AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಮೆರಿಕಕ್ಕೆ ಇರಾನ್​ನ ಸಂಪೂರ್ಣ ಪರಮಾಣು ಸಾಮರ್ಥ್ಯ ನಾಶಮಾಡಲು ಸಾಧ್ಯವಾಗಿಲ್ಲ: ಗುಪ್ತಚರ ವರದಿ

ಅಮೆರಿಕದ ದಾಳಿಯಿಂದ ಇರಾನ್​ನ ಸಂಪೂರ್ಣ ಪರಮಾಣು ಸಾಮರ್ಥ್ಯ ನಾಶಮಾಡಲು ಸಾಧ್ಯವಾಗಿಲ್ಲ ಎಂಬುದು ಗುಪ್ತಚರ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಜೂನ್ 22ರಂದು ಅಮೆರಿಕವು ಇರಾನ್​​ನ ಇರಾನ್‌ನ ಫೋರ್ಡೋ, ನಟಾಂಜ್ ಮತ್ತು ಇಸ್ಫಹಾನ್‌ನಲ್ಲಿರುವ ಮೂರು ಪರಮಾಣು ಕೇಂದ್ರಗಳ ಮೇಲೆ ವೈಮಾನಿಕ ದಾಳಿ ನಡೆಸಿತ್ತು. ಅಮೆರಿಕ ಮತ್ತು ಇಸ್ರೇಲ್ ಎರಡೂ ಪ್ರಕಾರ, ಈ ಕೇಂದ್ರಗಳನ್ನು ರಹಸ್ಯವಾಗಿ ಪರಮಾಣು ಬಾಂಬ್ ಅಭಿವೃದ್ಧಿಪಡಿಸಲು ಬಳಸಲಾಗುತ್ತಿದೆ ಎಂದು ಆರೋಪಿಸಿತ್ತು.

ಅಮೆರಿಕಕ್ಕೆ ಇರಾನ್​ನ ಸಂಪೂರ್ಣ ಪರಮಾಣು ಸಾಮರ್ಥ್ಯ ನಾಶಮಾಡಲು ಸಾಧ್ಯವಾಗಿಲ್ಲ: ಗುಪ್ತಚರ ವರದಿ
ದಾಳಿ
ನಯನಾ ರಾಜೀವ್
|

Updated on:Jun 25, 2025 | 7:53 AM

Share

ಇರಾನ್, ಜೂನ್ 25: ಅಮೆರಿಕ(America)ವು ಜೂನ್ 22ರಂದು ಇರಾನ್​ ಮೇಲೆ ನಡೆಸಿದ ವೈಮಾನಿಕ ದಾಳಿಯಲ್ಲಿ ದೇಶದ ಪರಮಾಣು ಸಾಮರ್ಥ್ಯವನ್ನು ಸಂಪೂರ್ಣವಾಗಿ ನಾಶಪಡಿಸಲು ಸಾಧ್ಯವಾಗಿಲ್ಲ ಎಂದು ಗುಪ್ತಚರ ಇಲಾಖೆ ಮಾಹಿತಿ ನೀಡಿದೆ. ಪೆಂಟಗನ್‌ನ ಗುಪ್ತಚರ ವಿಭಾಗವಾದ ರಕ್ಷಣಾ ಗುಪ್ತಚರ ಸಂಸ್ಥೆ ಬಿಡುಗಡೆ ಮಾಡಿರುವ ವರದಿಯು, ಇರಾನ್‌ನ ಪರಮಾಣು ಘಟಕಗಳ ಸ್ಥಿತಿಯ ಬಗ್ಗೆ ಅಧ್ಯಕ್ಷ ಟ್ರಂಪ್ ಮತ್ತು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಮಾಡಿದ ಹೇಳಿಕೆಗಳಿಗೆ ವಿರುದ್ಧವಾಗಿದೆ.

