ಹಿಜ್ಬುಲ್ಲಾ ಮುಖ್ಯಸ್ಥರ ಭಾಷಣದ ವೇಳೆ ಲೆಬನಾನ್ ಮೇಲೆ ವೈಮಾನಿಕ ದಾಳಿ ನಡೆಸಿದ ಇಸ್ರೇಲ್

ಭಯೋತ್ಪಾದಕ ಗುಂಪಿನ ಸಾಮರ್ಥ್ಯಗಳು ಮತ್ತು ಮೂಲಸೌಕರ್ಯವನ್ನು ಕುಗ್ಗಿಸಲು ಪ್ರಸ್ತುತ ಲೆಬನಾನ್‌ನಲ್ಲಿ ಹಿಜ್ಬುಲ್ಲಾ ದಾಳಿ ನಡೆಸುತ್ತಿದೆ ಎಂದು ಇಸ್ರೇಲ್ ರಕ್ಷಣಾ ಪಡೆ (ಐಡಿಎಫ್) ಹೇಳಿದೆ.

ಹಿಜ್ಬುಲ್ಲಾ ಮುಖ್ಯಸ್ಥರ ಭಾಷಣದ ವೇಳೆ ಲೆಬನಾನ್ ಮೇಲೆ ವೈಮಾನಿಕ ದಾಳಿ ನಡೆಸಿದ ಇಸ್ರೇಲ್
ವೈಮಾನಿಕ ದಾಳಿ

Updated on: Sep 19, 2024 | 10:24 PM

ಲೆಬನಾನ್: ಇಸ್ರೇಲ್ ಇಂದು ಲೆಬನಾನ್‌ನಲ್ಲಿ ಭಯೋತ್ಪಾದಕ ಗುಂಪು ಹಿಜ್ಬುಲ್ಲಾದ ಹಲವಾರು ಸ್ಥಳಗಳನ್ನು ಗುರಿಯಾಗಿಟ್ಟುಕೊಂಡು ಪೂರ್ಣ ಪ್ರಮಾಣದ ವೈಮಾನಿಕ ದಾಳಿಯನ್ನು ಪ್ರಾರಂಭಿಸಿತು. ದೇಶದಲ್ಲಿ ಇತ್ತೀಚಿನ ಪೇಜರ್ ಮತ್ತು ವಾಕಿ-ಟಾಕಿ ದಾಳಿಗಳನ್ನು ಖಂಡಿಸಿ ಹಿಜ್ಬುಲ್ಲಾ ದೂರದರ್ಶನದಲ್ಲಿ ಭಾಷಣ ಮಾಡಿದ ಸ್ವಲ್ಪ ಸಮಯದ ಬಳಿಕ ಇಸ್ರೇಲ್ ರಕ್ಷಣಾ ಪಡೆ ಈ ದಾಳಿಯನ್ನು ಪ್ರಾರಂಭಿಸಿತು.

ಈ ವಾರದ ಆರಂಭದಲ್ಲಿ ಇರಾನ್ ಬೆಂಬಲಿತ ಲೆಬನಾನ್ ಗುಂಪಿನ ಮೇಲೆ ಬೂಬಿ-ಟ್ರ್ಯಾಪ್ಡ್ ವಾಕಿ ಟಾಕಿಗಳು ಮತ್ತು ಪೇಜರ್‌ ಸ್ಫೋಟಗಳು ಸಂಭವಿಸಿದ ನಂತರ ಹಿಜ್ಬುಲ್ಲಾ ನಾಯಕ ಸಯ್ಯದ್ ಹಸನ್ ನಸ್ರಲ್ಲಾ ಅವರು ಮೊದಲ ಬಾರಿಗೆ ಭಾಷಣ ಮಾಡುತ್ತಿದ್ದ ಸಮಯದಲ್ಲಿ ಇಂದಿನ ದಾಳಿ ನಡೆದಿದೆ.

ಇದನ್ನೂ ಓದಿ: ಲೆಬನಾನ್‌ನಲ್ಲಿ ಪೇಜರ್ಸ್ ಸ್ಪೋಟದಲ್ಲಿ 9 ಸಾವು; ಸಂವಹನ ಸಾಧನಗಳಾದ ಪೇಜರ್ ಬಗ್ಗೆ ನಿಮಗೆಷ್ಟು ಗೊತ್ತು?

