ಕಾಫಿ,ಕುಕೀಸ್ ಕೊಟ್ಟು ಹಮಾಸ್ ಉಗ್ರರನ್ನು ಯಾಮಾರಿಸಿ ಬದುಕುಳಿದ ಇಸ್ರೇಲಿ ಮಹಿಳೆ; ಜೋ ಬೈಡನ್ ಶ್ಲಾಘನೆ

|

Updated on: Oct 19, 2023 | 3:21 PM

ರಾಚೆಲ್ ಮತ್ತು ಆಕೆಯ ಪತಿ ಡೇವಿಡ್‌ರನ್ನು ಹಮಾಸ್ ಉಗ್ರರು ಒತ್ತೆಯಾಳಾಗಿ ಇರಿಸಿದ್ದರು. ಆಕೆಯ ಮಗ ಪಿಸ್ತೂಲ್‌ನೊಂದಿಗೆ ಶಸ್ತ್ರಸಜ್ಜಿತವಾಗಿ ತನ್ನ ಮನೆಗೆ ಹೋದಾಗ ತನ್ನ ತಾಯಿಯನ್ನು ಒಬ್ಬ ಉಗ್ರ ಹಿಡಿದುಕೊಂಡಿರುವುದನ್ನು ನೋಡಿದ್ದಾನೆ. ಆ ಉಗ್ರ ಇನ್ನೊಂದು ಕೈಯಲ್ಲಿ ಗ್ರೆನೇಡ್ ಹಿಡಿದು, ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ಎಬಿಸಿ ನ್ಯೂಸ್ ತನ್ನ ವರದಿಯಲ್ಲಿ ತಿಳಿಸಿದೆ.

ಕಾಫಿ,ಕುಕೀಸ್ ಕೊಟ್ಟು ಹಮಾಸ್ ಉಗ್ರರನ್ನು ಯಾಮಾರಿಸಿ ಬದುಕುಳಿದ ಇಸ್ರೇಲಿ ಮಹಿಳೆ; ಜೋ ಬೈಡನ್ ಶ್ಲಾಘನೆ
ರಾಚೆಲ್ ಎಡ್ರಿ
Follow us on

ಟೆಲ್ ಅವೀವ್ ಅಕ್ಟೋಬರ್ 19: ಹಮಾಸ್ (Hamas) ಕಾರ್ಯಕರ್ತರು ತನ್ನ ಲಿವಿಂಗ್ ರೂಮಿನಲ್ಲಿ ಗ್ರೆನೇಡ್‌ಗಳನ್ನು (Grenades)  ಹಿಡಿದಿದ್ದಾಗ, 65 ವರ್ಷದ ಇಸ್ರೇಲಿ ಮಹಿಳೆ ರಾಚೆಲ್ ಎಡ್ರಿ (Rachel Edri) ಅವರಿಗೆ ಕಾಫಿ ಮತ್ತು ಮೊರೊಕನ್ ಕುಕೀಗಳನ್ನು ನೀಡಿ ಪೊಲೀಸರು ಬಂದು ಉಗ್ರರನ್ನು ಕೊಲ್ಲುವವರೆಗೂ ಹಿಡಿದು ನಿಲ್ಲಿಸಿದ್ದರು. ರಾಚೆಲ್ ಎಡ್ರಿಯನ್ನು  ಪೊಲೀಸ್ ಅಧಿಕಾರಿಯಾಗಿರುವ ಆಕೆಯ ಮಗನ ಸಹಾಯದಿಂದ ರಕ್ಷಿಸಲಾಗಿದೆ.ರಾಚೆಲ್ ಅವರ ಮನೆಯಲ್ಲಿ ಹಮಾಸ್ ಉಗ್ರರು 20 ಗಂಟೆಗಳ ಕಾಲ ಒತ್ತೆಯಾಳಾಗಿರಿಸಿದ್ದರು ಎಂದು ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ.

