AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Rishi Sunak: ಬ್ರಿಟನ್ ಪ್ರಧಾನಿ ರೇಸ್​ನಲ್ಲಿ ಮುನ್ನಡೆ ಸಾಧಿಸಿದ ರಿಷಿ ಸುನಕ್​ಗೆ 115 ಶಾಸಕರ ಬೆಂಬಲ

ರಿಷಿ ಸುನಕ್ 115 ಮತಗಳನ್ನು ಪಡೆದು ಕನ್ಸರ್ವೇಟಿವ್ ಪಕ್ಷದ ನಾಯಕತ್ವ ಮತ್ತು ಬ್ರಿಟನ್ ಪ್ರಧಾನಿ ಸ್ಥಾನದ ಸ್ಪರ್ಧೆಯ ಮೇಲಿನ ಹಿಡಿತವನ್ನು ಬಿಗಿಗೊಳಿಸಿದ್ದಾರೆ. ಇಂದು ಮುಂದಿನ ಸುತ್ತಿನ ಚುನಾವಣೆ ನಡೆಯುವ ಸಾಧ್ಯತೆಯಿದೆ.

Rishi Sunak: ಬ್ರಿಟನ್ ಪ್ರಧಾನಿ ರೇಸ್​ನಲ್ಲಿ ಮುನ್ನಡೆ ಸಾಧಿಸಿದ ರಿಷಿ ಸುನಕ್​ಗೆ 115 ಶಾಸಕರ ಬೆಂಬಲ
ರಿಷಿ ಸುನಕ್Image Credit source: NDTV
TV9 Web
| Edited By: |

Updated on:Jul 19, 2022 | 9:55 AM

Share

ಲಂಡನ್: ಬ್ರಿಟನ್‌ನ ಮುಂದಿನ ಪ್ರಧಾನಿಯನ್ನು ನಿರ್ಧರಿಸಲು ಕನ್ಸರ್ವೇಟಿವ್ ಪಕ್ಷದ (Conservative Patry) ಸಂಸದರು ಸೋಮವಾರ ನಡೆಸಿದ 3ನೇ ಸುತ್ತಿನ ಮತದಾನದಲ್ಲಿ ಬ್ರಿಟನ್​ನ ಮಾಜಿ ಹಣಕಾಸು ಸಚಿವ ರಿಷಿ ಸುನಕ್ (Rishi Sunak) ಮುನ್ನಡೆ ಸಾಧಿಸಿದ್ದಾರೆ. ರಿಷಿ ಸುನಕ್ 115 ಮತಗಳನ್ನು ಪಡೆದು ಕನ್ಸರ್ವೇಟಿವ್ ಪಕ್ಷದ ನಾಯಕತ್ವ ಮತ್ತು ಬ್ರಿಟನ್ ಪ್ರಧಾನಿ ಸ್ಥಾನದ ಸ್ಪರ್ಧೆಯ ಮೇಲಿನ ಹಿಡಿತವನ್ನು ಬಿಗಿಗೊಳಿಸಿದ್ದಾರೆ. ಇಂದು ಮುಂದಿನ ಸುತ್ತಿನ ಚುನಾವಣೆ ನಡೆಯುವ ಸಾಧ್ಯತೆಯಿದೆ.

ಬ್ರಿಟನ್ ಪ್ರಧಾನಿ ಹುದ್ದೆಗೆ ಪೈಪೋಟಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ರಿಷಿ ಸುನಕ್ 115 ಟೋರಿ ಶಾಸಕರ ಬೆಂಬಲವನ್ನು ಗಳಿಸಿದ್ದಾರೆ. ಅವ ಬಳಿಕ ಪೆನ್ನಿ ಮೊರ್ಡಾಂಟ್ 82, ಲಿಜ್ ಟ್ರಸ್ 71, ಕೆಮಿ ಬಡೆನೋಚ್ 58 ಮತ್ತು ಟಾಮ್ ತುಗೆಂಧತ್ 31 ಮತಗಳನ್ನು ಗಳಿಸಿದ್ದಾರೆ ಎಂದು ಪಕ್ಷ ಘೋಷಿಸಿದೆ. ರೇಸ್​ನಲ್ಲಿ ಇಬ್ಬರು ಅಭ್ಯರ್ಥಿಗಳು ಮಾತ್ರ ಉಳಿಯುವವರೆಗೆ ಸಂಸದರು ಮತ ಚಲಾಯಿಸುತ್ತಾರೆ. ವಿಜೇತರನ್ನು ಪಕ್ಷದ ಸದಸ್ಯರು ನಿರ್ಧರಿಸುತ್ತಾರೆ.

