ತನ್ನ ಭಯೋತ್ಪಾದಕ ಮಾಗಜಿನ್ ಖುರಾಸನ್ನಲ್ಲಿ ಭಾರತಕ್ಕೆ ಬೆದರಿಕೆ ಹಾಕಿದ ಐಸಿಸ್
ಐಸಿಸ್ ಭಯೋತ್ಪಾದಕ ಸಂಘಟನೆಯು ತನ್ನ ನಿಯತಕಾಲಿಕೆ ವಾಯ್ಸ್ ಆಫ್ ಖುರಾಸನ್ನಲ್ಲಿ ಭಾರತಕ್ಕೆ ಬೆದರಿಕೆ ಹಾಕಿದೆ. ಭಯೋತ್ಪಾದಕ ಸಂಘಟನೆ ಐಸಿಸ್ ತನ್ನ ನಿಯತಕಾಲಿಕೆ 'ವಾಯ್ಸ್ ಆಫ್ ಖೊರಾಸನ್ 32 ನೇ ಆವೃತ್ತಿಯಲ್ಲಿ ಹಿಂದೂಗಳು ಮತ್ತು ಭಾರತ ಸರ್ಕಾರಕ್ಕೆ ಬೆದರಿಕೆ ಹಾಕಿದೆ. ದೇಶದಲ್ಲಿ ಹತ್ಯಾಕಾಂಡ ನಡೆಸುವುದಾಗಿ ಐಸಿಸ್ ಬೆದರಿಕೆ ಹಾಕಿದೆ. ವಾಯ್ಸ್ ಆಫ್ ಖುರಾಸನ್‌ನ 32 ನೇ ಸಂಚಿಕೆ ಹಲವಾರು ಸಾಮಾಜಿಕ ಮಾಧ್ಯಮ ಮತ್ತು ಡಾರ್ಕ್ ವೆಬ್ ಪ್ಲಾಟ್‌ಫಾರ್ಮ್‌ಗಳಲ್ಲಿ ಪ್ರಸಾರವಾಯಿತು. ವಾಯ್ಸ್ ಆಫ್ ಖುರಾಸನ್ ಇಸ್ಲಾಮಿಕ್ ಸ್ಟೇಟ್ ಬೆಂಬಲಿತ ಆನ್‌ಲೈನ್ ನಿಯತಕಾಲಿಕವಾಗಿದೆ.
ಐಸಿಸ್(ISIS) ಭಯೋತ್ಪಾದಕ ಸಂಘಟನೆಯು ತನ್ನ ನಿಯತಕಾಲಿಕೆ ವಾಯ್ಸ್ ಆಫ್ ಖುರಾಸನ್ನಲ್ಲಿ ಭಾರತಕ್ಕೆ ಬೆದರಿಕೆ ಹಾಕಿದೆ. ಭಯೋತ್ಪಾದಕ ಸಂಘಟನೆ ಐಸಿಸ್ ತನ್ನ ನಿಯತಕಾಲಿಕೆ ‘ವಾಯ್ಸ್ ಆಫ್ ಖೊರಾಸನ್ 32 ನೇ ಆವೃತ್ತಿಯಲ್ಲಿ ಹಿಂದೂಗಳು ಮತ್ತು ಭಾರತ ಸರ್ಕಾರಕ್ಕೆ ಬೆದರಿಕೆ ಹಾಕಿದೆ. ದೇಶದಲ್ಲಿ ಹತ್ಯಾಕಾಂಡ ನಡೆಸುವುದಾಗಿ ಐಸಿಸ್ ಬೆದರಿಕೆ ಹಾಕಿದೆ. ವಾಯ್ಸ್ ಆಫ್ ಖುರಾಸನ್‌ನ 32 ನೇ ಸಂಚಿಕೆ ಹಲವಾರು ಸಾಮಾಜಿಕ ಮಾಧ್ಯಮ ಮತ್ತು ಡಾರ್ಕ್ ವೆಬ್ ಪ್ಲಾಟ್‌ಫಾರ್ಮ್‌ಗಳಲ್ಲಿ ಪ್ರಸಾರವಾಯಿತು. ವಾಯ್ಸ್ ಆಫ್ ಖುರಾಸನ್ ಇಸ್ಲಾಮಿಕ್ ಸ್ಟೇಟ್ ಬೆಂಬಲಿತ ಆನ್‌ಲೈನ್ ನಿಯತಕಾಲಿಕವಾಗಿದೆ.