ಜೂನ್ 22ರಂದು ಅಮೆರಿಕವು ಇರಾನ್​​ನ ಇರಾನ್‌ನ ಫೋರ್ಡೋ, ನಟಾಂಜ್ ಮತ್ತು ಇಸ್ಫಹಾನ್‌ನಲ್ಲಿರುವ ಮೂರು ಪರಮಾಣು ಕೇಂದ್ರಗಳ ಮೇಲೆ ವೈಮಾನಿಕ ದಾಳಿ ನಡೆಸಿತ್ತು. ಅಮೆರಿಕ ಮತ್ತು ಇಸ್ರೇಲ್ ಎರಡೂ ಪ್ರಕಾರ, ಈ ಕೇಂದ್ರಗಳನ್ನು ರಹಸ್ಯವಾಗಿ ಪರಮಾಣು ಬಾಂಬ್ ಅಭಿವೃದ್ಧಿಪಡಿಸಲು ಬಳಸಲಾಗುತ್ತಿದೆ ಎಂದು ಆರೋಪಿಸಿತ್ತು.

ಗುಪ್ತಚರ ವರದಿ ಏನು ಹೇಳುತ್ತೆ? ಫೋರ್ಡೊ, ನಂಟಾಜ್ ಮತ್ತು ಇಸ್ಪಹಾನ್ ಪರಮಾಣು ಕೇಂದ್ರಗಳ ಮೇಲಿನ ದಾಳಿಗಳು ಗಮನಾರ್ಹ ಹಾನಿಯುಂಟು ಮಾಡಿದ್ದರೂ ಕೂಡ ಅವು ಸಂಪೂರ್ಣವಾಗಿ ನಾಶವಾಗಿಲ್ಲ ಎಂಬುದನ್ನು ವರದಿ ತಿಳಿಸಿದೆ. ಯುರೇನಿಯಂ ದಾಸ್ತಾನು ನಾಶವಾಗಿಲ್ಲ ಎಂದು ಇರಾನ್ ಹೇಳಿದೆ ಏಕೆಂದರೆ ಮೊದಲೇ ಅದನ್ನು ಆ ಸ್ಥಳದಿಂದ ಬೇರೆಡೆಗೆ ಸ್ಥಳಾಂತರಿಸಲಾಗಿತ್ತು.

ಇದನ್ನೂ ಓದಿ
Image
ಟ್ರಂಪ್​ಗೆ ಶಾಂತಿ ಪುರಸ್ಕಾರ ಘೋಷಿಸಿ, ಈಗ ಪ್ರತಿಭಟನೆ ಮಾಡಿದ ಪಾಕಿಸ್ತಾನ
Image
ಇರಾನ್ ಮೇಲೆ ದಾಳಿ ನಡೆಸಿ ಸುಮ್ಮನಾದ ಟ್ರಂಪ್, ರಷ್ಯಾಗೆ ಹೊರಟ ಅಬ್ಬಾಸ್
Image
ಅಮೆರಿಕ-ಇರಾನ್ ನಡುವೆ ಹೆಚ್ಚಿದ ಉದ್ವಿಗ್ನತೆ, ರಷ್ಯಾದ ಮೊರೆ ಹೋದ ಇರಾನ್
Image
ಅಮೆರಿಕ ದೊಡ್ಡ ತಪ್ಪು ಮಾಡಿದೆ, ತಕ್ಕ ಶಿಕ್ಷೆ ಅನುಭವಿಸಲಿದೆ: ಖಮೇನಿ

ಅಮೆರಿಕದ ಈ ರಹಸ್ಯ ಕಾರ್ಯಾಚರಣೆಯನ್ನು ಹೇಗೆ ಯೋಜಿಸಲಾಗಿತ್ತು? ಇಷ್ಟು ದೂರದವರೆಗೆ ಆ ಬಾಂಬರ್ ವಿಮಾನಗಳು ಹಾರಾಟ ನಡೆಸಿದ್ದು ಹೇಗೆ? ಯಾವೆಲ್ಲಾ ಅತ್ಯಾಧುನಿಕ ತಂತ್ರಜ್ಞಾನಗಳು ಈ ಕಾರ್ಯಾಚರಣೆಯನ್ನು ಯಶಸ್ವಿಗೊಳಿಸಿದವು? ಎನ್ನುವ ಪ್ರಶ್ನೆಗೆ ಇಲ್ಲಿದೆ ಉತ್ತರ.

