AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಚ್ಚಾ ತೈಲದ ಕಳ್ಳತನ ಮತ್ತು ಅಕ್ರಮ ಮಾರಾಟ: ಪಾಕ್ ಮಾಜಿ ಸೇನಾ ಜನರಲ್ ವಿರುದ್ಧ ಎನ್ಎಬಿ ತನಿಖೆ

ಸೆಪ್ಟೆಂಬರ್ 25, 2019 ರಂದು ಅವರ ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ, ನ್ಯಾಯಮೂರ್ತಿ ಶಾಹಿದ್ ಮೆಹಮೂದ್ ಅಬ್ಬಾಸಿ ಮತ್ತು ನ್ಯಾಯಮೂರ್ತಿ ತಾರಿಕ್ ಅಬ್ಬಾಸಿ ಅವರನ್ನೊಳಗೊಂಡ ಲಾಹೋರ್ ಹೈಕೋರ್ಟ್ ಪೀಠವು ಕಾನೂನಿನ ಪ್ರಕಾರ ದೂರಿನ ಮೇಲೆ ಮುಂದುವರಿಯಲು ಎನ್ಎಬಿಗೆ ನಿರ್ದೇಶನ ನೀಡಿತು.

ಕಚ್ಚಾ ತೈಲದ ಕಳ್ಳತನ ಮತ್ತು ಅಕ್ರಮ ಮಾರಾಟ:  ಪಾಕ್ ಮಾಜಿ ಸೇನಾ ಜನರಲ್ ವಿರುದ್ಧ ಎನ್ಎಬಿ ತನಿಖೆ
ಎನ್ಎಬಿ
TV9 Web
| Edited By: |

Updated on: Mar 18, 2022 | 1:57 PM

Share

ನಿವೃತ್ತ ಫೋರ್-ಸ್ಟಾರ್ ಜನರಲ್ ಅಹ್ಸಾನ್ ಸಲೀಮ್ ಹಯಾತ್ (General Ahsan Saleem Hayat)ಮತ್ತು ಲಾಜಿಸ್ಟಿಕ್ಸ್ ಸಂಸ್ಥೆಯ ಹಿರಿಯ ಅಧಿಕಾರಿಗಳ ವಿರುದ್ಧ ಮಾಜಿ ಸೇನಾಧಿಕಾರಿಯೊಬ್ಬರು ಅಕ್ರಮ ಕಚ್ಚಾ ತೈಲ ವ್ಯವಹಾರವನ್ನು ನಡೆಸುತ್ತಿದ್ದಾರೆ ಎಂದು ಆರೋಪದ ಹಿನ್ನಲೆಯಲ್ಲಿ ಪಾಕಿಸ್ತಾನದ ಭ್ರಷ್ಟಾಚಾರ-ವಿರೋಧಿ ವಾಚ್‌ಡಾಗ್ ಎನ್ಎಬಿ (NAB) ತನಿಖೆ ಆರಂಭಿಸಿದೆ. ಈ ಅಕ್ರಮ ವ್ಯವಹಾರದಿಂದ ರಾಷ್ಟ್ರೀಯ ಖಜಾನೆಗೆ ಪ್ರತಿದಿನ ರೂ 20 ಮಿಲಿಯನ್ ನಷ್ಟವುಂಟಾಗಿದೆ. ಅರ್ಜಿಯೊಂದಿಗೆ ಲಗತ್ತಿಸಲಾದ ದಾಖಲೆಗಳ ಪ್ರಕಾರ, ಇಬ್ಬರು ಲೆಫ್ಟಿನೆಂಟ್ ಕರ್ನಲ್‌ಗಳು, ಮೂವರು ಮೇಜರ್‌ಗಳು, ವಿವಿಧ ಶ್ರೇಣಿಯ ಆರು ಸೈನಿಕರು ಮತ್ತು ನಾಲ್ವರು ನಾಗರಿಕರು ಸೇರಿದಂತೆ 17 ವ್ಯಕ್ತಿಗಳು ತೈಲವನ್ನು ದುರುಪಯೋಗಪಡಿಸಿದ ಆರೋಪಿಗಳ ಪಟ್ಟಿಯಲ್ಲಿ ಸೇರಿದ್ದಾರೆ. ಆದರೆ ಕಚ್ಚಾ ತೈಲ ಅಕ್ರಮ ವ್ಯಾಪಾರ ಆರೋಪದಲ್ಲಿ ಮಿಲಿಟರಿ ಅಧಿಕಾರಿಗಳನ್ನು ಜನವರಿ 26, 2005 ರಂದು ವಜಾಗೊಳಿಸಲಾಗಿತ್ತು.   ಮಾಜಿ ಮೇಜರ್ ಅಕ್ರಂ ರಝಾ ಅವರು 2015 ರಲ್ಲಿ ಲಾಹೋರ್ ಹೈಕೋರ್ಟ್ (LHC) ಮುಂದೆ ಅರ್ಜಿ ಸಲ್ಲಿಸಿದ್ದು, ರಾಷ್ಟ್ರೀಯ ಖಜಾನೆಗೆ ದಿನಕ್ಕೆ 20 ಮಿಲಿಯನ್ ನಷ್ಟವನ್ನು ಉಂಟುಮಾಡಿದ ಕಚ್ಚಾ ತೈಲ ಅಕ್ರಮ ವ್ಯವಹಾರವನ್ನು ನಡೆಸಿದ ಆರೋಪದ ಹಿನ್ನಲೆಯಲ್ಲಿ ಹಲವಾರು ಸೇನಾ ಅಧಿಕಾರಿಗಳನ್ನು ಸೇವೆಯಿಂದ ವಜಾಗೊಳಿಸಲಾಗಿದೆ ಎಂದಿದ್ದಾರೆ. ತಾನು ನಿರಪರಾಧಿ ಎಂದು ಹೇಳಿರುವ ರಾಝಾ ಅವರು ವಜಾಗೊಳಿಸಿದ ವ್ಯಕ್ತಿಗಳ ಗುಂಪಿನ ಭಾಗವಾಗಿಲ್ಲ, ಆದರೆ ಕಚ್ಚಾ ತೈಲದ “ಕಳ್ಳತನ ಮತ್ತು ಅಕ್ರಮ ಮಾರಾಟ” ವನ್ನು ವಾಸ್ತವವಾಗಿ ಎತ್ತಿ ತೋರಿಸಿದೆ. ಯಾವುದೇ ಕಾರಣವಿಲ್ಲದೆ ನನ್ನನ್ನು ಬಂಧಿಸಲಾಯಿತು ಎಂದಿದ್ದಾರೆ.

