Kabul Blast: ಕಾಬೂಲ್​ನ ಗುರುದ್ವಾರದಲ್ಲಿ ಐಎಸ್​ ಉಗ್ರರಿಂದ ಭಾರೀ ಸ್ಫೋಟ; ಹಲವರು ಸಾವನ್ನಪ್ಪಿರುವ ಶಂಕೆ

ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್​ನಲ್ಲಿರುವ ಗುರುದ್ವಾರದೊಳಗೆ ಇಸ್ಲಾಮಿಕ್ ಸ್ಟೇಟ್ಸ್ (ಐಎಸ್​) ಉಗ್ರರು ಮನಬಂದಂತೆ ಗುಂಡಿನ ದಾಳಿ ನಡೆಸಿದ್ದಾರೆ. ಭದ್ರತಾ ಪಡೆಗಳು ಈ ಪ್ರದೇಶವನ್ನು ಸುತ್ತುವರಿದಿದ್ದು, ಹಲವರು ಸಾವನ್ನಪ್ಪಿರುವ ಶಂಕೆಯಿದೆ.

Kabul Blast: ಕಾಬೂಲ್​ನ ಗುರುದ್ವಾರದಲ್ಲಿ ಐಎಸ್​ ಉಗ್ರರಿಂದ ಭಾರೀ ಸ್ಫೋಟ; ಹಲವರು ಸಾವನ್ನಪ್ಪಿರುವ ಶಂಕೆ
ಕಾಬೂಲ್ ಸ್ಫೋಟImage Credit source: NDTV
Follow us
TV9 Web
| Updated By: ಸುಷ್ಮಾ ಚಕ್ರೆ

Updated on:Jun 18, 2022 | 11:42 AM

ಕಾಬೂಲ್: ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್​ನಲ್ಲಿ (Kabul) ಇಂದು ಬೆಳಗ್ಗೆ ಎರಡು ಸ್ಫೋಟಗಳು ಸಂಭವಿಸಿವೆ. ಗುರುದ್ವಾರದ (Gurdwara) ಬಳಿ ಈ ಸ್ಫೋಟ ಸಂಭವಿಸಿದೆ. ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್​ನಲ್ಲಿರುವ ಗುರುದ್ವಾರದಲ್ಲಿ ಇಸ್ಲಾಮಿಕ್ ಸ್ಟೇಟ್ಸ್ (ಐಎಸ್​) ಉಗ್ರರು ಮನಬಂದಂತೆ ಗುಂಡಿನ ದಾಳಿ ನಡೆಸಿದ್ದಾರೆ. ಭದ್ರತಾ ಪಡೆಗಳು ಈ ಪ್ರದೇಶವನ್ನು ಸುತ್ತುವರಿದಿದ್ದು, ಹಲವರು ಸಾವನ್ನಪ್ಪಿರುವ ಅನುಮಾನ ವ್ಯಕ್ತವಾಗಿದೆ. ಈ ದಾಳಿಯಲ್ಲಿ ಗುರುದ್ವಾರದ ಭದ್ರತಾ ಸಿಬ್ಬಂದಿಯೊಬ್ಬರು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಉಳಿದವರ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.

ಈ ಪ್ರದೇಶದಲ್ಲಿ ಹಲವು ಬಾರಿ ಗುಂಡಿನ ಸದ್ದು ಕೇಳಿಬಂದಿದೆ ಎಂದು ಮೂಲಗಳು ಖಚಿತಪಡಿಸಿವೆ. ಗುರುದ್ವಾರದಲ್ಲಿ ಹಲವಾರು ಭಕ್ತರಿದ್ದರೂ ಸಾವು-ನೋವು ಉಂಟಾದ ಬಗ್ಗೆ ಖಚಿತ ಮಾಹಿತಿ ಲಭ್ಯವಾಗಿಲ್ಲ. ಇಂದು ಬೆಳಗ್ಗೆ ಕಾಬೂಲ್‌ನ ಕಾರ್ಟೆ ಪರ್ವಾನ್ ಪ್ರದೇಶದ ಗುರುದ್ವಾರದ ಸಮೀಪವಿರುವ ಜನನಿಬಿಡ ರಸ್ತೆಯಲ್ಲಿ ಸ್ಫೋಟಗಳು ಸಂಭವಿಸಿವೆ. ಈ ಪ್ರದೇಶದಲ್ಲಿ ಜನಸಂದಣಿ ಹೆಚ್ಚಾಗಿತ್ತು.

