AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Oksana Shvets: ಕೀವ್​ನ ವಸತಿ ಕಟ್ಟಡದ ಮೇಲೆ ರಷ್ಯಾ ದಾಳಿ; ಉಕ್ರೇನ್​ನ ಖ್ಯಾತ ನಟಿ ದುರ್ಮರಣ

Russia Ukraine War: ರಷ್ಯಾ ಉಕ್ರೇನ್ ಮೇಲೆ ದಾಳಿ ಮುಂದುವರೆಸಿದೆ. ಈ ವೇಳೆ ಕೀವ್‌ನಲ್ಲಿರುವ ವಸತಿ ಕಟ್ಟಡದ ಮೇಲೆ ರಷ್ಯಾದ ರಾಕೆಟ್ ದಾಳಿಯಲ್ಲಿ ಉಕ್ರೇನಿಯನ್ ಚಲನಚಿತ್ರ ಮತ್ತು ರಂಗಭೂಮಿ ನಟಿ ಒಕ್ಸಾನಾ ಶ್ವೆಟ್ಸ್ (Oksana Shvets) ದುರ್ಮರಣಕ್ಕೀಡಾಗಿದ್ದಾರೆ.

Oksana Shvets: ಕೀವ್​ನ ವಸತಿ ಕಟ್ಟಡದ ಮೇಲೆ ರಷ್ಯಾ ದಾಳಿ; ಉಕ್ರೇನ್​ನ ಖ್ಯಾತ ನಟಿ ದುರ್ಮರಣ
ಒಕ್ಸಾನಾ ಶ್ವೆಟ್ಸ್
TV9 Web
| Updated By: shivaprasad.hs|

Updated on:Mar 18, 2022 | 3:25 PM

Share

ಕೀವ್: ಉಕ್ರೇನ್‌ನ ಕೀವ್‌ನಲ್ಲಿರುವ ವಸತಿ ಕಟ್ಟಡದ ಮೇಲೆ ರಷ್ಯಾದ ರಾಕೆಟ್ ದಾಳಿಯಲ್ಲಿ (Russia Ukraine War) ಉಕ್ರೇನಿಯನ್ ಚಲನಚಿತ್ರ ಮತ್ತು ರಂಗಭೂಮಿ ನಟಿ ಒಕ್ಸಾನಾ ಶ್ವೆಟ್ಸ್ (Oksana Shvets) ದುರ್ಮರಣಕ್ಕೀಡಾಗಿದ್ದಾರೆ. ಅವರಿಗೆ 67 ವರ್ಷ ವಯಸ್ಸಾಗಿತ್ತು. ನಟಿಯ ಮರಣವನ್ನು ‘ಯಂಗ್ ಥಿಯೇಟರ್’ ದೃಢಪಡಿಸಿದ್ದು, ಈ ಕುರಿತು ಮಾಹಿತಿ ನೀಡಿದೆ. ಶ್ವೆಟ್ಸ್ 1980ರಿಂದ ಆ ತಂಡದ ಸದಸ್ಯರಾಗಿದ್ದರು. ‘ಯಂಗ್ ಥಿಯೇಟರ್ ಕುಟುಂಬದಲ್ಲಿ ಶಮನವಾಗದ ದುಃಖ’ ಎಂದು ಬರೆದು ತಂಡವು ಫೇಸ್​ಬುಕ್ ಪೋಸ್ಟ್ ಹಂಚಿಕೊಂಡಿದೆ. ‘ಪ್ರತಿಭಾವಂತ ನಟಿಗೆ ನಮನ. ನಮ್ಮ ನೆಲಕ್ಕೆ ಬಂದ ಶತ್ರುಗಳಿಗೆ ಕ್ಷಮೆಯಿಲ್ಲ’ ಎಂದು ಬರೆದು ತಂಡವು ಪೋಸ್ಟ್ ಹಂಚಿಕೊಂಡಿದೆ. ಉಕ್ರೇನ್​ನ ಆಂಗ್ಲ ಮಾಧ್ಯಮ ಕೀವ್ ಪೋಸ್ಟ್ ಕೂಡ ಪ್ರತಿಭಾವಂತ ನಟಿಯ ಸಾವನ್ನು ದೃಢಪಡಿಸಿದೆ. ‘ಯುದ್ಧದ ಸಮಯದಲ್ಲಿ ಕೀವ್‌ನಲ್ಲಿ ಅವರು ಹತ್ಯೆಯಾಗಿದ್ದಾರೆ’ ಎಂದು ಅದು ವರದಿ ಮಾಡಿದೆ.

ಒಕ್ಸಾನಾ ಉಕ್ರೇನ್‌ನಲ್ಲಿ ಹಲವು ದಶಕಗಳಿಂದ ರಂಗಭೂಮಿ ಮತ್ತು ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದವರು. ದೇಶದ ಹಲವಾರು ಉನ್ನತ ಪ್ರಶಸ್ತಿಗಳನ್ನು ಅವರು ಮುಡಿಗೇರಿಸಿಕೊಂಡಿದ್ದರು. ಪ್ರದರ್ಶನ ಕಲೆಗಾಗಿ ಉಕ್ರೇನ್‌ನ ಅತ್ಯುನ್ನತ ಗೌರವಗಳಲ್ಲಿ ಒಂದಾದ ಉಕ್ರೇನ್‌ನ ಮೆರಿಟೆಡ್ ಆರ್ಟಿಸ್ಟ್ ಪ್ರಶಸ್ತಿಯನ್ನೂ ನಟಿ ಪಡೆದಿದ್ದರು.