ಮತ್ತಷ್ಟು ಓದಿ: ಅವ್ರು ದಾಳಿ ನಿಲ್ಲಿಸಿದ್ರೆ ನಾವು ನಿಲ್ಲಿಸ್ತೀವಷ್ಟೆ, ಕದನ ವಿರಾಮ ಒಪ್ಪಂದವಾಗಿಲ್ಲ: ಇರಾನ್ ವಿದೇಶಾಂಗ ಸಚಿವ ಅಬ್ಬಾಸ್

ಅಮೆರಿಕದ ವಾಯುಸೇನೆಯಲ್ಲಿರುವ ಅತ್ಯಂತ ರಹಸ್ಯವಾದ ಬಿ-2 ಸ್ಪಿರಿಟ್ ಸ್ಟೆಲ್ತ್ ಬಾಂಬರ್ ವಿಮಾನಗಳನ್ನು ಈ ದಾಳಿಗೆ ಬಳಸಲಾಗಿತ್ತು. ಈ ವಿಮಾನಗಳು ಶತ್ರುಗಳ ರಾಡಾರ್ ಕಣ್ಣಿಗೆ ಕಾಣಿಸದಂತೆ ವಿನ್ಯಾಸಗೊಳಿಸಲ್ಪಟ್ಟಿವೆ.

ಅಮೆರಿಕದ ಮಿಸ್ಸೌರಿ ರಾಜ್ಯದ ವೈಟ್ಮ್ಯಾನ್ ವಾಯುನೆಲೆಯಿಂದ ಈ ಏಳು ಬಿ-2 ಬಾಂಬರ್ಗಳು ರಾತ್ರಿಯ ಕತ್ತಲೆಯಲ್ಲಿ ತಮ್ಮ ಸುದೀರ್ಘ ಪ್ರಯಾಣವನ್ನು ಪ್ರಾರಂಭಿಸಿದವು. ಇರಾನ್ ತಲುಪಲು ಈ ಬಾಂಬರ್ಗಳು ಸುಮಾರು 18 ಗಂಟೆಗಳ ಕಾಲ ನಿರಂತರವಾಗಿ ಹಾರಾಟ ನಡೆಸಬೇಕಿತ್ತು.

ದೊಡ್ಡ ಟ್ಯಾಂಕರ್ ವಿಮಾನಗಳು ಹಾರಾಟದಲ್ಲಿರುವಾಗಲೇ ಈ ಬಾಂಬರ್ಗಳಿಗೆ ಇಂಧನವನ್ನು ಪೂರೈಸಿದವು. ಇದು ಅತ್ಯಂತ ಕಷ್ಟಕರ ಮತ್ತು ಅಪಾಯಕಾರಿ ಪ್ರಕ್ರಿಯೆಯಾಗಿದ್ದು, ಅಮೆರಿಕದ ವಾಯುಸೇನೆಗೆ ಮಾತ್ರ ಸಾಧ್ಯವಿರುವ ತಂತ್ರಜ್ಞಾನವಾಗಿದೆ ಎಂದು ಹೇಳಲಾಗಿದೆ.

ಫೋರ್ಡೊದಲ್ಲಿರುವ ಇರಾನ್ ನ ಮುಖ್ಯ ಪರಮಾಣು ಸ್ಥಾವರವು ಪರ್ವತದ ಆಳದಲ್ಲಿ, ಸುಮಾರು 80-90 ಮೀಟರ್ಗಳಷ್ಟು ಕೆಳಗಡೆ ನಿರ್ಮಿಸಲಾಗಿತ್ತು. ಇಂತಹ ಭದ್ರವಾದ ಸ್ಥಾವರವನ್ನು ನಾಶಮಾಡಲು ಅಮೆರಿಕ ಬಂಕರ್ ಭೇದಕ ಬಾಂಬ್ ಗಳಾದ ಜಿಬಿಯು-57 ಎಂಒಪಿ ಗಳನ್ನು ಬಳಸಿತು. ಪ್ರತಿಯೊಂದು ಬಾಂಬ್ 13,000 ಕೆಜಿಗೂ ಹೆಚ್ಚು ತೂಕವಿದ್ದು, 60 ಅಡಿಗಳಷ್ಟು ಕಾಂಕ್ರೀಟ್ ಅಥವಾ 200 ಅಡಿಗಳಷ್ಟು ಭೂಮಿಯನ್ನು ಭೇದಿಸುವ ಸಾಮರ್ಥ್ಯವನ್ನು ಹೊಂದಿದೆ.

ಏಳು ಬಿ-2  ಬಾಂಬರ್​ಗಳು ಫೋರ್ಡೊವೊಂದರ ಮೇಲೆಯೇ 14  ಬಾಂಬ್ ಗಳನ್ನು ಹಾಕಿದ್ದು, ಸ್ಥಾವರವನ್ನು ಸಂಪೂರ್ಣವಾಗಿ ನಾಶಪಡಿಸಿವೆ ಎಂದು ಅಮೆರಿಕ ಹೇಳಿಕೊಂಡಿದೆ. ಗುರಿಯನ್ನು  ತಲುಪಿದ ಬಳಿಕ, ಎಲ್ಲಾ ಬಿ-2 ಬಾಂಬರ್​ಗಳು ಯಾವುದೇ ಅಡೆತಡೆಯಿಲ್ಲದೆ ಮತ್ತೆ ಅಮೆರಿಕಕ್ಕೆ ಮರಳಿದವು. ಅವು ಸುಮಾರು 18 ಗಂಟೆಗಳ ಹಾರಾಟದ ನಂತರ ತಮ್ಮ ನೆಲೆಯನ್ನು ತಲುಪಿದವು. ಇರಾನ್ ಕತಾರ್​ನಲ್ಲಿರುವ ಅಮೆರಿಕದ ವಾಯುನೆಲೆ ಮೇಲೆ ದಾಳಿ ನಡೆಸಿತ್ತು. ಈ ದಾಳಿ ಬಳಿಕ ಕದನ ವಿರಾಮ ವಿಚಾರ ಟ್ರಂಪ್ ಬಾಯಲ್ಲಿ ಬಂದಿತ್ತು.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 7:52 am, Wed, 25 June 25

Follow Us
ನಯನಾ ರಾಜೀವ್
ನಯನಾ ರಾಜೀವ್

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
ಕೇಂದ್ರದ 10 ಅಧಿಕಾರಿಗಳ‌ ತಂಡದಿಂದ ಕರ್ನಾಟಕದಲ್ಲಿ ಬರ ಅಧ್ಯಯನ: ಎಲ್ಲೆಲ್ಲಿ
ಕೇಂದ್ರದ 10 ಅಧಿಕಾರಿಗಳ‌ ತಂಡದಿಂದ ಕರ್ನಾಟಕದಲ್ಲಿ ಬರ ಅಧ್ಯಯನ: ಎಲ್ಲೆಲ್ಲಿ
ಬೆಂಗಳೂರು: 4 ಗ್ಯಾಸ್ ಸಿಲಿಂಡರ್ ಸ್ಫೋಟ, ತಪ್ಪಿದ ಭಾರೀ ಅನಾಹುತ
ಬೆಂಗಳೂರು: 4 ಗ್ಯಾಸ್ ಸಿಲಿಂಡರ್ ಸ್ಫೋಟ, ತಪ್ಪಿದ ಭಾರೀ ಅನಾಹುತ
ಮಂಗಳೂರಿನ ಎಂಆರ್‌ಪಿಎಲ್‌ನಲ್ಲಿ ಸ್ಫೋಟ: ಮುಗಿಲೆತ್ತರಕ್ಕೆ ಆವರಿಸಿದ ಹೊಗೆ
ಮಂಗಳೂರಿನ ಎಂಆರ್‌ಪಿಎಲ್‌ನಲ್ಲಿ ಸ್ಫೋಟ: ಮುಗಿಲೆತ್ತರಕ್ಕೆ ಆವರಿಸಿದ ಹೊಗೆ
ತುಮಕೂರಿನಲ್ಲಿ ಮಳೆಯ ಅಬ್ಬರ; ಬಸ್​ ನಿಲ್ದಾಣ, ಶಾಲಾ ಆವರಣ ಜಲಾವೃತ!
ತುಮಕೂರಿನಲ್ಲಿ ಮಳೆಯ ಅಬ್ಬರ; ಬಸ್​ ನಿಲ್ದಾಣ, ಶಾಲಾ ಆವರಣ ಜಲಾವೃತ!
ಒಗ್ಗಟ್ಟು ಒಡೆಯುವ ಆಟಗಾರರೇ ಸೌಂದರ್ಯಾ ಮತ್ತು ಕಾವ್ಯಾ? ವಿಡಿಯೋ
ಒಗ್ಗಟ್ಟು ಒಡೆಯುವ ಆಟಗಾರರೇ ಸೌಂದರ್ಯಾ ಮತ್ತು ಕಾವ್ಯಾ? ವಿಡಿಯೋ
ಸೌಜನ್ಯ ಪ್ರಕರಣ ಮರು ತನಿಖೆ: SITಯಿಂದ ಕೈಬಿಡುವಂತೆ ಸರ್ಕಾರಕ್ಕೆ AASP ಪತ್ರ
ಸೌಜನ್ಯ ಪ್ರಕರಣ ಮರು ತನಿಖೆ: SITಯಿಂದ ಕೈಬಿಡುವಂತೆ ಸರ್ಕಾರಕ್ಕೆ AASP ಪತ್ರ
ಚಾಮರಾಜನಗರದಲ್ಲಿ ತಡರಾತ್ರಿ ಸುರಿದ ಭಾರಿ ಮಳೆಗೆ ಭಾಗಶಃ ಕೊಚ್ಚಿ ಹೋದ ಸೇತುವೆ!
ಚಾಮರಾಜನಗರದಲ್ಲಿ ತಡರಾತ್ರಿ ಸುರಿದ ಭಾರಿ ಮಳೆಗೆ ಭಾಗಶಃ ಕೊಚ್ಚಿ ಹೋದ ಸೇತುವೆ!
ಭೂಸುಧಾರಣಾ ಕಾಯ್ದೆ ತಿದ್ದುಪಡಿ ವಾಪಸ್​ಗೆ ಆಗ್ರಹಿಸಿ ರಾಹುಲ್​ಗೆ ಪತ್ರ
ಭೂಸುಧಾರಣಾ ಕಾಯ್ದೆ ತಿದ್ದುಪಡಿ ವಾಪಸ್​ಗೆ ಆಗ್ರಹಿಸಿ ರಾಹುಲ್​ಗೆ ಪತ್ರ
ಆಟೋದಲ್ಲಿ ಸೋಮನಾಥಪುರ ದೇವಾಲಯಕ್ಕೆ ಬಂದ ರಜನಿಕಾಂತ್
ಆಟೋದಲ್ಲಿ ಸೋಮನಾಥಪುರ ದೇವಾಲಯಕ್ಕೆ ಬಂದ ರಜನಿಕಾಂತ್
ಪೆಟ್ರೋಲ್ ಬಂಕ್‌ನಲ್ಲಿ ನಿಲ್ಲಿಸಿದ್ದ ಖಾಸಗಿ ಬಸ್ ಕಳವು
ಪೆಟ್ರೋಲ್ ಬಂಕ್‌ನಲ್ಲಿ ನಿಲ್ಲಿಸಿದ್ದ ಖಾಸಗಿ ಬಸ್ ಕಳವು