Davos World Economic Forum: ವಿಶ್ವ ಆರ್ಥಿಕ ಸಭೆಯಲ್ಲಿ ತೆಲಂಗಾಣ ಐಟಿ ಸಚಿವರ ನಿಯೋಗ

| Updated By: Ganapathi Sharma

Updated on: Jan 16, 2023 | 7:31 PM

ತೆಲಂಗಾಣದಲ್ಲಿ ಹೂಡಿಕೆ ಮಾಡುವಂತೆ ಮತ್ತು ಉದ್ಯೋಗ ಸೃಷ್ಟಿಗೆ ನೆರವಾಗುವಂತೆ ಸ್ವಿಜರ್ಲೆಂಡ್​​ನಲ್ಲಿರುವ ಭಾರತೀಯರ ಮೂಲದವರಲ್ಲಿ ಸಚಿವರು ಮನವಿ ಮಾಡಿದ್ದಾರೆ.

Davos World Economic Forum: ವಿಶ್ವ ಆರ್ಥಿಕ ಸಭೆಯಲ್ಲಿ ತೆಲಂಗಾಣ ಐಟಿ ಸಚಿವರ ನಿಯೋಗ
ಕೆಟಿ ರಾಮ ರಾವ್
Follow us on

ಹೈದರಾಬಾದ್: ಸ್ವಿಜರ್ಲೆಂಡ್​​ನ (Switzerland) ದಾವೋಸ್​​ನಲ್ಲಿ (Davos) ನಡೆಯುತ್ತಿರುವ ವಿಶ್ವ ಆರ್ಥಿಕ ಸಭೆಯಲ್ಲಿ (World Economic Forum) ತೆಲಂತಾಣ ಐಟಿ ಸಚಿವ ಕೆಟಿ ರಾಮ ರಾವ್ (KT Rama Rao) ನೇತೃತ್ವದ ನಿಯೋಗ ಪಾಲ್ಗೊಂಡಿದೆ. ಇಂದಿನಿದ (ಜನವರಿ 16) ಜನವರಿ 20ರ ವರೆಗೆ ವಿಶ್ವ ಆರ್ಥಿಕ ಸಭೆ ನಡೆಯಲಿದೆ. ಸಭೆಯಲ್ಲಿ ಭಾಗವಹಿಸಲು ಸ್ವಿಜರ್ಲೆಂಡ್​ಗೆ ತೆರಳಿ ಜ್ಯೂರಿಚ್ ವಿಮಾನ ನಿಲ್ದಾಣ ತಲುಪಿದ ರಾಮ ರಾವ್ ಅವರಿಗೆ ಅನಿವಾಸಿ ಭಾರತೀಯರಿಂದ ಭವ್ಯ ಸ್ವಾಗತ ದೊರೆಯಿತು.

ಅನಿವಾಸಿ ಭಾರತೀಯರ ಜತೆಗೆ ಯುರೋಪ್ ದೇಶಗಳ ಜನರಿಂದಲೂ ರಾಮ ರಾವ್ ಅವರಿಗೆ ಭರ್ಜರಿ ಸ್ವಾಗತ ದೊರೆತಿದೆ. ಸ್ವಿಜರ್ಲೆಂಡ್​ನಲ್ಲಿರುವ ತೆಲುಗು ಭಾಷಿಕ ಸಮುದಾಯಗಳ ಪ್ರತಿನಿಧಿಗಳಿಂದಲೂ ಸಚಿವರಿಗೆ ಸ್ವಾಗತ ದೊರೆಯಿತು ಎಂದು ಸರ್ಕಾರದ ಪ್ರಕಟಣೆ ತಿಳಿಸಿದೆ.

ಜ್ಯೂರಿಚ್​​ನಲ್ಲಿರುವ ಭಾರತೀಯ ಸಮುದಾಯದವರು ಆಯೋಜಿಸಿದ್ದ ‘ಮೀಟ್ ಆ್ಯಂಡ್ ಗ್ರೀಟ್’ ಕಾರ್ಯಕ್ರಮದಲ್ಲಿ ಸಚಿವರು ಭಾಗಿಯಾದರು. ತೆಲಂಗಾಣ ಸರ್ಕಾರ 2014ರ ನಂತರ ಮಾಡಿರುವ ಸಾಧನೆಗಳ ಬಗ್ಗೆ ಮಾಹಿತಿ ನೀಡಿದರು. ತೆಲಂಗಾಣ ಸರ್ಕಾರದ ಕಾರ್ಯಕ್ರಮಗಳ ಬಗ್ಗೆ ಅನಿವಾಸಿ ಭಾರತೀಯರು ವಿಶ್ವ ಮಟ್ಟದಲ್ಲಿ ಉತ್ತಮ ಅಭಿಪ್ರಾಯ ರೂಪುಗೊಳ್ಳುವಂತೆ ಮಾಡಬೇಕು ಎಂಬುದಾಗಿ ಸಚಿವರು ಮನವಿ ಮಾಡಿದರು ಎಂದು ಪ್ರಕಟಣೆ ಉಲ್ಲೇಖಿಸಿದೆ.

ತೆಲಂಗಾಣದಲ್ಲಿ ಹೂಡಿಕೆ ಮಾಡುವಂತೆ ಮತ್ತು ಉದ್ಯೋಗ ಸೃಷ್ಟಿಗೆ ನೆರವಾಗುವಂತೆ ಸ್ವಿಜರ್ಲೆಂಡ್​​ನಲ್ಲಿರುವ ಭಾರತೀಯರ ಮೂಲದವರಲ್ಲಿ ಸಚಿವರು ಮನವಿ ಮಾಡಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