Imran Khan: ಭ್ರಷ್ಟಾಚಾರ ಪ್ರಕರಣ, ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್​ ಖಾನ್​ಗೆ 14 ವರ್ಷಗಳ ಜೈಲು ಶಿಕ್ಷೆ

|

Updated on: Jan 17, 2025 | 1:04 PM

ಭ್ರಷ್ಟಾಚಾರ ಪ್ರಕರಣದಲ್ಲಿ ಪಾಕಿಸ್ತಾನ ನ್ಯಾಯಾಲಯವು ಮಾಜಿ ಪ್ರಧಾನಿ ಇಮ್ರಾನ್​ ಖಾನ್​ ಹಾಗೂ ಪತ್ನಿ ಬುಶ್ರಾ ಬೀಬಿಯನ್ನು ದೋಷಿ ಎಂದು ತೀರ್ಪು ನೀಡಿ 14 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಅವರ ಪತ್ನಿ ಬುಶ್ರಾ ಬೀಬಿಗೆ 7 ಲಕ್ಷ ರೂ. ಇಮ್ರಾನ್ ಖಾನ್ ಗೆ 10 ಲಕ್ಷ ರೂಪಾಯಿ ದಂಡವನ್ನೂ ವಿಧಿಸಲಾಗಿದೆ. ಆದರೆ ಪತ್ನಿಗೆ 5 ಲಕ್ಷ ರೂ. ಇಬ್ಬರೂ ದಂಡ ಪಾವತಿಸಲು ಸಾಧ್ಯವಾಗದಿದ್ದರೆ ಮಾಜಿ ಪ್ರಧಾನಿ ಆರು ತಿಂಗಳ ಜೈಲು ಶಿಕ್ಷೆ ಮತ್ತು ಬುಶ್ರಾ ಮೂರು ತಿಂಗಳ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ

Imran Khan: ಭ್ರಷ್ಟಾಚಾರ ಪ್ರಕರಣ, ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್​ ಖಾನ್​ಗೆ 14 ವರ್ಷಗಳ ಜೈಲು ಶಿಕ್ಷೆ
ಇಮ್ರಾನ್ ಖಾನ್
Image Credit source: Business Standard
Follow us on

ಭ್ರಷ್ಟಾಚಾರ ಪ್ರಕರಣದಲ್ಲಿ ಪಾಕಿಸ್ತಾನ ನ್ಯಾಯಾಲಯವು ಮಾಜಿ ಪ್ರಧಾನಿ ಇಮ್ರಾನ್​ ಖಾನ್​ ಹಾಗೂ ಪತ್ನಿ ಬುಶ್ರಾ ಬೀಬಿಯನ್ನು ದೋಷಿ ಎಂದು ತೀರ್ಪು ನೀಡಿ 14 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಇಮ್ರಾನ್ ಖಾನ್ ಪತ್ನಿ ಬುಶ್ರಾ ಬೀಬಿಗೆ 7 ಲಕ್ಷ ರೂ. ಇಮ್ರಾನ್ ಖಾನ್ ಗೆ 10 ಲಕ್ಷ ರೂಪಾಯಿ ದಂಡವನ್ನೂ ವಿಧಿಸಲಾಗಿದೆ. ಆದರೆ ಪತ್ನಿಗೆ 5 ಲಕ್ಷ ರೂ. ಇಬ್ಬರೂ ದಂಡ ಪಾವತಿಸಲು ಸಾಧ್ಯವಾಗದಿದ್ದರೆ ಆರು ತಿಂಗಳ ಜೈಲು ಶಿಕ್ಷೆ ಮತ್ತು ಬುಶ್ರಾ ಮೂರು ತಿಂಗಳ ಜೈಲು ಶಿಕ್ಷೆಯನ್ನು ಹೆಚ್ಚುವರಿಯಾಗಿ ಅನುಭವಿಸಬೇಕಾಗುತ್ತದೆ.

