ಬೆಂಕಿ ಹೊತ್ತಿಕೊಂಡಿದ್ದ ಮನೆಯೊಂದರಿಂದ ತನ್ನ ಪ್ರಾಣ ಒತ್ತೆಯಿಟ್ಟು ಐವರನ್ನು ಕಾಪಾಡಿದ ಪಿಜ್ಜಾ ಡೆಲಿವರಿ ಬಾಯ್, ನಿಜಕ್ಕೂ ಸೂಪರ್ ಹೀರೋ!

| Updated By: Digi Tech Desk

Updated on: Jul 19, 2022 | 2:16 PM

ಘಟನೆಯು ಇಂಡಿಯಾನಾದ ಲಫಾಯೇಟ್ ನಲ್ ಜುಲೈ 11 ರಂದು ಸಂಭವಿಸಿದೆ. ಪೊಲೀಸ್ ಅಧಿಕಾರಿಯೊಬ್ಬರು ತಮ್ಮ ಕೆಮೆರಾದಲ್ಲಿ ಸೆರೆಹಿಡಿದಿರುವ ಫುಟೇಜ್ ನಲ್ಲಿ ಬೊಸ್ಟಿಕ್ ಬೆಂಕಿಯಿಂದ ಸುತ್ತುವರಿದಿರುವ ಮನೆಯಿಂದ ಮಕ್ಕಳನ್ನು ಹೊರಬರುತ್ತಿರುವುದು ಸೆರೆಯಾಗಿದೆ.

ಬೆಂಕಿ ಹೊತ್ತಿಕೊಂಡಿದ್ದ ಮನೆಯೊಂದರಿಂದ ತನ್ನ ಪ್ರಾಣ ಒತ್ತೆಯಿಟ್ಟು ಐವರನ್ನು ಕಾಪಾಡಿದ ಪಿಜ್ಜಾ ಡೆಲಿವರಿ ಬಾಯ್, ನಿಜಕ್ಕೂ ಸೂಪರ್ ಹೀರೋ!
ಮಗುವನ್ನು ಸುರಕ್ಷಿತವಾಗಿ ಹೊರತರುತ್ತಿರುವ ಬೊಸ್ಟಿಕ್
Follow us on

ಪಿಜ್ಜಾ ಡೆಲಿವರಿ ಮಾಡುವ 25-ವರ್ಷ-ವಯಸ್ಸಿನ ಯುವಕರೊಬ್ಬರು ತನ್ನ ಜೀವವನ್ನು ಅಪಾಯಕ್ಕೊಡ್ಡಿ ಇಬ್ಬರು ಮಕ್ಕಳು ಮತ್ತು ಮೂವರು ಹದಿಹರೆಯದವರನ್ನು ರಕ್ಷಿಸಿದ ಘಟನೆ ಅಮೆರಿಕದ ಇಂಡಿಯಾನಾದಲ್ಲಿ (Indiana) ಇತ್ತೀಚಿಗೆ ನಡೆದಿದೆ. ಲಫಾಯೇಟ್ ಪೊಲೀಸ್ ಇಲಾಖೆಯು (Lafayette Police Department) ತನ್ನ ಅಧಿಕೃತ ಟ್ವಿಟರ್ ಮೂಲಕ ಹೇಳಿರುವ ಪ್ರಕಾರ ಡೆಲಿವರಿ ಬಾಯ್ ನಿಕೊಲಾಸ್ ಬೊಸ್ಟಿಕ್ (Nicholas Bostic) ರಸ್ತೆಯ ಮೇಲೆ ಹೋಗುವಾಗ ಮನೆಯೊಂದಕ್ಕೆ ಬೆಂಕಿಹೊತ್ತಿಕೊಂಡು ಉರಿಯುತ್ತಿರುವುದನ್ನು ನೋಡಿದ್ದ ಕೂಡಲೇ ಆ ಮನೆಯೊಳಗೆ ನುಗ್ಗಿ 18-ವರ್ಷದ-ಯುವಕ ಮತ್ತು ಇತರ ನಾಲ್ವರನ್ನು ಸುರಕ್ಷಿತವಾಗಿ ಹೊರತಂದಿದ್ದಾರೆ, ಎಂದು ಹೇಳಿದೆ.

