ಕಾಬೂಲ್: ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್‌ನಲ್ಲಿ (Kabul) ಇಂದು ಬೆಳಗ್ಗೆ ಎರಡು ಸ್ಫೋಟಗಳು ಸಂಭವಿಸಿವೆ. ಗುರುದ್ವಾರದ (Gurdwara) ಬಳಿ ಈ ಸ್ಫೋಟ ಸಂಭವಿಸಿದೆ. ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್ನಲ್ಲಿರುವ ಗುರುದ್ವಾರದಲ್ಲಿ ಇಸ್ಲಾಮಿಕ್ ಸ್ಟೇಟ್ಸ್ (ಐಎಸ್) ಉಗ್ರರು ಮನಬಂದಂತೆ ಗುಂಡಿನ ದಾಳಿ ನಡೆಸಿದ್ದಾರೆ. ಭದ್ರತಾ ಪಡೆಗಳು ಈ ಪ್ರದೇಶವನ್ನು ಸುತ್ತುವರಿದಿದ್ದು, ಹಲವರು ಸಾವನ್ನಪ್ಪಿರುವ ಅನುಮಾನ ವ್ಯಕ್ತವಾಗಿದೆ. ಈ ದಾಳಿಯಲ್ಲಿ ಗುರುದ್ವಾರದ ಭದ್ರತಾ ಸಿಬ್ಬಂದಿಯೊಬ್ಬರು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಉಳಿದವರ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.
ಈ ಪ್ರದೇಶದಲ್ಲಿ ಹಲವು ಬಾರಿ ಗುಂಡಿನ ಸದ್ದು ಕೇಳಿಬಂದಿದೆ ಎಂದು ಮೂಲಗಳು ಖಚಿತಪಡಿಸಿವೆ. ಗುರುದ್ವಾರದಲ್ಲಿ ಹಲವಾರು ಭಕ್ತರಿದ್ದರೂ ಸಾವು-ನೋವು ಉಂಟಾದ ಬಗ್ಗೆ ಖಚಿತ ಮಾಹಿತಿ ಲಭ್ಯವಾಗಿಲ್ಲ. ಇಂದು ಬೆಳಗ್ಗೆ ಕಾಬೂಲ್‌ನ ಕಾರ್ಟೆ ಪರ್ವಾನ್ ಪ್ರದೇಶದ ಗುರುದ್ವಾರದ ಸಮೀಪವಿರುವ ಜನನಿಬಿಡ ರಸ್ತೆಯಲ್ಲಿ ಸ್ಫೋಟಗಳು ಸಂಭವಿಸಿವೆ. ಈ ಪ್ರದೇಶದಲ್ಲಿ ಜನಸಂದಣಿ ಹೆಚ್ಚಾಗಿತ್ತು.
ಇದನ್ನೂ ಓದಿ: Video: 3000 ಲೀಟರ್ ಮದ್ಯವನ್ನು ಕಾಬೂಲ್ ಕಾಲುವೆಗೆ ಸುರಿದ ತಾಲಿಬಾನಿಗಳು; ಮದ್ಯ ಮಾರಾಟ, ಸೇವನೆಯಿಂದ ದೂರವಿರಬೇಕಂತೆ
“ಕಾಬೂಲ್ ನಗರದ ಕಾರ್ಟೆ ಪರ್ವಾನ್ ಪ್ರದೇಶದಲ್ಲಿ ಸ್ಫೋಟದ ಸದ್ದು ಕೇಳಿಬಂದಿದೆ. ಈ ಘಟನೆಯ ಸ್ವರೂಪ ಮತ್ತು ಸಾವು-ನೋವುಗಳ ಬಗ್ಗೆ ವಿವರಗಳು ಇನ್ನೂ ತಿಳಿದುಬಂದಿಲ್ಲ” ಎಂದು ಅಫ್ಘಾನಿಸ್ತಾನದ ಟೋಲೋ ನ್ಯೂಸ್ ಟ್ವೀಟ್ ಮಾಡಿದೆ.