ಬಾಬ್ರಿ ಮಸೀದಿ ಜಾಗದಲ್ಲಿ ಮಂದಿರ ನಿರ್ಮಾಣ, ಗುಜರಾತ್ ಗಲಭೆ ಸೇರಿದಂತೆ ಹಲವು ವಿಚಾರಗಳನ್ನು ಉಲ್ಲೇಖಿಸಲಾಗಿದೆ. ಸೇಡು ತೀರಿಸಿಕೊಳ್ಳಲು ನಾವು ಬರುತ್ತೇವೆ ಎಂದು ಹೇಳಿದ್ದಾರೆ. ಭಾರತದ ವಿರುದ್ಧ ಇಂತಹ ಗೊಡ್ಡು ಬೆದರಿಕೆಗಳು ಬಂದಿರುವುದು ಇದೇನು ಮೊದಲಲ್ಲ, ಈ ಮೊದಲು ಕೂಡ ಸೇನೆಯು ಇಂತಹ ಹಲವು ಭಯೋತ್ಪಾದಕರನ್ನು ಸದೆಬಡಿದಿದೆ. ಐಸಿಸ್ನ ಈ ಪೊಳ್ಳು ಬೆದರಿಕೆಗಳು ಭಾರತದ ಮೇಲೆ ಯಾವ ಪರಿಣಾಮವನ್ನೂ ಬೀರುವುದಿಲ್ಲ.
ಭಯೋತ್ಪಾದನೆಯ ವಿರುದ್ಧದ ಕ್ರಮದಿಂದ ಭಯೋತ್ಪಾದಕರು ಇರಾಕ್, ಸಿರಿಯಾದಿಂದ ಕಾಲ್ಕಿತ್ತರು. ಅಫ್ಘಾನಿಸ್ತಾನದಲ್ಲಿ ತನ್ನ ಅಸ್ತಿತ್ವವನ್ನು ಇನ್ನೂ ಹೊಂದಿದೆ. ಐಸಿಸ್ ಮಾಡ್ಯೂಲ್ಗೆ ಸಂಬಂಧಿಸಿದ ಉಗ್ರರು ಭಾರತದಲ್ಲೂ ಸಿಕ್ಕಿಬಿದ್ದಿದ್ದಾರೆ.
ಮತ್ತಷ್ಟು ಓದಿ: ಐಎಸ್ಐಎಸ್ ಸಂಘಟನೆಗೆ ಬೆಂಬಲ ನೀಡ್ತಿದ್ದ ಉಗ್ರನಿಗೆ 10 ವರ್ಷ ಜೈಲು ಶಿಕ್ಷೆ ವಿಧಿಸಿದ ಕೋರ್ಟ್
ನವೆಂಬರ್ 2023 ರಲ್ಲಿ, ಶ್ರೀನಗರ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಎನ್‌ಐಟಿ) ಯಲ್ಲಿ ಹಿಂದೂ ವಿದ್ಯಾರ್ಥಿಯೊಬ್ಬರು ಹಮಾಸ್ ನಾಯಕನ ಮಗ ಪ್ರವಾದಿ ಮುಹಮ್ಮದ್ ಅವರನ್ನು ಟೀಕಿಸುವ ವೀಡಿಯೊವನ್ನು ಹಂಚಿಕೊಂಡ ನಂತರ ಧರ್ಮನಿಂದೆಯ ಆರೋಪದ ಮೇಲೆ ಪ್ರಕರಣ ದಾಖಲಿಸಲಾಯಿತು.
ಹಿಂದೂ ಎನ್‌ಐಟಿ ವಿದ್ಯಾರ್ಥಿಯು ಮೊಸಾಬ್ ಹಸನ್ ಯೂಸೆಫ್ ಇಸ್ಲಾಂ ಮತ್ತು ಪ್ರವಾದಿ ಮುಹಮ್ಮದ್ ಬಗ್ಗೆ ವಿಮರ್ಶಾತ್ಮಕ ಕಾಮೆಂಟ್‌ಗಳನ್ನು ಮಾಡುವ ವೀಡಿಯೊವನ್ನು ಈಗಾಗಲೇ ತನ್ನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:03 am, Fri, 2 February 24