ಢಾಕಾದಲ್ಲಿ ಇಸ್ಕಾನ್ ದೇವಾಲಯ ಧ್ವಂಸಗೊಳಿಸಿದ ದುಷ್ಕರ್ಮಿಗಳ ಗುಂಪು; ಮೂವರು ಭಕ್ತರಿಗೆ ಗಾಯ

| Updated By: ರಶ್ಮಿ ಕಲ್ಲಕಟ್ಟ

Updated on: Mar 18, 2022 | 4:19 PM

ಹಾಜಿ ಸೈಫುಲ್ಲಾ ನೇತೃತ್ವದ ಗುಂಪು ಢಾಕಾದ ವಾರಿಯಲ್ಲಿರುವ ಇಸ್ಕಾನ್ ದೇವಸ್ಥಾನದೊಳಗೆ ‘ನಾರಾ-ಎ-ತಕ್ಬೀರ್’ ಎಂದು ಪಠಿಸುತ್ತಾ  ನುಗ್ಗಿ ದೇವಸ್ಥಾನದೊಳಗೆ ಇದ್ದ ಜನರ ಮೇಲೆ ಹಲ್ಲೆ ನಡೆಸಿತು.

ಢಾಕಾದಲ್ಲಿ ಇಸ್ಕಾನ್ ದೇವಾಲಯ ಧ್ವಂಸಗೊಳಿಸಿದ ದುಷ್ಕರ್ಮಿಗಳ ಗುಂಪು; ಮೂವರು ಭಕ್ತರಿಗೆ ಗಾಯ
ಇಸ್ಕಾನ್ ದೇವಾಲಯ ಧ್ವಂಸ ಮಾಡುತ್ತಿರುವ ದೃಶ್ಯ
Follow us on

ಢಾಕಾ: ಬಾಂಗ್ಲಾದೇಶದ (Bangladesh) ರಾಜಧಾನಿ ಢಾಕಾದಲ್ಲಿ ಹಿಂದೂ ದೇವಾಲಯಕ್ಕೆ ನುಗ್ಗಿದ ಗುಂಪೊಂದು ವಿಗ್ರಹಗಳನ್ನು ಅಪವಿತ್ರಗೊಳಿಸಿ ದೇವಾಲಯದ ಆವರಣಕ್ಕೆ ಹಾನಿ ಮಾಡಿದೆ. ಹಾಜಿ ಸೈಫುಲ್ಲಾ ನೇತೃತ್ವದ ಗುಂಪು ಢಾಕಾದ ವಾರಿಯಲ್ಲಿರುವ ಇಸ್ಕಾನ್ (ISKCON) ದೇವಸ್ಥಾನದೊಳಗೆ ‘ನಾರಾ-ಎ-ತಕ್ಬೀರ್’ ಎಂದು ಪಠಿಸುತ್ತಾ  ನುಗ್ಗಿ ದೇವಸ್ಥಾನದೊಳಗೆ ಇದ್ದ ಜನರ ಮೇಲೆ ಹಲ್ಲೆ ನಡೆಸಿತು. ಈ ಗುಂಪು 200 ಕ್ಕೂ ಹೆಚ್ಚು ದುಷ್ಕರ್ಮಿಗಳನ್ನು ಒಳಗೊಂಡಿತ್ತು ಎಂದು ಇಂಡಿಯಾ ಟುಡೇ ವರದಿ ಮಾಡಿದೆ. ಹೋಳಿ ಹಬ್ಬದ ಪೂರ್ವಭಾವಿಯಾಗಿ ಗೌರ ಪೂರ್ಣಿಮಾ ಆಚರಣೆಗೆ ಭಕ್ತರು ಸಿದ್ಧತೆ ನಡೆಸುತ್ತಿದ್ದಾಗ ಗುಂಪೊಂದು ಘೋಷಣೆಗಳನ್ನು ಕೂಗುತ್ತಾ ಬಂದು ಅಲ್ಲಿದ್ದವರೊಂದಿ ಗೆಮಾತಿನ ಚಕಮಕಿ ನಡೆಸಿತು ಎಂದು ಈ ಬಗ್ಗೆ ತಿಳಿದಿರುವ ಸಿಎನ್ಎನ್ ನ್ಯೂಸ್ 18ಗೆ ತಿಳಿಸಿದ್ದಾರೆ. ಈ ವೇಳೆ ನಡೆದ ಗಲಾಟೆಯಲ್ಲಿ ಮೂವರು ಭಕ್ತರು ಗಾಯಗೊಂಡಿದ್ದಾರೆ.  ಪೊಲೀಸರು ಪರಿಸ್ಥಿತಿಯನ್ನು ಕೈ ಮೀರದಂತೆ ನಿಯಂತ್ರಿಸಿದ್ದಾರೆ ಎಂದು ಇಸ್ಕಾನ್ ಅಧಿಕಾರಿಗಳು ಸಿಎನ್ಎನ್ ನ್ಯೂಸ್ 18ಗೆ ತಿಳಿಸಿದ್ದಾರೆ.  ಆದರೆ ಕಳೆದ ಕೆಲವು ವರ್ಷಗಳಿಂದ ಹಿಂದೂಗಳು ಮತ್ತು ಅಲ್ಪಸಂಖ್ಯಾತರ ದಾಳಿಗಳು ಹೆಚ್ಚುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದರು.

