ಎರಡೂ ಡೋಸ್ ಕೊವಿಡ್ ಲಸಿಕೆ ಪಡೆಯದಿದ್ದರೆ ಕೆಲಸ ಇಲ್ಲ: ನ್ಯೂಜಿಲ್ಯಾಂಡ್ ಸರ್ಕಾರದ ಬಿಗಿ ನಿಯಮ

TV9 Digital Desk

| Edited By: guruganesh bhat

Updated on: Oct 11, 2021 | 12:46 PM

ಅಲ್ಲದೇ ಮಕ್ಕಳ ಜತೆಗೆ ಸಂಪರ್ಕ ಬೆಳೆಸುವ ಶಿಕ್ಷಕರು ಜನವರಿ 1ರ ಒಳಗೆ ಎರಡೂ ಡೋಸ್ ಕೊವಿಡ್ ಲಸಿಕೆ ಪಡೆದಿರಬೇಕು ಎಂದು ಸಹ ನ್ಯೂಜಿಲ್ಯಾಂಡ್ ಸರ್ಕಾರ ಸೂಚಿಸಿದೆ.

ಎರಡೂ ಡೋಸ್ ಕೊವಿಡ್ ಲಸಿಕೆ ಪಡೆಯದಿದ್ದರೆ ಕೆಲಸ ಇಲ್ಲ: ನ್ಯೂಜಿಲ್ಯಾಂಡ್ ಸರ್ಕಾರದ ಬಿಗಿ ನಿಯಮ
ಕೊವಿಡ್ ಲಸಿಕೆ
Follow us

ಡಿಸೆಂಬರ್ 1ರ ಒಳಗೆ ಎರಡೂ ಡೋಸ್ ಕೊವಿಡ್ ಲಸಿಕೆ ಹಾಕಿಸಿಕೊಳ್ಳದಿದ್ದರೆ ಉದ್ಯೋಗ ನಿರಾಕರಿಸುವುದಾಗಿ ಕೊವಿಡ್ ವಿರುದ್ಧ ಹೋರಾಡುತ್ತಿರುವ ಆರೋಗ್ಯ ಕ್ಷೇತ್ರದ ಸಿಬ್ಬಂದಿಗೆ ನ್ಯೂಜಿಲ್ಯಾಂಡ್ ಸರ್ಕಾರ ತಿಳಿಸಿದೆ. ವೈದ್ಯರು, ದಾದಿಯರು ಸೇರಿದಂತೆ ಆರೊಗ್ಯ ಕ್ಷೇತ್ರದ ಎಲ್ಲ ಸಿಬ್ಬಂದಿಗೂ ಈ ನಿಯಮ ಅನ್ವಯವಾಗಲಿದೆ ಎಂದು ನ್ಯೂಜಿಲ್ಯಾಂಡ್ ತಿಳಿಸಿದೆ.

ಕೊವಿಡ್ ಸೋಂಕು ಹರಡಬಹುದಾದ ಯಾವುದೇ ಸಾಧ್ಯತೆಗಳನ್ನೂ ಬಿಡುವುದಿಲ್ಲ. ಕೊವಿಡ್ ತಡೆಯಲು ಕೈಗೊಳ್ಳಬಹುದಾದ ಎಲ್ಲ ಕ್ರಮಗಳನ್ನೂ ಕೈಗೊಳ್ಳುವುದಾಗಿ ಕೊವಿಡ್ 19ಕ್ಕೆ ಸಂಬಂಧಿಸಿದ ಸಚಿವ ಮತ್ತು ಶಿಕ್ಷಣ ಸಚಿವರೂ ಆಗಿರುವ ಕ್ರಿಸ್ ಹಿಪ್ಕಿನ್ಸ್ ಸೂಚಿಸಿದ್ದಾರೆ. ಅಲ್ಲದೇ ಮಕ್ಕಳ ಜತೆಗೆ ಸಂಪರ್ಕ ಬೆಳೆಸುವ ಶಿಕ್ಷಕರು ಜನವರಿ 1ರ ಒಳಗೆ ಎರಡೂ ಡೋಸ್ ಕೊವಿಡ್ ಲಸಿಕೆ ಪಡೆದಿರಬೇಕು ಎಂದು ಸಹ ನ್ಯೂಜಿಲ್ಯಾಂಡ್ ಸರ್ಕಾರ ಸೂಚಿಸಿದೆ.

95 ಕೋಟಿ ಡೋಸ್ ಕೊವಿಡ್ ಲಸಿಕೆ ನೀಡಿಕೆ, ಮತ್ತೊಂದು ಮೈಲುಗಲ್ಲು ಸಾಧಿಸಿದ ಭಾರತ ಭಾನುವಾರದವರೆಗೆ ಭಾರತದಲ್ಲಿ 95 ಕೋಟಿಗೂ ಹೆಚ್ಚು ಕೊರೊನಾವೈರಸ್ ಲಸಿಕೆಗಳನ್ನು(coronavirus vaccines) ನೀಡಲಾಗಿದೆ. ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ (Mansukh Mandaviya)ಟ್ವಿಟರ್​​​ನಲ್ಲಿ ಸುದ್ದಿಯನ್ನು ಹಂಚಿಕೊಂಡಿದ್ದು ಭಾರತವು 100 ಕೋಟಿ ಕೊವಿಡ್ -19 ಲಸಿಕೆಗಳನ್ನು ನೀಡಲು ಹತ್ತಿರವಾಗಿದೆ ಎಂದು ಹೇಳಿದರು. “ವಿಶ್ವದ ಅತಿದೊಡ್ಡ ಯಶಸ್ವಿ ವ್ಯಾಕ್ಸಿನೇಷನ್ ಅಭಿಯಾನವು ಭರದಿಂದ ಸಾಗಿದೆ. ಭಾರತವು 95 ಕೋಟಿ ಕೊವಿಡ್ 19 ಲಸಿಕೆ ಡೋಸ್‌ಗಳ ನೀಡಿಕೆ ಪೂರ್ಣಗೊಳಿಸಿದೆ. 100 ಕೋಟಿ ಲಸಿಕೆ ಡೋಸ್‌ಗಳ ನಿರ್ವಹಣೆ ವೇಗವಾಗಿ ಸಾಗುತ್ತಿದೆ. ಶೀಘ್ರವಾಗಿ ಲಸಿಕೆ ಪಡೆಯಿರಿ ಮತ್ತು ನಿಮ್ಮ ಸ್ನೇಹಿತರು ಮತ್ತು ಕುಟುಂಬವನ್ನು ಅದೇ ರೀತಿ ಮಾಡಲು ಪ್ರೋತ್ಸಾಹಿಸಿ!”ಎಂದು ಹೇಳಿದ್ದಾರೆ.

ಇದನ್ನೂ ಓದಿ: 

95 ಕೋಟಿ ಡೋಸ್ ಕೊವಿಡ್ ಲಸಿಕೆ ನೀಡಿಕೆ, ಮತ್ತೊಂದು ಮೈಲುಗಲ್ಲು ಸಾಧಿಸಿದ ಭಾರತ: ಮಾಂಡವಿಯಾ 

Malaria vaccine ಮಕ್ಕಳಿಗಾಗಿ ಪ್ರಪಂಚದ ಮೊದಲ ಮಲೇರಿಯಾ ಲಸಿಕೆಯ ಬಳಕೆಗೆ ವಿಶ್ವ ಆರೋಗ್ಯ ಸಂಸ್ಥೆ ಶಿಫಾರಸು

ತಾಜಾ ಸುದ್ದಿ

Related Stories

Click on your DTH Provider to Add TV9 Kannada