ಲಂಡನ್ ಬ್ರಿಡ್ಜ್ ಬಳಿ ಚಾಕುವಿನಿಂದ ಉಗ್ರರ ದಾಳಿ, ಇಬ್ಬರು ಸಾವು
ಲಂಡನ್: ಇಂಗ್ಲೆಂಡ್ನ ಲಂಡನ್ ಬ್ರಿಡ್ಜ್ ಸಮೀಪ ಬ್ಲ್ಯಾಕ್ ಡ್ರೆಸ್ ಧರಿಸಿದ್ದ ಇಬ್ಬರು ಉಗ್ರರು ತಮ್ಮ ಬಳಿಯಿದ್ದ ಚಾಕುವಿನಿಂದ ಜನರ ಮೇಲೆ ಮನಬಂದಂತೆ ಅಟ್ಯಾಕ್ ಮಾಡಿದ್ದಾರೆ. ಜನನಿಬಿಡ ಪ್ರದೇಶವನ್ನೇ ಟಾರ್ಗೆಟ್ ಮಾಡಿ ಕ್ಷಣಾರ್ಧದಲ್ಲಿ ಐವರಿಗೆ ಚಾಕು ಇರಿದಿದ್ದಾರೆ. ಘಟನೆಯಲ್ಲಿ ಇಬ್ಬರು ಮೃತಪಟ್ಟಿದ್ದು, ಮೂವರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಸ್ಥಳಕ್ಕೆ ಆಗಮಿಸಿದ ಲಂಡನ್ ಪೊಲೀಸರು ಗುಂಡು ಹಾರಿಸಿ ಓರ್ವ ಉಗ್ರನನ್ನು ಹತ್ಯೆ ಮಾಡಿದ್ದಾರೆ. ಪರಾರಿಯಾಗಲು ಯತ್ನಿಸಿದ್ದ ಮತ್ತೋರ್ವ ಉಗ್ರನನ್ನ ಬಂಧಿಸಿದ್ದಾರೆ. ಲಂಡನ್ ಮೆಟ್ರೋ ಪಾಲಿಟನ್ ಪೊಲೀಸರು ಇದು ಉಗ್ರರ ದಾಳಿ ಅಂತ […]
ಲಂಡನ್: ಇಂಗ್ಲೆಂಡ್ನ ಲಂಡನ್ ಬ್ರಿಡ್ಜ್ ಸಮೀಪ ಬ್ಲ್ಯಾಕ್ ಡ್ರೆಸ್ ಧರಿಸಿದ್ದ ಇಬ್ಬರು ಉಗ್ರರು ತಮ್ಮ ಬಳಿಯಿದ್ದ ಚಾಕುವಿನಿಂದ ಜನರ ಮೇಲೆ ಮನಬಂದಂತೆ ಅಟ್ಯಾಕ್ ಮಾಡಿದ್ದಾರೆ. ಜನನಿಬಿಡ ಪ್ರದೇಶವನ್ನೇ ಟಾರ್ಗೆಟ್ ಮಾಡಿ ಕ್ಷಣಾರ್ಧದಲ್ಲಿ ಐವರಿಗೆ ಚಾಕು ಇರಿದಿದ್ದಾರೆ. ಘಟನೆಯಲ್ಲಿ ಇಬ್ಬರು ಮೃತಪಟ್ಟಿದ್ದು, ಮೂವರು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಸ್ಥಳಕ್ಕೆ ಆಗಮಿಸಿದ ಲಂಡನ್ ಪೊಲೀಸರು ಗುಂಡು ಹಾರಿಸಿ ಓರ್ವ ಉಗ್ರನನ್ನು ಹತ್ಯೆ ಮಾಡಿದ್ದಾರೆ. ಪರಾರಿಯಾಗಲು ಯತ್ನಿಸಿದ್ದ ಮತ್ತೋರ್ವ ಉಗ್ರನನ್ನ ಬಂಧಿಸಿದ್ದಾರೆ. ಲಂಡನ್ ಮೆಟ್ರೋ ಪಾಲಿಟನ್ ಪೊಲೀಸರು ಇದು ಉಗ್ರರ ದಾಳಿ ಅಂತ ಖಚಿತಪಡಿಸಿದ್ದಾರೆ. ಇದೇ ಜಾಗದಲ್ಲಿ 2017ರ ಜೂನ್‌ನಲ್ಲಿ ಭಯೋತ್ಪಾದಕರ ದಾಳಿ ನಡೆದು 8 ಮಂದಿ ಸಾವಿಗೀಡಾಗಿದ್ದರು.
ಲಂಡನ್ನಲ್ಲಿ ಥೇಮ್ಸ್ ನದಿ ಸೇತುವೆ ಬಳಿಯೇ ಉಗ್ರರು ಟಾರ್ಗೆಟ್ ಮಾಡಿ ಅಟ್ಯಾಕ್ ಮಾಡಿರೋದು ಲಂಡನ್ ಜನರನ್ನ ಬೆಚ್ಚಿ ಬೀಳಿಸಿದೆ. ಉಗ್ರರು ಎಲ್ಲೆಲ್ಲಿ ಅಟ್ಯಾಕ್ ಮಾಡೋಕೆ ಸಂಚು ರೂಪಿಸಿದ್ದಾರೆ ಅನ್ನೋ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.