ವಿಡಿಯೋ ಕಾನ್ಫರೆನ್ಸ್ನಲ್ಲಿ ಜಾಕ್ ಮಾ ಪ್ರತ್ಯಕ್ಷ: ಆದ್ರೆ ತಾವಿರುವ ಜಾಗದ ಸುಳಿವು ಬಿಟ್ಟುಕೊಟ್ಟಿಲ್ಲ! ಹೆಚ್ಚುತ್ತಲೇ ಇವೆ ಅನುಮಾನಗಳು
ಗ್ರಾಮೀಣ ಶಿಕ್ಷಣ ತಜ್ಞರು ಏರ್ಪಡಿಸಿದ್ದ ವಾರ್ಷಿಕ ಕಾರ್ಯಕ್ರಮದಲ್ಲಿ ಜಾಕ್ ಮಾ ಶಿಕ್ಷಕರನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಈ ವೇಳೆ ಇನ್ನು ಮುಂದೆಯೂ ತಮ್ಮ ಲೋಕೋಪಕಾರಿ ಕೆಲಸ ಮುಂದುವರಿಸುವುದಾಗಿ ಹೇಳಿದ್ದಾರೆ. ಆದರೆ, ಅವರ ಬಗ್ಗೆ ಚರ್ಚೆಯಲ್ಲಿರುವ ವಿಷಯದ ಬಗ್ಗೆ ಯಾವುದೇ ಗುಟ್ಟು ಬಿಟ್ಟುಕೊಟ್ಟಿಲ್ಲ.
ಬೀಜಿಂಗ್: ಕಳೆದ ಕೆಲ ತಿಂಗಳಿಂದ ಕಾಣೆಯಾಗಿದ್ದ ಚೀನಾದ ಅತ್ಯಂತ ಶ್ರೀಮಂತ ವ್ಯಕ್ತಿ, ಅಲಿಬಾಬಾ ಸಂಸ್ಥೆಯ ಸ್ಥಾಪಕ ಜಾಕ್ ಮಾ ಬುಧವಾರ ವಿಡಿಯೋ ಕಾನ್ಫರೆನ್ಸ್ನಲ್ಲಿ ಕಾಣಿಸಿಕೊಂಡಿದ್ದಾರೆ! ಆದರೆ, ತಾವು ಇರುವ ಸ್ಥಳದ ಬಗ್ಗೆ ಅವರು ಉಲ್ಲೇಖ ಮಾಡಿಲ್ಲ.
ಗ್ರಾಮೀಣ ಶಿಕ್ಷಣ ತಜ್ಞರು ಏರ್ಪಡಿಸಿದ್ದ ವಾರ್ಷಿಕ ಕಾರ್ಯಕ್ರಮದಲ್ಲಿ ಜಾಕ್ ಮಾ ಶಿಕ್ಷಕರನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಈ ವೇಳೆ ಇನ್ನು ಮುಂದೆಯೂ ತಮ್ಮ ಲೋಕೋಪಕಾರಿ ಕೆಲಸ ಮುಂದುವರಿಸುವುದಾಗಿ ಹೇಳಿದ್ದಾರೆ. ಆದರೆ, ಅವರ ಬಗ್ಗೆ ಚರ್ಚೆಯಲ್ಲಿರುವ ವಿಷಯದ ಬಗ್ಗೆ ಯಾವುದೇ ಗುಟ್ಟು ಬಿಟ್ಟುಕೊಟ್ಟಿಲ್ಲ.
