Photo Gallery: ಜಗತ್ತಿನ ದೊಡ್ಡಣ್ಣನ ಅಧಿಕಾರದ ಚುಕ್ಕಾಣಿ ಹಿಡಿದ ಜೋ ಬೈಡನ್ ಪ್ರಮಾಣವಚನ ಸಮಾರಂಭದ ಚಿತ್ರಪಟಗಳು

Updated on: Jan 21, 2021 | 1:32 PM

ಕೊರೊನಾದ ಕಾರಣದಿಂದಾಗಿ ಬಿಗಿ ಭದ್ರತೆ ಮತ್ತು ವಿಶೇಷ ಸಿದ್ಧತೆಗಳ ಮಧ್ಯೆ ಅಧ್ಯಕ್ಷರ ಪ್ರಮಾಣವಚನ ಸಮಾರಂಭವನ್ನು ಯುಎಸ್ ಪಾರ್ಲಿಮೆಂಟ್ ಕ್ಯಾಪಿಟಲ್ ಮುಂದೆ ನಡೆಸಲಾಯಿತು. ಜೋ ಬಿಡೆನ್ ಅಧ್ಯಕ್ಷರಾಗಿ ಮತ್ತು ಕಮಲಾ ಹ್ಯಾರಿಸ್ ಉಪಾಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಿದರು.

1 / 13
ಪತ್ನಿಯೊಂದಿಗೆ ಯುಎಸ್ ಪಾರ್ಲಿಮೆಂಟ್ ಕ್ಯಾಪಿಟಲ್​ಗೆ ಆಗಮಿಸಿದ ಬೈಡನ್​

ಪತ್ನಿಯೊಂದಿಗೆ ಯುಎಸ್ ಪಾರ್ಲಿಮೆಂಟ್ ಕ್ಯಾಪಿಟಲ್​ಗೆ ಆಗಮಿಸಿದ ಬೈಡನ್​

2 / 13

ಜೋ ಬೈಡನ್ ಯುನೈಟೆಡ್ ಸ್ಟೇಟ್ಸ್ ನ 46 ನೇ ಅಧ್ಯಕ್ಷರಾಗಿ ಮುಖ್ಯ ನ್ಯಾಯಮೂರ್ತಿ ಜಾನ್ ರಾಬರ್ಟ್ಸ್ ಎದುರು ಪ್ರಮಾಣವಚನ ಸ್ವೀಕರಿಸಿದರು.

3 / 13

ಯುಎಸ್ ಪಾರ್ಲಿಮೆಂಟ್ ಕ್ಯಾಪಿಟಲ್ ಹಿಲ್ ಮುಂದೆ ಕಮಲಾ ಹ್ಯಾರಿಸ್ ಅವರು ಅಮೇರಿಕದ ಉಪಾಧ್ಯಕ್ಷರಾಗಿ ಪ್ರಮಾಣವಚನ ಸ್ವೀಕರಿಸಿದರು.

4 / 13

59 ನೇ ಅಧ್ಯಕ್ಷೀಯ ಪ್ರಮಾಣವಚನ ಸಮಾರಂಭದಲ್ಲಿ ಲೇಡಿ ಗಾಗಾ ಅಮೆರಿಕಾದ ರಾಷ್ಟ್ರಗೀತೆ ಹಾಡಿದರು.

5 / 13

ಬೈಡೆನ್ ಪ್ರಮಾಣವಚನ ಸಮಾರಂಭದಲ್ಲಿ ಬರಾಕ್ ಒಬಾಮ ಅವರ ಪತ್ನಿ ಮಿಚೆಲ್ ಒಬಾಮ, ಅಮೆರಿಕದ ಮಾಜಿ ಅಧ್ಯಕ್ಷ ಜಾರ್ಜ್ ಡಬ್ಲ್ಯು. ಬುಷ್, ಹೌಸ್ ಸ್ಪೀಕರ್ ನ್ಯಾನ್ಸಿ ಪೆಲೋಸಿ ಹಾಜರಿದ್ದರು.

6 / 13

ಜೋ ಬೈಡೆನ್ ಪ್ರಮಾಣವಚನ ಸ್ವೀಕರಿಸಿದ ನಂತರ, ಅವರನ್ನು ಪತ್ನಿ ಜಿಲ್ ಮತ್ತು ಮಕ್ಕಳು ತಬ್ಬಿಕೊಂಡು ಸಂತಸ ವ್ಯಕ್ತಪಡಿಸಿದರು.

7 / 13

ಅಧ್ಯಕ್ಷ ಜೋ ಬೈಡನ್​ ಹಾಗೂ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್​

8 / 13

ಟ್ರಂಪ್​ ಮಾಡಿದ ಕುತಂತ್ರಗಳಿಂದ ಜೋ ಬೈಡನ್, ಅಧ್ಯಕ್ಷಗಿರಿಗೆ ಏರಲು ಸಾಕಷ್ಟ ಸವಾಲುಗಳನ್ನು ಎದುರಿಸಬೇಕಾಯಿತು.

9 / 13

ಬೈಡೆನ್ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಯುಎಸ್ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಬಾಗಿಯಾಗಿದ್ದರು.

10 / 13

ಬೈಡೆನ್ ಪ್ರಮಾಣವಚನಕ್ಕೆ ಟ್ರಂಪ್ ಹಾಜರಾಗದೆ ಬುಧವಾರ ಬೆಳಿಗ್ಗೆ ಫ್ಲೋರಿಡಾಕ್ಕೆ ತೆರಳಿದರು. 152 ವರ್ಷಗಳಲ್ಲಿ ಮೊದಲ ಬಾರಿಗೆ, ಅಮೆರಿಕಾದ ಅಧ್ಯಕ್ಷರು ತಮ್ಮ ಉತ್ತರಾಧಿಕಾರಿಯ ಪ್ರಮಾಣವಚನಕ್ಕೆ ಗೈರುಹಾಜರಾಗಿದ್ದರು.

11 / 13

ವಾಷಿಂಗ್ಟನ್‌ನ ಆರ್ಚ್‌ಬಿಷಪ್ ಅವರೊಂದಿಗೆ ಜೋ ಬೈಡೆನ್ ಮತ್ತು ಅವರ ಪತ್ನಿ ಜಿಲ್, ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಮತ್ತು ಅವರ ಪತಿ ಡೌಗ್ ಎಮ್ಹಾಫ್

12 / 13

ಬಾವುಟಗಳಿಂದ ಸಿಂಗಾರಗೊಂಡ ಯುಎಸ್ ಪಾರ್ಲಿಮೆಂಟ್ ಕ್ಯಾಪಿಟಲ್ ಹಿಲ್

13 / 13

ಪ್ರಮಾಣವಚನ ಸಮಾರಂಭಕ್ಕೆ ಸಿಂಗಾರಗೊಂಡ ಯುಎಸ್ ಪಾರ್ಲಿಮೆಂಟ್ ಕ್ಯಾಪಿಟಲ್ ಹಿಲ್

Published On - 1:30 pm, Thu, 21 January 21

Loading...
Unable to load recommendations.
Follow Us