ಉಕ್ರೇನ್​ನಲ್ಲಿ ಇನ್ನೂ ಇದ್ದಾರೆ 15-20 ಮಂದಿ ಭಾರತೀಯರು, ತಾಯ್ನಾಡಿಗೆ ಮರಳಲು ಕಾಯುತ್ತಿದ್ದಾರೆ: ಕೇಂದ್ರ ಸರ್ಕಾರದಿಂದ ಮಾಹಿತಿ

ಆಪರೇಶನ್​ ಗಂಗಾ ಕಾರ್ಯಾಚರಣೆ ಮುಕ್ತಾಯಗೊಂಡಿಲ್ಲ.  ಈಗ ಅಲ್ಲಿ ಉಳಿದಿರುವ ಭಾರತೀಯರಿಗೆ ಎಲ್ಲ ರೀತಿಯ ನೆರವು ನೀಡುತ್ತೇವೆ. ಖೆರ್ಸನ್​ ಸಿಟಿಯಲ್ಲಿ ಸಿಲುಕಿರುವ ಅವರನ್ನೂ ದೇಶಕ್ಕೆ ವಾಪಸ್​ ಕರೆತರಲಾಗುವುದು

ಉಕ್ರೇನ್​ನಲ್ಲಿ ಇನ್ನೂ ಇದ್ದಾರೆ 15-20 ಮಂದಿ ಭಾರತೀಯರು, ತಾಯ್ನಾಡಿಗೆ ಮರಳಲು ಕಾಯುತ್ತಿದ್ದಾರೆ: ಕೇಂದ್ರ ಸರ್ಕಾರದಿಂದ ಮಾಹಿತಿ
ಸಾಂದರ್ಭಿಕ ಚಿತ್ರ
Follow us
TV9 Web
| Updated By: Lakshmi Hegde

Updated on:Mar 17, 2022 | 6:44 PM

ಯುದ್ಧ ನೆಲ ಉಕ್ರೇನ್​​ನಿಂದ ಭಾರತೀಯರನ್ನು ಸ್ಥಳಾಂತರ ಮಾಡುವ ಕಾರ್ಯಾಚರಣೆ ಆಪರೇಶನ್​ ಗಂಗಾ ನಾಲ್ಕೈದು ದಿನಗಳ ಹಿಂದೆ ಮುಕ್ತಾಯಗೊಂಡಿದೆ. ಕೊನೇ ದಿನ ಸುಮಿ ಯುದ್ಧವಲಯದಲ್ಲಿದ್ದ 674 ಭಾರತೀಯರನ್ನು ವಾಪಸ್ ಕರೆತರಲಾಗಿದೆ. ಹೀಗಿದ್ದಾಗ್ಯೂ ಇನ್ನೂ 15-20 ಭಾರತೀಯರು ಉಕ್ರೇನ್​ನಲ್ಲಿಯೇ ಉಳಿದು ಹೋಗಿದ್ದಾರೆ. ಅವರೂ ಭಾರತಕ್ಕೆ ಮರಳಲು ಕಾಯುತ್ತಿದ್ದಾರೆ ಎಂದು ಕೇಂದ್ರ ಸರ್ಕಾರ ಇಂದು ತಿಳಿಸಿದೆ. ಅಷ್ಟೇ ಅಲ್ಲ, ಆಪರೇಶನ್​ ಗಂಗಾ ಕಾರ್ಯಾಚರಣೆ ಮುಕ್ತಾಯಗೊಂಡಿಲ್ಲ.  ಈಗ ಅಲ್ಲಿ ಉಳಿದಿರುವ ಭಾರತೀಯರಿಗೆ ಎಲ್ಲ ರೀತಿಯ ನೆರವು ನೀಡುತ್ತೇವೆ. ಖೆರ್ಸನ್​ ಸಿಟಿಯಲ್ಲಿ ಸಿಲುಕಿರುವ ಅವರನ್ನೂ ದೇಶಕ್ಕೆ ವಾಪಸ್​ ಕರೆತರಲಾಗುವುದು ಎಂದು ಕೇಂದ್ರ ವಿದೇಶಾಂಗ ಇಲಾಖೆ ವಕ್ತಾರ ಅರಿಂದಮ್​ ಬಾಗ್ಚಿ ಮಾಧ್ಯಮಗಳಿಗೆ ತಿಳಿಸಿದ್ದಾರೆ. 