ಹಗರಣದಲ್ಲಿ ಭಾಗಿಯಾದವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ, ಆದರೆ ರಾಷ್ಟ್ರೀಯ ಲಾಜಿಸ್ಟಿಕ್ಸ್ ಸೆಲ್ (ಎನ್‌ಎಲ್‌ಸಿ) ಆಡಳಿತವು “ಕಚ್ಚಾ ತೈಲ ಮಾಫಿಯಾದೊಂದಿಗೆ ಸಹಕರಿಸುವಂತೆ ಒತ್ತಡ ಹೇರುತ್ತಲೇ ಇತ್ತು . ನಿರಾಕರಿಸಿದರೆ ಭೀಕರ ಪರಿಣಾಮಗಳ ಎದುರಿಸಬೇಕಾಗುತ್ತದೆ ಎಂದು ಬೆದರಿಕೆ ಹಾಕಲಾಗಿದೆ ಎಂದು ಅವರು ತಮ್ಮ ಅರ್ಜಿಯಲ್ಲಿ ತಿಳಿಸಿದ್ದಾರೆ.

ನಂತರ ಅವರು ರಾಷ್ಟ್ರೀಯ ಹೊಣೆಗಾರಿಕೆ ಬ್ಯೂರೋ (NAB) ಅಧ್ಯಕ್ಷರನ್ನು ಸಂಪರ್ಕಿಸಿದರು.

ಸೆಪ್ಟೆಂಬರ್ 25, 2019 ರಂದು ಅವರ ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ, ನ್ಯಾಯಮೂರ್ತಿ ಶಾಹಿದ್ ಮೆಹಮೂದ್ ಅಬ್ಬಾಸಿ ಮತ್ತು ನ್ಯಾಯಮೂರ್ತಿ ತಾರಿಕ್ ಅಬ್ಬಾಸಿ ಅವರನ್ನೊಳಗೊಂಡ ಲಾಹೋರ್ ಹೈಕೋರ್ಟ್ ಪೀಠವು ಕಾನೂನಿನ ಪ್ರಕಾರ ದೂರಿನ ಮೇಲೆ ಮುಂದುವರಿಯಲು ಎನ್ಎಬಿಗೆ ನಿರ್ದೇಶನ ನೀಡಿತು.