ಹಿಂದೂಗಳ ಮೇಲಿನ ದಾಳಿಗಳು ಹಿಂದೂ ಮತ್ತು ಇತರ ಅಲ್ಪಸಂಖ್ಯಾತರಲ್ಲಿ ಕಳವಳವನ್ನುಂಟುಮಾಡಿವೆ . 2021ರಲ್ಲಿ ಕೊಮಿಲ್ಲಾದಲ್ಲಿನ ನಾನುವಾರ್ ದಿಘಿ  ಲೇಕ್​​ನಲ್ಲಿರುವ  ದುರ್ಗಾಪೂಜಾ ಸ್ಥಳಗಳು ಮತ್ತು  ಪಂಡಾಲ್ ಮೇಲೆ ಮುಸ್ಲಿಂ ಮೂಲಭೂತವಾದಿಗಳ ನೇತೃತ್ವದ ಮತ್ತೊಂದು ಗುಂಪೊಂದು ದಾಳಿ ಮಾಡಿತ್ತು. ಬಾಂಗ್ಲಾದೇಶ ಸರ್ಕಾರವು ನಂತರದ ದಿನಗಳಲ್ಲಿ ನೂರಾರು ಮಂದಿಯವನ್ನು ಬಂಧಿಸಿದೆ. ಆದರೆ ಅಲ್ಪಸಂಖ್ಯಾತರ ಮೇಲೆ ಮೂಲಭೂತವಾದಿಗಳ ನೇತೃತ್ವದ ಘರ್ಷಣೆಗಳು ರಾಷ್ಟ್ರದಾದ್ಯಂತ ಉದ್ವಿಗ್ನತೆಗೆ ಕಾರಣವಾಯಿತು.

ಶೇಖ್ ಹಸೀನಾ ನೇತೃತ್ವದ ಸರ್ಕಾರವು ಮೂಲಭೂತವಾದಿಗಳ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಂಡರೂ ಕಳೆದ ಕೆಲವು ವರ್ಷಗಳಿಂದ ಹಿಂದೂಗಳು, ನಾಸ್ತಿಕರು, ಜಾತ್ಯತೀತ ಮುಸ್ಲಿಮರು ಮತ್ತು LGBTQIA+ ಜನರ ಮೇಲಿನ ದಾಳಿಗಳು ಹೆಚ್ಚಿವೆ. ಅಭಿಜಿತ್ ರಾಯ್, ಥಾಬಾ ಬಾಬಾ ಅಕಾ ಅಹಮದ್ ರಾಜೀಬ್ ಹೈದರ್ ಮತ್ತು ಇತರ ಅನೇಕ ಲೇಖಕರ ಮೇಲೆ ದಾಳಿಗಳು ನಡೆದಿವೆ.

2016 ರಲ್ಲಿ ನಡೆದ ಹೋಲಿ ಆರ್ಟಿಸನ್ ಬೇಕರಿ ದಾಳಿಯ ನಂತರ  ಕ್ವಾಮಿ ಮದರಸಾಗಳು ಮತ್ತು ಜಮಾತ್ ಶಿಬಿರ್‌ನ ಭಯೋತ್ಪಾದಕ ಅಂಶಗಳು ಪ್ರಾಥಮಿಕವಾಗಿ ಭಯೋತ್ಪಾದನೆಯನ್ನು ಹುಟ್ಟುಹಾಕಲು ಕಾರಣವೆಂದು ಬಾಂಗ್ಲಾದೇಶ ಸರ್ಕಾರ ಗಮನಿಸುವಂತೆ  ಮಾಡಿತು.

ಇದನ್ನೂ ಓದಿ:Oksana Shvets: ಕೀವ್​ನ ವಸತಿ ಕಟ್ಟಡದ ಮೇಲೆ ರಷ್ಯಾ ದಾಳಿ; ಉಕ್ರೇನ್​ನ ಖ್ಯಾತ ನಟಿ ದುರ್ಮರಣ

Published On - 3:15 pm, Fri, 18 March 22