ಅಲ್-ಖಾದಿರ್ ಯೂನಿವರ್ಸಿಟಿ ಪ್ರಾಜೆಕ್ಟ್ ಟ್ರಸ್ಟ್‌ಗೆ ಸಂಬಂಧಿಸಿದ ಭ್ರಷ್ಟಾಚಾರ ಪ್ರಕರಣದಲ್ಲಿ ಇಮ್ರಾನ್ ಮತ್ತು ಅವರ ಪತ್ನಿಗೆ ಈ ಶಿಕ್ಷೆಯನ್ನು ನೀಡಲಾಗಿದೆ. ಈ ಪ್ರಕರಣದಲ್ಲಿ ಇಮ್ರಾನ್ ಕೂಡ ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದಾರೆ ಎನ್ನುವ ಆರೋಪಗಳಿವೆ.

ಡಾನ್ ವರದಿಯ ಪ್ರಕಾರ, ಖಾನ್ ಮತ್ತು ಬೀಬಿ ಅವರನ್ನು ಮಾತ್ರ ವಿಚಾರಣೆಗೆ ಒಳಪಡಿಸಲಾಗಿದೆ. ಏಕೆಂದರೆ ಪ್ರಮುಖ ಆಸ್ತಿ ಉದ್ಯಮಿ ಸೇರಿದಂತೆ ಇತರ ಆರೋಪಿಗಳು ಪ್ರಸ್ತುತ ಪಾಕಿಸ್ತಾನದಿಂದ ಹೊರಗಿದ್ದಾರೆ. ತೀರ್ಪು ಬಂದ ತಕ್ಷಣ ಬುಶ್ರಾ ಬೀಬಿಯನ್ನು ಬಂಧಿಸಲಾಯಿತು. ಇಮ್ರಾನ್ ಖಾನ್ ಈಗಾಗಲೇ ಜೈಲಿನಲ್ಲಿದ್ದಾರೆ.

ಇಮ್ರಾನ್​ ಖಾನ್​ ಅವರನ್ನು 2023ರ ಮೇ 9ರಂದು ಬಂಧಿಸಲಾಗಿತ್ತು. ಅಲ್ ಖಾದಿರ್ ಟ್ರಸ್ಟ್ ಪ್ರಕರಣದಲ್ಲಿ ಇಮ್ರಾನ್ ನನ್ನು ಬಂಧಿಸಲಾಗಿತ್ತು, ವಿಶ್ವವಿದ್ಯಾಲಯದ ಕೋಟ್ಯಂತರ ರೂಪಾಯಿ ಮೌಲ್ಯದ ಭೂಮಿಯನ್ನು ಅಕ್ರಮವಾಗಿ ವಶಪಡಿಸಿಕೊಂಡಿದ್ದರು ಎಂದು ಉದ್ಯಮಿ ಮಲ್ಲಿಕ್ ರಿವಾಜ್ ಹೇಳಿದ್ದರು. ಇಮ್ರಾನ್ ಮತ್ತು ಅವರ ಪತ್ನಿ ತಮ್ಮ ಹೆಸರಿಗೆ ಕೋಟ್ಯಂತರ ರೂಪಾಯಿ ಮೌಲ್ಯದ ಭೂಮಿಯನ್ನು ಪಡೆದಿದ್ದಾರೆ.

ನಂತರ ರಿಯಾಜ್ ಮತ್ತು ಅವರ ಮಗಳ ನಡುವಿನ ಸಂಭಾಷಣೆಯ ಆಡಿಯೋ ಸೋರಿಕೆಯಾಗಿದೆ. ಇದರಲ್ಲಿ ಇಮ್ರಾನ್ ಪತ್ನಿ ಬುಶ್ರಾ ಬೀಬಿ ತನಗೆ ಐದು ಕ್ಯಾರೆಟ್ ವಜ್ರದ ಉಂಗುರ ಬೇಕೆಂದು ನಿರಂತರವಾಗಿ ಕೇಳುತ್ತಿದ್ದಳು ಎಂದು ರಿಯಾಜ್ ಪುತ್ರಿ ಹೇಳಿದ್ದಳು.

 

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 12:56 pm, Fri, 17 January 25