ಉಕ್ರೇನ್​​ನಲ್ಲಿ ರಷ್ಯಾದ ಆಕ್ರಮಣ ತೀವ್ರಗೊಳ್ಳುತ್ತಿದ್ದಂತೆಯೇ ಭಾರತೀಯರನ್ನು ರಕ್ಷಿಸುವ ಕಾರ್ಯಾಚರಣೆಯನ್ನು ಕೇಂದ್ರ ಸರ್ಕಾರ ಶುರುವಿಟ್ಟುಕೊಂಡಿತ್ತು. ಉಕ್ರೇನ್​ ಗಡಿ ರಾಷ್ಟ್ರಗಳಾದ ಹಂಗೇರಿ, ರೊಮೇನಿಯಾ, ಪೋಲ್ಯಾಂಡ್​ ಸೇರಿ ಇತರ ದೇಶಗಳ ಮೂಲಕ, ಆಪರೇಶನ್​ ಗಂಗಾ ಎಂಬ ಹೆಸರಿನ ಕಾರ್ಯಾಚರಣೆ ನಡೆಸಿ ಸುಮಾರು 20 ಸಾವಿರ ವಿದ್ಯಾರ್ಥಿಗಳನ್ನು ಭಾರತಕ್ಕೆ ಸ್ಥಳಾಂತರ ಮಾಡಲಾಗಿದೆ. ಭಾರತದ ಒಬ್ಬ ವಿದ್ಯಾರ್ಥಿ ನವೀನ್ (ಕರ್ನಾಟಕದ ಹಾವೇರಿ ಮೂಲದವನು) ರಷ್ಯಾ ದಾಳಿಗೆ ಮೃತಪಟ್ಟಿದ್ದ. ಅದು ಬಿಟ್ಟರೆ ಇನ್ನೊಬ್ಬ ವಿದ್ಯಾರ್ಥಿಗೆ ಗುಂಡೇಟು ತಗುಲಿತ್ತು, ಆದರೆ ಪ್ರಾಣಾಪಾಯ ಆಗಿರಲಿಲ್ಲ.

ಭಾರತೀಯರು ಹೆಚ್ಚಿನ ಸಂಖ್ಯೆಯಲ್ಲಿ ಇರುವುದು ಉಕ್ರೇನ್​​ನ ಪೂರ್ವದ ನಗರಗಳಲ್ಲೇ ಆಗಿತ್ತು. ಹಾಗೇ ಯುದ್ಧ ತೀವ್ರತೆ ಅಲ್ಲಿ ಜಾಸ್ತಿಯಿತ್ತು. ಅವರನ್ನು ರಕ್ಷಿಸಲು ಭಾರತ ರಷ್ಯಾ ಮತ್ತು ಉಕ್ರೇನ್​ ಜತೆ ರಾಜತಾಂತ್ರಿಕ ಮಾತುಕತೆಗಳನ್ನು ನಡೆಸಿ, ಎಲ್ಲ ಭಾರತೀಯರನ್ನೂ ಯಶಸ್ವಿಯಾಗಿ ರಕ್ಷಣೆ ಮಾಡಿದೆ. ನಿನ್ನೆ ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿದ್ದ ಕೇಂದ್ರ ವಿದೇಶಾಂಗ ಇಲಾಖೆ ಸಚಿವ ಎಸ್.ಜೈಶಂಕರ್​, ನಾವು ಸುಮಾರು 20 ಸಾವಿರ ವಿದ್ಯಾರ್ಥಿಗಳನ್ನು ಸ್ಥಳಾಂತರ ಮಾಡಿದ್ದೇವೆ. ಹಾಗಿದ್ದಾಗ್ಯೂ ಇನ್ನೂ ಅನೇಕರು ಅಲ್ಲಿಯೇ ನೆಲೆಸಲು ತೀರ್ಮಾನ ಮಾಡಿದ್ದಾರೆ. ನಾವು ಅವರ ನಿರ್ಧಾರವನ್ನು ಗೌರವಿಸುತ್ತೇವೆ. ಕೆಲವು ಯೂನಿವರ್ಸಿಟಿಗಳು ಆನ್​ಲೈನ್ ಕ್ಲಾಸ್​ ನಡೆಸಲು ನಿರಾಕರಿಸುತ್ತಿವೆ. ಹೀಗಾಗಿ ತಮ್ಮ ಶಿಕ್ಷಣದ ದೃಷ್ಟಿಯಿಂದ ಅವರು ಅಲ್ಲೇ ಉಳಿದುಕೊಂಡಿದ್ದಾರೆ ಎಂದು ಹೇಳಿದ್ದರು.

ಇದನ್ನೂ ಓದಿ: ಐಪಿಎಸ್​ ಅಧಿಕಾರಿಗೆ ಬ್ಯಾಗ್ ಓಪನ್ ಮಾಡಿ ಎಂದ ಏರ್​ಪೋರ್ಟ್​ ಸಿಬ್ಬಂದಿ; ಅದರಲ್ಲೇನಿತ್ತು ಎಂದು ನೀವು ಊಹಿಸಲೂ ಅಸಾಧ್ಯ!

Published On - 6:29 pm, Thu, 17 March 22

Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು