PM Modi in UAE: ಪ್ರಧಾನಿ ಮೋದಿಗಾಗಿ ಸಸ್ಯಾಹಾರ ಭೋಜನಕೂಟ ಆಯೋಜಿಸಿದ ಯುಎಇ ಅಧ್ಯಕ್ಷ ಅಲ್ ನಹ್ಯಾನ್

ಯುಎಇ ಅಧ್ಯಕ್ಷರಿಗೆ ಧನ್ಯವಾದ ಅರ್ಪಿಸಿದ ಪ್ರಧಾನಿ ಮೋದಿ, "ನೀವು ನನಗೆ ನೀಡಿದ ಗೌರವ, ಸಹೋದರನೊಬ್ಬ ತನ್ನ ಸಹೋದರನನ್ನು ಭೇಟಿ ಮಾಡಿದಂತೆಯೇ. ಇದಕ್ಕಿಂತ ಬಾಂಧವ್ಯಕ್ಕೆ ಇನ್ನೊಂದು ಪುರಾವೆ ಇಲ್ಲ" ಎಂದು ಹೇಳಿದರು

PM Modi in UAE: ಪ್ರಧಾನಿ ಮೋದಿಗಾಗಿ ಸಸ್ಯಾಹಾರ ಭೋಜನಕೂಟ ಆಯೋಜಿಸಿದ ಯುಎಇ ಅಧ್ಯಕ್ಷ ಅಲ್ ನಹ್ಯಾನ್
ಯುಎಇ ಅಧ್ಯಕ್ಷರೊಂದಿಗೆ ಪ್ರಧಾನಿ ಮೋದಿ
Follow us
ರಶ್ಮಿ ಕಲ್ಲಕಟ್ಟ
|

Updated on:Jul 15, 2023 | 8:27 PM

ಅಬುಧಾಬಿ ಜುಲೈ 15: ಪ್ರಧಾನಿ ನರೇಂದ್ರ ಮೋದಿ (Narendra Modi) ಒಂದು ದಿನದ ಭೇಟಿಗಾಗಿ ಅಬುಧಾಬಿ ತಲುಪಿದ್ದು, ಅಲ್ಲಿ ಅವರಿಗೆ ಯುಎಇ ಅಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ (Sheikh Mohamed bin Zayed al Nahyan) ಔತಣಕೂಟ ಏರ್ಪಡಿಸಿದ್ದಾರೆ. ಈ ಔತಣಕೂಟದಲ್ಲಿ ಸಸ್ಯಾಹಾರವನ್ನೇ ಬಡಿಸಲಾಗಿದೆ. ಔತಣಕೂಟದ ಮೆನು ಕಾರ್ಡ್‌ನಲ್ಲಿ ಎಲ್ಲಾ ಊಟಗಳು ಸಸ್ಯಾಹಾರಿ ಮತ್ತು ಸಸ್ಯಜನ್ಯ ಎಣ್ಣೆಗಳಿಂದ ತಯಾರಿಸಿದ್ದು. ಯಾವುದೇ ಡೈರಿ ಅಥವಾ ಮೊಟ್ಟೆಯ ಉತ್ಪನ್ನಗಳನ್ನು ಹೊಂದಿರುವುದಿಲ್ಲ ಎಂದು ಬರೆಯಲಾಗಿದೆ.

ಅಧ್ಯಕ್ಷರ ಅರಮನೆಯಾದ ಕಸ್ರ್-ಅಲ್-ವತನ್ ನಲ್ಲಿ ನಡೆದ ಔತಣಕೂಟದಲ್ಲಿ ಮೊದಲಿಗೆ ಗೋಧಿ ಮತ್ತು ಖರ್ಜೂರದ ಜತೆ ಸ್ಥಳೀಯ ಸಾವಯವ ತರಕಾರಿಗಳ ಸಲಾಡ್ ಬಡಿಸಲಾಗಿದೆ. ನಂತರ ಮಸಾಲಾ ಸಾಸ್‌ನೊಂದಿಗೆ ಗ್ರಿಲ್ಡ್ ತರಕಾರಿಗಳನ್ನು ನೀಡಲಾಗಿದೆ. ಇದಾದ ಮೇಲೆ  ಹೂಕೋಸು ಮತ್ತು ಕ್ಯಾರೆಟ್ ತಂದೂರಿಯೊಂದಿಗೆ ಕಪ್ಪು ಉದ್ದಿನ ಬೇಳೆ ಮತ್ತು ಸ್ಥಳೀಯ ಗೋಧಿಯಿಂದ ಮಾಡಿದ ಭಕ್ಷ್ಯ ನೀಡಲಾಗಿದೆ. ಸಿಹಿತಿಂಡಿಗಳಿಗಾಗಿ ವಿವಿಧ ಹಣ್ಣುಗಳನ್ನು ನೀಡಲಾಯಿತು.

