AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Russia Ukraine War: ಉಕ್ರೇನ್​ ಯುದ್ಧದಲ್ಲಿ ರಷ್ಯಾಕ್ಕೆ ಹಿನ್ನಡೆ, ಹಲವು ವರ್ಷಗಳವರೆಗೆ ಸಂಘರ್ಷ; ನ್ಯಾಟೊ ಭವಿಷ್ಯ

ಯುದ್ಧದಲ್ಲಿ ರಷ್ಯಾಕ್ಕೆ ಹಿನ್ನಡೆಯಾಗಲಿದೆ ಎಂದು ನ್ಯಾಟೊ ಕಾರ್ಯದರ್ಶಿ ಭವಿಷ್ಯ ನುಡಿದಿದ್ದಾರೆ.

Russia Ukraine War: ಉಕ್ರೇನ್​ ಯುದ್ಧದಲ್ಲಿ ರಷ್ಯಾಕ್ಕೆ ಹಿನ್ನಡೆ, ಹಲವು ವರ್ಷಗಳವರೆಗೆ ಸಂಘರ್ಷ; ನ್ಯಾಟೊ ಭವಿಷ್ಯ
ರಷ್ಯಾ ದಾಳಿಗೆ ನಲುಗಿದ ಉಕ್ರೇನ್
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ|

Updated on:Jun 19, 2022 | 8:51 AM

Share

ಫ್ರಾಂಕ್​ಫರ್ಟ್​: ಉಕ್ರೇನ್-ರಷ್ಯಾ ಸಂಘರ್ಷ ಶೀಘ್ರದಲ್ಲಿ ಕೊನೆಗೊಳ್ಳುವ ಯಾವುದೇ ಲಕ್ಷಣಗಳು ಇಲ್ಲ. ಹಲವು ವರ್ಷಗಳವರೆಗೆ ಎರಡೂ ದೇಶಗಳ ನಡುವಣ ಸಂಘರ್ಷ ಮುಂದುವರಿಯುವ ಸಾಧ್ಯತೆಯಿದೆ ಎಂದು ನ್ಯಾಟೊ (North Atlantic Treaty Organization – NATO) ಭವಿಷ್ಯ ನುಡಿದಿದೆ. ಜರ್ಮನಿಯ ನಿಯತಕಾಲಿಕೆಗೆ ನೀಡಿರುವ ಸಂದರ್ಶನದಲ್ಲಿ ಈ ಕುರಿತು ಪ್ರತಿಕ್ರಿಯಿಸಿರುವ ನ್ಯಾಟೊ ಪ್ರಧಾನ ಕಾರ್ಯದರ್ಶಿ ಜೆನ್ಸ್ ಸ್ಟೋಲ್​ಟೆನ್​ಬರ್ಗ್​, ಮುಂದಿನ ದಿನಗಳಲ್ಲಿ ಉಕ್ರೇನ್​ಗೆ ಮತ್ತಷ್ಟು ಸುಧಾರಿತ ಶಸ್ತ್ರಾಸ್ತ್ರಗಳನ್ನು ನ್ಯಾಟೊ ಒದಗಿಸಲಿದೆ. ಯುದ್ಧದಲ್ಲಿ ರಷ್ಯಾಕ್ಕೆ ಹಿನ್ನಡೆಯಾಗಲಿದೆ, ಮುಂದೊಂದು ದಿನ ಡೊನ್​ಬಾಸ್ ಪ್ರದೇಶದಿಂದ ರಷ್ಯಾ ಹಿಂದಕ್ಕೆ ಸರಿಯಬೇಕಾಗಬಹುದು ಎಂದು ವಿಶ್ಲೇಷಿಸಿದ್ದಾರೆ.