ಇದನ್ನೂ ಓದಿ
Image
ಮೆಕ್ಸಿಕೋದಲ್ಲಿ ತೀರ್ಥಯಾತ್ರೆಗೆ ತೆರಳಿದ್ದ ಬಸ್​ ಅಪಘಾತ; 9 ಭಕ್ತರು ಸಾವು, 40 ಜನರಿಗೆ ಗಾಯ
Image
Viral News: ತಾಲಿಬಾನ್ ಸರ್ಕಾರ ಬಂದಮೇಲೆ ರಸ್ತೆ ಬದಿ ಆಹಾರ ಮಾರುತ್ತಿದ್ದಾರೆ ಅಫ್ಘಾನಿಸ್ತಾನದ ಟಿವಿ ನಿರೂಪಕ
Image
ಚೀನಾ: ಕಿರುಕುಳ ವಿರೋಧಿಸಿದ ಮಹಿಳೆಯರಿಗೆ ಥಳಿಸಿದ ಪುರುಷರ ಗುಂಪು; ಹಲ್ಲೆ ದೃಶ್ಯ ಕ್ಯಾಮೆರಾದಲ್ಲಿ ಸೆರೆ

ಇದನ್ನೂ ಓದಿ: Video: 3000 ಲೀಟರ್​ ಮದ್ಯವನ್ನು ಕಾಬೂಲ್​ ಕಾಲುವೆಗೆ ಸುರಿದ ತಾಲಿಬಾನಿಗಳು; ಮದ್ಯ ಮಾರಾಟ, ಸೇವನೆಯಿಂದ ದೂರವಿರಬೇಕಂತೆ

“ಕಾಬೂಲ್ ನಗರದ ಕಾರ್ಟೆ ಪರ್ವಾನ್ ಪ್ರದೇಶದಲ್ಲಿ ಸ್ಫೋಟದ ಸದ್ದು ಕೇಳಿಬಂದಿದೆ. ಈ ಘಟನೆಯ ಸ್ವರೂಪ ಮತ್ತು ಸಾವು-ನೋವುಗಳ ಬಗ್ಗೆ ವಿವರಗಳು ಇನ್ನೂ ತಿಳಿದುಬಂದಿಲ್ಲ” ಎಂದು ಅಫ್ಘಾನಿಸ್ತಾನದ ಟೋಲೋ ನ್ಯೂಸ್ ಟ್ವೀಟ್ ಮಾಡಿದೆ.

“ಕಾಬೂಲ್ ನಗರದಲ್ಲಿರುವ ಪವಿತ್ರ ಗುರುದ್ವಾರದ ಮೇಲಿನ ದಾಳಿಯ ಕುರಿತು ನಾವು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ. ಇದರಿಂದ ಉಂಟಾಗುವ ಬೆಳವಣಿಗೆಗಳ ಕುರಿತು ಹೆಚ್ಚಿನ ವಿವರಗಳಿಗಾಗಿ ಕಾಯುತ್ತಿದ್ದೇವೆ” ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.

ಜೂನ್ 11ರಂದು ಕಾಬೂಲ್‌ನಲ್ಲಿ ಸ್ಫೋಟ ಸಂಭವಿಸಿತ್ತು. ಅದರಲ್ಲಿ ಹಲವಾರು ಜನರು ಗಾಯಗೊಂಡಿದ್ದರು. ಸೋಮವಾರ ಕಾಬೂಲ್‌ನಲ್ಲಿ ಬೈಸಿಕಲ್‌ನಲ್ಲಿ ಸ್ಫೋಟಕಗಳನ್ನು ಸಾಗಿಸುವುದರೊಂದಿಗೆ ಸ್ಫೋಟ ಸಂಭವಿಸಿದೆ ಎಂದು ಕಾಬೂಲ್ ಭದ್ರತಾ ಇಲಾಖೆ ತಿಳಿಸಿದೆ.