ಇದೀಗ ಇಸ್ರೇಲ್-ಹಮಾಸ್ ಯುದ್ಧದ ಸಮಯದಲ್ಲಿ ರಾಚೆಲ್ ಅವರು ಉಗ್ರರನ್ನು ಮೋಸ ಮಾಡಿ ಬಲೆಗೆ ಬೀಳಿಸಿದ ಕತೆ ಆಕೆಗೆ ಪ್ರಸಿದ್ಧಿ ತಂದುಕೊಟ್ಟಿದೆ. ಇಸ್ರೇಲ್‌ಗೆ ಅಮೆರಿಕ ಅಧ್ಯಕ್ಷ ಜೋ ಬೈಡನ್ ಬುಧವಾರ ಭೇಟಿ ನೀಡಿದ್ದು, ಬೈಡನ್ ಅವರನ್ನು ಭೇಟಿ ಮಾಡಲು ಆಹ್ವಾನಿಸಲಾದ ಹಲವಾರು ಇಸ್ರೇಲಿಯನ್ನರಲ್ಲಿ ರಾಚೆಲ್ ಕೂಡಾ ಒಬ್ಬರು.ಜೋ ಬೈಡನ್ ರಾಚೆಲ್ ಎಡ್ರಿ ಅವರನ್ನು ಅಪ್ಪಿಕೊಂಡು, ದೇಶವನ್ನು ರಕ್ಷಿಸಿದ್ದಕ್ಕಾಗಿ ಧನ್ಯವಾದಗಳನ್ನು ಹೇಳಿದ್ದಾರೆ.

ಈ ತಿಂಗಳ ಆರಂಭದಲ್ಲಿ ರಾಚೆಲ್ ರಕ್ಷಣೆಯ ವಿವರಗಳು ಹೊರಬಿದ್ದವು. ರಾಚೆಲ್ ಮತ್ತು ಆಕೆಯ ಪತಿ ಡೇವಿಡ್‌ರನ್ನು ಹಮಾಸ್ ಉಗ್ರರು ಒತ್ತೆಯಾಳಾಗಿ ಇರಿಸಿದ್ದರು. ಆಕೆಯ ಮಗ ಪಿಸ್ತೂಲ್‌ನೊಂದಿಗೆ ಶಸ್ತ್ರಸಜ್ಜಿತವಾಗಿ ತನ್ನ ಮನೆಗೆ ಹೋದಾಗ ತನ್ನ ತಾಯಿಯನ್ನು ಒಬ್ಬ ಉಗ್ರ ಹಿಡಿದುಕೊಂಡಿರುವುದನ್ನು ನೋಡಿದ್ದಾನೆ. ಆ ಉಗ್ರ ಇನ್ನೊಂದು ಕೈಯಲ್ಲಿ ಗ್ರೆನೇಡ್ ಹಿಡಿದು, ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ಎಬಿಸಿ ನ್ಯೂಸ್ ತನ್ನ ವರದಿಯಲ್ಲಿ ತಿಳಿಸಿದೆ.

ತನ್ನ ಮನೆಯಲ್ಲಿ ಐದು ಮಂದಿ ಒತ್ತೆಯಾಳುಗಳಿದ್ದಾರೆ ಎಂದು ತಿಳಿಸಲು ರಾಚೆಲ್ ತನ್ನ ಐದು ಬೆರಳುಗಳನ್ನು ತನ್ನ ಮುಖದ ಮೇಲಿಟ್ಟು ಮಗನಿಗೆ ಸೂಚಿಸಿದ್ದಾರೆ. ವಿಶೇಷ ಆಯುಧಗಳು ಮತ್ತು ತಂತ್ರಗಳ (SWAT) ತಂಡವು ಹಿಮ್ಮೆಟ್ಟುವಂತೆ ಎವ್ಯಾಟಾರ್‌ಗೆ ಮನವರಿಕೆ ಮಾಡಿಕೊಟ್ಟಿತು. ಅವರು ರಕ್ಷಣಾ ಕಾರ್ಯ ವಹಿಸಿಕೊಂಡರು ಎಂದು ವರದಿಯಲ್ಲಿ ಹೇಳಲಾಗಿದೆ.