ಒಕ್ಸಾನಾ ಶ್ವೆಟ್ಸ್ ಪರಿಚಯ:

1955ರಲ್ಲಿ ಜನಿಸಿದ ಒಕ್ಸಾನಾ ಶ್ವೆಟ್ಸ್ ಇವಾನ್ ಫ್ರಾಂಕೊ ಥಿಯೇಟರ್ ಮತ್ತು ಕೀವ್ ಸ್ಟೇಟ್ ಇನ್ಸ್ಟಿಟ್ಯೂಟ್ ಆಫ್ ಥಿಯೇಟರ್ ಆರ್ಟ್ಸ್​​ನಲ್ಲಿ ರಂಗಭೂಮಿ ವಿಷಯದಲ್ಲಿ ಅಧ್ಯಯನ ನಡೆಸಿದ್ದರು. ತಮ್ಮ ರಂಗಭೂಮಿ ಕೆಲಸದ ಜೊತೆಗೆ, ‘ದಿ ಸೀಕ್ರೆಟ್ ಆಫ್ ಸೇಂಟ್ ಪ್ಯಾಟ್ರಿಕ್’, ‘ದಿ ರಿಟರ್ನ್ ಆಫ್ ಮುಖ್ತಾರ್’ ಮತ್ತು ಟಿವಿ ಶೋ ‘ಹೌಸ್ ವಿತ್ ಲಿಲೀಸ್’ ಸೇರಿದಂತೆ ವಿವಿಧ ಉಕ್ರೇನಿಯನ್ ಚಲನಚಿತ್ರಗಳಲ್ಲಿ ಶ್ವೆಟ್ಸ್ ಬಣ್ಣಹಚ್ಚಿದ್ದರು.

ರಷ್ಯಾದ ಆಕ್ರಮಣದ ಸಮಯದಲ್ಲಿ ಸಾವನ್ನಪ್ಪಿದ ಹಲವಾರು ಉನ್ನತ ವ್ಯಕ್ತಿಗಳಲ್ಲಿ ಒಕ್ಸಾನಾ ಕೂಡ ಒಬ್ಬರು. ಅವರಿಗಿಂತ ಮೊದಲು, ನಟ ಪಾಶಾ ಲೀ ಈ ತಿಂಗಳ ಆರಂಭದಲ್ಲಿ ನಿಧನರಾಗಿದ್ದರು ಎಂದು ವರದಿಯಾಗಿತ್ತು. ಇತ್ತೀಚೆಗೆ ಉಕ್ರೇನ್ ಮೇಲಿನ ಯುದ್ಧ ನಿಲ್ಲಿಸುವಂತೆ ರಷ್ಯಾಗೆ ಖ್ಯಾತ ನಟ ಅರ್ನಾಲ್ಡ್ ಶ್ವಾರ್ಜಿನೆಗ್ಗರ್ ಮನವಿ ಮಾಡಿದ್ದರು. ಅವರು ಕದನ ವಿರಾಮಕ್ಕೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರಲ್ಲಿ ಮನವಿ ಮಾಡಿದ್ದರು.

ರಷ್ಯಾ ಅಧ್ಯಕ್ಷ ಪುಟಿನ್ ಕದನದಿಂದ ಹಿಂದೆ ಸರಿಯುವುದಿಲ್ಲ. ಉಕ್ರೇನ್ ಸೇನೆ ಉದ್ದೇಶಿತ ಗುರಿಯನ್ನು ತಲುಪಲಿದೆ ಎಂದಿದ್ದಾರೆ. ಇದರ ನಡುವೆ ಮಾತುಕತೆಗೆ ಸಿದ್ಧ ಎಂದೂ ಅವರು ಹೇಳಿದ್ದಾರೆ. ರಷ್ಯಾದ ದಾಳಿಯಿಂದ ಇತ್ತೀಚೆಗೆ ಮರಿಯುಪೋಲ್​ನಲ್ಲಿ ರಂಗಮಂದಿರ ನಾಶವಾಗಿತ್ತು. ಅದರಲ್ಲಿ 50 ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದರು. ರಂಗಮಂದಿರದ ಮರುನಿರ್ಮಾಣಕ್ಕೆ ಸಹಾಯ ಮಾಡುವುದಾಗಿ ಇಟಲಿ ಘೋಷಿಸಿದೆ.

ಇದನ್ನೂ ಓದಿ:

Ukraine Crisis: ಯುದ್ಧ ನಿಲ್ಲಿಸಲು ಪುಟಿನ್ ಮುಂದಿಟ್ಟ ಬೇಡಿಕೆಗಳು ಬಹಿರಂಗ; ಉಕ್ರೇನ್​ಗೆ ಆತಂಕವೇಕೆ? ಇಲ್ಲಿದೆ ಮಾಹಿತಿ

36 ಮಿಲಿಯನ್ ವರ್ಷಗಳಷ್ಟು ಹಳೆಯ ತಿಮಿಂಗಿಲದ ಪಳೆಯುಳಿಕೆ ಪತ್ತೆ; ಏನಿದರ ವಿಶೇಷ? ಸಚಿತ್ರ ಮಾಹಿತಿ ಇಲ್ಲಿದೆ

Published On - 3:18 pm, Fri, 18 March 22

ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?