ಇಸ್ರೇಲಿ ಯುದ್ಧವಿಮಾನಗಳಿಂದ ಸೋನಿಕ್ ಬೂಮ್‌ಗಳು ಬೈರುತ್‌ನಲ್ಲಿನ ಕಟ್ಟಡಗಳನ್ನು ಅಲ್ಲಾಡಿಸಿದವು ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್ ವರದಿ ಮಾಡಿದೆ. ಇಂದು ರಾತ್ರಿಯಿಡೀ ಇಸ್ರೇಲ್ ದಕ್ಷಿಣ ಲೆಬನಾನ್‌ನಲ್ಲಿ ವೈಮಾನಿಕ ದಾಳಿ ನಡೆಸುವುದನ್ನು ದೃಢಪಡಿಸಿತು. ಉದ್ವಿಗ್ನ ಗಡಿ ಪ್ರದೇಶದಲ್ಲಿ ಪುನಃ ಬಾಂಬ್ ದಾಳಿ ಪುನರಾರಂಭವಾಗಿದೆ ಎಂದು ಹಿಜ್ಬುಲ್ಲಾ ತಿಳಿಸಿದೆ.

ಲೆಬನಾನ್​ನಲ್ಲಿ ಕೆಲವು ದಿನಗಳ ಹಿಂದೆ ನಡೆದಿದ್ದ ಪೇಜರ್ಸ್ ಸ್ಫೋಟದಲ್ಲಿ 37 ಜನರು ಸಾವನ್ನಪ್ಪಿ, 3,000 ಮಂದಿ ಗಾಯಗೊಂಡಿದ್ದರು. ಈ ಸ್ಫೋಟದಿಂದ ಲೆಬನಾನಿನ ಆಸ್ಪತ್ರೆಗಳು ಧ್ವಂಸಗೊಂಡಿತ್ತು.

ಇದನ್ನೂ ಓದಿ: Donald Trump: ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಮೇಲೆ ಮತ್ತೆ ಗುಂಡಿನ ದಾಳಿ

ಇಂದು ಭಾಷಣ ಮಾಡುವಾಗ ಹಿಜ್ಬುಲ್ಲಾ ಮುಖ್ಯಸ್ಥ, ಪೇಜರ್‌ಗಳು ಮತ್ತು ವಾಕಿ-ಟಾಕಿಗಳ ಸಂಖ್ಯೆಯನ್ನು ತೋರಿಸುತ್ತಾ, ಇಸ್ರೇಲ್ ಒಂದೇ ಬಾರಿಗೆ ಸಾವಿರಾರು ಜನರನ್ನು ಕೊಲ್ಲುವ ಉದ್ದೇಶವನ್ನು ಹೊಂದಿದೆ ಎಂದು ಆರೋಪಿಸಿದ್ದರು. ಗಾಜಾದಲ್ಲಿ ಯುದ್ಧ ಮುಂದುವರಿಯುವವರೆಗೂ ಉತ್ತರ ಇಸ್ರೇಲ್‌ಗೆ ಹಿಜ್ಬುಲ್ಲಾ ತನ್ನ ವಾಗ್ದಾಳಿಯನ್ನು ಮುಂದುವರೆಸುತ್ತದೆ ಎಂದು ಅವರು ಹೇಳಿದ್ದರು. ಇಸ್ರೇಲ್ ತನ್ನ ಜನರನ್ನು ಗಡಿ ಪ್ರದೇಶಕ್ಕೆ ಮರಳಿ ತರಲು ಸಾಧ್ಯವಾಗುವುದಿಲ್ಲ ಎಂದು ಪ್ರತಿಜ್ಞೆ ಮಾಡಿದ್ದರು.

ಈ ಭಾಷಣ ದೂರದರ್ಶನದಲ್ಲಿ ಪ್ರಸಾರವಾಗುತ್ತಿದ್ದಂತೆ, ಇಸ್ರೇಲಿ ಯುದ್ಧವಿಮಾನಗಳಿಂದ ಭಾರೀ ಪ್ರಮಾಣದ ಶಬ್ದ ಬೈರುತ್ ಅನ್ನು ಬೆಚ್ಚಿಬೀಳಿಸಿತು. ತನ್ನ ಯುದ್ಧವಿಮಾನಗಳು ದಕ್ಷಿಣ ಲೆಬನಾನ್ ಅನ್ನು ರಾತ್ರೋರಾತ್ರಿ ಹೊಡೆದವು ಎಂದು ಇಸ್ರೇಲ್ ಹೇಳಿದೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