ಇದನ್ನೂ ಓದಿ: ವಡೋದರ: ದೀಪಕ್ ನೈಟ್ರೇಟ್​​ ಕಂಪನಿಯ ರಾಸಾಯನಿಕ ಘಟಕದಲ್ಲಿ ಸ್ಫೋಟ, 8 ಮಂದಿಗೆ ಗಾಯ

ಈ ವಿಷಯವನ್ನು ತನಿಖೆ ಮಾಡಲು ಭದ್ರತಾ ಪಡೆಗಳು ಪ್ರದೇಶಕ್ಕೆ ಆಗಮಿಸಿವೆ ಎಂದು ಸ್ಥಳೀಯ ಮಾಧ್ಯಮ ಚಾನೆಲ್ ಟೋಲೋ ನ್ಯೂಸ್ ವರದಿ ಮಾಡಿದೆ. ಇದಕ್ಕೂ ಮೊದಲು, ಮೇ 25ರಂದು ಅಫ್ಘಾನಿಸ್ತಾನದ ಬಾಲ್ಖ್ ಪ್ರಾಂತ್ಯದ ರಾಜಧಾನಿಯಲ್ಲಿ ಮೂರು ಸ್ಫೋಟಗಳು ಸಂಭವಿಸಿದ್ದವು. ಈ ಘಟನೆಯಲ್ಲಿ 9 ಜನರು ಸಾವನ್ನಪ್ಪಿ, 15 ಜನರು ಗಾಯಗೊಂಡಿದ್ದರು. ಅದೇ ದಿನ, ಕಾಬೂಲ್ ನಗರದ ಮಸ್ಜಿದ್ ಷರೀಫ್ ಹಜರತ್ ಜಕಾರಿಯಾ ಮಸೀದಿಯಲ್ಲಿ ನಡೆದ ಸ್ಫೋಟದಲ್ಲಿ ಕನಿಷ್ಠ ಇಬ್ಬರು ಸಾವನ್ನಪ್ಪಿದ್ದರು.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:41 am, Sat, 18 June 22

ತ್ಯಾಜ್ಯದ ರಾಶಿ: ಭಕ್ತರ ಮೇಲೆ ಸಿಟ್ಟಾದ ವೈದ್ಯನಾಥ ದೈವ
ತ್ಯಾಜ್ಯದ ರಾಶಿ: ಭಕ್ತರ ಮೇಲೆ ಸಿಟ್ಟಾದ ವೈದ್ಯನಾಥ ದೈವ
ನಿನ್ನ ರೌಡಿಸಂ ನನ್ನ ಹತ್ರ ಬೇಡ: ರಜತ್​ಗೆ ಖಡಕ್ ಆವಾಜ್ ಹಾಕಿದ ಚೈತ್ರಾ
ನಿನ್ನ ರೌಡಿಸಂ ನನ್ನ ಹತ್ರ ಬೇಡ: ರಜತ್​ಗೆ ಖಡಕ್ ಆವಾಜ್ ಹಾಕಿದ ಚೈತ್ರಾ
ಶಿಕ್ಷಕರ ಕೊರತೆ ಬಗ್ಗೆ ವಿದ್ಯಾರ್ಥಿಗಳ ವಿಡಿಯೋ ವೈರಲ್​: ಶಾಲೆಗೆ ಸಂಸದ ಭೇಟಿ
ಶಿಕ್ಷಕರ ಕೊರತೆ ಬಗ್ಗೆ ವಿದ್ಯಾರ್ಥಿಗಳ ವಿಡಿಯೋ ವೈರಲ್​: ಶಾಲೆಗೆ ಸಂಸದ ಭೇಟಿ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್