ಲಂಡನ್‌ನ ವೆಸ್ಟ್‌ಮಿನ್‌ಸ್ಟರ್ ಅಬ್ಬೆಯಲ್ಲಿ ಕಿಂಗ್ ಚಾರ್ಲ್ಸ್‌ನ (King Charles III) ಪಟ್ಟಾಭಿಷೇಕ (coronation) ಸಮಾರಂಭ ನಡೆದಿದೆ. ಆರ್ಚ್ಬಿಷಪ್ (archbishop) ರಾಜನ ತಲೆಯ ಮೇಲೆ ಸೇಂಟ್ ಎಡ್ವರ್ಡ್ಸ್ ಕಿರೀಟವನ್ನು ಇರಿಸಿದ್ದು, ಬ್ರಿಟನ್‌ನ ಕಿಂಗ್ ಚಾರ್ಲ್ಸ್ III ಪಟ್ಟಾಭಿಷೇಕ ನಡೆದಿದೆ. ಸೆಪ್ಟೆಂಬರ್ 2022 ರಲ್ಲಿ ರಾಣಿ ಎಲಿಜಬೆತ್ II ರ ಮರಣದ ನಂತರ ಕಾನೂನುಬದ್ಧವಾಗಿ ರಾಜನಾದ ಚಾರ್ಲ್ಸ್, ವೆಸ್ಟ್‌ಮಿನಿಸ್ಟರ್ ಅಬ್ಬೆಯಲ್ಲಿ ನಡೆದ ಧಾರ್ಮಿಕ ಸಮಾರಂಭದಲ್ಲಿ ಔಪಚಾರಿಕವಾಗಿ ಸೇಂಟ್ ಎಡ್ವರ್ಡ್ಸ್ ಕ್ರೌನ್ ಸ್ವೀಕರಿಸಿದ್ದಾರೆ.
The Archbishop of Canterbury crowns King Charles III.
Cries of God Save The King fill Westminster Abbey.#Coronation pic.twitter.com/MjCZbE7l3T
— Royal Central (@RoyalCentral) May 6, 2023
God save the King! ಎರಡು ಗಂಟೆಗಳ ಅವಧಿಯ ಸಮಾರಂಭಗಳ ನಂತರ, ಕಿಂಗ್ ಚಾರ್ಲ್ಸ್ ಬ್ರಿಟನ್‌ನ ಹೊಸ ರಾಜನಾಗಿ ಪಟ್ಟಾಭಿಷಿಕ್ತರಾಗಿದ್ದಾರೆ. ಇವರ ತಾಯಿ ರಾಣಿ ಎಲಿಜಬೆತ್ II ರ ಮರಣದ ನಂತರ, ಕಳೆದ ವರ್ಷ ಚಾರ್ಲ್ಸ್ ಸಿಂಹಾಸನವನ್ನು ಏರಿದರು. ಇಂದು ಸಂಪ್ರದಾಯ, ವೈಭವ ಮತ್ತು ಶತಮಾನಗಳ-ಹಳೆಯ ಪದ್ಧತಿಗಳ ಪ್ರಕಾರ ರಾಜ ಕಿರೀಟವನ್ನು ಚಾರ್ಲ್ಸ್ ಮುಡಿಗೇರಿಸಲಾಯಿತು. ಈ ಕಿರೀಟಧಾರಣೆ, ಅಧಿಕೃತವಾಗಿ ಅವರ ಆಳ್ವಿಕೆಯ ಆರಂಭವನ್ನು ಸೂಚಿಸುತ್ತದೆ.
ಕಿಂಗ್ ಚಾರ್ಲ್ಸ್ ಕಿರೀಟಧಾರಣೆ ವೇಳೆ ಟ್ರಂಪೆಟ್ಸ್ ಮತ್ತು “ಗಾಡ್ ಸೇವ್ ದ ಕಿಂಗ್” ಎಂಬ ಕೋರಸ್ ಮೊಳಗಿದ್ದು, ಕ್ಯಾಂಟರ್ಬರಿಯ ಆರ್ಚ್ಬಿಷಪ್ ರಾಜನ ತಲೆಯ ಮೇಲೆ ಸೇಂಟ್ ಎಡ್ವರ್ಡ್ಸ್ ಕಿರೀಟವನ್ನಿರಿಸಿದ್ದಾರೆ.
ಚಾರ್ಲ್ಸ್ III ಯುನೈಟೆಡ್ ಕಿಂಗ್‌ಡಮ್ ಮತ್ತು 14 ಇತರ ಕಾಮನ್‌ವೆಲ್ತ್ ಸಾಮ್ರಾಜ್ಯಗಳ ರಾಜರಾಗಿದ್ದಾರೆ. ಕಿರೀಟಧಾರಣೆಗೆ ಮುನ್ನ ಆರ್ಚ್ಬಿಷಪ್ ಜಸ್ಟಿನ್ ವೆಲ್ಬಿ ಧರ್ಮೋಪದೇಶ ಮಾಡಿದ್ದಾರೆ. ನಾವು ರಾಜನನ್ನು ಪಟ್ಟಾಭಿಷೇಕ ಮಾಡಲು ಇಲ್ಲಿದ್ದೇವೆ. ಸೇವೆ ಮಾಡಲು ನಾವು ರಾಜನನ್ನು ಪಟ್ಟಾಭಿಷೇಕ ಮಾಡುತ್ತೇವೆ ಎಂದು ಅವರು ಹೇಳಿದ್ದಾರೆ.
ನಾನು, ಚಾರ್ಲ್ಸ್ ದೇವರ ಸಮ್ಮುಖದಲ್ಲಿ ಪ್ರಾಮಾಣಿಕವಾಗಿ ನಾನು ನಂಬಿಗಸ್ತ ಪ್ರೊಟೆಸ್ಟೆಂಟ್ ಎಂದು ಘೋಷಿಸುತ್ತೇನೆ. ಪ್ರೊಟೆಸ್ಟಂಟ್ ಉತ್ತರಾಧಿಕಾರವನ್ನು ಭದ್ರಪಡಿಸುವ ಶಾಸನಗಳ ನಿಜವಾದ ಉದ್ದೇಶದ ಪ್ರಕಾರ ನಾನು ನಿಲ್ಲುತ್ತೇನೆ. ಸಿಂಹಾಸನಾರೋಹಣ ಮಾಡಿ ಕಾನೂನಿನ ಪ್ರಕಾರ ಕಾರ್ಯನಿರ್ವಹಿಸುತ್ತೇನೆ ಎಂದು ಹೇಳಿದ್ದಾರೆ.
ಮತ್ತಷ್ಟು ವಿದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 4:52 pm, Sat, 6 May 23