ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಆಸ್ಪತ್ರೆಗೆ ದಾಖಲು: ವರದಿ

|

Updated on: Jul 15, 2023 | 8:52 PM

ಟೆಲ್ ಹ್ಯಾಶೋಮರ್ ಕರಾವಳಿ ಸಿಸೇರಿಯಾಕ್ಕೆ ಹತ್ತಿರದಲ್ಲಿದ. ಅಲ್ಲಿ ಬೆಂಜಮಿನ್ ನೆತನ್ಯಾಹು ಅವರು ಖಾಸಗಿ ನಿವಾಸವನ್ನು ಹೊಂದಿದ್ದಾರೆ. ಅವರು ಅಸ್ವಸ್ಥರಾಗಿದ್ದಾರೆಂದು ವರದಿ ಮಾಡಿದಾಗ ಅವರು ಅಲ್ಲಿದ್ದರು ಎಂದು ಇಸ್ರೇಲಿ ಮಾಧ್ಯಮಗಳು ತಿಳಿಸಿವೆ.

ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಆಸ್ಪತ್ರೆಗೆ ದಾಖಲು: ವರದಿ
ಬೆಂಜಮಿನ್ ನೆತನ್ಯಾಹು
Follow us on

ಜೆರುಸಲೇಂ ಜುಲೈ 15: ಇಸ್ರೇಲ್ (Israel) ಪ್ರಧಾನಿ ಬೆಂಜಮಿನ್ ನೆತನ್ಯಾಹು (Benjamin Netanyahu) ಅವರು ಶನಿವಾರ ಇಸ್ರೇಲಿ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗೊಳಗಿದ್ದು, ಅವರ ಆರೋಗ್ಯ ಸ್ಥಿತಿ ಉತ್ತಮವಾಗಿದೆ ಎಂದು ಅವರ ಕಚೇರಿ ತಿಳಿಸಿದೆ. 73ರ ಹರೆಯದ ನೆತನ್ಯಾಹು ಟೆಲ್ ಹ್ಯಾಶೋಮರ್‌ನಲ್ಲಿರುವ ಶೆಬಾ ಆಸ್ಪತ್ರೆಯ ತುರ್ತು ಕೋಣೆಗೆ ತೆರಳಿದರು ಎಂದು ಇಸ್ರೇಲ್‌ನ ಚಾನೆಲ್ 12 ಟಿವಿ ಪ್ರಧಾನ ವೈದ್ಯರನ್ನು ಉಲ್ಲೇಖಿಸಿ ಹೇಳಿದೆ. ಅವರಿಗೆ ಅರವಳಿಕೆ ಕೊಟ್ಟಿಲ್ಲ. ಅವರು ನಿಶ್ಶಕ್ತರು ಎಂದು ಹೇಳಲು ಆಗುವುದಿಲ್ಲ ಎಂದು ಚಾನೆಲ್ 12 ಹೇಳಿದೆ.

ಟೆಲ್ ಹ್ಯಾಶೋಮರ್ ಕರಾವಳಿ ಸಿಸೇರಿಯಾಕ್ಕೆ ಹತ್ತಿರದಲ್ಲಿದ. ಅಲ್ಲಿ ಬೆಂಜಮಿನ್ ನೆತನ್ಯಾಹು ಅವರು ಖಾಸಗಿ ನಿವಾಸವನ್ನು ಹೊಂದಿದ್ದಾರೆ. ಅವರು ಅಸ್ವಸ್ಥರಾಗಿದ್ದಾರೆಂದು ವರದಿ ಮಾಡಿದಾಗ ಅವರು ಅಲ್ಲಿದ್ದರು ಎಂದು ಇಸ್ರೇಲಿ ಮಾಧ್ಯಮಗಳು ತಿಳಿಸಿವೆ.ಅಕ್ಟೋಬರ್ ಆರಂಭದಲ್ಲಿ ಯೋಮ್ ಕಿಪ್ಪೂರ್‌ನ ಯಹೂದಿ ಉಪವಾಸದ ಸಮಯದಲ್ಲಿ ನೆತನ್ಯಾಹು ಅನಾರೋಗ್ಯಕ್ಕೆ ಒಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಇಸ್ರೇಲ್ ನಲ್ಲಿ ಬಿಸಿಗಾಳಿ ಬೀಸುತ್ತಿದೆ.

ನ್ಯಾಯಾಂಗವನ್ನು ಕೂಲಂಕಷವಾಗಿ ಪರಿಶೀಲಿಸುವ ಯೋಜನೆ ಬಗ್ಗೆ ನೆತನ್ಯಾಹು ಭಾರೀ ಟೀಕೆಗೊಳಗಾಗಿದ್ದೆ., ಇದು ನ್ಯಾಯಾಲಯಗಳ ಭವಿಷ್ಯದ ಸ್ವಾತಂತ್ರ್ಯಕ್ಕಾಗಿ ಚಿಂತಿತರಾಗಿರುವ ಇಸ್ರೇಲಿಗಳಿಂದ ಭಾರೀ ಪ್ರತಿಭಟನೆಗಳನ್ನು ಎದುರಿಸುತ್ತಿದೆ.

ಇದನ್ನೂ ಓದಿ: PM Modi in UAE: ಪ್ರಧಾನಿ ಮೋದಿಗಾಗಿ ಸಸ್ಯಾಹಾರ ಭೋಜನಕೂಟ ಆಯೋಜಿಸಿದ ಯುಎಇ ಅಧ್ಯಕ್ಷ ಅಲ್ ನಹ್ಯಾನ್

ನೆತನ್ಯಾಹು ಕಚೇರಿಯ ಸಂಕ್ಷಿಪ್ತ ಹೇಳಿಕೆ ಪ್ರಕಾರರ ಅವರು ಶೆಬಾದಲ್ಲಿದ್ದಾರೆ. ಅವರ ಆರೋಗ್ಯ ಸ್ಥಿತಿ ಉತ್ತಮವಾಗಿದ್ದು ವೈದ್ಯಕೀಯ ಪರೀಕ್ಷೆಗೊಳಗಾಗಿದ್ದಾರೆ ಎಂದು ಅವರು ಹೇಳಿದ್ದಾರೆ.

ಮತ್ತಷ್ಟು ವಿದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