ಇದನ್ನೂ ಓದಿ: Rishi Sunak: ‘ಅಭಿಯಾನ’ ಪದದಲ್ಲಿನ ತಪ್ಪಾದ ಕಾಗುಣಿತದಿಂದಾಗಿ ವೈರಲ್ ಆದ ರಿಷಿ ಸುನಕ್

ವಿದೇಶಾಂಗ ಕಾರ್ಯದರ್ಶಿ ಟ್ರಸ್ ಅವರ ಅಂತರ ಕಡಿಮೆಯಾಗಿದ್ದು, ಮುಂದಿನ ದಿನಗಳಲ್ಲಿ ಬಡೆನೋಚ್ ಅವರ ಬೆಂಬಲಿಗರಿಂದ ಹೆಚ್ಚಿನ ಬೆಂಬಲವನ್ನು ನಿರೀಕ್ಷಿಸಬಹುದಾಗಿದೆ. ಪ್ರಧಾನಿ ಬೋರಿಸ್ ಜಾನ್ಸನ್ ಜುಲೈ 7ರಂದು ಕನ್ಸರ್ವೇಟಿವ್ ಪಕ್ಷದ ನಾಯಕತ್ವವನ್ನು ತ್ಯಜಿಸುವುದಾಗಿ ಘೋಷಿಸಿದ್ದರು. ಸೆಪ್ಟೆಂಬರ್ 5ರಂದು ಹೊಸ ನಾಯಕನ ಆಯ್ಕೆಯಾಗುವವರೆಗೂ ಅವರು ಪ್ರಧಾನಿಯಾಗಿ ಮುಂದುವರಿಯುತ್ತಾರೆ.

ಬ್ರಿಟನ್ ಪ್ರಧಾನಿ ಹುದ್ದೆಗೆ ರಿಷಿ ಸುನಕ್ ಆಯ್ಕೆಗೆ ಈಗಿನ ಹಂಗಾಮಿ ಪ್ರಧಾನಿ ಬೋರಿಸ್ ಜಾನ್ಸನ್ ವಿರೋಧ ವ್ಯಕ್ತಪಡಿಸಿದ್ದಾರೆ ಎಂದು ಕೂಡ ವರದಿಯಾಗಿದೆ. ಯಾರನ್ನು ಬೇಕಾದರೂ ಬೆಂಬಲಿಸಿ ಆದರೆ ರಿಷಿ ಸುನಕ್​​ನನ್ನು ಮಾತ್ರ ಆಯ್ಕೆ ಮಾಡಬೇಡಿ ಎಂದು ಬೋರಿಸ್ ಜಾನ್ಸನ್ ತಮ್ಮ ಬೆಂಬಲಿಗರಿಗೆ ಸೂಚಿಸಿದ್ದಾರೆ ಎನ್ನಲಾಗಿದೆ. ತಾವು ತಮ್ಮ ಪಕ್ಷದ ಸದಸ್ಯರಿಂದಲೇ ಬೆಂಬಲ ಕಳೆದುಕೊಳ್ಳುವುದಕ್ಕೆ ರಿಷಿ ಸುನಕ್ ಕಾರಣ ಎಂದು ಅವರು ದೂಷಿಸಿದ್ದು, ರಿಷಿ ಸುನಕ್ ಬ್ರಿಟನ್ ಪ್ರಧಾನಿಯಾಗಬಾರದೆಂದು ಬೋರಿಸ್ ಜಾನ್ಸನ್ ತಮ್ಮ ಬೆಂಬಲಿಗರಲ್ಲಿ ಹೇಳಿದ್ದಾರೆ ಎಂದು ಟೈಮ್ಸ್ ವರದಿ ಪ್ರಕಟಿಸಿದೆ. ಪ್ರಧಾನಿ ಹುದ್ದೆಗೆ ವಿದೇಶಾಂಗ ಕಾರ್ಯದರ್ಶಿ ಲಿಜ್ ಟ್ರಸ್ ಅವರು ನೇಮಕವಾಗಬೇಕೆಂಬುದು ಬೋರಿಸ್ ಅಭಿಪ್ರಾಯವಾಗಿದೆ ಎನ್ನಲಾಗಿದೆ.

