ಉಕ್ರೇನ್‌ನ ಶಾಲೆ, ಸಾಂಸ್ಕೃತಿಕ ಕೇಂದ್ರದ ಮೇಲೆ ರಷ್ಯಾದ ಶೆಲ್ ದಾಳಿ; 21 ಸಾವು

ಗುರುವಾರ ಮುಂಜಾನೆ ಖಾರ್ಕಿವ್ ನಗರದ ಹೊರಗಿನ ಮೆರೆಫಾ ಪಟ್ಟಣದಲ್ಲಿರುವ ಶಾಲೆ ಮತ್ತು ಸಾಂಸ್ಕೃತಿಕ ಕೇಂದ್ರದ ಮೇಲೆ ದಾಳಿ ನಡೆದಿದೆ ಎಂದು ಪ್ರಾದೇಶಿಕ ಪ್ರಾಸಿಕ್ಯೂಟರ್‌ಗಳು ಫೇಸ್‌ಬುಕ್ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

ಉಕ್ರೇನ್‌ನ ಶಾಲೆ, ಸಾಂಸ್ಕೃತಿಕ ಕೇಂದ್ರದ ಮೇಲೆ ರಷ್ಯಾದ ಶೆಲ್ ದಾಳಿ; 21 ಸಾವು
ಉಕ್ರೇನ್ ಯೋಧರು
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on:Mar 17, 2022 | 9:24 PM

ಕೀವ್: ಪೂರ್ವ ಉಕ್ರೇನ್‌ನಲ್ಲಿ(Ukraine) ರಷ್ಯಾದ (Russia) ಪಡೆಗಳು ಗುರುವಾರ ಶೆಲ್ ದಾಳಿ ನಡೆಸಿದ್ದು ಇದರಲ್ಲಿ ಕನಿಷ್ಠ 21 ಜನರು ಸಾವನ್ನಪ್ಪಿದ್ದಾರೆ ಮತ್ತು 25 ಜನರು ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಪ್ರಾಸಿಕ್ಯೂಟರ್‌ಗಳು ತಿಳಿಸಿದ್ದಾರೆ. ಗುರುವಾರ ಮುಂಜಾನೆ ಖಾರ್ಕಿವ್ ನಗರದ ಹೊರಗಿನ ಮೆರೆಫಾ ಪಟ್ಟಣದಲ್ಲಿರುವ ಶಾಲೆ ಮತ್ತು ಸಾಂಸ್ಕೃತಿಕ ಕೇಂದ್ರದ ಮೇಲೆ ದಾಳಿ ನಡೆದಿದೆ ಎಂದು ಪ್ರಾದೇಶಿಕ ಪ್ರಾಸಿಕ್ಯೂಟರ್‌ಗಳು ಫೇಸ್‌ಬುಕ್ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ. ಗಾಯಗೊಂಡವರಲ್ಲಿ 10 ಮಂದಿಯ ಸ್ಥಿತಿ ಗಂಭೀರವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರಾಸಿಕ್ಯೂಟರ್‌ಗಳ ಹೇಳಿಕೆಯ ಜೊತೆಯಲ್ಲಿರುವ ಫೋಟೋವು ಹಲವಾರು ಮಹಡಿಗಳ ಕಟ್ಟಡವನ್ನು ತೋರಿಸಿದೆ. ಆ ಕಟ್ಟಡದ ಮಧ್ಯದಲ್ಲಿ ಕಿಟಕಿಗಳು ಹಾರಿಹೋಗಿವೆ ಮತ್ತು ರಕ್ಷಣಾ ಕಾರ್ಯಕರ್ತರು ಅವಶೇಷಗಳನ್ನು ಬಾಚಿಕೊಳ್ಳುತ್ತಿದ್ದಾರೆ. ಖಾರ್ಕಿವ್, ಉಕ್ರೇನ್‌ನ ಎರಡನೇ ಅತಿದೊಡ್ಡ ನಗರ. ಇದು ಮೆರೆಫಾದಿಂದ ಉತ್ತರಕ್ಕೆ ಸುಮಾರು 30 ಕಿಲೋಮೀಟರ್ (18 ಮೈಲುಗಳು) ದೂರದಲ್ಲಿದ್ದು , ಇತ್ತೀಚಿನ ವಾರಗಳಲ್ಲಿ ರಷ್ಯಾದ ತೀವ್ರವಾದ ವೈಮಾನಿಕ ದಾಳಿಗೆ ಗುರಿಯಾಗಿದೆ. ಮುತ್ತಿಗೆ ಹಾಕಿದ ನಗರವಾದ ಮಾರಿಯುಪೋಲ್‌ನಲ್ಲಿ ರಷ್ಯಾದ ವೈಮಾನಿಕ ದಾಳಿಯಿಂದ ಧ್ವಂಸಗೊಂಡ ಥಿಯೇಟರ್‌ನಲ್ಲಿ ನೂರಾರು ನಾಗರಿಕರು ಸಿಕ್ಕಿಹಾಕಿಕೊಂಡಿದ್ದಾರೆ ಎಂದು ಉಕ್ರೇನಿಯನ್ ಅಧಿಕಾರಿಗಳು ತಿಳಿಸಿದ್ದಾರೆ. ಮರಿಯುಪೋಲ್ ಸಿಟಿ ಕೌನ್ಸಿಲ್ ಬಿಡುಗಡೆ ಮಾಡಿದ ಫೋಟೋವು 3-ಅಂತಸ್ತಿನ ರಂಗಮಂದಿರದ ಸಂಪೂರ್ಣ ಕುಸಿದಿದ್ದು ಅಲ್ಲಿ ನಾಗರಿಕರು ಆಶ್ರಯ ಪಡೆದಿದ್ದರು.

ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು “ಯುದ್ಧ ಅಪರಾಧಿ” ಎಂದು ಉಲ್ಲೇಖಿಸಿದ ಯುಎಸ್ ಅಧ್ಯಕ್ಷರ ಬಗ್ಗೆ ಪ್ರತಿಕ್ರಿಯಿಸಿದ ಕ್ರೆಮ್ಲಿನ್ ಪ್ರೆಸ್ ಸೆಕ್ರೆಟರಿ ಬಿಡೆನ್ ಅವರ ಹೇಳಿಕೆಗಳು “ಸ್ವೀಕಾರಾರ್ಹವಲ್ಲ ಮತ್ತು ಕ್ಷಮಿಸಲಾಗದ ಮಾತು” ಎಂದು ಹೇಳಿದರು. ಏತನ್ಮಧ್ಯೆ, ಉಕ್ರೇನಿಯನ್ ರಾಜಧಾನಿ ಕೀವ್ ನಲ್ಲಿರುವ ವಸತಿ ಕಟ್ಟಡಕ್ಕೆ ಉರುಳಿದ ಕ್ಷಿಪಣಿಯ ಅವಶೇಷಗಳು ಬಡಿದ ನಂತರ ಕನಿಷ್ಠ ಒಬ್ಬರು ಸಾವನ್ನಪ್ಪಿದ್ದಾರೆ ಮತ್ತು ಮೂವರು ಗಾಯಗೊಂಡಿದ್ದಾರೆ ಎಂದು ಉಕ್ರೇನ್‌ನ ತುರ್ತು ಸೇವೆ ಗುರುವಾರ ತಿಳಿಸಿದೆ.

ರಷ್ಯಾದಿಂದ ಬಾಂಬ್ ದಾಳಿಗೊಳಗಾದ ಮಾರಿಯುಪೋಲ್ ಥಿಯೇಟರ್‌ನಿಂದ 130 ನಾಗರಿಕರ ರಕ್ಷಣೆ ಉಕ್ರೇನ್‌ನ ಮಾರಿಯುಪೋಲ್‌ನ ಥಿಯೇಟರ್‌ನಲ್ಲಿದ್ದ ಅವಶೇಷಗಳು ಮತ್ತು ಕಾಂಕ್ರೀಟ್‌ನಿಂದ 130 ನಾಗರಿಕರನ್ನು ಹೊರತೆಗೆಯಲಾಗಿದೆ ಎಂದು ಕೈವ್ ಇಂಡಿಪೆಂಡೆಂಟ್ ಗುರುವಾರ ಸಂಜೆ ಹೇಳಿದೆ. ಉಕ್ರೇನ್ ಅಧಿಕಾರಿಗಳು ಈ ಹಿಂದೆ ಸಾವಿರಾರು ಮಂದಿ ರಷ್ಯಾದ ಬಾಂಬ್‌ ಆಕ್ರಮಣದಿಂದ ತಪ್ಪಿಸಿಕೊಳ್ಳಲು ಅಲ್ಲಿ ಆಶ್ರಯ ಪಡೆದಿದ್ದಾರೆ ಎಂದು ಹೇಳಿದ್ದರು. ಉಳಿದವರನ್ನು ರಕ್ಷಿಸುವ ಪ್ರಯತ್ನ ಮುಂದುವರಿದಿದೆ. ಡೊನೆಟ್ಸ್ಕ್ ಆಡಳಿತದ ಮುಖ್ಯಸ್ಥ ಪಾವ್ಲೋ ಕೈರಿಲೆಂಕೊ, ರಂಗಮಂದಿರದ ಕೆಲವು ಭಾಗಗಳ ಪ್ರವೇಶದ್ವಾರವನ್ನು ಕಲ್ಲುಮಣ್ಣುಗಳು ಹೂತುಹಾಕಿವೆ ಎಂದು ಹೇಳಿದರು.

ಇದನ್ನೂ ಓದಿ: Russia-Ukraine war: ಭಾರತದ ನಿಲುವಿನಿಂದ ತುಂಬಾ ನಿರಾಶೆಯಾಗಿದೆ ಎಂದ ಬ್ರಿಟನ್ ಸಚಿವೆ

Published On - 9:07 pm, Thu, 17 March 22

ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಖೋ- ಖೋ ವಿಶ್ವಕಪ್ ಗೆದ್ದು ಬೀಗಿದ ಭಾರತ ಮಹಿಳಾ ಪಡೆ
ಖೋ- ಖೋ ವಿಶ್ವಕಪ್ ಗೆದ್ದು ಬೀಗಿದ ಭಾರತ ಮಹಿಳಾ ಪಡೆ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