ಬರಿಮೈಯಲ್ಲಿ ಕುದುರೆ ಸವಾರಿ ಮಾಡುತ್ತಿರುವ ಪುಟಿನ್ ಫೋಟೋ ಜಿ7 ನಾಯಕರಿಂದ ಅಪಹಾಸ್ಯಕ್ಕೀಡಾಯಿತು!

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jun 27, 2022 | 7:12 PM

ಉಕ್ರೇನ್ ಮೇಲೆ ರಷ್ಯ ಈಗಲೂ ದಾಳಿ ಮುಂದುವರೆಸಿರುವ ಹಿನ್ನೆಲೆಯಲ್ಲಿ ಜಿ7 ಗುಂಪು ಆ ದೇಶದಿಂದ ಆಮದು ಮಾಡಿಕೊಳ್ಳುತ್ತಿದ್ದ ಚಿನ್ನದ ಮೇಲೆ ಹೊಸ ನಿರ್ಬಂಧಗಳನ್ನು ಹೇರಲಾಗುವುದೆಂದು ಯುಎಸ್ ಅಧ್ಯಕ್ಷ ಜೋ ಬೈಡೆನ್ ಹೇಳಿದರೆಂದು ಹಿಲ್ ವರದಿ ಮಾಡಿದೆ.

ಬರಿಮೈಯಲ್ಲಿ ಕುದುರೆ ಸವಾರಿ ಮಾಡುತ್ತಿರುವ ಪುಟಿನ್ ಫೋಟೋ ಜಿ7 ನಾಯಕರಿಂದ ಅಪಹಾಸ್ಯಕ್ಕೀಡಾಯಿತು!
ಬರಿಮೈಯಲ್ಲಿ ಕುದುರೆ ಸವಾರಿ ಮಡುತ್ತಿರುವ ವ್ಲಾದಿಮಿರ್ ಪುಟಿನ್
Follow us on

ಬರ್ಲಿನ್ (ಜರ್ಮನಿ): ಅರೆಬೆತ್ತಲೆಯಾಗಿ ಕುದರೆ ಸವಾರಿ ಮಾಡುತ್ತಿರುವ ರಷ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ (Vladimir Putin) ಅವರ ಪೋಟೋವನ್ನು ಜಿ7 ರಾಷ್ಟ್ರಗಳ ಮುಖಂಡರು ಗೇಲಿ ಮಾಡಿದ್ದಾರೆ. ದಿ ಹಿಲ್ ಪತ್ರಿಕೆಯಲ್ಲಿ ಪ್ರಕಟವಾಗಿರುವ ವರದಿಯೊಂದತ ಪ್ರಕಾರ ಬ್ರಿಟಿಷ್ ಪ್ರಧಾನ ಮಂತ್ರಿ ಬೊರಿಸ್ (Boris Johnson) ಜಾನ್ಸನ್ ಮತ್ತು ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೋ (Justin Trudeau) ಅವರು ಈ ಪೋಟೋದ ಹಿನ್ನೆಲೆಯಲ್ಲಿ ತಮ್ಮ ಪೋಟೋಶೂಟ್ ಬಗ್ಗೆ ತಮಾಷೆ ಮಾಡುತ್ತಿರುವುದು ವಿಡಿಯೊವೊಂದರಲ್ಲಿ ರೆಕಾರ್ಡ್ ಆಗಿದೆ ಮಾರಾಯ್ರೇ.

‘ನಮ್ಮ ಫೋಟೋಶೂಟ್ ನಲ್ಲಿ ಜಾಕೆಟ್ ಹಾಕ್ಕೊಂಡಾ ಅಥವಾ ಅದಿಲ್ಲದೆಯಾ?’ ಅಂತ ಬ್ರಿಟಿಷ್ ಪ್ರಾಧಾನಿ ಜಾನ್ಸನ್ ದುಂಡು ಮೇಜಿನ ಸುತ್ತ ಕುಳಿತಿರುವ ಇತರ ನಾಯಕರನ್ನು ಉದ್ದೇಶಿಸಿ ಕೇಳುತ್ತಾರೆ. ನಾವೆಲ್ಲ ಪುಟಿನ್ ಗಿಂತ ಬಲಶಾಲಿ ಅನ್ನೋದನ್ನು ಪೋಟೋನಲ್ಲಿ ತೋರಿಸಬೇಕಿದೆ,’ ಎಂದು ಅವರು ಮುಂದುವರಿದು ಹೇಳುತ್ತಾರೆ.

ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿರುವ ಪುಟಿನ್ ಫೋಟೋವನ್ನು ಉದ್ದೇಶಿಸಿ ಟ್ರುಡೋ, ‘ಕುದುರೆ ಮೇಲೆ ತೆರದೆದೆಯೊಂದಿಗೆ ಸವಾರಿ ಮಾಡುತ್ತಿರುವ ನಮ್ಮೆಲ್ಲರ ಫೋಟೋಗಳು ಪ್ರದರ್ಶನಗೊಳ್ಳಬೇಕು,’ ಎಂದು ಹೇಳುತ್ತಾರೆ.

‘ನೀವು ಹೇಳಿದ್ದು ಸರಿ, ನಾನೂ ಅದನ್ನೇ ಹೇಳಬಯಸುತ್ತೇನೆ. ನಮ್ಮ ಮಾಂಸಖಂಡಗಳನ್ನೂ ಅವರಿಗೆ ತೋರಿಸಲೇ ಬೇಕು,’ ಎಂದು ಜಾನ್ಸನ್ ಕೂಡಲೇ ಉತ್ತರಿಸುತ್ತಾರೆ.

ಪುಟಿನ್ ಅವರ ಅರೆಬೆತ್ತಲೆ ಫೋಟೋಗಳನ್ನು ಕ್ರೆಮ್ಲಿನ್ ಆಗಾಗ ಹರಿಬಿಡುತ್ತಿರುತ್ತದೆ. ತಾನೊಬ್ಬ ಬಲಶಾಲಿ ವ್ಯಕ್ತಿ ಎಂದು ತೋರಿಸಿಕೊಳ್ಳುವ ಉಮೇದಿ ಪುಟಿನ್ ಗೆ ಇರೋದ್ರಿಂದ ಬಹಳ ಎಚ್ಚರದಿಂದ ಅವರು ಇಂಥ ಚಿತ್ರಗಳನ್ನು ವಿನ್ಯಾಸಗೊಳಿಸಿ ಹರಿಬಿಡಲಾಗುತ್ತದೆ. ರಷ್ಯಾದ ಅಧ್ಯಕ್ಷ ಟೇಕ್ವೊಂಡೊ ಮಾರ್ಷಲ್ ಆರ್ಟ್ ನಲ್ಲಿ ಪರಿಣಿತರು ಅನ್ನೋದು ಬಹಳ ಜನಕ್ಕೆ ಗೊತ್ತಿರಲಿಕ್ಕಿಲ್ಲ,’ ಎಂದು ಹಿಲ್ ವರದಿ ಮಾಡಿದೆ.

ಹಿಲ್ ನಲ್ಲಿ ವರದಿಯಾಗಿರುವ ಪ್ರಕಾರ ಬವಾರಾಯಿನ ಅಲ್ಪ್ಸ್ ನಲ್ಲಿ ನಡೆಯುತ್ತಿರುವ ಮೂರು ದಿನಗ: ಶೃಂಗಸಭೆಯ ಮೊದಲ ದಿನ ಟ್ರುಡೊ ಮತ್ತು ಬೋರಿಸ್ ಜಾನ್ಸನ್ ಜೋಕ್ ಮಾಡಿದರು. 2014 ರಲ್ಲಿ ರಷ್ಯ ದೇಶವು ಉಕ್ರೇನಿನ ಕ್ರಿಮಿಯಾ ದ್ವೀಪದ ಮೇಲೆ ಅತಿಕ್ರಮಣ ನಡೆಸಿದ ಮೇಲೆ ಅದನ್ನು ಈ ಗುಂಪಿನಿಂದ ಕಿತ್ತೊಗೆಯಲಾಯಿತು. ಅದಕ್ಕೂ ಮೊದಲು ಸದರಿ ಗುಂಪು ಜಿ8 ಎಂದು ಕರೆಸಿಕೊಳ್ಳುತಿತ್ತು.

