Russia-Ukraine war: ಭಾರತದ ನಿಲುವಿನಿಂದ ತುಂಬಾ ನಿರಾಶೆಯಾಗಿದೆ ಎಂದ ಬ್ರಿಟನ್ ಸಚಿವೆ

"ನಾವು ತುಂಬಾ ನಿರಾಶೆಗೊಂಡಿದ್ದೇವೆ. ಆದರೆ ನಾವು ಭಾರತೀಯ ಪಾಲುದಾರರೊಂದಿಗೆ ಕೆಲಸ ಮಾಡುವುದನ್ನು ಮುಂದುವರಿಸುತ್ತೇವೆ" ಎಂದು ಯುಕೆಯ ವ್ಯಾಪಾರ ಸಚಿವೆ ಅನ್ನೆ ಮೇರಿ ಟ್ರೆವೆಲಿಯನ್ ಹೇಳಿದ್ದಾರೆ

Russia-Ukraine war: ಭಾರತದ ನಿಲುವಿನಿಂದ ತುಂಬಾ ನಿರಾಶೆಯಾಗಿದೆ ಎಂದ ಬ್ರಿಟನ್ ಸಚಿವೆ
ಯುಕೆಯ ವ್ಯಾಪಾರ ಸಚಿವೆ ಅನ್ನೆ ಮೇರಿ ಟ್ರೆವೆಲಿಯನ್ Image Credit source: ರಾಯಿಟರ್ಸ್
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on: Mar 17, 2022 | 7:52 PM

ಉಕ್ರೇನ್ (Ukraine war) ಮೇಲೆ ರಷ್ಯಾದ ಆಕ್ರಮಣಕ್ಕೆಸಂಬಂಧಿಸಿದಂತೆ ಭಾರತ ನಿಲುವಿನ ಬಗ್ಗೆ ಬ್ರಿಟನ್ (Britain) ಗುರುವಾರ ತನ್ನ ನಿರಾಶೆಯನ್ನು ವ್ಯಕ್ತಪಡಿಸಿತು. ಆದರೆ ಅದು ಭಾರತದ ಪ್ರಮುಖ ವ್ಯಾಪಾರ ಪಾಲುದಾರ ಎಂದು ಒಪ್ಪಿಕೊಂಡಿತು. “ನಾವು ತುಂಬಾ ನಿರಾಶೆಗೊಂಡಿದ್ದೇವೆ. ಆದರೆ ನಾವು ಭಾರತೀಯ ಪಾಲುದಾರರೊಂದಿಗೆ ಕೆಲಸ ಮಾಡುವುದನ್ನು ಮುಂದುವರಿಸುತ್ತೇವೆ” ಎಂದು ಯುಕೆಯ ವ್ಯಾಪಾರ ಸಚಿವೆ ಅನ್ನೆ ಮೇರಿ ಟ್ರೆವೆಲಿಯನ್ (Anne-Marie Trevelyan) ಹೇಳಿದ್ದಾರೆ. ಭಾರತದ ನಿಲುವು ತನ್ನ ದೇಶದೊಂದಿಗಿನ ವ್ಯಾಪಾರ ಮಾತುಕತೆಗಳ ಮೇಲೆ ಪರಿಣಾಮ ಬೀರುತ್ತದೆಯೇ ಎಂದು ಕೇಳಿದಾಗ ಅವರು ಈ ರೀತಿ ಉತ್ತರಿಸಿದ್ದಾರೆ.  ಭಾರತವು ಯುಕೆಗೆ ಪ್ರಮುಖ ವ್ಯಾಪಾರ ಪಾಲುದಾರವಾಗಿದೆ. ಭವಿಷ್ಯದಲ್ಲಿ ಪುಟಿನ್ ಈ ಯುದ್ಧಕ್ಕೆ ಹಣವನ್ನು ನೀಡಲು ಸಾಧ್ಯವಿಲ್ಲ ಎಂದು ಖಚಿತಪಡಿಸಿಕೊಳ್ಳಲು ನಾವು ಪ್ರಪಂಚದಾದ್ಯಂತದ ದೇಶಗಳೊಂದಿಗೆ ಕೆಲಸ ಮಾಡುವುದನ್ನು ಮುಂದುವರಿಸುತ್ತೇವೆ ಎಂದು ಅನ್ನೆ ಮೇರಿ ಹೇಳಿರುವುದಾಗಿ ಸುದ್ದಿ ಸಂಸ್ಥೆ ರಾಯಿಟರ್ಸ್ ವರದಿ ಮಾಡಿದೆ. ಮಾಸ್ಕೊದ ಮೇಲೆ ರಾಜತಾಂತ್ರಿಕ ಒತ್ತಡವನ್ನು ಹೆಚ್ಚಿಸಲು ಸಹಾಯ ಮಾಡಲು ಬ್ರಿಟನ್‌ನ ಉಪ ಪ್ರಧಾನ ಮಂತ್ರಿ ಡೊಮಿನಿಕ್ ರಾಬ್ ಭಾರತಕ್ಕೆ ಮತ್ತು ಬೀಜಿಂಗ್‌ಗೆ ಕರೆ ನೀಡುವುದರೊಂದಿಗೆ ಯುಕೆ ಕೆಲವು ಸಮಯದಿಂದ ಭಾರತದ ಮೇಲೆ ಒತ್ತಡ ಹೇರುತ್ತಿದೆ. ಭಾರತ ಮತ್ತು ಚೀನಾ ರಷ್ಯಾದೊಂದಿಗೆ ನಿಕಟ ಸಂಬಂಧವನ್ನು ಹೊಂದಿವೆ. ಉಕ್ರೇನ್ ಮೇಲಿನ ರಷ್ಯಾದ ಆಕ್ರಮಣದ ವಿರುದ್ಧ ಅಂಗೀಕರಿಸಿದ ಯಾವುದೇ ನಿರ್ಣಯದಿಂದ ಉಭಯ ದೇಶಗಳು ದೂರ ಉಳಿದಿವೆ. ಇತ್ತೀಚೆಗೆ, ಉಕ್ರೇನ್ ವಿರುದ್ಧದ ರಷ್ಯಾದ ಆಕ್ರಮಣವನ್ನು ಖಂಡಿಸುವ ನಿರ್ಣಯಕ್ಕೆ ಭಾರತವು ಯುಎನ್ ಜನರಲ್ ಅಸೆಂಬ್ಲಿಯಲ್ಲಿ ದೂರವಿತ್ತು ಮತ್ತು ಭಿನ್ನಾಭಿಪ್ರಾಯಗಳನ್ನು ಮಾತುಕತೆ ಮತ್ತು ರಾಜತಾಂತ್ರಿಕತೆಯ ಮೂಲಕ ಮಾತ್ರ ಪರಿಹರಿಸಬಹುದು ಎಂದು ಪುನರುಚ್ಚರಿಸಿತು.