ಜಾಕ್ ಮಾ ನೇತೃತ್ವದ ಟಾಲೆಂಟ್ ಶೋ, ‘ಆಫ್ರಿಕಾ ಬ್ಯುಸಿನೆಸ್ ಹೀರೋಸ್’ನ ಅಂತಿಮ ಎಪಿಸೋಡ್ನಲ್ಲಿ ಜಾಕ್ ಮಾ ತೀರ್ಪುಗಾರರಾಗಿ ಭಾಗವಹಿಸಬೇಕಿತ್ತು. ಆದರೆ, ಆ ಕಾರ್ಯಕ್ರಮದಲ್ಲೂ ಜಾಕ್ ಮಾ ಕಾಣಿಸಿಕೊಂಡಿಲ್ಲ. ಅಲ್ಲದೆ, ‘ಆಫ್ರಿಕಾ ಬ್ಯುಸಿನೆಸ್ ಹೀರೋಸ್’ನ ವೆಬ್ಸೈಟಿನಿಂದಲೂ ಜಾಕ್ ಮಾ ಫೋಟೋಗಳನ್ನು ತೆಗೆಯಲಾಗಿದೆ. ಈ ಬೆನ್ನಲ್ಲೇ ಅವರು ಕಾಣೆ ಆಗಿರುವ ವಿಚಾರ ಹರಿದಾಡಲು ಆರಂಭಿಸಿತ್ತು.
BREAKING: Alibaba founder Jack Ma, who had not been seen in public in nearly 3 months, appears on video, saying: "We’ll meet again after the epidemic is over" pic.twitter.com/aFQyDWB7wQ
— BNO News (@BNONews) January 20, 2021
ಚೀನಾ ಕಮ್ಯುನಿಸ್ಟ್ ಸರ್ಕಾರದ ಹಣಕಾಸು ನಿರ್ವಹಣೆ ಮತ್ತು ಬ್ಯಾಂಕ್ಗಳನ್ನು ಉದ್ಯಮಿ ಜಾಕ್ ಮಾ ಕಟುವಾಗಿ ಟೀಕಿಸಿದ್ದರು. ಅಕ್ಟೋಬರ್ನಲ್ಲಿ ಶಾಂಘೈನಲ್ಲಿ ಜಾಕ್ ಮಾ ಭಾಷಣದಲ್ಲಿ, ವಾಣಿಜ್ಯ ಉದ್ಯಮ ವಲಯದಲ್ಲಿ ಹೊಸ ಆವಿಷ್ಕಾರಗಳಾಗಬೇಕು ಎಂದು ಅಭಿಪ್ರಾಯಪಟ್ಟಿದ್ದರು. ಜಾಕ್ ಮಾ ಮಾಡಿದ್ದ ಈ ಭಾಷಣವು ಚೀನಾ ಸರ್ಕಾರದ ಕೆಂಗಣ್ಣಿಗೆ ಗುರಿಯಾಗಿತ್ತು. ಕ್ರಿಸ್ಮಸ್ ಸಂದರ್ಭದಲ್ಲಿ ಅಲಿಬಾಬಾ ಸಂಸ್ಥೆಯ ಕುರಿತು ತನಿಖೆ ಪ್ರಾರಂಭ ಮಾಡಲಾಗಿತ್ತು. ಈ ಬೆನ್ನಲ್ಲೇ ಅವರು ಕಾಣೆ ಆಗಿದ್ದರು. ಇದೀಗ ಕೋಟ್ಯಧಿಪತಿ ಉದ್ಯಮಿ ಜಾಕ್ ಮಾ ವಿಡಿಯೋ ಕಾನ್ಫರೆನ್ಸ್ನಲ್ಲಿ ಕಾಣಿಸಿಕೊಂಡಿದ್ದರೂ ತಾವಿರುವ ತಾವಿನ ಬಗ್ಗೆ ಹೇಳದಿರುವುದು ಇನ್ನಷ್ಟು ಅನುಮಾನ/ ಗೊಂದಲಗಳಿಗೆ ಎಡೆಮಾಡಿ ಕೊಟ್ಟಿದೆ.
ಚೀನಾ ಕಾಯಂ ಅಧ್ಯಕ್ಷ ಜಿನ್ ಪಿಂಗ್ ಜೊತೆ ಸಂಘರ್ಷ: ಅಲಿಬಾಬಾ ಸಂಸ್ಥಾಪಕ ಜಾಕ್ ಮಾ 2 ತಿಂಗಳಿಂದ ಕಣ್ಮರೆ?