#WATCH | Explosions heard in Karte Parwan area of Kabul city in Afghanistan.
(Video Source: Locals) pic.twitter.com/jsiv2wVGe8
— ANI (@ANI) June 18, 2022
“ಕಾಬೂಲ್ ನಗರದಲ್ಲಿರುವ ಪವಿತ್ರ ಗುರುದ್ವಾರದ ಮೇಲಿನ ದಾಳಿಯ ಕುರಿತು ನಾವು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ. ಇದರಿಂದ ಉಂಟಾಗುವ ಬೆಳವಣಿಗೆಗಳ ಕುರಿತು ಹೆಚ್ಚಿನ ವಿವರಗಳಿಗಾಗಿ ಕಾಯುತ್ತಿದ್ದೇವೆ” ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.
ಜೂನ್ 11ರಂದು ಕಾಬೂಲ್‌ನಲ್ಲಿ ಸ್ಫೋಟ ಸಂಭವಿಸಿತ್ತು. ಅದರಲ್ಲಿ ಹಲವಾರು ಜನರು ಗಾಯಗೊಂಡಿದ್ದರು. ಸೋಮವಾರ ಕಾಬೂಲ್‌ನಲ್ಲಿ ಬೈಸಿಕಲ್‌ನಲ್ಲಿ ಸ್ಫೋಟಕಗಳನ್ನು ಸಾಗಿಸುವುದರೊಂದಿಗೆ ಸ್ಫೋಟ ಸಂಭವಿಸಿದೆ ಎಂದು ಕಾಬೂಲ್ ಭದ್ರತಾ ಇಲಾಖೆ ತಿಳಿಸಿದೆ.
Explosions heard in Karte Parwan area of Kabul city. Details about the nature and casualties of this incident are not yet known: Afghanistan’s TOLOnews
— ANI (@ANI) June 18, 2022
ಇದನ್ನೂ ಓದಿ: ವಡೋದರ: ದೀಪಕ್ ನೈಟ್ರೇಟ್ ಕಂಪನಿಯ ರಾಸಾಯನಿಕ ಘಟಕದಲ್ಲಿ ಸ್ಫೋಟ, 8 ಮಂದಿಗೆ ಗಾಯ
ಈ ವಿಷಯವನ್ನು ತನಿಖೆ ಮಾಡಲು ಭದ್ರತಾ ಪಡೆಗಳು ಪ್ರದೇಶಕ್ಕೆ ಆಗಮಿಸಿವೆ ಎಂದು ಸ್ಥಳೀಯ ಮಾಧ್ಯಮ ಚಾನೆಲ್ ಟೋಲೋ ನ್ಯೂಸ್ ವರದಿ ಮಾಡಿದೆ. ಇದಕ್ಕೂ ಮೊದಲು, ಮೇ 25ರಂದು ಅಫ್ಘಾನಿಸ್ತಾನದ ಬಾಲ್ಖ್ ಪ್ರಾಂತ್ಯದ ರಾಜಧಾನಿಯಲ್ಲಿ ಮೂರು ಸ್ಫೋಟಗಳು ಸಂಭವಿಸಿದ್ದವು. ಈ ಘಟನೆಯಲ್ಲಿ 9 ಜನರು ಸಾವನ್ನಪ್ಪಿ, 15 ಜನರು ಗಾಯಗೊಂಡಿದ್ದರು. ಅದೇ ದಿನ, ಕಾಬೂಲ್ ನಗರದ ಮಸ್ಜಿದ್ ಷರೀಫ್ ಹಜರತ್ ಜಕಾರಿಯಾ ಮಸೀದಿಯಲ್ಲಿ ನಡೆದ ಸ್ಫೋಟದಲ್ಲಿ ಕನಿಷ್ಠ ಇಬ್ಬರು ಸಾವನ್ನಪ್ಪಿದ್ದರು.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:41 am, Sat, 18 June 22