ಯುಎನ್‌ಜಿಎ ನಿರ್ಣಯವು ಕಳೆದ ತಿಂಗಳು 15 ರಾಷ್ಟ್ರಗಳ ಭದ್ರತಾ ಮಂಡಳಿಯಲ್ಲಿ ಪ್ರಸಾರವಾದಂತೆಯೇ ಇತ್ತು ಇದರಿಂದಲೂ ಭಾರತ ದೂರವಿತ್ತು. ಯುಎನ್‌ಎಸ್‌ಸಿ ನಿರ್ಣಯವು ಪರವಾಗಿ 11 ಮತಗಳನ್ನು ಮತ್ತು ಮೂರು ಗೈರುಹಾಜರಿಗಳನ್ನು ಪಡೆದಿದೆ, ಖಾಯಂ ಸದಸ್ಯ ರಷ್ಯಾ ತನ್ನ ವೀಟೋವನ್ನು ಚಲಾಯಿಸಿದ ನಂತರ ನಿರ್ಬಂಧಿಸಲಾಗಿದೆ.

ಬುಧವಾರ, ಅಂತರರಾಷ್ಟ್ರೀಯ ನ್ಯಾಯಾಲಯವು (ICJ) ಉಕ್ರೇನ್‌ನಲ್ಲಿ ತನ್ನ ಮಿಲಿಟರಿ ಕಾರ್ಯಾಚರಣೆಯನ್ನು ತಕ್ಷಣವೇ ಸ್ಥಗಿತಗೊಳಿಸುವಂತೆ ರಷ್ಯಾವನ್ನು ಕೇಳಿದೆ. ಭಾರತದ ನ್ಯಾಯಾಧೀಶ ನ್ಯಾಯಮೂರ್ತಿ ದಲ್ವೀರ್ ಭಂಡಾರಿ ಅವರು ರಷ್ಯಾ ವಿರುದ್ಧ ಮತ ಚಲಾಯಿಸಿದರೆ, ಚೀನಾದ ನ್ಯಾಯಾಧೀಶರು ಆದೇಶವನ್ನು ವಿರೋಧಿಸಿದರು.

ಇದನ್ನು ಮಹತ್ವದ ತೀರ್ಪು ಎಂದು ವಿವರಿಸಿದ ಸ್ಟೇಟ್ ಡಿಪಾರ್ಟ್ಮೆಂಟ್ ವಕ್ತಾರ ನೆಡ್ ಪ್ರೈಸ್, ಐಸಿಜೆ “ಸ್ಪಷ್ಟವಾಗಿ ಮತ್ತು ನಿಸ್ಸಂದಿಗ್ಧವಾಗಿ” ರಷ್ಯಾ ತನ್ನ ಮಿಲಿಟರಿ ಕಾರ್ಯಾಚರಣೆಯನ್ನು ತಕ್ಷಣವೇ ಸ್ಥಗಿತಗೊಳಿಸುವಂತೆ ಆದೇಶಿಸಿದೆ ಎಂದು ಹೇಳಿದರು.

ಇದನ್ನೂ ಓದಿ: ಉಕ್ರೇನ್​ನಲ್ಲಿ ಇನ್ನೂ ಇದ್ದಾರೆ 15-20 ಮಂದಿ ಭಾರತೀಯರು, ತಾಯ್ನಾಡಿಗೆ ಮರಳಲು ಕಾಯುತ್ತಿದ್ದಾರೆ: ಕೇಂದ್ರ ಸರ್ಕಾರದಿಂದ ಮಾಹಿತಿ

ಖೋ- ಖೋ ವಿಶ್ವಕಪ್: ಭಾರತ ಮಹಿಳಾ- ಪುರುಷ ತಂಡಗಳೇ ಚಾಂಪಿಯನ್ಸ್
ಖೋ- ಖೋ ವಿಶ್ವಕಪ್: ಭಾರತ ಮಹಿಳಾ- ಪುರುಷ ತಂಡಗಳೇ ಚಾಂಪಿಯನ್ಸ್
ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಖೋ- ಖೋ ವಿಶ್ವಕಪ್ ಗೆದ್ದು ಬೀಗಿದ ಭಾರತ ಮಹಿಳಾ ಪಡೆ
ಖೋ- ಖೋ ವಿಶ್ವಕಪ್ ಗೆದ್ದು ಬೀಗಿದ ಭಾರತ ಮಹಿಳಾ ಪಡೆ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