ಶ್ವೇತಭವನದಿಂದ ನಿರ್ಗಮನಕ್ಕೂ ಮುನ್ನ ಅಧ್ಯಕ್ಷ ಜೋ ಬೈಡನ್ ತಮ್ಮ ಪುತ್ರ ಹಂಟರ್ ಬೈಡನ್ಗೆ ಭರ್ಜರಿ ಗಿಫ್ಟ್ ನೀಡಿದ್ದಾರೆ. ಅಕ್ರಮವಾಗಿ ಬಂದೂಕು ಖರೀದಿಗೆ ಸಂಬಂಧಿಸಿದಂತೆ ತಮ್ಮ ಮಗನಿಗೆ ಕಾನೂನಾತ್ಮಕವಾಗಿ ಕ್ಷಮಾಧಾನ ನೀಡಿದ್ದಾರೆ. ಇತ್ತೀಚೆಗೆ ಹಂಟರ್ ಬಂದೂಕು ಅಪರಾಧ ಮತ್ತು ತೆರಿಗೆ ಸಂಬಂಧಿತ ಪ್ರಕರಣದಲ್ಲಿ ಶಿಕ್ಷೆಗೊಳಗಾಗಿದ್ದರು.
ನಾನು ನನ್ನ ಮಗ ಹಂಟರ್ ಕ್ಷಮಾದಾನಕ್ಕೆ ಇಂದು ಸಹಿ ಹಾಕಿದ್ದೇನೆ. ನಾನು ಅಧಿಕಾರ ವಹಿಸಿಕೊಂಡ ದಿನದಿಂದ ಇದುವರೆಗೆ ನ್ಯಾಯಾಂಗದ ನಿರ್ಧಾರದಲ್ಲಿ ಮಧ್ಯಪ್ರವೇಶಿಸುವುದಿಲ್ಲ ಎಂಬುದಾಗಿ ಹೇಳಿದ್ದೆ, ಇಲ್ಲಿಯವರೆಗೂ ಆದೇ ರೀತಿ ನಡೆದುಕೊಂಡಿದ್ದೇನೆ. ಮಗನನ್ನು ಅನ್ಯಾಯವಾಗಿ ವಿಚಾರಣೆಗೆ ಒಳಪಡಿಸಿದಾಗಲೂ ನಾನೇನು ಮಾತನಾಡಲಿಲ್ಲ ಎಂದು ಹೇಳಿದ್ದಾರೆ.
ಎರಡು ಪ್ರಕರಣಗಳಲ್ಲಿ ದೋಷಿ ಎಂದು ಸಾಬೀತಾದ ನಂತರ ಡಿಸೆಂಬರ್ 12 ಮತ್ತು 16 ರಂದು ಶಿಕ್ಷೆ ವಿಧಿಸಲು ನಿರ್ಧರಿಸಲಾಗಿತ್ತು. ಹಂಟರ್ ಬೈಡನ್ ಅವರ ಕ್ರಿಮಿನಲ್ ಪ್ರಕರಣಗಳಲ್ಲಿ ಕ್ಷಮಾದಾನದ ಕುರಿತು ಭಾನುವಾರ ರಾತ್ರಿ ಅವರ ವಕೀಲರು ಔಪಚಾರಿಕವಾಗಿ ನ್ಯಾಯಮೂರ್ತಿಗಳಿಗೆ ಸೂಚನೆ ನೀಡಿದರು.
ಮತ್ತಷ್ಟು ಓದಿ: ಡೆಮಾಕ್ರೆಟಿಕ್ ಸಮಾವೇಶದಲ್ಲಿ ವೇದಿಕೆ ಮೇಲೆ ಕಣ್ಣೀರು ಹಾಕಿದ ಅಮೆರಿಕ ಮಾಜಿ ಅಧ್ಯಕ್ಷ ಜೋ ಬೈಡನ್
ಪುತ್ರ ಹಂಟರ್ ಅವರು ವಿದೇಶಗಳಲ್ಲಿ ಹೊಂದಿರುವ ಉದ್ಯಮದೊಂದಿಗೆ ಅಧ್ಯಕ್ಷ ಬೈಡನ್ ಹೊಂದಿರುವ ನಂಟಿಗೆ ಸಂಬಂಧಿಸಿ ಈ ವಾಗ್ದಂಡನೆ ನಿಲುವಳಿ ಮಂಡಿಸಲಾಗಿತ್ತು. ಹಂಟರ್ ಓರ್ವ ಮಾದಕ ವ್ಯಸನಿಯಾಗಿದ್ದಾನೆ. ಆತನನ್ನು ಕ್ಷಮಿಸುವುದಾಗಲಿ ಅಥವಾ ಶಿಕ್ಷೆಯನ್ನು ಕಡಿಮೆ ಮಾಡುವುದಾಗಲಿ ಮಾಡುವುದಿಲ್ಲ ಎಂದು ನೂತನ ಚುನಾಯಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೇರಿದಂತೆ ರಿಪಬ್ಲಿಕನ್ ಪಕ್ಷದ ನಾಯಕರು ಹೇಳಿದ್ದರು.
ಪ್ರಕರಣದ ಬಗ್ಗೆ ಮಾಹಿತಿ
ಅಕ್ರಮವಾಗಿ ಬಂದೂಕು ಖರೀದಿಸಿದ್ದ ಪ್ರಕರಣದಲ್ಲಿ ಅಮೆರಿಕ ಅಧ್ಯಕ್ಷ ಜೋ ಬೈಡನ್ ಪುತ್ರ ಹಂಟರ್ ಬೈಡನ್ ವಿರುದ್ಧ ಸೆಪ್ಟೆಂಬರ್ 15,2023ರಲ್ಲಿ ದೋಷಾರೋಪ ಪಟ್ಟಿ ಸಿದ್ಧಪಡಿಸಲಾಗಿತ್ತು. ಡೆಲವೇರ್‌ನಲ್ಲಿ ಕೋಲ್ಟ್ ರಿವಾಲ್ವರ್ ಖರೀದಿಸಿದ್ದ ಸಮಯದಲ್ಲಿ ತಾನು ಡ್ರಗ್ಸ್ ಬಳಸುತ್ತಿರಲಿಲ್ಲ ಎಂದು ಹಂಟರ್ ಸುಳ್ಳು ಹೇಳಿಕೆ ನೀಡಿದ್ದರು ಎಂದು ಎರಡನೇ ದೋಷಾರೋಪ ಸಲ್ಲಿಸಲಾಗಿತ್ತು.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