ಭಾರತ – ಇಂಡೋನೇಷ್ಯಾ ಭದ್ರತಾ ಸಂವಾದ; ಭಯೋತ್ಪಾದನೆ ನಿಗ್ರಹ, ರಕ್ಷಣೆ, ಸೈಬರ್ ವಿಷಯಕ್ಕೆ ಒತ್ತು
ಎರಡು ವರ್ಷಗಳ ಹಿಂದೆ, ಭಾರತ-ಇಂಡೋನೇಷ್ಯಾ ತಮ್ಮ ಮೊದಲ ಭದ್ರತಾ ಮಾತುಕತೆಯನ್ನು ನಡೆಸಿತ್ತು, ಈ ಸಂದರ್ಭದಲ್ಲಿ ಎರಡೂ ರಾಷ್ಟ್ರಗಳು ಭದ್ರತೆ ಮತ್ತು ಭಯೋತ್ಪಾದನೆ ನಿಗ್ರಹದಲ್ಲಿ ಕಾರ್ಯಾಚರಣೆಯ ಸಹಕಾರವನ್ನು ಒಪ್ಪಿಕೊಂಡಿದ್ದವು
ರಾಷ್ಟ್ರೀಯ ಭದ್ರತಾ ಸಲಹೆಗಾರ (NSA) ಅಜಿತ್ ದೋವಲ್ (Ajit Doval) ಅವರು ಗುರುವಾರ ಇಂಡೋನೇಷ್ಯಾದ ರಾಜಕೀಯ, ಕಾನೂನು ಮತ್ತು ಭದ್ರತಾ ವ್ಯವಹಾರಗಳ ಸಮನ್ವಯ ಸಚಿವ ಮೊಹಮ್ಮದ್ ಮಹ್ಫುದ್ (Mohammad Mahfud) ಅವರೊಂದಿಗೆ ಎರಡನೇ ಭಾರತ-ಇಂಡೋನೇಷ್ಯಾ ಭದ್ರತಾ ಸಂವಾದವನ್ನು ನಡೆಸಿದ್ದಾರೆ. ಅಲ್ಲಿ ಅವರು ರಾಜಕೀಯ ಮತ್ತು ಭದ್ರತಾ ವಿಷಯಗಳ ಕುರಿತು ಚರ್ಚಿಸಿದರು. ಈ ಬಗ್ಗೆ ಟ್ವೀಟ್ ಮಾಡಿದ ಇಂಡೋನೇಷ್ಯಾದ ಭಾರತೀಯ ರಾಯಭಾರ ಕಚೇರಿ, “ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರು ರಾಜಕೀಯ, ಕಾನೂನು ಮತ್ತು ಭದ್ರತಾ ವ್ಯವಹಾರಗಳ ಸಮನ್ವಯ ಸಚಿವ ಮೊಹಮ್ಮದ್ ಮಹ್ಫುದ್ ಅವರೊಂದಿಗೆ ಭಾರತ-ಇಂಡೋನೇಷ್ಯಾ 2 ನೇ ಭದ್ರತಾ ಸಂವಾದದ (IISD) ಸಹ-ಅಧ್ಯಕ್ಷತೆ ವಹಿಸಿದ್ದರು. ಈ ಸಂವಾದದಲ್ಲಿ ಅವರು ಭಯೋತ್ಪಾದನೆ ನಿಗ್ರಹ, ಸಾಗರ, ರಕ್ಷಣೆ ಮತ್ತು ಸೈಬರ್ ವಿಷಯದಲ್ಲಿ ಸಹಕಾರ ಸೇರಿದಂತೆ ಹಲವು ವಿಷಯಗಳ ಕುರಿತು ಚರ್ಚಿಸಿದರು. ಮಹ್ಫುದ್ ಮತ್ತು ದೋವಲ್ ಎರಡು ದೇಶಗಳ ನಡುವಿನ ಸಾಂಪ್ರದಾಯಿಕ ಸೌಹಾರ್ದ ಸಂಬಂಧ ಮತ್ತು ಸಮಗ್ರ ಕಾರ್ಯತಂತ್ರದ ಸಹಭಾಗಿತ್ವದ ಪ್ರಾಮುಖ್ಯತೆಯನ್ನು ಗುರುತಿಸಿದರು. ಸವಾಲುಗಳನ್ನು ಜಯಿಸಲು ಐಐಎಸ್‌ಡಿ ತಮ್ಮ ನಡುವಿನ ಸಹಕಾರವನ್ನು ಬಲಪಡಿಸುತ್ತದೆ ಮತ್ತು ರಾಜಕೀಯ ಮತ್ತು ಭದ್ರತಾ ವಿಷಯಗಳ ಕ್ಷೇತ್ರದಲ್ಲಿ ಮತ್ತಷ್ಟು ನಿಕಟ ಸಹಯೋಗಕ್ಕಾಗಿ ಅವಕಾಶಗಳನ್ನು ಗುರುತಿಸುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು ಎಂದು ಉಭಯ ದೇಶಗಳು ಜಂಟಿ ಹೇಳಿಕೆಯಲ್ಲಿ ತಿಳಿಸಿವೆ. ಎರಡು ವರ್ಷಗಳ ಹಿಂದೆ, ಭಾರತ-ಇಂಡೋನೇಷ್ಯಾ ತಮ್ಮ ಮೊದಲ ಭದ್ರತಾ ಮಾತುಕತೆಯನ್ನು ನಡೆಸಿತ್ತು, ಈ ಸಂದರ್ಭದಲ್ಲಿ ಎರಡೂ ರಾಷ್ಟ್ರಗಳು ಭದ್ರತೆ ಮತ್ತು ಭಯೋತ್ಪಾದನೆ ನಿಗ್ರಹದಲ್ಲಿ ಕಾರ್ಯಾಚರಣೆಯ ಸಹಕಾರವನ್ನು ಒಪ್ಪಿಕೊಂಡಿದ್ದವು
ಎರಡೂ ದೇಶಗಳ ನಡುವಿನ ರಾಜತಾಂತ್ರಿಕ ಸಂಬಂಧವನ್ನು ಬಲಪಡಿಸುವ ಸಾಧನವಾಗಿ ಸಂವಾದಗಳನ್ನು ನೋಡಲಾಗುತ್ತದೆ.
ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಭಾರತ ಮತ್ತು ಇಂಡೋನೇಷ್ಯಾ ಎರಡು ಪ್ರಮುಖ ಸಮುದ್ರ ಶಕ್ತಿಗಳಾಗಿವೆ. ಕಡಲ ಕ್ಷೇತ್ರದಲ್ಲಿ ಭಾರತ-ಇಂಡೋನೇಷ್ಯಾ ಕಾರ್ಯತಂತ್ರದ ಪ್ರಯತ್ನಗಳು ಇಂಡೋ-ಪೆಸಿಫಿಕ್‌ನ ಸ್ಥಿರತೆಗೆ ಕೊಡುಗೆ ನೀಡಬಹುದು.
ಮಲಕ್ಕಾ, ಲೊಂಬೊಕ್ ಮತ್ತು ಸುಂದಾ ಜಲಸಂಧಿಗಳು ಇಂಡೋನೇಷಿಯಾದ ಭೂಪ್ರದೇಶದ ಭಾಗವಾಗಿದೆ. ಮಲಕ್ಕಾ ಜಲಸಂಧಿಯು ಅಂಡಮಾನ್ ಸಮುದ್ರ (ಹಿಂದೂ ಮಹಾಸಾಗರ) ಮತ್ತು ದಕ್ಷಿಣ ಚೀನಾ ಸಮುದ್ರ (ಪೆಸಿಫಿಕ್ ಮಹಾಸಾಗರ) ವನ್ನು ಸಂಪರ್ಕಿಸುತ್ತದೆ.