ಘಟನೆಯು ಇಂಡಿಯಾನಾದ ಲಫಾಯೇಟ್ ನಲ್ ಜುಲೈ 11 ರಂದು ಸಂಭವಿಸಿದೆ. ಪೊಲೀಸ್ ಅಧಿಕಾರಿಯೊಬ್ಬರು ತಮ್ಮ ಕೆಮೆರಾದಲ್ಲಿ ಸೆರೆಹಿಡಿದಿರುವ ಫುಟೇಜ್ ನಲ್ಲಿ ಬೊಸ್ಟಿಕ್ ಬೆಂಕಿಯಿಂದ ಸುತ್ತುವರಿದಿರುವ ಮನೆಯಿಂದ ಮಕ್ಕಳನ್ನು ಹೊರಬರುತ್ತಿರುವುದು ಸೆರೆಯಾಗಿದೆ. ಹಾಗೆಯೇ, ಅವರು ತನ್ನ ಕರೆಗೆ ಮೊದಲು ಪ್ರತಿಕ್ರಿಯಿಸಿದವರಿಗೆ ಮಕ್ಕಳನ್ನು ಹಸ್ತಾಂತರಿಸುವುದು ಪುಟೇಜ್ ನಲ್ಲಿ ನೋಡಬಹುದಾಗಿದೆ.

ಪೊಲೀಸ್ ಇಲಾಖೆ ಬಿಡುಗಡೆ ಮಾಡಿರುವ ಪತ್ರಿಕಾ ಪ್ರಕಟಣೆಯಲ್ಲ್ಲಿ ಬೊಸ್ಟಿಕ್; 1, 6, 13, 18 ಪ್ರಾಯದ ಸಹೋದರ-ಸಹೋದರಿಯರನ್ನು ಅದೇ ಮನೆಯಲ್ಲಿ ನಿದ್ರಿಸಿಸುತ್ತಿದ್ದ 13-ವರ್ಷದ ಮತ್ತೊಬ್ಬ ಬಾಲಕನನ್ನು ರಕ್ಷಿಸಿದ್ದಾನೆ ಎಂದು ಹೇಳಿದೆ.
ಬೊಸ್ಟಿಕ್ ಹಿಂಬಾಗಿಲಿನಿಂದ ಮನೆ ಪ್ರವೇಶಿಸಿದ ಮೇಲಿನ ಮಹಡಿಯಲ್ಲಿದ್ದ ಮಕ್ಕಳನ್ನು ಹೊರತಂದಿದ್ದಾರೆ. ಸುರಕ್ಷಿತವಾಗಿ ಹೊರಬಂದ ನಾಲ್ವರು; 6 ವರ್ಷ-ವಯಸ್ಸಿನ ಬಾಲಕಿ ಒಳಗಡೆ ಉಳಿದುಕೊಂಡುಬಿಟ್ಟಿದ್ದಾಳೆ ಅಂತ ಹೇಳಿದಾಗ ಬೊಸ್ಟಿಕ್ ಅಷ್ಟೊತ್ತ್ತಿಗಾಗಲೇ ಅಗ್ನಿಯ ಪ್ರಮಾಣ ಹೆಚ್ಚಿ ಮನೆಯನ್ನು ದಟ್ಟ ಹೊಗೆ ಆವರಿಸಿಕೊಂಡಿದ್ದರೂ ಲೆಕ್ಕಿಸದೆ ಒಳನುಗ್ಗಿ ಅವಳನ್ನು ಎತ್ತಿಕೊಂಡು ಕಿಟಕಿಯೊಂದರ ಮೂಲಕ ಸುರಕ್ಷಿತವಾಗಿ ಹೊರಬಂದಿದ್ದಾರೆ.

ಒಬ್ಬಂಟಿಯಾಗಿ ಕಾರ್ಯಾಚರಣೆ ನಡೆಸಿದ ಬೊಸ್ಟಿಕ್ ತೀವ್ರವಾಗಿ ಗಾಯಗೊಂಡಿದ್ದರು ಎಂದು ಪೊಲೀಸ್ ಇಲಾಖೆ ಹೇಳಿದೆ. ಹೊಗೆಯನ್ನು ಉಸಿರಾಡಿದ್ದರಿಂದ ಉಸಿರಾಟದ ಸಮಸ್ಯೆಗೆ ಸಿಲುಕಿದ್ದರು ಮತ್ತು ಅವರ ಬಲಗೈ ಮೇಲೆ ಹರಿತವಾದ ಗಾಯವಾಗಿತ್ತು. ಬೊಸ್ಟಿಕ್ ರನ್ನು ಕೂಡಲೇ ಆಸ್ಪತ್ರೆಗೆ ಸೇರಿಸಲಾಗಿತ್ತು ಮತ್ತು ಅವರಿಗ ಸ್ವಸ್ಥರಾಗಿ ಹೊರಬಂದಿದ್ದಾರೆ ಎಂದು ಪೊಲೀಸ್ ಇಲಾಖೆ ಹೇಳಿದೆ. ಸೋಜಿಗದ ಸಂಗತಿಯೆಂದರೆ, 6-ವರ್ಷದ ಬಾಲಕಿಗೆ ಪವಾಡಸದೃಶವಾಗಿ ಯಾವುದೇ ಗಾಯವಾಗಿಲ್ಲ.

