ಇಸ್ರೇಲ್ ವಿರುದ್ಧ ಇರಾನ್ ಗೆಲುವು, ಅಮೆರಿಕದ ನೆಲೆ ಮೇಲಿನ ದಾಳಿ ಟ್ರಂಪ್ಗೆ ಕೊಟ್ಟ ಹೊಡೆತ; ಖಮೇನಿ ಘೋಷಣೆ
ಟೆಹ್ರಾನ್ ಮತ್ತು ಇಸ್ರೇಲ್ ನಡುವಿನ ಕದನ ವಿರಾಮದ ಕೆಲವು ದಿನಗಳ ನಂತರ, ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಇಂದು ಮೌನ ಮುರಿದಿದ್ದಾರೆ. ಇರಾನ್ ಮೇಲೆ ಮತ್ತೆ ದಾಳಿ ಮಾಡಿದರೆ 'ಭಾರೀ ಬೆಲೆ ತೆರಬೇಕಾಗುತ್ತದೆ' ಎಂದು ಅಮೆರಿಕಕ್ಕೆ ಅವರು ಎಚ್ಚರಿಕೆ ನೀಡಿದ್ದಾರೆ. ಈ ಯುದ್ದದಲ್ಲಿ ಇಸ್ರೇಲ್ ಮೇಲೆ ನಾವು ಗೆಲುವು ಸಾಧಿಸಿದ್ದೇವೆ ಎಂದು ಘೋಷಿಸಿಕೊಂಡಿದ್ದಾರೆ.

ಟೆಹ್ರಾನ್, ಜೂನ್ 26: ಇಸ್ರೇಲ್-ಇರಾನ್ ಯುದ್ಧ ಮುಗಿದ ನಂತರ ಇಂದು (ಗುರುವಾರ) ಇರಾನ್‌ನ ಸರ್ವೋಚ್ಚ ನಾಯಕ ಅಲಿ ಖಮೇನಿ ತಮ್ಮ ಮೊದಲ ಸಾರ್ವಜನಿಕ ಹೇಳಿಕೆಯನ್ನು ನೀಡಿದ್ದಾರೆ. ಇಸ್ರೇಲ್ ವಿರುದ್ಧ ಇರಾನ್ ವಿಜಯ ಸಾಧಿಸಿದೆ ಎಂದು ಅವರು ಘೋಷಿಸಿದ್ದಾರೆ. 12 ದಿನಗಳ ಯುದ್ಧದ ಸಮಯದಲ್ಲಿ ಇಸ್ರೇಲಿ ಪಡೆಗಳು ಟೆಹ್ರಾನ್ ಮೇಲೆ ದಾಳಿ ಮಾಡಿದ ನಂತರ ಖಮೇನಿ ರಹಸ್ಯ ಸ್ಥಳದಲ್ಲಿ ಆಶ್ರಯ ಪಡೆದಿದ್ದರು. ನಂತರ ಅಮೆರಿಕ ಇಸ್ರೇಲ್ನ ಪರವಾಗಿ ಮಧ್ಯಪ್ರವೇಶಿಸಿತು. ಆದರೆ, ಖಮೇನಿ ಅವರು ಅಮೆರಿಕದ ಆಡಳಿತವು ಮಧ್ಯಪ್ರವೇಶಿಸಿದರೂ ಟ್ರಂಪ್ ಏನನ್ನೂ ಸಾಧಿಸಲು ಆಗಲಿಲ್ಲ ಎಂದು ಹೇಳಿದ್ದಾರೆ.
“ನಮ್ಮ ಪ್ರೀತಿಯ ಇರಾನ್ ಅಮೆರಿಕದ ಆಡಳಿತದ ವಿರುದ್ಧ ಜಯಗಳಿಸಿದ್ದಕ್ಕಾಗಿ ನನ್ನ ಅಭಿನಂದನೆಗಳು. ಯುದ್ಧಕ್ಕೆ ಇಳಿಯದಿದ್ದರೆ ಜಿಯೋನಿಸ್ಟ್ ಆಡಳಿತವು ಸಂಪೂರ್ಣವಾಗಿ ನಾಶವಾಗುತ್ತದೆ ಎಂದು ಭಾವಿಸಿದ್ದರಿಂದ ಅಮೆರಿಕ ಸರ್ಕಾರ ನೇರವಾಗಿ ಯುದ್ಧಕ್ಕೆ ಇಳಿಯಿತು. ಆ ಆಡಳಿತವನ್ನು ಉಳಿಸುವ ಪ್ರಯತ್ನದಲ್ಲಿ ಅದು ಯುದ್ಧಕ್ಕೆ ಇಳಿದಿತು. ಆದರೆ ಅವರಿಗೆ ಏನನ್ನೂ ಸಾಧಿಸಲು ಆಗಲಿಲ್ಲ”ಎಂದು ಖಮೇನಿ ಎಕ್ಸ್ ನಲ್ಲಿನ ಸರಣಿ ಪೋಸ್ಟ್‌ಗಳಲ್ಲಿ ಹೇಳಿದ್ದಾರೆ.
