7 ಗಂಟೆಗಳ ಕಾಲ ಶವಗಳ ಮಧ್ಯೆ ಮಲಗಿ ಪ್ರಾಣ ಉಳಿಸಿಕೊಂಡೆ: ಹಮಾಸ್ ಉಗ್ರರ ಭಯಾನಕ ದಾಳಿಯ ಬಗ್ಗೆ ಮಹಿಳೆಯ ಮಾತು

|

Updated on: Oct 11, 2023 | 8:15 AM

‘‘ಯಾರಿಗೂ ತಿಳಿಯದಂತೆ 7 ಗಂಟೆಗಳ ಕಾಲ ಶವಗಳ ಮಧ್ಯೆ ಮಲಗಿ ಜೀವ ಉಳಿಸಿಕೊಂಡೆ’’ ಹಮಾಸ್​ ಉಗ್ರರ ದಾಳಿಯಿಂದ ತಪ್ಪಿಸಿಕೊಂಡ ಮಹಿಳೆಯ ಮಾತು. ಇಸ್ರೇಲ್​ನ ಸಂಗೀತ ಉತ್ಸವ ನಡೆಯುತ್ತಿತ್ತು ಆ ಸಂದರ್ಭದಲ್ಲಿ ಹಮಾಸ್ ಉಗ್ರರು ದಾಳಿ ನಡೆಸಿ 250 ಕ್ಕೂ ಅಧಿಕ ಮಂದಿಯನ್ನು ಹತ್ಯೆ ಮಾಡಿದ್ದರು. ಹಮಾಸ್​ ಉಗ್ರರು ಮನಬಂದಂತೆ ಪಾರ್ಟಿಯಲ್ಲಿದ್ದ ಜನರ ಮೇಲೆ ಗುಂಡಿನ ಸುರಿಮಳೆ ಗೈದಿದ್ದರು ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.

7 ಗಂಟೆಗಳ ಕಾಲ ಶವಗಳ ಮಧ್ಯೆ ಮಲಗಿ ಪ್ರಾಣ ಉಳಿಸಿಕೊಂಡೆ: ಹಮಾಸ್ ಉಗ್ರರ ಭಯಾನಕ ದಾಳಿಯ ಬಗ್ಗೆ ಮಹಿಳೆಯ ಮಾತು
ಕಾರುಗಳಿಗೆ ಬೆಂಕಿ
Image Credit source: People
Follow us on

‘‘ಯಾರಿಗೂ ತಿಳಿಯದಂತೆ 7 ಗಂಟೆಗಳ ಕಾಲ ಶವಗಳ ಮಧ್ಯೆ ಮಲಗಿ ಜೀವ ಉಳಿಸಿಕೊಂಡೆ’’ ಹಮಾಸ್​ ಉಗ್ರರ ದಾಳಿಯಿಂದ ತಪ್ಪಿಸಿಕೊಂಡ ಮಹಿಳೆಯ ಮಾತು. ಇಸ್ರೇಲ್​ನ ಸಂಗೀತ ಉತ್ಸವ ನಡೆಯುತ್ತಿತ್ತು ಆ ಸಂದರ್ಭದಲ್ಲಿ ಹಮಾಸ್ ಉಗ್ರರು ದಾಳಿ ನಡೆಸಿ 250 ಕ್ಕೂ ಅಧಿಕ ಮಂದಿಯನ್ನು ಹತ್ಯೆ ಮಾಡಿದ್ದರು. ಹಮಾಸ್​ ಉಗ್ರರು ಮನಬಂದಂತೆ ಪಾರ್ಟಿಯಲ್ಲಿದ್ದ ಜನರ ಮೇಲೆ ಗುಂಡಿನ ಸುರಿಮಳೆ ಗೈದಿದ್ದರು ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.

ಈ ಮ್ಯೂಸಿಕ್​ ಉತ್ಸವದಲ್ಲಿದ್ದ ಮಹಿಳೆಯೊಬ್ಬರು 7 ಗಂಟೆಗಳ ಕಾಲ ಮೃತದೇಹಗಳ ಅಡಿಯಲ್ಲಿ ಅಡಗಿಕೊಂಡು ಜೀವ ಉಳಿಸಿಕೊಂಡಿದ್ದಾರೆ ಎಂದು ನ್ಯೂಯಾರ್ಕ್​ ಪೋಸ್ಟ್​ ವರದಿ ಮಾಡಿದೆ. ವರದಿ ಪ್ರಕಾರ ಸುಮಾರು 35 ಮಂದಿ ಬಾಂಬ್ ಶೆಲ್ಟರ್​ನಲ್ಲಿ ಅಡಗಿಕೊಂಡಿದ್ದರು, ಅವರನ್ನು ಹಮಾಸ್ ಉಗ್ರರು ಪತ್ತೆ ಹಚ್ಚಿ ಗುಂಡು ಹಾರಿಸಿದ್ದರು. ಆಕೆಯನ್ನು ರಕ್ಷಿಸುವ ಸಂದರ್ಭದಲ್ಲಿ ಪಾರ್ಟಿಯಲ್ಲಿದ್ದ ಅಷ್ಟೂ ಜನರ ಪೈಕಿ ಕೇವಲ 10 ಜನರು ಮಾತ್ರ ಜೀವಂತವಿದ್ದರು ಎಂದು ಆ ಕರಾಳದಿನದ ಭಯಾನಕ ಸನ್ನಿವೇಶದ ಕುರಿತು ಯುವತಿ ಮಾತನಾಡಿದ್ದಾರೆ.