‘ನಿಕೊಲಾಸ್ ಬೊಸ್ಟಿಕ್ ಪ್ರದರ್ಶಿಸಿದ ಧೈರ್ಯ ಮತ್ತು ಪರಾಕ್ರಮ ಐವರ ಪ್ರಾಣಗಳನ್ನು ಉಳಿಸಿದೆ. ಅವರ ನಿಸ್ವಾರ್ಥಾ ಮನೋಭಾವ ನಮ್ಮೆಲ್ಲರಿಗೆ ಪ್ರೇರಣೆಯಾಗಿದೆ. ಅವರ ಸಾಹಸ, ಸಂಕಲ್ಪ, ಬದ್ಧತೆ ಮತ್ತು ಅಂಥ ಅಪಾಯಕಾರಿ ಪರಿಸ್ಥಿತಿಯಲ್ಲೂ ಪ್ರದರ್ಶಿಸಿದ ಸ್ಥಿತಪ್ರಜ್ಞತೆ ಅನುಕರಣೀಯ. ಲಫಾಯೇಟ್ ಪೊಲೀಸ್ ಇಲಾಖೆ, ಲಫಾಯೇಟ್ ಅಗ್ನಿಶಾಮಕ ದಳ, ಮತ್ತು ಗೌರವಾನ್ವಿತ ಮೇಯರ್ ಟೋನಿ ರೋಜ್ವಾರ್ಸ್ಕಿ ಮೊದಲಾದವರೆಲ್ಲ ಬೊಸ್ಟಿಕ್ ಅವರಿಗೆ ಚಿರಋಣಿಯಾಗಿದ್ದಾರೆ ಮತ್ತು ಅವರನ್ನು ಇಷ್ಟರಲ್ಲೇ ಸಾರ್ವಜನಿಕವಾಗಿ ಸನ್ಮಾನಿಸಲಾಗುವುದು’ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಏತನ್ಮಧ್ಯೆ, ಇಂಟರ್ ನೆಟ್ ಬಳಕೆದಾರರು, ಪಿಜ್ಜಾ ಡೆಲಿವರಿ ಬಾಯ್ ಅವರ ಪರಾಕ್ರಮವನ್ನು ಕೊಂಡಾಡುತ್ತಿದ್ದಾರೆ. ‘ಪಿಜ್ಜಾ ಡೆಲಿವರಿಗಾಗಿ ಪ್ರತಿದಿನ ಹಿರೋ ಆಗಿರುವ ಅವರು ಈ ಕೆಲಸದಲ್ಲಿ ಸೂಪರ್ ಹೀರೋ,’ ಅಂತ ಒಬ್ಬರು ಬರೆದರೆ ಮತ್ತೊಬ್ಬರು ‘ಬೊಸ್ಟಿಕ್ ಸಾಹಸಗಾಥೆಯನ್ನು ಮುಂದೊಂದು ದಿನ ಅವರ ಮೊಮ್ಮಗನಿಗೆ ಹೇಳಲಾಗುತ್ತದೆ. ಹೀರೋಗೋಸ್ಕರ ಬರೆದಿರುವ ಸ್ಕ್ರಿಪ್ಟ್ ಇದಾಗಿದೆ’ ಎಂದು ಬರೆದುಕೊಂಡಿದ್ದಾರೆ. ಮತ್ತೊಬ್ಬರು, ‘ಶಹಬ್ಬಾಸ್ ಪಿಜ್ಜಾ ಡೆಲಿವರಿ ಮ್ಯಾನ್!’ ಅಂತ ಹೇಳಿದ್ದಾರೆ.

ಮನೆಗೆ ಬೆಂಕಿ ಹೊತ್ತಿಕೊಂಡಿದ್ದು ಹೇಗೆ ಅಂತ ಇದುವರೆಗೆ ಗೊತ್ತಾಗಿಲ್ಲ.

Published On - 2:03 pm, Tue, 19 July 22