ಯುಎಸ್, ಕೆನಡಾ, ಗ್ರೇಟ್ ಬ್ರಿಟನ್, ಜರ್ಮನಿ, ಇಟಲಿ, ಫ್ರಾನ್ಸ್ ಮತ್ತು ಜಪಾನ್ ದೇಶಗಳನ್ನೊಳಗೊಂಡ ಈ ಗುಂಪನ್ನು ಈಗ ಜಿ7 ರಾಷ್ಟ್ರಗಳ ಗುಂಪೆಂದು ಕರೆಯುತ್ತಾರೆ.

ಉಕ್ರೇನ್ ಮೇಲೆ ರಷ್ಯ ಈಗಲೂ ದಾಳಿ ಮುಂದುವರೆಸಿರುವ ಹಿನ್ನೆಲೆಯಲ್ಲಿ ಜಿ7 ಗುಂಪು ಆ ದೇಶದಿಂದ ಆಮದು ಮಾಡಿಕೊಳ್ಳುತ್ತಿದ್ದ ಚಿನ್ನದ ಮೇಲೆ ಹೊಸ ನಿರ್ಬಂಧಗಳನ್ನು ಹೇರಲಾಗುವುದೆಂದು ಯುಎಸ್ ಅಧ್ಯಕ್ಷ ಜೋ ಬೈಡೆನ್ ಹೇಳಿದರೆಂದು ಹಿಲ್ ವರದಿ ಮಾಡಿದೆ.

ರಷ್ಯಾ ಮೇಲಿನ ಒತ್ತಡ ಮತ್ತಷ್ಟು ಹೆಚ್ಚಿಸಲು, ಆ ದೇಶದ ಚಿನ್ನದ ಆಮದಿನ ಮೇಲೆ ನಿರ್ಬಂಧ ಹೇರಲಾಗುವುದು ಅಂತ ಅಮೇರಿಕ ಹೇಳಿದೆ.

ವಿಶ್ವದ 7 ಶ್ರೀಮಂತ ರಾಷ್ಟ್ರಗಳು ಸಭೆ ಸೇರಿರುವ ಬವಾರಾಯಿನ ಅಲ್ಪ್ಸ್ ನಲ್ಲಿ ಬೈಡೆನ್ ಅವರು, ‘ರಷ್ಯಾದಿಂದ ರಫ್ತಾಗುವ ಚಿನ್ನವನ್ನು ನಿಷೇಧಿಸಲಾಗುತ್ತದೆ. ಚಿನ್ನ ರಷ್ಯಾಗೆ ಕೊಟ್ಯಾಂತರ ವಿದೇಶಿ ವಿನಿಮಯ ಒದಗಿಸುತ್ತದೆ ಅಂತ ನಮಗೆ ಗೊತ್ತಿದೆ ಎಂದು ಜಿ7 ರಾಷ್ಟ್ರಗಳು ಘೋಷಿಸುತ್ತವೆ,’ ಎಂದು ಬೈಡೆನ್ ಹೇಳಿದರು.

ಇದಕ್ಕೂ ಮೊದಲು, ಟ್ವೀಟ್ ಒಂದನ್ನು ಮಾಡಿದ್ದ ಬೈಡೆನ್, ‘ಉಕ್ರೇನ್ ವಿರುದ್ಧ ನಡೆಸುತ್ತಿರುವ ತನ್ನ ಯುದ್ಧಕ್ಕೆ ನಿಧಿಯ ಅಗತ್ಯವಿರುವ ಹಣವನ್ನು ಕ್ರೋಢೀಕರಿಸಲು ಸಾಧ್ಯವಾಗದ ಹಾಗೆ ಯುನೈಟೆಡ್ ಸ್ಟೇಟ್ಸ್ ಪುಟಿನ್ ಮೇಲೆ ಅಭೂತಪೂರ್ವ ವೆಚ್ಚವನ್ನು ವಿಧಿಸಿದೆ. ಜಿ7 ರಾಷ್ಟ್ರಗಳು ಒಟ್ಟಾಗಿ ಅಲ್ಲಿನ ಪ್ರಮುಖ ರಫ್ತು ಆಗಿರುವ ರಷ್ಯಾದ ಚಿನ್ನದ ಆಮದನ್ನು ನಿಷೇಧಿಸುತ್ತೇವೆ ಎಂದು ಘೋಷಿಸುತ್ತವೆ. ಚಿನ್ನದ ರಫ್ತು ರಷ್ಯಾಕ್ಕೆ ಹಲವು ಶತಕೋಟಿ ಡಾಲರ್‌ಗಳನ್ನು ಸಂಗ್ರಹಿಸಲು ನೆರವಾಗುತಿತ್ತು,’ ಎಂದಿದ್ದಾರೆ.

