Ukraine Crisis: ಯುದ್ಧ ನಿಲ್ಲಿಸಲು ಪುಟಿನ್ ಮುಂದಿಟ್ಟ ಬೇಡಿಕೆಗಳು ಬಹಿರಂಗ; ಉಕ್ರೇನ್​ಗೆ ಆತಂಕವೇಕೆ? ಇಲ್ಲಿದೆ ಮಾಹಿತಿ

Vladimir Putin | Russia Ukraine War: ರಷ್ಯಾ ಹಾಗೂ ಉಕ್ರೇನ್ ಕದನ 23ನೇ ದಿನಕ್ಕೆ ಕಾಲಿಟ್ಟಿದೆ. ಈ ನಡುವೆ ಎರಡೂ ದೇಶಗಳ ಸಂಧಾನ ಮಾತುಕತೆ ಮುಂದುವರೆಯುತ್ತಿದೆ, ಆದರೆ ಒಮ್ಮತಕ್ಕೆ ಬರಲು ಸಾಧ್ಯವಾಗಿಲ್ಲ. ಅಷ್ಟಕ್ಕೂ ವ್ಲಾಡಿಮಿರ್ ಪುಟಿನ್ ಬೇಡಿಕೆಗಳೇನು? ಉಕ್ರೇನ್​ಗೆ ಆತಂಕವೇನು? ಇಲ್ಲಿದೆ ಮಾಹಿತಿ.

Ukraine Crisis: ಯುದ್ಧ ನಿಲ್ಲಿಸಲು ಪುಟಿನ್ ಮುಂದಿಟ್ಟ ಬೇಡಿಕೆಗಳು ಬಹಿರಂಗ; ಉಕ್ರೇನ್​ಗೆ ಆತಂಕವೇಕೆ? ಇಲ್ಲಿದೆ ಮಾಹಿತಿ
ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್
Follow us
TV9 Web
| Updated By: shivaprasad.hs

Updated on:Mar 18, 2022 | 12:46 PM

ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Vladimir Putin) ಟರ್ಕಿಯ ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ಡೊಗನ್ ಅವರಿಗೆ ಗುರುವಾರ ಕರೆ ಮಾಡಿದ್ದು, ಉಕ್ರೇನ್‌ನೊಂದಿಗೆ ಶಾಂತಿ ಒಪ್ಪಂದಕ್ಕೆ ರಷ್ಯಾದ ಬೇಡಿಕೆಗಳೇನು (Russia Ukraine Conflict) ಎಂಬುದನ್ನು ತಿಳಿಸಿದ್ದಾರೆ. ಫೋನ್ ಕರೆಯ ನಂತರ ಬಿಬಿಸಿ ಮಾಧ್ಯಮವು ಎರ್ಡೋಗನ್ ಅವರ ಪ್ರಮುಖ ಸಲಹೆಗಾರ ಮತ್ತು ವಕ್ತಾರರಾದ ಇಬ್ರಾಹಿಂ ಕಲಿನ್ ಅವರನ್ನು ಸಂದರ್ಶಿಸಿದ್ದು, ರಷ್ಯಾ ಬೇಡಿಕೆಗಳು ಏನೇನು ಎಂಬುದನ್ನು ವರದಿ ಮಾಡಿದೆ. ರಷ್ಯಾದ ಬೇಡಿಕೆಗಳನ್ನು ಎರಡು ವರ್ಗಗಳಾಗಿ ವಿಂಗಡಿಸಲಾಗಿದೆ. ಮೊದಲ ನಾಲ್ಕು ಬೇಡಿಕೆಗಳು, ಉಕ್ರೇನ್‌ಗೆ ಪೂರೈಸಲು ತುಂಬಾ ಕಷ್ಟವಲ್ಲ ಎಂದಿದ್ದಾರೆ ಕಲಿನ್. ಆ ಬೇಡಿಕೆಗಳಲ್ಲಿ ಮುಖ್ಯವಾದವುಗಳೆಂದರೆ ಉಕ್ರೇನ್ ತಟಸ್ಥವಾಗಿರಬೇಕು ಮತ್ತು ನ್ಯಾಟೋಗೆ ಸೇರಲು ಮುಂದಾಗಬಾರದು. ಇದನ್ನು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಈಗಾಗಲೇ ಒಪ್ಪಿಕೊಂಡಿದ್ದಾರೆ. ಈ ವರ್ಗದಲ್ಲಿ ಇನ್ನೂ ಕೆಲವು ಬೇಡಿಕೆಗಳಿದ್ದು, ಅದು ರಷ್ಯಾ ತನ್ನ ಗೌರವ-ಮರ್ಯಾದೆ ಉಳಿಸಿಕೊಳ್ಳಲು ಹೇಳುತ್ತಿರುವ ಷರತ್ತುಗಳು. ಇದರಲ್ಲಿ ಉಕ್ರೇನ್ ರಷ್ಯಾಗೆ ಬೆದರಿಕೆಯಾಗಿಲ್ಲ ಎನ್ನುವುದನ್ನು ಖಚಿತಪಡಿಸಲು ನಿಶ್ಯಸ್ತ್ರೀಕರಣ ಪ್ರಕ್ರಿಯೆಗೆ ಒಳಗಾಗಬೇಕು. ಉಕ್ರೇನ್​ನಲ್ಲಿ ರಷ್ಯನ್ ಭಾಷೆಗೆ ರಕ್ಷಣೆ ಬೇಕು ಮೊದಲಾದ ಅಂಶಗಳಿವೆ.