Published On - 9:02 am, Tue, 19 July 22

Follow Us
TV9 Web
TV9 Web

TV9 Kannada

Read More
ಮಲ್ಲೇಶ್ವರಂ ಮಂತ್ರಿ ಮಾಲ್ ಮೆಟ್ರೋ ನಿಲ್ದಾಣದಲ್ಲಿ ಜೀವ ಭಯ
ಮಲ್ಲೇಶ್ವರಂ ಮಂತ್ರಿ ಮಾಲ್ ಮೆಟ್ರೋ ನಿಲ್ದಾಣದಲ್ಲಿ ಜೀವ ಭಯ
ಸಂಸತ್ ಭವನದಲ್ಲಿ ಮಹನೀಯರ ಫೋಟೋ ಜತೆ ಟಿಪ್ಪು ಫೋಟೋ ಇಡಬೇಕು: ವಾಟಾಳ್ ನಾಗರಾಜ್
ಸಂಸತ್ ಭವನದಲ್ಲಿ ಮಹನೀಯರ ಫೋಟೋ ಜತೆ ಟಿಪ್ಪು ಫೋಟೋ ಇಡಬೇಕು: ವಾಟಾಳ್ ನಾಗರಾಜ್
ಗಾನವಿ ಬುಸ್ ಅಂದ್ರೆ ಭಯ ಬೀಳ್ತಾರಾ ತಾಂಡವ್ ರಾಮ್?
ಗಾನವಿ ಬುಸ್ ಅಂದ್ರೆ ಭಯ ಬೀಳ್ತಾರಾ ತಾಂಡವ್ ರಾಮ್?
ರಾಜ್​ ಸಂಬಂಧಿ ಮನೆಯಲ್ಲಿ ಸ್ಫೋಟ: ಸ್ಥಳ ಮಹಜರು ವೇಳೆ ಹೈಡ್ರಾಮಾ
ರಾಜ್​ ಸಂಬಂಧಿ ಮನೆಯಲ್ಲಿ ಸ್ಫೋಟ: ಸ್ಥಳ ಮಹಜರು ವೇಳೆ ಹೈಡ್ರಾಮಾ
ಎನ್​ಡಿಎ ಪರೀಕ್ಷೆಯಲ್ಲಿ ಐತಿಹಾಸಿಕ ಸಾಧನೆ ಮಾಡಿದ ಭದ್ರಾವತಿಯ ಶ್ರೇಯಾ
ಎನ್​ಡಿಎ ಪರೀಕ್ಷೆಯಲ್ಲಿ ಐತಿಹಾಸಿಕ ಸಾಧನೆ ಮಾಡಿದ ಭದ್ರಾವತಿಯ ಶ್ರೇಯಾ
ಬರ ಪರಿಹಾರದಲ್ಲಿ ವ್ಯತ್ಯಾಸ: ಆಕ್ರೋಶ; ಸರ್ಕಾರಕ್ಕೆ ಚೆಕ್ ಬರೆದ ಅನ್ನದಾತರು
ಬರ ಪರಿಹಾರದಲ್ಲಿ ವ್ಯತ್ಯಾಸ: ಆಕ್ರೋಶ; ಸರ್ಕಾರಕ್ಕೆ ಚೆಕ್ ಬರೆದ ಅನ್ನದಾತರು
ರೈಲಿನಡಿ ಬಿದ್ದು ಸಾಯುತ್ತಿದ್ದ ಮಹಿಳೆಯ ಜೀವ ಕಾಪಾಡಿದ ಆರ್​ಪಿಎಫ್​ ಸಿಬ್ಬಂದಿ
ರೈಲಿನಡಿ ಬಿದ್ದು ಸಾಯುತ್ತಿದ್ದ ಮಹಿಳೆಯ ಜೀವ ಕಾಪಾಡಿದ ಆರ್​ಪಿಎಫ್​ ಸಿಬ್ಬಂದಿ
ದರ್ಶನ್ ಜೈಲಿನಿಂದ ಬಿಡುಗಡೆಯಾಗಲಿ ಎಂದು ಹಾಸನಾಂಬೆಗೆ ಹರಕೆ ಹೊತ್ತ ಅಭಿಮಾನಿ
ದರ್ಶನ್ ಜೈಲಿನಿಂದ ಬಿಡುಗಡೆಯಾಗಲಿ ಎಂದು ಹಾಸನಾಂಬೆಗೆ ಹರಕೆ ಹೊತ್ತ ಅಭಿಮಾನಿ
ಕೆಎಸ್‌ಆರ್‌ಟಿಸಿ ಲಗೇಜ್ ಶುಲ್ಕ ಹೆಚ್ಚಳ: ಇಂದಿನಿಂದಲೇ ಹೊಸ ದರ ಜಾರಿ
ಕೆಎಸ್‌ಆರ್‌ಟಿಸಿ ಲಗೇಜ್ ಶುಲ್ಕ ಹೆಚ್ಚಳ: ಇಂದಿನಿಂದಲೇ ಹೊಸ ದರ ಜಾರಿ
ಬಿಗ್ ಬಾಸ್ ಕನ್ನಡ: ತಾಂಡವ್, ಗಗನ್ ಸ್ನೇಹದಲ್ಲಿ ಬಿರುಕು; ಇನ್ಮುಂದೆ ಬೇರೆ ಆಟ
ಬಿಗ್ ಬಾಸ್ ಕನ್ನಡ: ತಾಂಡವ್, ಗಗನ್ ಸ್ನೇಹದಲ್ಲಿ ಬಿರುಕು; ಇನ್ಮುಂದೆ ಬೇರೆ ಆಟ