‘ಈ ಸಂಘರ್ಷವು ಹಲವು ವರ್ಷಗಳವರೆಗೆ ಮುಂದುವರಿಯಲಿದೆ ಎನ್ನುವ ವಾಸ್ತವವನ್ನು ನಾನು ಒಪ್ಪಿಕೊಳ್ಳಬೇಕು. ಇಂಧನ, ಆಹಾರದ ಬೆಲೆ ಹೆಚ್ಚಾದರೂ ನಾವು ಉಕ್ರೇನ್​ಗೆ ನೀಡುತ್ತಿರುವ ಬೆಂಬಲ ನಿಲ್ಲಿಸಲು ಸಾಧ್ಯವಿಲ್ಲ’ ಎಂದು ಹೇಳಿದರು. ಸ್ಪೇನ್ ರಾಜಧಾನಿ ಮಾಡ್ರಿಡ್​ನಲ್ಲಿ ಇದೆ ಮಾಸಾಂತ್ಯದಲ್ಲಿ ನಡೆಯಲಿರುವ ನ್ಯಾಟೊ ಸಮಾವೇಶದಲ್ಲಿ ರಷ್ಯಾ-ಉಕ್ರೇನ್ ಸಂಘರ್ಷದ ಬಗ್ಗೆ ವಿಸ್ತೃತ ಚರ್ಚೆ ನಡೆಯುವ ಸಾಧ್ಯತೆಯಿದೆ. ಸೊವಿಯತ್ ಕಾಲದ, ರಷ್ಯಾ ನಿರ್ಮಿತ ಶಸ್ತ್ರಾಸ್ತ್ರಗಳ ಯುಗದಿಂದ ಉಕ್ರೇನ್​ನ ಶಸ್ತ್ರಾಗಾರ ಸುಧಾರಿಸಲು ಅಗತ್ಯವಿರುವ ನೆರವು ಈ ವೇಳೆ ಘೋಷಣೆಯಾಗುವ ಸಾಧ್ಯತೆಯಿದೆ. ನ್ಯಾಟೊ ಸದಸ್ಯ ದೇಶಗಳಲ್ಲಿ ಬಳಕೆಯಲ್ಲಿರುವ ಶಸ್ತ್ರಾಸ್ತ್ರಗಳನ್ನು ಉಕ್ರೇನ್​ಗೂ ಒದಗಿಸಲು ಅಮೆರಿಕ ಮುಂದಾಗಬಹುದು ಎಂದು ಅವರು ಭವಿಷ್ಯ ನುಡಿದರು.

ಉಕ್ರೇನ್ ವಿರುದ್ಧದ ದಾಳಿಯ ಮೊದಲ ಹಂತದಲ್ಲಿ ರಷ್ಯಾ ಹಿನ್ನಡೆ ಅನುಭವಿಸಿತು. ಉಕ್ರೇನ್ ರಾಜಧಾನಿ ಕೀವ್ ನಗರ ವಶಪಡಿಸಿಕೊಳ್ಳಲು ಯತ್ನಿಸಿದ್ದ ರಷ್ಯಾ ತೀವ್ರ ಪ್ರತಿರೋಧದ ಕಾರಣದಿಂದ ತನ್ನ ಸೇನಾಪಡೆಗಳನ್ನು ಹಿಂದಕ್ಕೆ ಕರೆಸಿಕೊಂಡು, ಬೇರೆಡೆಗೆ ಮರುನಿಯೋಜಿಸಬೇಕಾಯಿತು. ಇದೀಗ ಉಕ್ರೇನ್​ನ ಪೂರ್ವ ಭಾಗದಲ್ಲಿ ರಷ್ಯಾ ತನ್ನ ದಾಳಿಯನ್ನು ಕೇಂದ್ರೀಕರಿಸಿದೆ. ಉಕ್ರೇನ್​ನ ಹಲವು ನಗರಗಳ ಮೇಲೆ ಶೆಲ್ ಮತ್ತು ಕ್ಷಿಪಣಿ ದಾಳಿಯನ್ನೂ ರಷ್ಯಾ ತೀವ್ರಗೊಳಿಸಿದೆ. ಡೊನ್​ಬಾಸ್ ಪ್ರದೇಶವನ್ನು ರಷ್ಯಾ ತನ್ನ ಸುಪರ್ದಿಗೆ ತೆಗೆದುಕೊಂಡ ನಂತರ ಈ ದಾಳಿ ನಿಲ್ಲಬಹುದು ಎಂದು ಹೇಳಲಾಗಿದೆ.

ಕರ್ನಾಟಕದ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ. ದೇಶದ ಇತರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ಪ್ರಮುಖ  ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:51 am, Sun, 19 June 22

ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