NSA Ajit Doval co-chaired 2nd India-Indonesia Security Dialogue with Mohammad Mahfud, Coordinating Minister of Political, Legal & Security Affairs. They discussed issues including cooperation in counter terrorism, maritime, defence and cyber: Indian Embassy in Indonesia pic.twitter.com/ICXrplKJd6
— ANI (@ANI) March 17, 2022
ಭಾರತದ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ದಕ್ಷಿಣ ಏಷ್ಯಾ ಮತ್ತು ಆಗ್ನೇಯ ಏಷ್ಯಾದ ಮಧ್ಯದಲ್ಲಿವೆ. ವಿಶ್ವದ ಅತ್ಯಂತ ಜನನಿಬಿಡ ಸಮುದ್ರ ಮಾರ್ಗಗಳಲ್ಲಿ ಒಂದಾದ ಮಲಕ್ಕಾ ಜಲಸಂಧಿಯ ಪಶ್ಚಿಮ ದ್ವಾರದ ಪಕ್ಕದಲ್ಲಿದೆ. ಇದಲ್ಲದೆ ಹೆಚ್ಚುತ್ತಿರುವ ಚೀನಾದ ಬೆದರಿಕೆಯ ಹಿನ್ನೆಲೆಯಲ್ಲಿ ಇಂಡೋನೇಷ್ಯಾ ತನ್ನ ಭದ್ರತೆಯನ್ನು ಬಲಪಡಿಸಲು ಮತ್ತು ಜಂಟಿ ಉತ್ಪಾದನೆಗೆ ತಳ್ಳಲು ಬ್ರಹ್ಮೋಸ್ ಕ್ಷಿಪಣಿ ಸೇರಿದಂತೆ ಭಾರತೀಯ ರಕ್ಷಣಾ ತಂತ್ರಜ್ಞಾನಗಳನ್ನು ಪಡೆಯಲು ನೋಡುತ್ತಿರಬಹುದು.
ಜಲಾಂತರ್ಗಾಮಿ ಅಭಿವೃದ್ಧಿ ಮತ್ತು ಯುದ್ಧಸಾಮಗ್ರಿ ಸೇರಿದಂತೆ ಒಪ್ಪಂದಗಳ ಸರಣಿಯ ಭಾಗವಾಗಿ $8.1 ಶತಕೋಟಿ ಒಪ್ಪಂದದಲ್ಲಿ ಇಂಡೋನೇಷ್ಯಾ 42 ರಫೇಲ್ ಯುದ್ಧ ವಿಮಾನಗಳನ್ನು ಆರ್ಡರ್ ಮಾಡಲಿದೆ ಎಂದು ಫ್ರಾನ್ಸ್ ರಕ್ಷಣಾ ಸಚಿವಾಲಯ ಹೇಳಿದೆ.
ಇತ್ತೀಚೆಗೆ ಅಮೆರಿಕ ಸ್ಟೇಟ್ ಡಿಪಾರ್ಟ್ಮೆಂಟ್ $13.9 ಶತಕೋಟಿ ಮೌಲ್ಯದ ಒಪ್ಪಂದದಲ್ಲಿ ಇಂಡೋನೇಷ್ಯಾಕ್ಕೆ F-15ID ವಿಮಾನ ಮತ್ತು ಸಂಬಂಧಿತ ಸಾಧನಗಳ ಸಂಭಾವ್ಯ ಮಾರಾಟವನ್ನು ಅನುಮೋದಿಸಿದೆ.
ಇದನ್ನೂ ಓದಿ: ಉಕ್ರೇನ್‌ನ ಶಾಲೆ, ಸಾಂಸ್ಕೃತಿಕ ಕೇಂದ್ರದ ಮೇಲೆ ರಷ್ಯಾದ ಶೆಲ್ ದಾಳಿ; 21 ಸಾವು