Mario Draghi ಇಟಲಿ ಪ್ರಧಾನಿ ಮಾರಿಯೊ ಡ್ರಾಘಿ ರಾಜೀನಾಮೆ

ಅಧ್ಯಕ್ಷ ಸರ್ಗಿಯೊ ಮಾಟರೆಲ್ಲಾ ಅವರಿಗೆ ಡ್ರಾಘಿ ರಾಜೀನಾಮೆ ಪತ್ರ ಸಲ್ಲಿಸಿದ್ದು, ಸದ್ಯ ಹಂಗಾಮಿ ಪ್ರಧಾನಿಯಾಗಿ ಮುಂದುವರಿಯುವಂತೆ ಅಧ್ಯಕ್ಷರು ಅವರಲ್ಲಿ ಕೇಳಿಕೊಂಡಿದ್ದಾರೆ ಎಂದು ಅಧ್ಯಕ್ಷರ ಕಚೇರಿ ಹೇಳಿಕೆಯಲ್ಲಿ ತಿಳಿಸಿದೆ.

Mario Draghi ಇಟಲಿ ಪ್ರಧಾನಿ ಮಾರಿಯೊ ಡ್ರಾಘಿ ರಾಜೀನಾಮೆ
ಮಾರಿಯೊ ಡ್ರಾಘಿ
Edited By: ರಶ್ಮಿ ಕಲ್ಲಕಟ್ಟ

Updated on: Jul 21, 2022 | 3:01 PM

ರೋಮ್: ಇಟಲಿ (Italy)  ಪ್ರಧಾನಿ ಮಾರಿಯೊ ಡ್ರಾಘಿ(Mario Draghi) ಗುರುವಾರ ರಾಜೀನಾಮೆ ನೀಡಿದ್ದಾರೆ. ಅಧ್ಯಕ್ಷ ಸರ್ಗಿಯೊ ಮಾಟರೆಲ್ಲಾ (President Sergio Mattarella) ಅವರಿಗೆ ಡ್ರಾಘಿ ರಾಜೀನಾಮೆ ಪತ್ರ ಸಲ್ಲಿಸಿದ್ದು, ಸದ್ಯ ಹಂಗಾಮಿ ಪ್ರಧಾನಿಯಾಗಿ ಮುಂದುವರಿಯುವಂತೆ ಅಧ್ಯಕ್ಷರು ಅವರಲ್ಲಿ ಕೇಳಿಕೊಂಡಿದ್ದಾರೆ ಎಂದು ಅಧ್ಯಕ್ಷರ ಕಚೇರಿ ಹೇಳಿಕೆಯಲ್ಲಿ ತಿಳಿಸಿದೆ. ಅಧಕ್ಷ ಮಾಟರೆಲ್ಲಾ ಅವರು ಸಂಸತ್ ವಿಸರ್ಜನೆ ಮಾಡಲಿದ್ದಾರೆಯೇ ಅಥವಾ ಚುನಾವಣೆಗೆ ಕರೆ ನೀಡಲಿದ್ದಾರೆಯೇ ಎಂಬುದು ಸದ್ಯ ತಿಳಿದು ಬಂದಿಲ್ಲ. ಸರ್ಕಾರದ ಮೈತ್ರಿ ಪಕ್ಷಗಳು ವಿಶ್ವಾಸ ಮತವನ್ನು ಬಹಿಷ್ಕರಿಸಲು ನಿರ್ಧರಿಸಿದ್ದರಿಂದ ಡ್ರಾಘಿ ರಾಜೀನಾಮೆ ನೀಡಿದ್ದಾರೆ.

ಅಧ್ಯಕ್ಷರು ರಾಜೀನಾಮೆ ಪತ್ರವನ್ನು ಸ್ವೀಕರಿಸಿದ್ದು ಹಂಗಾಮಿ ಪ್ರಧಾನಿಯಾಗಿ ಮುಂದುವರಿಯುವಂತೆ ಡಾಘ್ರಿ ಅವರಿಗೆ ಹೇಳಿರುವುದಾಗಿ ಕ್ವಿರಿನಾಲೆ ಪ್ಯಾಲೇಸ್ ನಲ್ಲಿರುವ ಅಧ್ಯಕ್ಷರ ಕಚೇರಿ ಹೇಳಿದೆ. ಯುರೋಪಿಯನ್ ಒಕ್ಕೂಟ ಸಹಾಯದ ಕೋವಿಡ್ ಸಾಂಕ್ರಾಮಿಕ ಚೇತರಿಕೆ ಯೋಜನೆ ಅನುಷ್ಠಾನಕ್ಕಾಗಿ ಎಲ್ಲರೂ ಒಗ್ಗಟ್ಟಾಗಿ ನಿಲ್ಲಬೇಕು ಎಂಬ ಡ್ರಾಘಿ ಕರೆಯನ್ನು ಎಡ, ಬಲ ಮತ್ತು ಪ್ಯಾಪುಲಿಸ್ಟ್ ಪಕ್ಷಗಳನ್ನೊಳಗೊಂಡಿರುವ ಸಮ್ಮಿಶ್ರ ಸರ್ಕಾರದ ಸದಸ್ಯರು ನಿರಾಕರಿಸಿದ ಬೆನ್ನಲ್ಲೇ ಪ್ರಧಾನಿ ರಾಜೀನಾಮೆ ನೀಡಿದ್ದಾರೆ.

Published On - 2:44 pm, Thu, 21 July 22

Follow Us