ರಷ್ಯಾ-ಉಕ್ರೇನ್ ಯುದ್ಧ: ಉಕ್ರೇನ್​​ನ ಮಾಲ್​​ ಒಂದರ ಮೇಲೆ ಕ್ಷಿಪಣಿ ದಾಳಿ

ರಷ್ಯಾ-ಉಕ್ರೇನ್​ ಮಧ್ಯೆ ಯುದ್ಧ ಪ್ರಾರಂಭವಾಗಿ ಮೂರು ತಿಂಗಳು ಕಳೆದಿದ್ದು, ಇಂದು (ಜೂನ್​ 27) ರಂದು ರಷ್ಯಾ, ಪೂರ್ವ ಉಕ್ರೇನ್​​ನ  ನಗರವಾದ ಕ್ರೆಮೆನ್‌ಚುಕ್‌ನಲ್ಲಿರುವ ಮಾಲ್​​ ಒಂದರ ಮೇಲೆ ಕ್ಷಿಪಣಿ ದಾಳಿ ಮಾಡಿದೆ ಎಂದು ಉಕ್ರೇನ್​​ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಹೇಳಿದ್ದಾರೆ.

ರಷ್ಯಾ-ಉಕ್ರೇನ್ ಯುದ್ಧ: ಉಕ್ರೇನ್​​ನ ಮಾಲ್​​ ಒಂದರ ಮೇಲೆ ಕ್ಷಿಪಣಿ ದಾಳಿ
ಉಕ್ರೇನ್​​ ಅಧ್ಯಕ್ಷ ವೊಲೋಡಿಮಿರ್ ಝೆಲೆನ್ಸ್ಕೀ
TV9kannada Web Team

| Edited By: Vivek Biradar

Jun 27, 2022 | 9:32 PM

ಕೀವ್​​: ರಷ್ಯಾ-ಉಕ್ರೇನ್ (Russia-Ukraine)​ ಮಧ್ಯೆ ಯುದ್ಧ ಪ್ರಾರಂಭವಾಗಿ ಮೂರು ತಿಂಗಳು ಕಳೆದಿದ್ದು, ಇಂದು (ಜೂನ್​ 27)  ರಷ್ಯಾ, ಪೂರ್ವ ಉಕ್ರೇನ್​​ನ (East Ukraine)  ನಗರವಾದ ಕ್ರೆಮೆನ್‌ಚುಕ್‌ನಲ್ಲಿರುವ ಮಾಲ್​​ ಒಂದರ ಮೇಲೆ ಕ್ಷಿಪಣಿ ದಾಳಿ ಮಾಡಿದೆ ಎಂದು ಉಕ್ರೇನ್​​ ಅಧ್ಯಕ್ಷ ವೊಲೋಡಿಮಿರ್ ಝೆಲೆನ್ಸ್ಕೀ (volodymyr zelensky) ಹೇಳಿದ್ದಾರೆ. ದಾಳಿಯ ವೇಳೆ 1,000 ಕ್ಕೂ ಹೆಚ್ಚು ಜನರು ಶಾಪಿಂಗ್ ಮಾಲ್ (Shopping Mall) ​​ನಲ್ಲಿದ್ದರು ಎಂದು ಅವರು ಹೇಳಿದ್ದಾರೆ. ಆದರೆ ಸಾವುನೋವುಗಳ ವಿವರಗಳನ್ನು ನೀಡಲಿಲ್ಲ.  “ರಷ್ಯಾದಿಂದ ಸಭ್ಯತೆಯ ನಡೆ ಮತ್ತು ಮಾನವೀಯತೆಯನ್ನು ನಿರೀಕ್ಷಿಸುವುದು ಅಸಾಧ್ಯ ” ಎಂದು ಝೆಲೆನ್ಸ್ಕಿ ಟೆಲಿಗ್ರಾಮ್​​ನಲ್ಲಿ ಬರೆದಿದ್ದಾರೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada