಸಲಾದ ಸ್ಥಳೀಯ ನಿರ್ಧಾರಗಳು ಬೇಕಾಗುತ್ತವೆ ಎಂದಿದ್ದಾರೆ ಗ್ರೀನ್.
ನಾಯಕತ್ವ ಸ್ಪರ್ಧೆಯ ಸಂದರ್ಭದಲ್ಲಿ ಮನೆ ನಿರ್ಮಾಣದ ನಿಯಮಗಳನ್ನು ಸಡಿಲಿಸುವುದಾಗಿ ಸುನಕ್ ಮತ್ತು ಮಾಜಿ ಪ್ರಧಾನಿ ಲಿಜ್ ಟ್ರಸ್ ಹೇಳಿದ ನಂತರ ಸಂಸದರು ಬಂಡಾಯವೆದ್ದಿದ್ದಾರೆ.
2020 ರ ದಶಕದ ಮಧ್ಯಭಾಗದಲ್ಲಿ ಪ್ರತಿ ವರ್ಷ 3 ಲಕ್ಷ ಹೊಸ ಮನೆಗಳನ್ನು ನಿರ್ಮಿಸುವುದಾಗಿ ಕನ್ಸರ್ವೇಟಿವ್‌ಗಳು ಭರವಸೆ ನೀಡಿದ್ದಾರೆ. ಆದರೆ ಮಾಜಿ ಪಿಎಂ ಬೋರಿಸ್ ಜಾನ್ಸನ್ ಗೃಹನಿರ್ಮಾಣವನ್ನು ಗಣನೀಯವಾಗಿ ಹೆಚ್ಚಿಸಲು ಅನುವು ಮಾಡಿಕೊಡಲು ಯೋಜನಾ ನೀತಿಯನ್ನು ಜಾರಿಗೆ ತರಲು ಮಾಡಿದ ಪ್ರಯತ್ನಗಳಿಂದಾಗಿ ಅವರ ಪಕ್ಷದಲ್ಲಿ ಭಿನ್ನಾಭಿಪ್ರಾಯಗಳು ತಲೆದೋರಿತ್ತು. ರಾಷ್ಟ್ರೀಯ ಅಂಕಿಅಂಶಗಳ ದತ್ತಾಂಶದ ಕಚೇರಿಯ ಪ್ರಕಾರ 2021-22ರಲ್ಲಿ ಸುಮಾರು 206,000 ಹೊಸ ವಾಸಸ್ಥಳಗಳ ನಿರ್ಮಾಣವು ಪ್ರಾರಂಭವಾಯಿತು ಎಂದು ಹೇಳಿದೆ.