ಶವಗಳ ನಡುವೆ ಅಡಗಿ ಕುಳಿತಿದ್ದೆ

ನಾನು ತಮಾಷೆ ಮಾಡುತ್ತಿಲ್ಲ ಬಾಂಬ್ ಶೆಲ್ಟರ್​ನಲ್ಲಿ ಮೃತದೇಹಗಳಡಿ 7 ಗಂಟೆಗಳ ಕಾಲ ಅಡಗಿಕುಳಿತಿದ್ದೆ ಎಂದು ಫೋಟೊ ಹಾಗೂ ವಿಡಿಯೋ ಜತೆ ಅವರು ಪೋಸ್ಟ್​ ಮಾಡಿದ್ದಾರೆ. ಸಾವಿರಾರು ಮಂದಿ ಪಾರ್ಟಿಯಲ್ಲಿ ಭಾಗವಹಿಸಿದ್ದರು. ಇದು ಗಾಜಾಕ್ಕೆ ಸಮೀಪವಿರುವ ರಿಬ್ಬುಡ್ಜ್​ ರೀಮ್​ಗೆ ಹತ್ತಿರದಲ್ಲಿದೆ. ದಾಳಿಕೋರರು ಮೋಟಾರ್​ಬೈಕ್​ಗಳು, ಪಿಕಪ್​ ಟ್ರಕ್​ಗಳು, ಸ್ಪೀಡ್ ಬೋಟ್​ಗಳು ಮತ್ತು ಗ್ರೈಡರ್​ಗಳ ಮೂಲಕ ಪಾರ್ಟಿಗೆ ನುಗ್ಗಿದ್ದರು. ಸುತ್ತಲೂ ರಾಕೆಟ್​ ಸ್ಫೋಟಿಸಲಾಗಿತ್ತು, ಜನರು ಬೆಂಕಿಯನ್ನು ನೋಡಿ ಗಾಬರಿಗೊಂಡು ಓಡಲು ಪ್ರಾರಂಭಿಸಿದ್ದರು.

ಮತ್ತಷ್ಟು ಓದಿ: ಏನಿದು ಉರಿದು ಬೀಳುವ ವೈಟ್ ಫಾಸ್ಫರಸ್ ಬಾಂಬ್? ಗಾಜಾದಲ್ಲಿ ಇಸ್ರೇಲ್ ಇದನ್ನು ಬಳಸುತ್ತಿದೆಯೇ?

ಪರಿಚಯವಿಲ್ಲದವರ ಕಾರು ಹತ್ತಿದ್ವಿ

ಪರಿಚಯವಿಲ್ಲದ ಜನರೊಂದಿಗೆ ನಾನು ಮತ್ತು ನನ್ನ ಸ್ನೇಹಿತ ಕಾರನ್ನು ಏರಿದೆವು ಸ್ವಲ್ಪ ದೂರ ಹೋಗುತ್ತಿದ್ದಂತೆ ಕಾರಿಗೆ ಬೆಂಕಿ ಹಾಕಲಾಯಿತು. ಎಲ್ಲರೂ ಕಾರು ಬಿಟ್ಟು ಓಡಲು ಪ್ರಾರಮಭಿಸಿದರು ಆಗ ಹಮಾಸ್ ಉಗ್ರರು ಬೆನ್ನಿಗೆ ಗುಂಡು ಹಾರಿಸಿದರು. ಕೆಲವರನ್ನು ಒತ್ತೆಯಾಳಾಗಿರಿಸಿಕೊಂಡರು, ಇನ್ನೂ ಕೆಲವರು ಓಡಿ ಹೋಗಿ ಪ್ರಾಣ ಉಳಿಸಿಕೊಂಡಿದ್ದಾರೆ. ಸಾವಿನ ಸಂಖ್ಯೆ 3 ಸಾವಿರದ ಗಡಿ ದಾಟಿದೆ.

ಇಸ್ರೇಲ್​ನ ಇತಿಹಾಸದಲ್ಲೇ ಅತ್ಯಂತ ಕೆಟ್ಟ ದಾಳಿ

ಇಸ್ರೇಲ್​ನ 75 ವರ್ಷಗಳ ಇತಿಹಾಸದಲ್ಲಿ ಅತ್ಯಂತ ಕೆಟ್ಟ ದಾಳಿಯಿಂದ ಇಸ್ರೇಲ್​ನಲ್ಲಿ ಸಾವಿನ ಸಂಖ್ಯೆ 900ಕ್ಕಿಂತ ಹೆಚ್ಚಿದೆ. ಗಾಜಾದಲ್ಲಿ 765 ಮಂದಿ ಇದುವರೆಗೆ ಸಾವನ್ನಪ್ಪಿದ್ದಾರೆ. ಹಮಾಸ್​ ಉಗ್ರರು ಇಸ್ರೇಲ್​ ಮೇಲೆ 5000 ರಾಕೆಟ್​ಗಳ ಮೂಲಕ ದಾಳಿ ನಡೆಸಿತ್ತು.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