ಇದರೊಂದಿಗೆ ಡಿ-ನಾಜಿಫಿಕೇಶನ್ ಎಂಬ ಅಂಶ ಒಂದಿದೆ. ಆದರೆ ಇದನ್ನು ಒಪ್ಪಲು ಸ್ವತಃ ಉಕ್ರೇನ್ ಅಧ್ಯಕ್ಷರಿಗೆ ವೈಯಕ್ತಿಕವಾಗಿ ಕಷ್ಟವಾಗಬಹುದು. ಕಾರಣ ಅವರ ಸಂಬಂಧಿಕರು ಈ ಹಿಂದೆ ಹತ್ಯಾಕಾಂಡದಲ್ಲಿ ನಿಧನರಾಗಿದ್ದರು. ಅದಾಗ್ಯೂ ಟರ್ಕಿಯ ಪ್ರಕಾರ ಝೆಲೆನ್ಸ್ಕಿ ಈ ಅಂಶವನ್ನು ಒಪ್ಪಬಹುದು. ನವ-ನಾಜಿಸಂ ಖಂಡಿಸಲು ಮತ್ತು ಅವುಗಳನ್ನು ಹತ್ತಿಕ್ಕಲು ಭರವಸೆ ನೀಡಲೂ ಸಾಕು.

ಎರಡನೆಯ ವರ್ಗದಲ್ಲೂ ಒಂದಷ್ಟು ಷರತ್ತುಗಳಿವೆ. ಅದರಲ್ಲಿ ರಷ್ಯಾ ಹಾಗೂ ಉಕ್ರೇನ್ ಒಪ್ಪಂದಕ್ಕೆ ಬರುವ ಮೊದಲು ಉಕ್ರೇನ್ ಅಧ್ಯಕ್ಷ ಝೆಲೆನ್​ಸ್ಕಿ ಅವರೊಂದಿಗೆ ಮುಖಾಮುಖಿ ಮಾತುಕತೆಯ ಅಗತ್ಯವಿದೆ ಎಂದಿದ್ದಾರೆ ಪುಟಿನ್. ಈಗಾಗಲೇ ಝೆಲೆನ್​ಸ್ಕಿ ಕೂಡ ಪುಟಿನ್ ಜತೆ ನೇರ ಮಾತುಕತೆಗೆ ಸಿದ್ಧ ಎಂದಿದ್ದಾರೆ.

ಕಲಿನ್ ಬಿಬಿಸಿಗೆ ಮತ್ತೊಂದು ವಿಚಾರವನ್ನು ಖಚಿತವಾಗಿ ಹೇಳಿಲ್ಲ. ಆದರೆ ಪೂರ್ವ ಉಕ್ರೇನ್‌ನಲ್ಲಿ ಉಕ್ರೇನಿಯನ್ ಸರ್ಕಾರವು ಭೂಪ್ರದೇಶವನ್ನು ಬಿಟ್ಟುಕೊಡಬೇಕೆಂದು ರಷ್ಯಾ ಒತ್ತಾಯಿಸುತ್ತದೆ ಎಂಬುದು ಒಂದು ಊಹೆ. ಇದು ವಿವಾದಾತ್ಮಕ ವಿಚಾರವಾಗಿದೆ.

