ಡೆಮಾಕ್ರೆಟಿಕ್ ಸಮಾವೇಶದಲ್ಲಿ ವೇದಿಕೆ ಮೇಲೆ ಕಣ್ಣೀರು ಹಾಕಿದ ಅಮೆರಿಕ ಮಾಜಿ ಅಧ್ಯಕ್ಷ ಜೋ ಬೈಡನ್
ಅಮೆರಿಕದ ಮಅಜಿ ಅಧ್ಯಕ್ಷ ಜೋ ಬೈಡನ್ ವೇದಿಕೆ ಮೇಲೆ ಕಣ್ಣೀರು ಹಾಕಿದ್ದಾರೆ. ತನ್ನ ಮಗಳು ಆಶ್ಲೇಯನ್ನು ಪರಿಚಯಿಸಿ ಬಳಿಕ ಕಣ್ಣೀರು ಹಾಕಿದರು, ಅವರ ಮಗಳು ಆಶ್ಲೇ ತಂದೆಯನ್ನು ತಬ್ಬಿಕೊಂಡು ಸಮಾಧಾನಪಡಿಸಿದರು. ಬೈಡನ್ ಅವರಿಗೆ ಇದು ಕಹಿ ಕ್ಷಣವೇ ಎನ್ನುವ ಪ್ರಶ್ನೆಯನ್ನು ಕೇಳಲಾಯಿತು ಅದಕ್ಕೆ ಪ್ರತಿಕ್ರಿಯಿಸಿದ ಅವರು ಇದು ಸ್ಮರಣೀಯ ಕ್ಷಣ ಎಂದು ಉತ್ತರಿಸಿದರು.
ಡೆಮಾಕ್ರೆಟಿಕ್ ಸಮಾವೇಶದಲ್ಲಿ ಅಮೆರಿಕದ ಮಾಜಿ ಅಧ್ಯಕ್ಷ ಜೋ ಬೈಡನ್(Joe Biden) ವೇದಿಕೆ ಮೇಲೆ ಕಣ್ಣೀರು ಹಾಕಿದ್ದಾರೆ. ಒಂದು ತಿಂಗಳ ಹಿಂದಿನವರೆಗೆ ಅವರೇ ಅಧ್ಯಕ್ಷೀಯ ಚುನಾವಣೆಯ ಅಭ್ಯರ್ಥಿಯಾಗಿದ್ದರು, ಇದೀಗ ಆಯ್ಕೆ ಬದಲಾಗಿದೆ. ಪಕ್ಷದ ಎಲ್ಲರ ಒತ್ತಡದಿಂದಾಗಿ ಅವರು ಸ್ಪರ್ಧೆಯಿಂದ ಹಿಂದಕ್ಕೆ ಸರಿದು ಕಮಲಾ ಹ್ಯಾರಿಸ್ಗೆ ಸ್ಥಾನವನ್ನು ಬಿಟ್ಟುಕೊಟ್ಟಿದ್ದಾರೆ. ಅವರು ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ.
ತನ್ನ ಮಗಳು ಆಶ್ಲೇಯನ್ನು ಪರಿಚಯಿಸಿ ಬಳಿಕ ಕಣ್ಣೀರು ಹಾಕಿದರು, ಅವರ ಮಗಳು ಆಶ್ಲೇ ತಂದೆಯನ್ನು ತಬ್ಬಿಕೊಂಡು ಸಮಾಧಾನಪಡಿಸಿದರು. ಬೈಡನ್ ಅವರಿಗೆ ಇದು ಕಹಿ ಕ್ಷಣವೇ ಎನ್ನುವ ಪ್ರಶ್ನೆಯನ್ನು ಕೇಳಲಾಯಿತು ಅದಕ್ಕೆ ಪ್ರತಿಕ್ರಿಯಿಸಿದ ಅವರು ಇದು ಸ್ಮರಣೀಯ ಕ್ಷಣ ಎಂದು ಉತ್ತರಿಸಿದರು.
ಅಮೆರಿಕದ ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಕಮಲಾ ಹ್ಯಾರಿಸ್ ಅವರು ಜೋ ಬಿಡನ್ ಅವರ ಸೇವೆಗಳಿಗೆ ಧನ್ಯವಾದ ಅರ್ಪಿಸಿದರು. ಚಿಕಾಗೋದಲ್ಲಿ ಡೆಮಾಕ್ರಟಿಕ್ ಪಕ್ಷದ ಸಮಾವೇಶ ನಡೆಯುತ್ತಿದೆ. ಈ ಸಮ್ಮೇಳನದ ಮೊದಲ ದಿನ, ಕಮಲಾ ಹ್ಯಾರಿಸ್ ತಮ್ಮ ಭಾಷಣದಲ್ಲಿ ಜೋ ಬೈಡೆನ್ ಅವರಿಗೆ ಧನ್ಯವಾದ ಅರ್ಪಿಸಿದರು. ಡೆಮಾಕ್ರೆಟಿಕ್ ಸಮಾವೇಶವು ಆಗಸ್ಟ್ 22ರಂದು ಮುಕ್ತಾಯಗೊಳ್ಳಲಿದೆ.
ಈ ಸಮ್ಮೇಳನದಲ್ಲಿಯೇ ಪಕ್ಷವು ಅಧಿಕೃತವಾಗಿ ಕಮಲಾ ಹ್ಯಾರಿಸ್ ಅವರನ್ನು ಅಧ್ಯಕ್ಷ ಸ್ಥಾನಕ್ಕೆ ಮತ್ತು ಮಿನ್ನೆಸೋಟಾ ಗವರ್ನರ್ ಟಿಮ್ ವಾಲ್ಜ್ ಅವರನ್ನು ಉಪಾಧ್ಯಕ್ಷ ಸ್ಥಾನಕ್ಕೆ ನಾಮನಿರ್ದೇಶನ ಮಾಡಲಿದ್ದು, ಇಬ್ಬರೂ ನಾಯಕರು ಅವರ ನಾಮಪತ್ರವನ್ನು ಅಂಗೀಕರಿಸಲಿದ್ದಾರೆ.
ಅಧ್ಯಕ್ಷೀಯ ಅಭ್ಯರ್ಥಿಗಳು ಸಮಾವೇಶದ ಕೊನೆಯ ದಿನದಂದು ತಮ್ಮ ಭಾಷಣವನ್ನು ಮಾಡುತ್ತಾರೆ.ಆದರೆ ಕಮಲಾ ಹ್ಯಾರಿಸ್ ಸಂಪ್ರದಾಯ ಮುರಿದು ಮೊದಲ ದಿನವೇ ಮಾತನಾಡಿದ್ದಾರೆ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