ರಾಚೆಲ್ ಮತ್ತು ಡೇವಿಡ್ ಅವರು ತಮ್ಮ ಬುದ್ಧಿವಂತಿಕೆಯನ್ನು ಬಳಸಿಕೊಂಡು 20-ಗಂಟೆಗಳ ಕಾಲ ಹೇಗೆ ಬದುಕುಳಿದರು ಎಂಬುದನ್ನು ವಿವರಿಸಿದ್ದಾರೆ. ಆಕೆ ತನ್ನನ್ನು ಸೆರೆಹಿಡಿದವರಿಗೆ ಅಡುಗೆ ಮಾಡಿ ಬಡಿಸಿದ್ದಾರೆ. ಅವರಿಗೆ ಅವರನ್ನು ಕಾಫಿ ಮತ್ತು ಕುಕೀ ನೀಡಿ ಸತ್ಕರಿಸಿದ್ದಾರೆ.
“ಅವರು ಹಸಿದಿದ್ದರೆ, ಅವರು ಕೋಪಗೊಳ್ಳುತ್ತಾರೆ ಎಂದು ನನಗೆ ತಿಳಿದಿತ್ತು” ಎಂದು ರಾಚೆಲ್ ಎಬಿಸಿ ನ್ಯೂಸ್‌ಗೆ ತಿಳಿಸಿದರು.

ಇದನ್ನೂ ಓದಿ: Nokia Layoff: ವೆಚ್ಚ ಕಡಿಮೆ ಮಾಡಲು, ಉಳಿತಾಯ ಹೆಚ್ಚಿಸಲು 14 ಸಾವಿರ ಉದ್ಯೋಗಿಗಳ ವಜಾ ಮಾಡಿದ ನೋಕಿಯಾ

“ನಾನು ಇನ್ಸುಲಿನ್ ಚುಚ್ಚಬೇಕಿದೆ ನಾನು ಅವನಿಗೆ ಹೇಳಿದೆ, ನನಗೆ ಪೊಲೀಸ್ ಅಧಿಕಾರಿಗಳು ಮಕ್ಕಳಿದ್ದಾರೆ ಎಂಬ ಅಂಶದಿಂದ ಅವರನ್ನು ಗಮನ ಸೆಳೆಯಲು ಪ್ರಯತ್ನಿಸುತ್ತಿದೆ, ನಾನು ಅವರಿಗೆ ಕೋಕ್ ಝೀರೋ, ನೀರು ನೀಡಿದ್ದೇನೆ ಎಂದು ಆಕೆ ಹೇಳಿದ್ದಾರೆ.

ಸೆರೆಹಿಡಿದವರ ಜತೆಗೂ ಆಕೆ ಹೇಗೆ ತಮಾಷೆ ಮಾಡುತ್ತಿದ್ದಳು ಎಂದು ವಿವರಿಸುತ್ತಾ, “ನಾನು ನಿಮಗೆ ಹಿಬ್ರೂ ಕಲಿಸುತ್ತೇನೆ ಮತ್ತು ನೀವು ನನಗೆ ಅರೇಬಿಕ್ ಕಲಿಸಿ ಎಂದು ನಾನು ಅವರಿಗೆ ಹೇಳಿದೆ.ಇದು ಬದುಕು ಮತ್ತು ಸಾವಿನ ವಿಷಯ ಎಂದು ನಾನು ಅರ್ಥಮಾಡಿಕೊಂಡಿದ್ದೆ ಎಂದು ರಾಚೆಲ್ ಹೇಳಿದ್ದಾರೆ. SWAT ತಂಡವು ಅವರ ರಕ್ಷಣೆಗೆ ಬಂದ ನಂತರ ಮಧ್ಯರಾತ್ರಿಯ ನಂತರ ದಂಪತಿಗಳನ್ನು ರಕ್ಷಿಸಲಾಯಿತು.

ಮತ್ತಷ್ಟು ವಿದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