AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜರ್ಮನ್​ ಸಂಸತ್ತನ್ನು ಉದ್ದೇಶಿಸಿ ಭಾವನಾತ್ಮಕವಾಗಿ ಮಾತನಾಡಿದ ಉಕ್ರೇನ್​ ಅಧ್ಯಕ್ಷ; ಎದ್ದುನಿಂತು ಗೌರವ ಸಲ್ಲಿಸಿದ ಜನಪ್ರತಿನಿಧಿಗಳು

ಈ ವಿಡಿಯೋದಲ್ಲಿ ಝೆಲೆನ್ಸ್ಕಿಯವರನ್ನು ನೋಡಿದರೆ, ಅವರೊಂದು ದೇಶದ ಅಧ್ಯಕ್ಷರಾ ಎಂಬ ಪ್ರಶ್ನೆ ಮೂಡುವಂತಾಗಿದೆ. ಒಂದು ಖಾಕಿ ಬಣ್ಣದ ಟಿ ಶರ್ಟ್​ ತೊಟ್ಟಿದ್ದಾರೆ. ಕಣ್ಣ ಕೆಳಗೆ ಕಪ್ಪಾಗಿವೆ.

ಜರ್ಮನ್​ ಸಂಸತ್ತನ್ನು ಉದ್ದೇಶಿಸಿ ಭಾವನಾತ್ಮಕವಾಗಿ ಮಾತನಾಡಿದ ಉಕ್ರೇನ್​ ಅಧ್ಯಕ್ಷ; ಎದ್ದುನಿಂತು ಗೌರವ ಸಲ್ಲಿಸಿದ ಜನಪ್ರತಿನಿಧಿಗಳು
ವೊಲೊಡಿಮಿರ್ ಝೆಲೆನ್ಸ್ಕಿಗೆ ಎದ್ದುನಿಂತು ಗೌರವ ಸಲ್ಲಿಸಿದ ಜರ್ಮನ್​ ಎಂಪಿಗಳು
TV9 Web
| Edited By: |

Updated on:Mar 17, 2022 | 5:27 PM

Share

ರಷ್ಯಾ ಆಕ್ರಮಣಕ್ಕೆ ತುತ್ತಾಗಿರುವ ಉಕ್ರೇನ್​​ನ ಸಹಾಯಕ್ಕೆ ಬನ್ನಿ, ಇಲ್ಲಿ ರಷ್ಯಾ ನಿರ್ಮಿಸುತ್ತಿರುವ ಗೋಡೆಯ ನಾಶ ಮಾಡಲು ಸಹಾಯ ಮಾಡಿ ಎಂದು ಉಕ್ರೇನ್​ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಜರ್ಮನಿಯ ಜನಪ್ರತಿನಿಧಿಗಳ ಬಳಿ ಭಾವನಾತ್ಮಕವಾಗಿ ಮನವಿ ಮಾಡಿದ್ದಾರೆ. ಇಂದು ಜರ್ಮನಿ ಸಂಸತ್ತನ್ನು ಉದ್ದೇಶಿಸಿ, ವಿಡಿಯೋ ಮೂಲಕ ಮಾತನಾಡಿದ ಝೆಲೆನ್ಸ್ಕಿ, ರಷ್ಯಾ ಉಕ್ರೇನ್​​ನಲ್ಲಿ ಗೋಡೆ ನಿರ್ಮಾಣ ಮಾಡುತ್ತಿದೆ. ಇದು ಬರ್ಲಿನ್​ ವಾಲ್​​ನಂತಲ್ಲ, ಇದು ಮಧ್ಯ ಏಷ್ಯಾದಲ್ಲಿ, ಸ್ವಾತಂತ್ರ್ಯವನ್ನು ತಡೆಯಲು ಕಟ್ಟಿದ ದಾಸ್ಯವೆಂಬ ಗೋಡೆ. ರಷ್ಯಾ ಉಕ್ರೇನ್​ ಮೇಲೆ ಒಂದೊಂದು ಬಾಂಬ್​ ಹಾಕಿದಾಗಲೂ ಈ ಗೋಡೆಯ ಗಾತ್ರ ಹೆಚ್ಚುತ್ತಲೇ ಹೋಗುತ್ತಿದೆ ಎಂದು ಜರ್ಮನ್​ ಸಂಸದರುಗಳ ಎದುರು ನೋವು ತೋಡಿಕೊಂಡಿದ್ದಾರೆ.

