ಅಫ್ಘಾನಿಸ್ತಾನ (Afghanistan)ದ ಐಷಾರಾಮಿ ಹೋಟೆಲ್ಗಳು ಮತ್ತು ಅದರ ಸುತ್ತಮುತ್ತದ ಪ್ರದೇಶಗಳಲ್ಲಿ ತಂಗಿರುವ ತಮ್ಮ ದೇಶಗಳ ನಾಗರಿಕರಿಗೆ ಯುಎಸ್ ಹಾಗೂ ಇಂಗ್ಲೆಂಡ್ (US and UK) ದೇಶಗಳು ಎಚ್ಚರಿಕೆಯೊಂದನ್ನು ನೀಡಿವೆ. ಅದರಲ್ಲೂ ಅಫ್ಘಾನ್ನ ಕಾಬೂಲ್ (Kabul Hotels)ನಲ್ಲಿರುವ ಸೆರೆನಾ ಹೋಟೆಲ್ ಮತ್ತು ಅದರ ಸುತ್ತಲಿನ ಪ್ರದೇಶಗಳಲ್ಲಿ ತಂಗಿದ್ದರೆ, ಕೂಡಲೇ ಅಲ್ಲಿಂದ ಜಾಗ ಖಾಲಿ ಮಾಡಿ ಎಂದು ಎರಡೂ ದೇಶಗಳು ತಮ್ಮ ನಾಗರಿಕರಿಗೆ ತಿಳಿಸಿವೆ. ಹಾಗೇ, ಹೊಸದಾದ ಟ್ರಾವೆಲ್ ಅಡ್ವೈಸರಿಯನ್ನು ಬಿಡುಗಡೆ ಮಾಡಿವೆ. ಸೆರೆನಾ ಹೋಟೆಲ್ ಮೇಲೆ ಈ ಹಿಂದೆ ಕೂಡ ತಾಲಿಬಾನ್ ದಾಳಿ ಮಾಡಿತ್ತು. ಈಗಲೂ ಕೂಡ ಐಷಾರಾಮಿ ಹೋಟೆಲ್ ಮತ್ತು ಅದರ ಸುತ್ತಲಿನ ಪ್ರದೇಶಗಳ ಭದ್ರತೆಗೆ ಹೆಚ್ಚಿನ ಅಪಾಯ ಇದೆ. ಅದರಲ್ಲೂ ಈ ಬಾರಿ ಅಪಾಯ ಇರುವುದು ಐಸಿಸ್ ಉಗ್ರರಿಂದ ಎಂದು ಯುಕೆ ಮತ್ತು ಯುಎಸ್ಗಳು ಹೇಳಿವೆ.
ಆಗಸ್ಟ್ 15ರಂದು ಅಫ್ಘಾನಿಸ್ತಾವನ್ನು ತಾಲಿಬಾನಿಗಳು ವಶಪಡಿಸಿಕೊಂಡ ಬಳಿಕ, ಅಮೆರಿಕ, ಇಂಗ್ಲೆಂಡ್ ಸೇರಿ ಬಹುತೇಕ ಎಲ್ಲ ದೇಶಗಳ ನಾಗರಿಕರೂ ಅಲ್ಲಿಂದ ತಮ್ಮ ದೇಶಗಳಿಗೆ ತೆರಳಿದ್ದಾರೆ. ಆಯಾ ವಿದೇಶೀ ಸರ್ಕಾರಗಳೇ ಖುದ್ದಾಗಿ ತಮ್ಮ ನಾಗರಿಕರನ್ನು ಅಫ್ಘಾನ್ನಿಂದ ಕರೆಸಿಕೊಂಡಿವೆ. ಆದರೂ ಯುಎಸ್, ಯುಕೆಯ ಕೆಲ ಪತ್ರಕರ್ತರು, ಇನ್ನಿತರ ಬೆರಳೆಣಿಕೆಯಷ್ಟು ಜನರು ತಮ್ಮ ಕೆಲಸಕ್ಕಾಗಿ, ಅನಿವಾರ್ಯ ಕಾರಣಗಳಿಂದ ಇಲ್ಲಿಯೇ ಉಳಿದಿದ್ದಾರೆ. ಅವರಲ್ಲಿ ಹೀಗೆ ಐಷಾರಾಮಿ ಹೋಟೆಲ್ಗಳಲ್ಲಿ ಉಳಿದುಕೊಂಡವರೂ ಇದ್ದಾರೆ. ಅಂಥವರನ್ನು ಇದೀಗ ಎಚ್ಚರಿಸಲಾಗಿದೆ.
ಅಫ್ಘಾನಿಸ್ತಾನದ ಕುಂಡುಜ್ ನಗರದ ಮಸೀದಿಯೊಂದರಲ್ಲಿ ಕೆಲವೇ ದಿನಗಳ ಹಿಂದೆ ಭೀಕರ ಸ್ಫೋಟವಾಗಿದೆ. ಸ್ಫೋಟವಾದ ಸಮಯದಲ್ಲಿ ಮಸೀದಿಯಲ್ಲಿ 300 ಮಂದಿ ಇದ್ದರು. ಅದರಲ್ಲಿ 100 ಜನ ಮೃತಪಟ್ಟಿದ್ದಾರೆ. ಅನೇಕರು ಗಾಯಗೊಂಡಿದ್ದಾರೆ. ಈ ದುರಂತದ ಬೆನ್ನಲ್ಲೇ ಯುಎಸ್, ಯುಕೆಗಳು ಮತ್ತೊಮ್ಮೆ ತಮ್ಮ ನಾಗರಿಕರನ್ನು ಎಚ್ಚರಿಸಿವೆ. ಹೀಗೆ ಸ್ಫೋಟಗೊಂಡ ಮಸೀದಿ ಶಿಯಾ ಸಮುದಾಯಕ್ಕೆ ಸೇರಿದ್ದಾಗಿದೆ. ಈ ದುರಂತವನ್ನು ವಿಶ್ವದಾದ್ಯಂತ ಖಂಡಿಸಲಾಗಿದೆ.
ಇದನ್ನೂ ಓದಿ: ‘ಕೋಟಿಗೊಬ್ಬ 3’ ರಿಲೀಸ್ ಸಂದರ್ಭದಲ್ಲೇ ಕಿಚ್ಚನ ಪುತ್ಥಳಿ; ಉದ್ಘಾಟನೆಗೆ ಆಗಮಿಸಲಿದ್ದಾರೆ ಸುದೀಪ್
ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ರಿತು ರಾಜ್ ಅವಸ್ಥಿ ಪ್ರಮಾಣ ವಚನ ಸ್ವೀಕಾರ
Published On - 6:21 pm, Mon, 11 October 21