ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ನಿವಾಸಕ್ಕೆ ನುಗ್ಗಲು ಯತ್ನಿಸಿದ ವ್ಯಕ್ತಿ ಪೊಲೀಸರ ವಶಕ್ಕೆ

ಬುಧವಾರ ವ್ಯಕ್ತಿಯೊಬ್ಬ ಕಾರಿನಲ್ಲಿ ಬಂದು ದೋವಲ್ ಅವರ ನಿವಾಸಕ್ಕೆ ಪ್ರವೇಶಿಸಲು ಯತ್ನಿಸಿದ್ದು, ಆತನನ್ನು ಭದ್ರತಾ ಸಿಬ್ಬಂದಿ ತಡೆದು ವಶಕ್ಕೆ ತೆಗೆದುಕೊಂಡರು.

ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ನಿವಾಸಕ್ಕೆ ನುಗ್ಗಲು ಯತ್ನಿಸಿದ ವ್ಯಕ್ತಿ ಪೊಲೀಸರ ವಶಕ್ಕೆ
ಅಜಿತ್ ದೋವಲ್
Follow us
| Updated By: ರಶ್ಮಿ ಕಲ್ಲಕಟ್ಟ

Updated on:Feb 16, 2022 | 12:32 PM

ದೆಹಲಿ: ರಾಷ್ಟ್ರೀಯ ಭದ್ರತಾ ಸಲಹೆಗಾರ (National Security Adviser) ಅಜಿತ್ ದೋವಲ್ (Ajit Doval) ಅವರ ನಿವಾಸಕ್ಕೆ ನುಗ್ಗಲು ಯತ್ನಿಸಿದ ವ್ಯಕ್ತಿಯೊಬ್ಬನನ್ನು ದೆಹಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬುಧವಾರ ವ್ಯಕ್ತಿಯೊಬ್ಬ ಕಾರಿನಲ್ಲಿ ಬಂದು ದೋವಲ್ ಅವರ ನಿವಾಸಕ್ಕೆ ಪ್ರವೇಶಿಸಲು ಯತ್ನಿಸಿದ್ದು, ಆತನನ್ನು ಭದ್ರತಾ ಸಿಬ್ಬಂದಿ ತಡೆದು ವಶಕ್ಕೆ ತೆಗೆದುಕೊಂಡರು. ವಿಚಾರಣೆಯ ನಂತರ ಆ ವ್ಯಕ್ತಿ ಯಾರೋ ತನ್ನ ದೇಹದೊಳಗೆ ಚಿಪ್ ಇರಿಸಿದ್ದು, ನನ್ನನ್ನು ನಿಯಂತ್ರಿಸುತ್ತಿದ್ದಾರೆ ಎಂದು ಅವನು ಹೇಳಿಕೊಂಡಿದ್ದಾನೆ. ಆದರೆ ಹಾಗೇನೂ ಇಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದರು. “ಪ್ರಾಥಮಿಕ ತನಿಖೆಯ ಪ್ರಕಾರ, ಅವರು ಮಾನಸಿಕವಾಗಿ ತೊಂದರೆಗೀಡಾಗಿದ್ದಾರೆಂದು ತೋರುತ್ತದೆ” ಎಂದು ಪೊಲೀಸರು ಸುದ್ದಿ ಸಂಸ್ಥೆ ಎಎನ್ಐ ವರದಿ ಮಾಡಿದೆ. ದೋವಲ್ ಅವರ ನಿವಾಸವು ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (CISF) ನಲ್ಲಿದೆ ಮತ್ತು ಎನ್‌ಎಸ್‌ಎ ‘ಝಡ್ ಪ್ಲಸ್’ ಭದ್ರತಾ ವರ್ಗದ ಅಡಿಯಲ್ಲಿ ಬರುವುದರಿಂದ ಹೆಚ್ಚಿನ ಭದ್ರತೆಯನ್ನು ಒದಗಿಸಲಾಗಿದೆ.

ಮಾನಸಿಕ ಅಸ್ವಸ್ಥ ಎಂದು ಹೇಳಲಾದ ವ್ಯಕ್ತಿ ಮುಂಭಾಗದ ಗೇಟ್ ಅನ್ನು ಮುರಿಯಲು ಪ್ರಯತ್ನಿಸಿದ್ದಾನೆ ಎಂದು ಮೂಲಗಳು ತಿಳಿಸಿವೆ. ಅವರು ಈ ಹಿಂದೆ ಅನೇಕ ದೂರುಗಳನ್ನು ಸಲ್ಲಿಸಿದ್ದರು ಮತ್ತು ಅವುಗಳನ್ನು ಅನುಸರಿಸಲು ಎನ್ಎಸ್ಎಗೆ ತಲುಪಲು ಪ್ರಯತ್ನಿಸಿದ್ದರು ಎಂದು ವರದಿಯಾಗಿದೆ. ದೋವಲ್ ಕೆಲಸದಿಂದ ರಜೆ ಪಡೆದು ಇಂದು ಮನೆಯಲ್ಲಿದ್ದರು ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ: Ravidas Jayanti ರವಿದಾಸ್ ಜಯಂತಿ ಪ್ರಯುಕ್ತ ರವಿದಾಸ್ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿದ ನರೇಂದ್ರ ಮೋದಿ; ವಿಡಿಯೊ ನೋಡಿ

Published On - 12:08 pm, Wed, 16 February 22