AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Russia- Ukraine War: ಈ ಶೀತವನ್ನು ಸಾಮೂಹಿಕ ವಿನಾಶದ ಅಸ್ತ್ರವನ್ನಾಗಿ ಮಾಡಲು ಪುಟಿನ್ ತಯಾರಿ ನಡೆಸುತ್ತಿದ್ದಾರೆ: ಉಕ್ರೇನ್

ಫೆಬ್ರವರಿ 24 ರಿಂದ ರಷ್ಯಾ (Russia)ಮತ್ತು ಉಕ್ರೇನ್(Ukraine) ನಡುವೆ ಯುದ್ಧ ನಡೆಯುತ್ತಿದ್ದು, ಇಲ್ಲಿಯವರೆಗೆ ಯಾವುದೇ ವಿಚಾರದಲ್ಲಿ ಉಭಯ ದೇಶಗಳ ನಡುವೆ ಯಾವುದೇ ಒಪ್ಪಂದಕ್ಕೆ ಬಂದಿಲ್ಲ.

Russia- Ukraine War: ಈ ಶೀತವನ್ನು ಸಾಮೂಹಿಕ ವಿನಾಶದ ಅಸ್ತ್ರವನ್ನಾಗಿ ಮಾಡಲು ಪುಟಿನ್ ತಯಾರಿ ನಡೆಸುತ್ತಿದ್ದಾರೆ: ಉಕ್ರೇನ್
Volodymyr
TV9 Web
| Updated By: ನಯನಾ ರಾಜೀವ್|

Updated on: Nov 23, 2022 | 8:27 AM

Share

ಫೆಬ್ರವರಿ 24 ರಿಂದ ರಷ್ಯಾ (Russia)ಮತ್ತು ಉಕ್ರೇನ್(Ukraine) ನಡುವೆ ಯುದ್ಧ ನಡೆಯುತ್ತಿದ್ದು, ಇಲ್ಲಿಯವರೆಗೆ ಯಾವುದೇ ವಿಚಾರದಲ್ಲಿ ಉಭಯ ದೇಶಗಳ ನಡುವೆ ಯಾವುದೇ ಒಪ್ಪಂದಕ್ಕೆ ಬಂದಿಲ್ಲ. ಒಂದು ಕಡೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ಯಾವುದೇ ಬೆಲೆಗೆ ಹಿಂದೆ ಸರಿಯಲು ಸಿದ್ಧರಿಲ್ಲ ಮತ್ತು ಇನ್ನೊಂದು ಬದಿಯಲ್ಲಿ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ತಮ್ಮ ಕೊನೆಯ ಉಸಿರು ಇರುವವರೆಗೂ ಪುಟಿನ್ ವಿರುದ್ಧ ಹೋರಾಡುವುದಾಗಿಯೂ ಹೇಳಿದ್ದಾರೆ.

ಅದೇ ಸಮಯದಲ್ಲಿ, ಇದೀಗ ಚಳಿಗಾಲ ಆರಂಭವಾಗಿದೆ, ಈ ರಕ್ತ ಹೆಪ್ಪುಗಟ್ಟುವ ಚಳಿಯನ್ನು ಮಾರಣಾಂತಿಕ ಅಸ್ತ್ರವನ್ನಾಗಿ ಮಾಡಲು ಹೊರಟಿದ್ದಾರೆ ಎಂದು ಉಕ್ರೇನ್ ದೂರಿದೆ. ಹಾಗೆಯೇ ಉಕ್ರೇನ್ ಜನರು ಕೂಡ ಸಿದ್ಧತೆಗಳನ್ನು ಪ್ರಾರಂಭಿಸಿರುವುದಾಗಿ ತಿಳಿಸಲಾಗಿದೆ. ಈ ಯುದ್ಧದಲ್ಲಿ ರಷ್ಯಾಕ್ಕೆ ಹೆಚ್ಚಿನ ಬೆಂಬಲ ಸಿಗಲಿದೆ ಎಂಬುದರಲ್ಲಿ ಸಂದೇಹವಿಲ್ಲ. ರಷ್ಯಾ ನಿರಂತರವಾಗಿ ಉಕ್ರೇನ್‌ನ ಪವರ್ ಗ್ರಿಡ್ ಮೇಲೆ ದಾಳಿ ಮಾಡಿದೆ ಮತ್ತು ಉಕ್ರೇನ್‌ನ ಅರ್ಧಕ್ಕಿಂತ ಹೆಚ್ಚು ಜನತೆ ಕತ್ತಲೆಯಲ್ಲಿ ಜೀವಿಸುವಂತಾಗಿದೆ.