2014 ರಲ್ಲಿ ರಷ್ಯಾ ಅಕ್ರಮವಾಗಿ ಸ್ವಾಧೀನಪಡಿಸಿಕೊಂಡ ಕ್ರೈಮಿಯಾವು ಈಗ ರಷ್ಯಾಕ್ಕೆ ಸೇರಿದೆ ಎಂದು ಉಕ್ರೇನ್ ಔಪಚಾರಿಕವಾಗಿ ಒಪ್ಪಿಕೊಳ್ಳಬೇಕು ಎಂದು ರಷ್ಯಾ ಒತ್ತಾಯಿಸುತ್ತದೆ ಎಂಬುದು ಇನ್ನೊಂದು ಊಹೆ. ಇದು ಉಕ್ರೇನ್​​ಗೆ ಸಮ್ಮತವಾಗಿಲ್ಲ ಮತ್ತು ಅದು ಪ್ರತಿರೋಧ ಒಡ್ಡುವ ಅಂಶವಾಗಲಿದೆ. ಅಂತಾರಾಷ್ಟ್ರೀಯ ಕಾನೂನಿಗೆ ಸಹಿ ಹಾಕಿರುವ ರಷ್ಯಾವು ಈ ಹಿಂದೆ ಕ್ರೈಮಿಯಾವನ್ನು ಉಕ್ರೇನ್ ಭಾಗವೆಂದು ಒಪ್ಪಿಕೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು.

ಬಿಬಿಸಿಯ ಪ್ರಕಾರ, ಪುಟಿನ್ ಬೇಡಿಕೆಗಳು ಜನರು ಮೊದಲು ಊಹಿಸಿದಷ್ಟು ಕಠಿಣವಾಗಿಲ್ಲ. ಜತೆಗೆ ರಷ್ಯಾವು ಉಕ್ರೇನ್​ ಮೇಲೆ ದಾಳಿ ಮಾಡಿ ಹಿಂಸಾಚಾರ, ರಕ್ತಪಾತ, ವಿನಾಶ ನಡೆಸಲು ಯೋಗ್ಯವಾದವುಗಳೂ ಅಲ್ಲ.

ಉಕ್ರೇನ್​ಗೆ ಇರುವ ಆತಂಕ ಏನು?

ಯಾವುದೇ ಒಪ್ಪಂದದ ಉತ್ತಮ ವಿವರಗಳನ್ನು ಅಪಾರ ಕಾಳಜಿಯಿಂದ ವಿಂಗಡಿಸದೇ ಇದ್ದರೆ ರಷ್ಯಾ ಅಧ್ಯಕ್ಷ ಪುಟಿನ್ ಅಥವಾ ಅವರ ಉತ್ತರಾಧಿಕಾರಿಗಳು ಉಕ್ರೇನ್​ ಅನ್ನು ಮತ್ತೆ ಆಕ್ರಮಿಸಲು ಮುಂದಾಗಬಹುದು ಎನ್ನುವುದು ಉಕ್ರೇನ್​ಗಿರುವ ಒಂದು ಆತಂಕ. ಜತೆಗೆ ಕದನ ವಿರಾಮವು ರಕ್ತಪಾತವನ್ನು ನಿಲ್ಲಿಸಿದರೂ ಸಹ ಶಾಂತಿ ಒಪ್ಪಂದವು ಬಗೆಹರಿಯಲು ಬಹಳ ಸಮಯ ತೆಗೆದುಕೊಳ್ಳಬಹುದು.

ಕಳೆದ ಕೆಲವು ವಾರಗಳಿಂದ ಉಕ್ರೇನ್ ಯುದ್ಧದಿಂದ ಬಹಳ ತೊಂದರೆ ಅನುಭವಿಸಿದೆ. ರಷ್ಯಾದ ದಾಳಿಯಿಂದ ಹಾನಿಗೊಳಗಾದ ಮತ್ತು ನಾಶಪಡಿಸಿದ ಪಟ್ಟಣಗಳು ​​ಮತ್ತು ನಗರಗಳನ್ನು ಪುನರ್ನಿರ್ಮಿಸಲು ಬಹಳ ಸಮಯ ತೆಗೆದುಕೊಳ್ಳುತ್ತದೆ. ಅಲ್ಲದೇ ನಿರಾಶ್ರಿತರಿಗೆ ವಸತಿ ಕಲ್ಪಿಸುವ ಸವಾಲೂ ಮುಂದಿದೆ.

ವ್ಲಾಡಿಮಿರ್ ಪುಟಿನ್ ಅವರ ಮಾನಸಿಕ ಸ್ಥಿತಿಯ ಬಗ್ಗೆ ಕಲಿನ್ ಹೇಳಿದ್ದೇನು?