ಗಮನಿಸಬೇಕಾದ ಅಂಶವೆಂದರೆ, ಈ ಕ್ರಮಗಳನ್ನು ಯುನೈಟೆಡ್ ಕಿಂಗ್‌ಡಮ್ ಆರಂಭಿಸಲಿದೆ. ಆದಾಗ್ಯೂ, ಹೆಸರು ಹೇಳಿಕೊಳ್ಳಲಿಚ್ಛಿಸದ ಯುಎಸ್ ಆಡಳಿತದ ಹಿರಿಯ ಪ್ರತಿನಿಧಿಯೊಬ್ಬರು ಸುದ್ದಿಗಾರರೊಂದಿಗೆ ಮಾತನಾಡಿ, ಚಿನ್ನದ ಆಮದು ನಿಷೇಧದ ಕುರಿತು ಜಿ7 ಮಂಗಳವಾರ ಅಧಿಕೃತ ಘೋಷಣೆ ಮಾಡಲಿದೆ.

ಜರ್ಮನ್ ಚಾನ್ಸ್ಲರ್ ಒಲಾಫ್ ಶೊಲ್ಜ್ ಮತ್ತು ಬೈಡನ್ ನಡುವೆ ನಡೆದ ಮಾತುಕತೆಯಲ್ಲಿ ಉಕ್ರೇನ್ ವಿಷಯವಾಗಿಯೇ ಹೆಚ್ಚು ಚರ್ಚೆಯಾಯಿತು ಎಂದು ಶ್ವೇತಭವನದಿಂದ ಬಿಡುಗಡೆಯಾಗಿರುವ ಹೇಳಿಕೆಯಲ್ಲಿ ತಿಳಿಸಲಾಗಿದೆ. ‘ನಾಯಕರು ಉಕ್ರೇನ್‌ನ ಸಾರ್ವಭೌಮತೆ ಮತ್ತು ಪ್ರಾದೇಶಿಕ ಸಮಗ್ರತೆಗೆ ತಮ್ಮ ಬದ್ಧತೆಯನ್ನು ಒತ್ತಿ ಹೇಳಿದ್ದಾರಲ್ಲದೆ, ರಷ್ಯಾದ ಆಕ್ರಮಣದ ವಿರುದ್ಧ ತನ್ನ ಪ್ರಾಂತೀಯ ಐಕ್ಯತೆಯನ್ನು ರಕ್ಷಿಸಿಸಕೊಳ್ಳಲು ಉಕ್ರೇನ್‌ಗೆ ಸಹಾಯ ಮಾಡಲು ಮಿಲಿಟರಿ, ಆರ್ಥಿಕ, ಮಾನವೀಯ ಮತ್ತು ರಾಜತಾಂತ್ರಿಕ ಬೆಂಬಲವನ್ನು ಮುಂದುವರೆಸಿದ್ದಾರೆ’ ಎಂದು ಶ್ವೇತಭವನದ ಹೇಳಿಕೆ ತಿಳಿಸುತ್ತದೆ.

ಉಕ್ರೇನ್‌ ಮೇಲೆ ರಷ್ಯ ಸಾರಿರುವ ಯುದ್ಧದ ಪರಿಣಾಮಗಳು ‘ಜಾಗತಿಕ ಆಹಾರ ಮತ್ತು ಇಂಧನ ಭದ್ರತೆಯ ಮೇಲೆ ಬೀರಬಹುದಾದ ಪ್ರಬಾವವನ್ನು ಕಡಿಮೆ ಮಾಡುವ ಬಗ್ಗೆಯೂ ನಾಯಕರು ಚರ್ಚಿಸಿದ್ದಾರೆ.’ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ:   PM Modi in Germany: ಪ್ರಧಾನಿ ಜರ್ಮನಿ ಪ್ರವಾಸ; ಜಿ7 ಶೃಂಗಸಭೆಯಲ್ಲಿ ವಿಶ್ವದ ನಾಯಕರನ್ನು ಭೇಟಿಯಾಗಲಿರುವ ನರೇಂದ್ರ ಮೋದಿ