ಭಾರತದಲ್ಲಿ ಕೊವಿಡ್​ ವಿರುದ್ಧದ ಹೋರಾಟಕ್ಕೆ ಇಸ್ರೇಲ್ ಸಾಥ್​; ತಜ್ಞರ ತಂಡವನ್ನು ಕಳಿಸಲು ತೀರ್ಮಾನಿಸಿದ ಅಲ್ಲಿನ ಸರ್ಕಾರ

|

Updated on: May 10, 2021 | 1:04 PM

ಭಾರತದಲ್ಲಿ ಕೊವಿಡ್​ 19 ಕ್ಷಿಪ್ರ ತಪಾಸಣೆ ನಡೆಸಲು ಮತ್ತು ಸುಲಭವಾಗಿ ಆಮ್ಲಜನಕ ಉತ್ಪತ್ತಿ ಮಾಡುವ ಸಾಂದ್ರಕಗಳನ್ನು ಅಭಿವೃದ್ಧಿಪಡಿಸಲು ತಜ್ಞರ ತಂಡವನ್ನು ನಾವು ಕಳಿಸುತ್ತೇವೆ ಎಂದು ಇಸ್ರೇಲ್ ಹೇಳಿದೆ.

ಭಾರತದಲ್ಲಿ ಕೊವಿಡ್​ ವಿರುದ್ಧದ ಹೋರಾಟಕ್ಕೆ ಇಸ್ರೇಲ್ ಸಾಥ್​; ತಜ್ಞರ ತಂಡವನ್ನು ಕಳಿಸಲು ತೀರ್ಮಾನಿಸಿದ ಅಲ್ಲಿನ ಸರ್ಕಾರ
ರಾನ್​ ಮಲ್ಕಾ
Follow us on

ಕೊವಿಡ್ 19 ಎರಡನೇ ಅಲೆಯ ಹೊಡೆತಕ್ಕೆ ಸಿಲುಕಿರುವ ಭಾರತದ ಸಹಾಯಕ್ಕೆ ಜಗತ್ತಿನ ಹಲವು ದೇಶಗಳು ನಿಂತಿವೆ. ಕೊರೊನಾ ಮೊದಲ ಅಲೆ ಸಂದರ್ಭದಲ್ಲಿ ಭಾರತ ತಮಗೆ ಮಾಡಿದ ಸಹಾಯವನ್ನು ನೆನಪಿಸಿಕೊಂಡ ಅಮೆರಿಕ, ಕೆನಡಾ, ಯುಕೆ, ಅರಬ್​ ಸಂಯುಕ್ತ ರಾಷ್ಟ್ರ ಸೇರಿ ಹಲವು ದೇಶಗಳು ಭಾರತದ ನೆರವಿಗೆ ನಿಂತಿವೆ. ಇದೀಗ ಆ ಸಾಲಿಗೆ ಇಸ್ರೇಲ್​ ಕೂಡ ಸೇರಿದೆ. ಭಾರತದಲ್ಲಿ ಕೊವಿಡ್ ವಿರುದ್ಧ ಹೋರಾಟಕ್ಕೆ ಸಹಾಯವಾಗಲಿ ಎಂಬ ದೃಷ್ಟಿಯಿಂದ ಇಸ್ರೇಲ್​​ನಿಂದ ತಜ್ಞ ವೈದ್ಯರ ತಂಡವೊಂದು ಭಾರತಕ್ಕೆ ಆಗಮಿಸಲಿದೆ.

ಭಾರತದಲ್ಲಿ ಕೊವಿಡ್​ 19 ಕ್ಷಿಪ್ರ ತಪಾಸಣೆ ನಡೆಸಲು ಮತ್ತು ಸುಲಭವಾಗಿ ಆಮ್ಲಜನಕ ಉತ್ಪತ್ತಿ ಮಾಡುವ ಸಾಂದ್ರಕಗಳನ್ನು ಅಭಿವೃದ್ಧಿಪಡಿಸಲು ತಜ್ಞರ ತಂಡವನ್ನು ನಾವು ಕಳಿಸುತ್ತೇವೆ. ಈ ಮೂಲಕ ಕೊವಿಡ್​ 19 ವಿರುದ್ಧ ಭಾರತ ಮಾಡುತ್ತಿರುವ ಹೋರಾಟಕ್ಕೆ ನಾವು ನೆರವು ನೀಡುತ್ತಿದ್ದೇವೆ ಎಂದು ಭಾರತದಲ್ಲಿರುವ ಇಸ್ರೇಲ್ ರಾಯಭಾರಿ ರಾನ್​ ಮಲ್ಕಾ ತಿಳಿಸಿದ್ದಾರೆ.

ಕೊರೊನಾ ಸಾಂಕ್ರಾಮಿಕ ಪ್ರಾರಂಭವಾದ ದಿನಗಳಲ್ಲಿ ನಾವು ಕಷ್ಟದಲ್ಲಿದ್ದಾಗ ನಮ್ಮ ನೆರವಿಗೆ ಬಂದಿದ್ದು ಭಾರತ. ಅದು ನಮಗೆ ನೀಡಿದ ಗುರುತರ ಸಹಾಯ, ನೆರವನ್ನು ಎಂದಿಗೂ ಮರೆಯೋದಿಲ್ಲ. ಇಸ್ರೇಲ್​ ಹಾಗೂ ಭಾರತದ ನಡುವೆ ಸದೃಢ ಸ್ನೇಹ-ಸಂಬಂಧವಿದೆ. ಈ ಸಂದರ್ಭದಲ್ಲಿ ನಾವೆಲ್ಲ ಒಟ್ಟಾಗಿ ಜೀವಗಳನ್ನು ರಕ್ಷಿಸಬೇಕು. ಭಾರತದ ಸಹಾಯಕ್ಕೆ ಇಸ್ರೇಲ್​ ಎಂದಿಗೂ ಬದ್ಧ ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ: ರಾಬಿ ಮಾರಾಟ ಋತುವಿನಲ್ಲಿ ಹರ್ಯಾಣ ಮತ್ತು ಪಂಜಾಬ್​ನಲ್ಲಿ ಗೋಧಿ ಸಂಗ್ರಹಣೆ ಹೆಚ್ಚಳ