ಬಿಬಿಸಿ ಕಲಿನ್ ಅವರಲ್ಲಿ ವ್ಲಾಡಿಮಿರ್ ಪುಟಿನ್ ಅವರ ಮಾನಸಿಕ ಆರೋಗ್ಯದ ಬಗ್ಗೆಯೂ ವಿಚಾರಿಸಿದೆ. ಪುಟಿನ್​ಗೆ ಅನಾರೋಗ್ಯವಿದೆ, ಮಾನಸಿಕ ಅನಾರೋಗ್ಯದಿಂದ ವಿಚಲಿತರಾಗಿದ್ದಾರೆ ಎಂಬೆಲ್ಲಾ ವರದಿಗಳ ಹಿನ್ನೆಲೆಯಲ್ಲಿ ಪ್ರಶ್ನೆ ಕೇಳಲಾಗಿತ್ತು. ಇದಕ್ಕೆ ಉತ್ತರಿಸಿದ ಕಲಿನ್, ‘ಪುಟಿನ್ ಆ ರೀತಿ ಇಲ್ಲವೇ ಇಲ್ಲ. ಅವರು ಸಾಮಾನ್ಯರಂತಿದ್ದಾರೆ. ಪ್ರಶ್ನೆಗಳಿಗೆ ಸ್ಪಷ್ಟವಾಗಿ, ಸಂಕ್ಷಿಪ್ತವಾಗಿ ಉತ್ತರಿಸುತ್ತಾರೆ’’ ಎಂದಿದ್ದಾರೆ.

ಪುಟಿನ್ ರಷ್ಯಾ ಪರ ನಿಂತರೂ ಕೂಡ, ದೇಶದಲ್ಲಿ ಅವರಿಗೆ ವಿರೋಧ ಹೆಚ್ಚುತ್ತಿದೆ. ಸೆರೆಹಿಡಿದ ಸೈನಿಕರ ಕತೆಗಳು ಹಾಗೂ ಸೈನಿಕರು ಹತ್ಯೆಯಾಗುತ್ತಿರುವುದರ ವಿರುದ್ಧ ರಷ್ಯಾದಲ್ಲಿ ಜನರು ಅಸಮಾಧಾನ ಹೊಂದಿದ್ದಾರೆ ಎನ್ನಲಾಗಿದೆ. ರಷ್ಯಾದಲ್ಲಿ ಯುದ್ಧ ವಿರೋಧಿ ಪ್ರತಿಭಟನೆ ನಡೆಯುತ್ತಿರುವುದನ್ನು ಇಲ್ಲಿ ಸ್ಮರಿಸಬಹುದು.

ಇದನ್ನೂ ಓದಿ:

Hijab Verdict: ಹಿಜಾಬ್ ಪ್ರಕರಣದ ಹೈಕೋರ್ಟ್ ಆದೇಶ ಯಾವ ಶಿಕ್ಷಣ ಸಂಸ್ಥೆಗಳಿಗೆ ಅನ್ವಯವಾಗುತ್ತದೆ?

ಏಳನೇ ವಯಸ್ಸಿನಲ್ಲಿ ಟೀಚರ್ ಅವಮಾನಿಸಿದಕ್ಕೆ ಅವನು 30 ವರ್ಷಗಳ ನಂತರ ಅಕೆಯನ್ನು 101 ಬಾರಿ ಇರಿದು ಕೊಂದ!

Published On - 11:43 am, Fri, 18 March 22

‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ
ಶೋಭಾ ಶೆಟ್ಟಿಗೆ ಈಗ ಉಗ್ರಂ ಮಂಜು ನೇರ ಟಾರ್ಗೆಟ್​; ಮುಖಕ್ಕೆ ಬಿತ್ತು ಕೆಸರು
ಶೋಭಾ ಶೆಟ್ಟಿಗೆ ಈಗ ಉಗ್ರಂ ಮಂಜು ನೇರ ಟಾರ್ಗೆಟ್​; ಮುಖಕ್ಕೆ ಬಿತ್ತು ಕೆಸರು
ವಕ್ಪ್ ಕಾಯ್ದೆಗೆ ತಿದ್ದುಪಡಿ ಬರುವವರೆಗೆ ಹೋರಾಟ ನಿಲ್ಲದು: ಶೋಭಾ ಕರಂದ್ಲಾಜೆ
ವಕ್ಪ್ ಕಾಯ್ದೆಗೆ ತಿದ್ದುಪಡಿ ಬರುವವರೆಗೆ ಹೋರಾಟ ನಿಲ್ಲದು: ಶೋಭಾ ಕರಂದ್ಲಾಜೆ