ಇಸ್ಲಾಮಾಬಾದ್ ಹೈಕೋರ್ಟ್, ಮಾಜಿ ಸೇನಾ ಸರ್ವಾಧಿಕಾರಿ ಜನರಲ್ (ನಿವೃತ್ತ) ಪರ್ವೇಜ್ ಮುಷರಫ್ ಅವರ ಭ್ರಷ್ಟಾಚಾರದ ವಿರುದ್ಧದ ದೂರಿಗೆ ಸಂಬಂಧಿಸಿದಂತೆ ಎನ್‌ಎಬಿ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿಯನ್ನು ಕೈಗೆತ್ತಿಕೊಂಡಿದ್ದು, ರಾಜಕಾರಣಿಗಳನ್ನು ಮಾತ್ರ ಬೇಟೆಯಾಡಲಾಗುತ್ತಿದೆ ಎಂಬ ಅನಿಸಿಕೆಯನ್ನು ಹೋಗಲಾಡಿಸಲು ಭ್ರಷ್ಟಾಚಾರ ವಿರೋಧಿ ಸಂಸ್ಥೆಗೆ ಸೂಚಿಸಿದೆ.

ತನ್ನ ದೂರಿನಲ್ಲಿ ಮಾಜಿ ಮೇಜರ್ ಅವರು ಡಿಸೆಂಬರ್ 2001 ರಿಂದ ಜನವರಿ 2004 ರವರೆಗೆ ಕರಾಚಿಯ ಎನ್‌ಎಲ್‌ಸಿಯ ಟ್ರಾನ್ಸ್‌ಪೋರ್ಟ್ ಬೆಟಾಲಿಯನ್‌ನಲ್ಲಿ ಸೆಕೆಂಡ್-ಇನ್-ಕಮಾಂಡ್ ಆಗಿ ಸೇವೆ ಸಲ್ಲಿಸಿದ್ದಾರೆ ಮತ್ತು ನಂತರ ಫೆಬ್ರವರಿ 27, 2006 ರವರೆಗೆ ವಿವಿಧ ಏಜೆನ್ಸಿಗಳ ವಶದಲ್ಲಿದ್ದರು ಎಂದು ಹೇಳಿದ್ದಾರೆ.  “ಕಚ್ಚಾ ತೈಲ ಮಾಫಿಯಾ” ಮತ್ತು 100 ಹಿನೋ ಬಸ್‌ಗಳ ಖರೀದಿಯಲ್ಲಿ ಭಾರೀ ಅವ್ಯವಹಾರದ ನಡೆದಿರುವ ಬಗ್ಗೆ ಎನ್‌ಎಲ್‌ಸಿಯ ಆಗಿನ ಮಹಾನಿರ್ದೇಶಕ ಮೇಜರ್ ಜನರಲ್ ಖಾಲಿದ್ ಜಹೀರ್ ಅಖ್ತರ್‌ಗೆ ತಿಳಿಸಿದ್ದೇನೆ ಎಂದು ಅವರು ಹೇಳಿದರು. ಅವರನ್ನು ಬಂಧಿಸಲಾಗಿತ್ತು .

ಎನ್‌ಎಲ್‌ಸಿ ಹಗರಣದಲ್ಲಿ ಭಾಗಿಯಾಗಿರುವ ಮೂವರು ಎನ್‌ಎಲ್‌ಸಿ ಜನರಲ್ ಅಧಿಕಾರಿಗಳಲ್ಲಿ ಜನರಲ್ ಅಖ್ತರ್ ಕೂಡಾ ಒಬ್ಬರು.

ದೂರಿನ ಪ್ರಕಾರ ಈ ವಿಷಯವನ್ನು ಆಗಿನ ಕರಾಚಿಯ ಕಾರ್ಪ್ಸ್ ಕಮಾಂಡರ್ ಜನರಲ್ ಹಯಾತ್ ಅವರು ಕೈಗೆತ್ತಿಕೊಂಡರು, ಆದರೆ ಯಾವುದೇ ಪ್ರಯೋಜನವಾಗಲಿಲ್ಲ.  ಮತ್ತೊಂದೆಡೆ, ಸೇನಾ ಸಿಬ್ಬಂದಿಯ ಉಪ ಮುಖ್ಯಸ್ಥರಾದ ನಂತರ ಜನರಲ್ ಹಯಾತ್ ಅವರನ್ನು ಸೇವೆಯಿಂದ ವಜಾಗೊಳಿಸುವುದನ್ನು ಅನುಮೋದಿಸಿದರು ಮತ್ತು ಅವರಿಗೆ 293,000 ರೂ ದಂಡವನ್ನು ವಿಧಿಸಿದರು ಎಂದು ಮಾಜಿ ಮೇಜರ್ ಹೇಳಿದರು.

ಇದನ್ನೂ ಓದಿ: Ukraine Crisis: ಯುದ್ಧ ನಿಲ್ಲಿಸಲು ಪುಟಿನ್ ಮುಂದಿಟ್ಟ ಬೇಡಿಕೆಗಳು ಬಹಿರಂಗ; ಉಕ್ರೇನ್​ಗೆ ಆತಂಕವೇಕೆ? ಇಲ್ಲಿದೆ ಮಾಹಿತಿ

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