My congratulations on our dear Iran’s victory over the US regime. The US regime entered the war directly because it felt that if it didn’t, the Zionist regime would be completely destroyed. It entered the war in an effort to save that regime but achieved nothing.
— Khamenei.ir (@khamenei_ir) June 26, 2025
ಇದನ್ನೂ ಓದಿ: ತೀವ್ರ ಹಾನಿಯಾಗಿದೆ; ಅಮೆರಿಕದ ದಾಳಿಯನ್ನು ಮೊದಲ ಬಾರಿ ಒಪ್ಪಿಕೊಂಡ ಇರಾನ್
ಇಸ್ಲಾಮಿಕ್ ಗಣರಾಜ್ಯವು ಅಮೆರಿಕಕ್ಕೆ ದೊಡ್ಡ ಹೊಡೆತ ನೀಡಿತು. ಈ ಪ್ರದೇಶದ ಪ್ರಮುಖ ಯುಎಸ್ ನೆಲೆಗಳಲ್ಲಿ ಒಂದಾದ ಅಲ್-ಉದೈದ್ ವಾಯುನೆಲೆಯ ಮೇಲೆ ಹಾನಿಯನ್ನುಂಟುಮಾಡಿತು ಎಂದು ಖಮೇನಿ ಹೇಳಿದ್ದಾರೆ. ಮುಂದೆ ಅಮೆರಿಕ ಮತ್ತೆ ಇರಾನ್ ಮೇಲೆ ದಾಳಿ ನಡೆಸಿದರೆ ಅದಕ್ಕೆ ದೊಡ್ಡ ಬೆಲೆಯನ್ನೇವ ತೆರಬೇಕಾಗುತ್ತದೆ ಎಂದು ಖಮೇನಿ ಎಚ್ಚರಿಕೆ ನೀಡಿದ್ದಾರೆ.
The fact that the Islamic Republic has access to key US centers in the region and can take action whenever it deems necessary is a significant matter. Such an action can be repeated in the future too. Should any aggression occur, the enemy will definitely pay a heavy price.
— Khamenei.ir (@khamenei_ir) June 26, 2025
ಇದನ್ನೂ ಓದಿ: ಅಮೆರಿಕಕ್ಕೆ ಇರಾನ್‌ನ ಸಂಪೂರ್ಣ ಪರಮಾಣು ಸಾಮರ್ಥ್ಯ ನಾಶಮಾಡಲು ಸಾಧ್ಯವಾಗಿಲ್ಲ: ಗುಪ್ತಚರ ವರದಿ
ಈ ನಡುವೆ, ಮುಂದಿನ ವಾರ ಅಮೆರಿಕ ಮತ್ತು ಇರಾನ್ ಅಧಿಕಾರಿಗಳು ಮಾತನಾಡಲಿದ್ದಾರೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಇದು ಟೆಹ್ರಾನ್ ತನ್ನ ಪರಮಾಣು ಕ್ರಮವನ್ನು ಕೈಬಿಡುವುದಿಲ್ಲ ಎಂದು ಹೇಳಿದ್ದರೂ ದೀರ್ಘಾವಧಿಯ ಶಾಂತಿಗಾಗಿ ಭರವಸೆಯನ್ನು ಹುಟ್ಟುಹಾಕಿತು. ಯುದ್ಧದ 12ನೇ ದಿನದಂದು ನಡೆದ ಕದನ ವಿರಾಮದ ಮಾತುಕತೆಗೆ ಸಹಾಯ ಮಾಡಿದ ಟ್ರಂಪ್, NATO ಶೃಂಗಸಭೆಯಲ್ಲಿ ವರದಿಗಾರರಿಗೆ ಇರಾನ್ ಜೊತೆ ಮಾತುಕತೆಗಳನ್ನು ಪುನರಾರಂಭಿಸುವಲ್ಲಿ ವಿಶೇಷವಾಗಿ ಆಸಕ್ತಿ ಹೊಂದಿಲ್ಲ ಎಂದು ಹೇಳಿದ್ದರು. ಅಮೆರಿಕದ ದಾಳಿಗಳು ಅದರ ಪರಮಾಣು ಕಾರ್ಯಕ್ರಮವನ್ನು ನಾಶಪಡಿಸಿವೆ ಎಂದು ಟ್ರಂಪ್ ಹೇಳಿಕೆ ನೀಡಿದ್ದರು. ಆದರೆ, ಅದಕ್ಕೆ ವಿರುದ್ಧವಾಗಿ ಖಮೇನಿ ಹೇಳಿಕೆ ನೀಡಿದ್ದಾರೆ.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