ಈ ವಿಡಿಯೋದಲ್ಲಿ ಝೆಲೆನ್ಸ್ಕಿಯವರನ್ನು ನೋಡಿದರೆ, ಅವರೊಂದು ದೇಶದ ಅಧ್ಯಕ್ಷರಾ ಎಂಬ ಪ್ರಶ್ನೆ ಮೂಡುವಂತಾಗಿದೆ. ಒಂದು ಖಾಕಿ ಬಣ್ಣದ ಟಿ ಶರ್ಟ್​ ತೊಟ್ಟಿದ್ದಾರೆ. ಕಣ್ಣ ಕೆಳಗೆ ಕಪ್ಪಾಗಿವೆ. ಝೆಲೆನ್ಸ್ಕಿ ಭಾವನಾತ್ಮಕವಾಗಿ ಮಾತನಾಡುತ್ತಿದ್ದಂತೆ, ಜರ್ಮನ್​ ಸಂಸತ್ತಿನ ಕೆಳಮನೆಯ ಸದಸ್ಯರೆಲ್ಲ ಎದ್ದು ನಿಂತು, ಚಪ್ಪಾಳೆ ಹೊಡೆಯುತ್ತ ಗೌರವ ಸೂಚಿಸಿದ್ದಾರೆ. ಈ ಮೂಲಕ ಝೆಲೆನ್ಸ್ಕಿಯವರಿಗೆ ತಮ್ಮ ಬೆಂಬಲ ಸೂಚಿಸಿದ್ದಾರೆ. ಇದೇ ವೇಳೆ ಝೆಲೆನ್ಸ್ಕಿ, ರಷ್ಯಾದಿಂದ ಜರ್ಮನಿಗೆ ಬಾಲ್ಟಿಕ್​ ಸಮುದ್ರದ ಮೂಲಕ ತರಲು ಉದ್ದೇಶಿಸಿರುವ ನೈಸರ್ಗಿಕ ಅನಿಲ ಪೈಪ್​ಲೈನ್​ ಯೋಜನೆ ನಾರ್ಡ್​ ಸ್ಟ್ರೀಮ್​ ಬಗ್ಗೆಯೂ ಉಲ್ಲೇಖ ಮಾಡಿ, ಅದನ್ನು ವಿರೋಧಿಸಿದ್ದಾರೆ. ಈ ಯೋಜನೆ ಉಕ್ರೇನ್​ ಮತ್ತು ಯುರೋಪ್​ ಭದ್ರತೆಗೆ ಧಕ್ಕೆಯುಂಟು ಮಾಡುತ್ತದೆ ಎಂದೂ ಹೇಳಿದ್ದಾರೆ.

ಜರ್ಮನಿ ರಷ್ಯಾದ ತೈಲಗಳ ಮೇಲೆ ತುಂಬ ಅವಲಂಬಿತವಾದ ದೇಶ. ಹಾಗಿದ್ದಾಗ್ಯೂ ರಷ್ಯಾ ಉಕ್ರೇನ್ ಮೇಲೆ ಮಾಡಿದ ಆಕ್ರಮಣವನ್ನು ಖಂಡಿಸಿದ್ದಲ್ಲದೆ, ಈ ವರ್ಷದ ಅಂತ್ಯದಲ್ಲಿ ರಷ್ಯಾದಿಂದ ತೈಲ ಆಮದು ಮಾಡಿಕೊಳ್ಳುವುದರಿಂದ ಸಂಪೂರ್ಣವಾಗಿ ಮುಕ್ತವಾಗುವ ಘೋಷಣೆಯನ್ನೂ ಮಾಡಿದೆ. ಈಗಾಗಲೇ ರಷ್ಯಾದ ಮೇಲೆ ಹಲವು ದೇಶಗಳು ವಿವಿಧ ನಿರ್ಬಂಧ ವಿಧಿಸಿವೆ. ಹೀಗಾಗಿ ರಷ್ಯಾದ ಆರ್ಥಿಕತೆಯೂ ಸಂಕಷ್ಟಕ್ಕೀಡಾಗುತ್ತಿದೆ.

ಇದನ್ನೂ ಓದಿ: ನಿಮ್ಮಲ್ಲಿ ಯಾರಾದರೂ ಲಂಚ ಕೇಳಿದರೆ ಇಲ್ಲ ಎಂದು ಹೇಳಬೇಡಿ, ಸಂಭಾಷಣೆ ರೆಕಾರ್ಡ್ ಮಾಡಿ  ಕಳಿಸಿ: ಕೇಜ್ರಿವಾಲ್

Published On - 5:26 pm, Thu, 17 March 22

Follow Us
TV9 Web
TV9 Web

TV9 Kannada

Read More
ನಿಮ್ಮ ರಾಶಿಯ ಆರ್ಥಿಕ, ವೃತ್ತಿ ಜಾತಕ ಹೇಗಿದೆ?
ನಿಮ್ಮ ರಾಶಿಯ ಆರ್ಥಿಕ, ವೃತ್ತಿ ಜಾತಕ ಹೇಗಿದೆ?
ಮಂಗಳೂರಿಗೆ ಮರಳಿದ 'ಚಿನ್ನದ ಹುಡುಗಿ' ಪೂವಮ್ಮಗೆ ಅದ್ಧೂರಿ ಸ್ವಾಗತ
ಮಂಗಳೂರಿಗೆ ಮರಳಿದ 'ಚಿನ್ನದ ಹುಡುಗಿ' ಪೂವಮ್ಮಗೆ ಅದ್ಧೂರಿ ಸ್ವಾಗತ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಪರೇಷನ್’
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಪರೇಷನ್’
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್