ಇರಾಕ್​ ಪ್ರಧಾನಿ ಮುಸ್ತಫಾ ಅಲ್​ ಕಧಿಮಿ ನಿವಾಸದ ಮೇಲೆ ಡ್ರೋಣ್​ ದಾಳಿ; ಹತ್ಯೆ ಯತ್ನ ಎಂದ ಮಿಲಿಟರಿ

| Updated By: Lakshmi Hegde

Updated on: Nov 07, 2021 | 10:43 AM

ಸದ್ಯಕ್ಕಂತೂ ಯಾವುದೇ ಸಂಘಟನೆ ಉಗ್ರಸಂಘಟನೆ, ಬಂಡುಕೋರರು ಈ ದಾಳಿಯ ಹೊಣೆ ಹೊತ್ತುಕೊಂಡಿಲ್ಲ. ಇನ್ನು ಪ್ರಧಾನಿ ನಿಲಯ ಇರುವ ಗ್ರೀನ್​ ಝೋನ್​​ನಲ್ಲಿ ವಾಸವಾಗಿರುವ ಪಾಶ್ಚಿಮಾತ್ಯ ದೇಶಗಳ ರಾಯಭಾರಿಗಳು ಸ್ಫೋಟದ ಸದ್ದು ಕೇಳಿದ್ದಾಗಿ ಹೇಳಿಕೊಂಡಿದ್ದಾರೆ. 

ಇರಾಕ್​ ಪ್ರಧಾನಿ ಮುಸ್ತಫಾ ಅಲ್​ ಕಧಿಮಿ ನಿವಾಸದ ಮೇಲೆ ಡ್ರೋಣ್​ ದಾಳಿ; ಹತ್ಯೆ ಯತ್ನ ಎಂದ ಮಿಲಿಟರಿ
ಇರಾಕ್​ ಪ್ರಧಾನಿ
Follow us on

ಇರಾಕ್ ಪ್ರಧಾನಿ ಮುಸ್ತಫಾ ಅಲ್​ ಕಧಿಮಿ ಅವರ ಬಾಗ್ದಾದ್​ ನಿವಾಸದ ಮೇಲೆ ಡ್ರೋಣ್​  ದಾಳಿ ನಡೆಸಲಾಗಿದೆ. ಇಲ್ಲಿ ಡ್ರೋಣ್​ ಮೂಲಕ ಸ್ಫೋಟಕಗಳನ್ನು ಕೆಡವಲಾಗಿದ್ದು,  ಇದು ಪ್ರಧಾನಿ ಹತ್ಯೆ ಪ್ರಯತ್ನ ಎಂದು ಇರಾಕ್​ ಸೈನ್ಯ ಹೇಳಿದೆ. ಅದೃಷ್ಟವಶಾತ್​ ಕಧಿಮಿಗೆ ಯಾವುದೇ ಹಾನಿಯೂ ಆಗಿಲ್ಲ.  ಬಾಗ್ದಾದ್​​ನಲ್ಲಿ ಪ್ರಧಾನಿ ನಿಲಯ ಭದ್ರವಾದ ಗ್ರೀನ್​ ಝೋನ್​​ನಲ್ಲಿದೆ. ಆದರೆ ಇದೀಗ ಡ್ರೋಣ್​ ದಾಳಿಯಾಗಿದೆ ಎಂದಷ್ಟೇ ಸೇನೆ ತಿಳಿಸಿದ್ದು, ಬೇರೆ ಯಾವುದೇ ಮಾಹಿತಿಯನ್ನೂ ನೀಡಿಲ್ಲ. ಇನ್ನು ಪ್ರಧಾನಿ ಕಧಿಮಿಗೆ ಯಾವುದೇ ಅಪಾಯವಾಗಿಲ್ಲ. ಅವರು ಸುರಕ್ಷಿತರಾಗಿದ್ದಾರೆ..ಜನರೂ ಶಾಂತವಾಗಿರಬೇಕು ಎಂದು ಪ್ರಧಾನಮಂತ್ರಿ ಕಚೇರಿ ಟ್ವೀಟ್​ ಮೂಲಕ ತಿಳಿಸಿದೆ.  ಆದರೂ ಈ ದಾಳಿಯಿಂದ ಕೆಲವು ಭದ್ರತಾ ಸಿಬ್ಬಂದಿ ಗಾಯಗೊಂಡಿದ್ದಾರೆ ಎಂದು ಹೇಳಲಾಗಿದೆ. 

ಸದ್ಯಕ್ಕಂತೂ ಯಾವುದೇ ಸಂಘಟನೆ ಉಗ್ರಸಂಘಟನೆ, ಬಂಡುಕೋರರು ಈ ದಾಳಿಯ ಹೊಣೆ ಹೊತ್ತುಕೊಂಡಿಲ್ಲ. ಇನ್ನು ಪ್ರಧಾನಿ ನಿಲಯ ಇರುವ ಗ್ರೀನ್​ ಝೋನ್​​ನಲ್ಲಿ ವಾಸವಾಗಿರುವ ಪಾಶ್ಚಿಮಾತ್ಯ ದೇಶಗಳ ರಾಯಭಾರಿಗಳು ಸ್ಫೋಟದ ಸದ್ದು ಕೇಳಿದ್ದಾಗಿ ಹೇಳಿಕೊಂಡಿದ್ದಾರೆ.  ಕಳೆದ ತಿಂಗಳು ಇಲ್ಲಿ ನಡೆದ ಸಾರ್ವತ್ರಿಕ ಚುನಾವಣೆ ಫಲಿತಾಂಶವನ್ನು ಇರಾನ್​ ಬೆಂಬಲಿತ ಶಸ್ತ್ರಸಜ್ಜಿತ ಗುಂಪುಗಳು ಬಲವಾಗಿ ವಿರೋಧಿಸಿವೆ. ಈ ಫಲಿತಾಂಶದಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿವೆ.  ಚುನಾವಣೆಯ ನಂತರ ಅಧಿಕಾರ ಕಳೆದುಕೊಂಡವರೇ ಈ ಗುಂಪಿನವರಾಗಿದ್ದು, ಭಾರಿ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ಹೊಂದಿವೆ. ಆದರೆ ಸದ್ಯಕ್ಕೇನೂ ಇವರು ದಾಳಿ ಹೊಣೆ ಹೊತ್ತಿಲ್ಲ.

ಇದನ್ನೂ ಓದಿ: ಅಪ್ಪು ಮೇಲೆ ಜನರಿಟ್ಟ ಅಭಿಮಾನಕ್ಕೆ ಸಾಟಿ ಇಲ್ಲ; ಪುನೀತ್​ ಸಮಾಧಿ ಬಳಿ ಜನಸಾಗರ ಇನ್ನೂ ಕಮ್ಮಿ ಆಗಿಲ್ಲ