Menu

ಮೆನು

ಅಧ್ಯಕ್ಷರ ಭವನಕ್ಕೆ ಆಗಮಿಸಿದ ಪ್ರಧಾನಿ ಮೋದಿಯವರಿಗೆ ಭವ್ಯ ಸ್ವಾಗತ ನೀಡಲಾಯಿತು. ಯುಎಇ ಅಧ್ಯಕ್ಷರಿಗೆ ಧನ್ಯವಾದ ಅರ್ಪಿಸಿದ ಪ್ರಧಾನಿ ಮೋದಿ, “ನೀವು ನನಗೆ ನೀಡಿದ ಗೌರವ, ಸಹೋದರನೊಬ್ಬ ತನ್ನ ಸಹೋದರನನ್ನು ಭೇಟಿ ಮಾಡಿದಂತೆಯೇ. ಇದಕ್ಕಿಂತ ಬಾಂಧವ್ಯಕ್ಕೆ ಇನ್ನೊಂದು ಪುರಾವೆ ಇಲ್ಲ” ಎಂದು ಹೇಳಿದರು. ಯುಎಇಯಲ್ಲಿ ನಡೆಯಲಿರುವ COP-28 ಶೃಂಗಸಭೆಯಲ್ಲಿ ಭಾಗವಹಿಸುವುದಾಗಿ ತಿಳಿಸಿದ ಪ್ರಧಾನಿ, ನಾವು (ಭಾರತ-ಯುಎಇ) ಮೂರು ತಿಂಗಳೊಳಗೆ ಐತಿಹಾಸಿಕ ಒಪ್ಪಂದಗಳಿಗೆ ಸಹಿ ಹಾಕಿದ್ದೇವೆ, ಅದು ನಿಮ್ಮ ಸಹಕಾರ ಮತ್ತು ಬದ್ಧತೆಯಿಲ್ಲದೆ ಸಾಧ್ಯವಿಲ್ಲ ಎಂದಿದ್ದಾರೆ.

ಇದನ್ನೂ ಓದಿ: PM Modi UAE Visit: ಅರಬ್ ರಾಷ್ಟ್ರಕ್ಕೆ ಮೋದಿ ಆಗಮನ, ಆತ್ಮೀಯವಾಗಿ ಬರಮಾಡಿಕೊಂಡ ಯುಎಇ ಕ್ರೌನ್ ಪ್ರಿನ್ಸ್

ಭಾರತ-ಯುಎಇ ದ್ವಿಪಕ್ಷೀಯ ವ್ಯಾಪಾರವು 20 ಪ್ರತಿಶತದಷ್ಟು ಬೆಳೆದಿದೆ.ಎರಡೂ ದೇಶಗಳು $ 85 ಬಿಲಿಯನ್  ವ್ಯಾಪಾರವನ್ನು ಸಾಧಿಸಿವೆ.”ನಾವು ಶೀಘ್ರದಲ್ಲೇ $ 100 ಬಿಲಿಯನ್ ಗುರಿಯನ್ನು ಸಾಧಿಸುತ್ತೇವೆ ಎಂದಿದ್ದಾರೆ ಮೋದಿ. ಯುಎಇ ಅಧ್ಯಕ್ಷರನ್ನು ಭೇಟಿ ಮಾಡುವ ಮೊದಲು, ಪ್ರಧಾನಿ ಮೋದಿ ಯುಎನ್ ಹವಾಮಾನ ಸಮ್ಮೇಳನದ ನಿಯೋಜಿತ ಅಧ್ಯಕ್ಷ ಸುಲ್ತಾನ್ ಅಲ್ ಜಾಬರ್ ಅವರೊಂದಿಗೆ ಸಭೆ ನಡೆಸಿದರು.

ಮತ್ತಷ್ಟು ವಿದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:25 pm, Sat, 15 July 23

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