AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವ್ಯಕ್ತಿಯೊಬ್ಬ ಹೋಟೆಲ್​ಗಳಲ್ಲಿ ಬಳಸಿದ ಕಾಂಡೋಮ್, ಸತ್ತ ಜಿರಳೆಗಳನ್ನು ಇಡುತ್ತಿದ್ದುದೇಕೆ?

ಚೀನಾದ ಈ ವ್ಯಕ್ತಿಯೊಬ್ಬ ಹೋಟೆಲ್​ಗಳಿಗೆ ವಂಚನೆ ಮಾಡಿರುವ ಪ್ರಕರಣದಲ್ಲಿ ಬಂಧಿಸಲಾಗಿದೆ. ಆತ ಈಗಾಗಲೇ 63 ಹೋಟೆಲ್​ಗಳಿಗೆ ವಂಚಿಸಿದ್ದಾನೆ. ಹೋಟೆಲ್​ಗಳಿಗೆ ಹೋಗಿ ಬಳಸಿದ ಕಾಂಡೋಮ್, ಕೆಲವೊಮ್ಮೆ ಸತ್ತ ಜಿರಳೆಗಳು ಇನ್ನೂ ಕೆಲವೊಮ್ಮೆ ಕೂದಲುಗಳಿವೆ ಎಂದು ಶುಚಿತ್ವದ ಬಗ್ಗೆ ದೂರು ನೀಡಿ ಫ್ರೀಯಾಗಿ ಉಳಿಯುತ್ತಿದ್ದ ಎನ್ನಲಾಗಿದೆ.

ವ್ಯಕ್ತಿಯೊಬ್ಬ ಹೋಟೆಲ್​ಗಳಲ್ಲಿ ಬಳಸಿದ ಕಾಂಡೋಮ್, ಸತ್ತ ಜಿರಳೆಗಳನ್ನು ಇಡುತ್ತಿದ್ದುದೇಕೆ?
ಜಿರಳೆ
ನಯನಾ ರಾಜೀವ್
|

Updated on:Dec 01, 2024 | 11:40 AM

Share

ಚೀನಾದ ಈ ವ್ಯಕ್ತಿಯೊಬ್ಬ ಹೋಟೆಲ್​ಗಳಿಗೆ ವಂಚನೆ ಮಾಡಿರುವ ಪ್ರಕರಣದಲ್ಲಿ ಬಂಧಿಸಲಾಗಿದೆ. ಆತ ಈಗಾಗಲೇ 63 ಹೋಟೆಲ್​ಗಳಿಗೆ ವಂಚಿಸಿದ್ದಾನೆ. ಹೋಟೆಲ್​ಗಳಿಗೆ ಹೋಗಿ ಬಳಸಿದ ಕಾಂಡೋಮ್, ಕೆಲವೊಮ್ಮೆ ಸತ್ತ ಜಿರಳೆಗಳು ಇನ್ನೂ ಕೆಲವೊಮ್ಮೆ ಕೂದಲುಗಳಿವೆ ಎಂದು ಶುಚಿತ್ವದ ಬಗ್ಗೆ ದೂರು ನೀಡಿ ಫ್ರೀಯಾಗಿ ಉಳಿಯುತ್ತಿದ್ದ ಎನ್ನಲಾಗಿದೆ.

ಕಾಲೇಜು ಶುಲ್ಕವನ್ನು ಪಾವತಿಸಲು ಕೂಡ ಅವನ ಬಳಿ ಹಣವಿರಲಿಲ್ಲ, ಹಾಗಾಗಿ ಹಾಸ್ಟೆಲ್​ನಲ್ಲಿರುವುದು ಕನಸಿನ ಮಾತು.  ದಿನಕ್ಕೊಂದು ಹೋಟೆಲ್​ಗಳಿಗೆ ಹೋಗಿ ಇದೇ ರೀತಿ ವಂಚಿಸಿ ಫ್ರೀಯಾಗಿಯೇ ಉಳಿದುಕೊಳ್ಳುತ್ತಿದ್ದ. 10 ತಿಂಗಳ ಅವಧಿಯಲ್ಲಿ 300ಕ್ಕೂ ಹೆಚ್ಚು ಹೋಟೆಲ್​ಗಳಿಗೆ ಈತ ವಂಚಿಸಿದ್ದಾನೆ. ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ (SCMP) ವರದಿ ಮಾಡಿದೆ. ಹಾಸ್ಟೆಲ್​ನಲ್ಲಿ ಉಳಿದುಕೊಳ್ಳಲು ಹಣವಿಲ್ಲದ ಕಾರಣ ಈ ದಾರಿ ಹಿಡಿದಿದ್ದ. ಆತ ಇಲ್ಲಿಯವರೆಗೆ 4,39,700 ರೂ. ವಂಚಿಸಿದ್ದಾನೆ.

ಝೆಜಿಯಾಂಗ್ ಪ್ರಾಂತ್ಯದ ಲಿನ್ಹೈನಲ್ಲಿನ ಪೊಲೀಸರು, ಜಿಯಾಂಗ್ ಕೆಲವೊಮ್ಮೆ ಒಂದೇ ದಿನದಲ್ಲಿ ಅನೇಕ ಹೋಟೆಲ್‌ಗಳಿಗೆ ಹೋಗುತ್ತಿದ್ದ, ಅವರ ಯೋಜನೆಯನ್ನು ಕಾರ್ಯಗತಗೊಳಿಸುತ್ತಿದ್ದ. ಶುಚಿತ್ವದ ಬಗ್ಗೆ ದೂರು ನೀಡಿ ಒಮ್ಮೆ ಕೂದಲಿದೆ, ಮತ್ತೊಮ್ಮೆ ಯಾವುದೋ ಕೀಟವಿದೆ ಹೀಗೆ ಹತ್ತು ಹಲವಾರು ಕಾರಣ ನೀಡಿ ಅಂದು ಹೋಟೆಲ್​ನ ಬಿಲ್ ಪಾವತಿಸದೆ ಹೋಗುತ್ತಿದ್ದ.

ಮತ್ತಷ್ಟು ಓದಿ: Viral : ನಡುರಸ್ತೆಯಲ್ಲೇ ಅಪ್ಪ ಮಗಳ ಕ್ಯೂಟ್ ಡಾನ್ಸ್, ಎಷ್ಟು ಚೆಂದ ನೋಡಿ

ಒಂದು ದಿನ ಇದೇ ರೀತಿ ಘಟನೆ ಹೋಟೆಲ್​ವೊಂದರಲ್ಲಿ ನಡೆದಾಗ ಅಲ್ಲಿನ ಸಿಬ್ಬಂದಿ ಅನುಮಾನ ವ್ಯಕ್ತಪಡಿಸಿದ್ದರು. ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದರು. ಅವರು ಬಂದು ತಪಾಸಣೆ ನಡೆಸಿದಾಗ ಆತನ ಬ್ಯಾಗ್​ನಲ್ಲಿ 23 ಪ್ಯಾಕೆಟ್​ಗಳಿದ್ದವು, ಅದರಲ್ಲಿ ಕೂದಲು, ಜಿರಳೆಗಳಿದ್ದವು. ಇದು ಪ್ರದೇಶದಾದ್ಯಂತ ಮಧ್ಯಮ ಶ್ರೇಣಿಯ ಹೋಟೆಲ್‌ಗಳನ್ನು ಗುರಿಯಾಗಿಸಿಕೊಂಡಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 11:34 am, Sun, 1 December 24

ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