Israel Attack: ಜೋ ಬೈಡೆನ್ ಭೇಟಿ ಬೆನ್ನಲ್ಲೇ ಗಾಜಾದ ಮಿಲಿಟರಿ ನೆಲೆ ಮೇಲೆ ಇಸ್ರೇಲ್​ನಿಂದ ವಾಯು ದಾಳಿ

| Updated By: ಸುಷ್ಮಾ ಚಕ್ರೆ

Updated on: Jul 16, 2022 | 12:42 PM

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಹಮಾಸ್ ವಕ್ತಾರ ಫೌಜಿ ಬರ್ಹೌಮ್, ಜೋ ಬೈಡೆನ್ ಇಸ್ರೇಲ್‌ಗೆ ಭೇಟಿ ನೀಡಿದ ನಂತರ ಇಸ್ರೇಲಿ ಕ್ಷಿಪಣಿ ದಾಳಿಗಳು ನಡೆದಿರುವುದು ಕಾಕತಾಳೀಯವಲ್ಲ ಎಂದು ಹೇಳಿದ್ದಾರೆ.

Israel Attack: ಜೋ ಬೈಡೆನ್ ಭೇಟಿ ಬೆನ್ನಲ್ಲೇ ಗಾಜಾದ ಮಿಲಿಟರಿ ನೆಲೆ ಮೇಲೆ ಇಸ್ರೇಲ್​ನಿಂದ ವಾಯು ದಾಳಿ
ಗಾಜಾದಲ್ಲಿ ಇಸ್ರೇಲ್​ನಿಂದ ಕ್ಷಿಪಣಿ ದಾಳಿ
Image Credit source: AFP
Follow us on

ಜೆರುಸಲೇಂ: ಗಾಜಾ ಪಟ್ಟಿಯಲ್ಲಿ ಇಸ್ರೇಲ್ ಮತ್ತು ಪ್ಯಾಲೆಸ್ತೇನ್ ಹಮಾಸ್ ಬಂಡುಕೋರರ ನಡುವಿನ ಘರ್ಷಣೆ ಇನ್ನೂ ಕಡಿಮೆಯಾಗಿಲ್ಲ. ಇಸ್ರೇಲ್ (Israel) ಭೂಪ್ರದೇಶದ ವ್ಯಾಪ್ತಿಯಲ್ಲಿ ರಾಕೆಟ್ ದಾಳಿ (Rocket Strike) ನಡೆದ ಬೆನ್ನಲ್ಲೇ ಇಸ್ರೇಲ್ ಯುದ್ಧವಿಮಾನಗಳು ಗಾಜಾ ಪಟ್ಟಿಯಲ್ಲಿರುವ ಶಸ್ತ್ರಾಸ್ತ್ರ ತಯಾರಿಕಾ ಘಟಕದ ಮೇಲೆ ಇಂದು ಮುಂಜಾನೆ ವಾಯು ದಾಳಿ ನಡೆಸಿವೆ. ಅಮೆರಿಕಾದ ಅಧ್ಯಕ್ಷ ಜೋ ಬೈಡನ್ (Joe Biden) ಇಸ್ರೇಲ್​ಗೆ ಭೇಟಿ ನೀಡಿದ ಬೆನ್ನಲ್ಲೇ ಈ ದಾಳಿ ಸಂಭವಿಸಿದೆ.

ಅಮೆರಿಕಾದ ಅಧ್ಯಕ್ಷ ಜೋ ಬೈಡೆನ್ ಇಸ್ರೇಲ್ ಮತ್ತು ಸೌದಿ ಅರೇಬಿಯಾವನ್ನು ಒಳಗೊಂಡಿರುವ ಮಧ್ಯಪ್ರಾಚ್ಯದ ಪ್ರವಾಸ ಕೈಗೊಂಡಿದ್ದಾರೆ. ಅವರು ಇಸ್ರೇಲ್​ಗೆ ಭೇಟಿ ನೀಡಿದ ಬೆನ್ನಲ್ಲೇ ಇಂದು ಮುಂಜಾನೆ ಇಸ್ರೇಲಿ ಮಿಲಿಟರಿ ಗಾಜಾದಲ್ಲಿ ರಾಕೆಟ್-ತಯಾರಿಕೆಯ ಸೈಟ್ ಮೇಲೆ ಕ್ಷಿಪಣಿ ದಾಳಿ ನಡೆಸಿದೆ.

ಇದನ್ನೂ ಓದಿ: ಅಗತ್ಯವಿದ್ದರೆ ಇಸ್ರೇಲ್‌ಗೂ ಅಧಿಕಾರಿಗಳನ್ನು ಕಳುಹಿಸುತ್ತೇನೆ, ಆಕ್ಷೇಪ ವ್ಯಕ್ತಪಡಿಸುವವರು ಯಾರು?: ಭಗವಂತ್ ಮಾನ್

ಭಾರೀ ಸ್ಫೋಟದ ಶಬ್ದದಿಂದ ಜನರು ಮುಂಜಾನೆ ಎಚ್ಚರಗೊಂಡರು. ಒಂದು ಡಜನ್‌ಗಿಂತಲೂ ಹೆಚ್ಚು ಕ್ಷಿಪಣಿಗಳು ಗಾಜಾದ ಭೂಪ್ರದೇಶದ ಎರಡು ಸ್ಥಳಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿವೆ ಎಂದು ಅಲ್ಜಜೀರ ವರದಿ ಮಾಡಿದೆ. ಈ ದಾಳಿಯಲ್ಲಿ ಯಾರೂ ಗಾಯಗೊಂಡಿರುವ ಬಗ್ಗೆ ವರದಿಯಾಗಿಲ್ಲ. ಆದರೆ, ಸಾಕಷ್ಟು ವಸ್ತು ಹಾನಿಯಾಗಿದ್ದು, ಮಿಲಿಟರಿ ನೆಲೆ ಮತ್ತು ಅದರ ಸುತ್ತಲಿನ ಪ್ರದೇಶದಲ್ಲಿ ಬೆಂಕಿ ಹೊತ್ತಿಕೊಂಡಿತ್ತು.

ಈ ಮಿಲಿಟರಿ ನೆಲೆಯ ಸುತ್ತಮುತ್ತಲಿನ ಹೆಚ್ಚಿನ ಪ್ರದೇಶವು ಕೃಷಿ ಭೂಮಿಯಾಗಿತ್ತು. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಹಮಾಸ್ ವಕ್ತಾರ ಫೌಜಿ ಬರ್ಹೌಮ್, ಜೋ ಬೈಡೆನ್ ಇಸ್ರೇಲ್‌ಗೆ ಭೇಟಿ ನೀಡಿದ ನಂತರ ಇಸ್ರೇಲಿ ಕ್ಷಿಪಣಿ ದಾಳಿಗಳು ನಡೆದಿರುವುದು ಕಾಕತಾಳೀಯವಲ್ಲ ಎಂದು ಹೇಳಿದ್ದಾರೆ.