ಸುಮಾರು 10 ಮಿಲಿಯನ್ ಉಕ್ರೇನಿಯನ್ನರು ವಿದ್ಯುತ್ ಇಲ್ಲದೆ ಬದುಕುತ್ತಿದ್ದಾರೆ ಎಂದು ಝೆಲೆನ್ಸ್ಕಿ ಹಿಂದೆ ಹೇಳಿದ್ದರು. ಅಂತಹ ಪರಿಸ್ಥಿತಿಯಲ್ಲಿ, ಅವರು ಶೀತವನ್ನು ತಪ್ಪಿಸಲು ಹೀಟರ್ ಅನ್ನು ಸಹ ಬಳಸಲಾಗುವುದಿಲ್ಲ.

ರಷ್ಯಾದ ದಾಳಿಗಳು ನಮ್ಮನ್ನು ಶಿಲಾಯುಗಕ್ಕೆ ತಳ್ಳುತ್ತಿವೆ ವರದಿಯ ಪ್ರಕಾರ, ರಷ್ಯಾದ ದಾಳಿಗಳು ಉಕ್ರೇನ್ ಅನ್ನು ಶಿಲಾಯುಗಕ್ಕೆ ತಳ್ಳುತ್ತಿವೆ. ಇತ್ತೀಚಿನ 24-ಗಂಟೆಗಳ ಅವಧಿಯಲ್ಲಿ, ನಮ್ಮ 26 ಅಂತಸ್ತಿನ ಬಹುಮಹಡಿ ಕಟ್ಟಡವು ಅರ್ಧದಷ್ಟು ಮಾತ್ರ ವಿದ್ಯುತ್ ಹೊಂದಿತ್ತು ಎಂದು ನಾಗರಿಕರು ತಿಳಿಸಿದ್ದಾರೆ.

ಜೀವನದ ಕೆಟ್ಟ ಚಳಿಗಾಲ ನಮ್ಮ ಕಟ್ಟಡವು ಈ ಪ್ರದೇಶದಲ್ಲಿ ಅತಿ ಎತ್ತರವಾಗಿದೆ ಮತ್ತು ರಷ್ಯಾದ ಕ್ಷಿಪಣಿಗಳಿಗೆ ಪ್ರಮುಖ ಗುರಿಯಾಗಿದೆ, ಆದ್ದರಿಂದ ನಾವು ನಮ್ಮ ಅಪಾರ್ಟ್ಮೆಂಟ್ ಅನ್ನು ಬಿಟ್ಟುಬಿಟ್ಟಿದ್ದೇವೆ ಮತ್ತು ಈಗ ನಮ್ಮ ಜೀವನದ ಅತ್ಯಂತ ಕೆಟ್ಟ ಚಳಿಗಾಲಕ್ಕಾಗಿ ಸಿದ್ಧರಾಗುತ್ತಿದ್ದೇವೆ ಎಂದು ಪೈರೊಜೆಂಕೊ ಹೇಳಿದ್ದಾರೆ.

ಇಲ್ಲಿನ ಪವರ್ ಗ್ರಿಡ್‌ನ ಮೇಲೆ ನಡೆದ ಅತಿದೊಡ್ಡ ಕ್ಷಿಪಣಿ ದಾಳಿಯ ನಂತರ, ಉಕ್ರೇನ್‌ನ ರಾಜಧಾನಿ ಕೈವ್ ಮತ್ತು ಇತರ ಪ್ರಮುಖ ನಗರಗಳಲ್ಲಿ ಪರಿಸ್ಥಿತಿ ಗಣನೀಯವಾಗಿ ಹದಗೆಟ್ಟಿದೆ.

ಉಕ್ರೇನಿಯನ್ ಸರ್ಕಾರಿ ಸ್ವಾಮ್ಯದ ಗ್ರಿಡ್ ಆಪರೇಟರ್ ಉಕ್ರೇನರ್ಗೋ ವರದಿ ಮಾಡಿದ್ದು, ಉಕ್ರೇನಿಯನ್ನರಲ್ಲಿ 40% ಕನಿಷ್ಠ 15 ಪ್ರಮುಖ ವಿದ್ಯುತ್ ಕೇಂದ್ರಗಳಿಗೆ ಹಾನಿಯಾಗುವುದರಿಂದ ತೊಂದರೆಗಳನ್ನು ಎದುರಿಸುತ್ತಿದ್ದಾರೆ. ಸಾವಿರಾರು ಕಿಲೋಮೀಟರ್ ಹೈ-ವೋಲ್ಟೇಜ್ ಲೈನ್‌ಗಳು ಕಾರ್ಯನಿರ್ವಹಿಸುತ್ತಿಲ್ಲ, ಇದು ಇಡೀ ದೇಶದ ಮೇಲೆ ಪರಿಣಾಮ ಬೀರುತ್ತದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