ಬರ್ಮಿಂಗ್​​ಹ್ಯಾಮ್​ನಲ್ಲಿ ಭಾರೀ ಸ್ಫೋಟ; ಒಬ್ಬರ ಸ್ಥಿತಿ ಗಂಭೀರ, 6ರಿಂದ 7 ಮನೆಗಳು ಧ್ವಂಸ

ಕಿಂಗ್‌ಸ್ಟಾಂಡಿಂಗ್‌ನ ದುಲ್ವಿಚ್ ರಸ್ತೆಯಲ್ಲಿರುವ ಮನೆಯೊಂದರಲ್ಲಿ ಈ ಘಟನೆ ನಡೆದಿದೆ. ಸ್ಫೋಟ ಸಂಭವಿಸಿದ ಮನೆ ಸಂಪೂರ್ಣ ನಾಶವಾಗಿದೆ.

ಬರ್ಮಿಂಗ್​​ಹ್ಯಾಮ್​ನಲ್ಲಿ ಭಾರೀ ಸ್ಫೋಟ; ಒಬ್ಬರ ಸ್ಥಿತಿ ಗಂಭೀರ, 6ರಿಂದ 7 ಮನೆಗಳು ಧ್ವಂಸ
ಬರ್ಮಿಂಗ್​ಹ್ಯಾಮ್​ನಲ್ಲಿ ಸ್ಫೋಟImage Credit source: News18
Follow us
| Updated By: ಸುಷ್ಮಾ ಚಕ್ರೆ

Updated on:Jun 27, 2022 | 12:01 PM

ಬರ್ಮಿಂಗ್​ಹ್ಯಾಂ: ಭಾನುವಾರ ರಾತ್ರಿ ಸಂಭವಿಸಿದ ಭಾರೀ ಸ್ಫೋಟದಲ್ಲಿ ಬರ್ಮಿಂಗ್‌ಹ್ಯಾಮ್‌ನಲ್ಲಿರುವ ಮನೆಯೊಂದು ಸಂಪೂರ್ಣವಾಗಿ ನಾಶವಾಗಿದೆ. ಈ ಸ್ಫೋಟದ ಕಾರಣ ತಿಳಿದಿಲ್ಲ. ಇಂಗ್ಲೆಂಡ್ ಮೂಲದ ಮಾಧ್ಯಮಗಳ ಪ್ರಕಾರ, ತುರ್ತು ಸೇವೆಗಳು ಇನ್ನೂ ಕಾರ್ಯಾಚರಣೆಯನ್ನು ನಡೆಸುತ್ತಿವೆ. ಹತ್ತಿರದ ನಿವಾಸಿಗಳನ್ನು ಬೇರೆಡೆಗೆ ಸ್ಥಳಾಂತರಿಸಲಾಗುತ್ತಿದೆ. ಸ್ಕೈ ನ್ಯೂಸ್ ಮತ್ತು ಗಾರ್ಡಿಯನ್ ಪ್ರಕಾರ, ಈ ಸ್ಫೋಟದಿಂದ ಒಬ್ಬರು ತೀವ್ರವಾಗಿ ಗಾಯಗೊಂಡಿದ್ದಾರೆ ಮತ್ತು ನಾಲ್ವರಿಗೆ ಸ್ಥಳದಲ್ಲೇ ಚಿಕಿತ್ಸೆ ನೀಡಲಾಗಿದೆ.

ಕಿಂಗ್‌ಸ್ಟಾಂಡಿಂಗ್‌ನ ದುಲ್ವಿಚ್ ರಸ್ತೆಯಲ್ಲಿರುವ ಮನೆಯೊಂದರಲ್ಲಿ ಈ ಘಟನೆ ನಡೆದಿದೆ. ಸ್ಫೋಟ ಸಂಭವಿಸಿದ ಮನೆ ಸಂಪೂರ್ಣ ನಾಶವಾಗಿದೆ. ಸ್ಫೋಟದಿಂದ ಹಾನಿಗೀಡಾದ ಮನೆಗೆ ಹೊಂದಿಕೊಂಡಿರುವ ಕನಿಷ್ಠ 5ರಿಂದ 6 ಮನೆಗಳು ಸಹ ವಿವಿಧ ಹಂತದ ಹಾನಿಯನ್ನು ಅನುಭವಿಸಿವೆ. ಅನಿಲ ಸ್ಫೋಟವೇ ಇದಕ್ಕೆ ಕಾರಣ ಎಂದು ಅಧಿಕಾರಿಗಳು ಶಂಕಿಸಿದ್ದಾರೆ.

ಅವರ ಗಾಯಗಳ ಸಂಖ್ಯೆ ಮತ್ತು ತೀವ್ರತೆ ಸದ್ಯಕ್ಕೆ ತಿಳಿದಿಲ್ಲ” ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಸ್ಫೋಟದ ಶಬ್ದವು 7 ಕಿಮೀ ದೂರಕ್ಕೂ ಕೇಳಿತ್ತು. ಬರ್ಮಿಂಗ್​ಹ್ಯಾಮ್‌ನ ಉತ್ತರದಲ್ಲಿರುವ ಸುಟ್ಟನ್ ಕೋಲ್ಡ್‌ಫೀಲ್ಡ್ ನಿವಾಸಿಗಳು ಸ್ಫೋಟದ ಶಬ್ದವನ್ನು ಕೇಳಿದ್ದರು. ಈ ಪ್ರದೇಶದ ಕಡೆಗೆ ಜನರು ಹೊರಗೆ ಬಾರದಂತೆ ಎಚ್ಚರಿಕೆ ನೀಡಲಾಗಿದೆ.

ಇದನ್ನೂ ಓದಿ: ತಮಿಳುನಾಡು: ದಿಂಡಿಗಲ್ ಕಲೆಕ್ಟರ್ ಕಚೇರಿ ಎದುರು ಪಟಾಕಿ ಅಂಗಡಿ ಸ್ಫೋಟ, ಓರ್ವ ಸಾವು

ಈ ಸ್ಫೋಟದಲ್ಲಿ ಒಂದು ಮನೆ ನಾಶವಾಗಿದ್ದು, ಇತರ ಮನೆಗಳು ಭಾರೀ ಹಾನಿಗೊಳಗಾಗಿವೆ. ಕಾರುಗಳಿಗೂ ಹಾನಿಯಾಗಿದೆ, ಸಾವು-ನೋವುಗಳ ವರದಿಯಾಗಿವೆ. ಆದರೆ ಅವರ ಗಾಯಗಳ ಪ್ರಮಾಣ ಮತ್ತು ತೀವ್ರತೆಯ ಬಗ್ಗೆ ಇನ್ನೂ ತಿಳಿದಿಲ್ಲ ಎಂದು ಪೊಲೀಸ್ ಹೇಳಿಕೆ ತಿಳಿಸಿದೆ. ಇದೇ ವೇಳೆ ಸಮುದಾಯದ ನಿವಾಸಿಯೊಬ್ಬರು ಬೆಂಕಿ ಹೊತ್ತಿ ಉರಿಯುತ್ತಿದ್ದ ಮನೆಯಲ್ಲಿ ಸಿಲುಕಿದ್ದ ವ್ಯಕ್ತಿಯನ್ನು ಮನೆಯೊಳಗೆ ಹೋಗಿ ರಕ್ಷಿಸಿದ್ದಾರೆ.

Published On - 12:00 pm, Mon, 27 June 22