ಲಂಡನ್: ಊಬರ್ ಸಂಸ್ಥೆಯಡಿಯಲ್ಲಿ ಕಾರು ಚಲಾಯಿಸುವವರನ್ನು ನೌಕರರು ಎಂದು ಪರಿಗಣಿಸುವಂತೆ ಲಂಡನ್ ಸುಪ್ರೀಂಕೋರ್ಟ್ ಊಬರ್ ಸಂಸ್ಥೆಗೆ ಆದೇಶಿಸಿದೆ. ಈ ಮೂಲಕ ಹಲವು ವರ್ಷಗಳಿಂದ ಕೋರ್ಟ್ನಲ್ಲಿ ನಡೆಯುತ್ತಿದ್ದ ಪ್ರಕರಣದಲ್ಲಿ ಊಬರ್ಗೆ ಸೋಲುಂಟಾಗಿದೆ.
ಊಬರ್ ಚಾಲಕರನ್ನು ಸಂಸ್ಥೆ ಸಿಬ್ಬಂದಿ ಎಂದು ಪರಿಗಣಿಸಿಲ್ಲ. ಬದಲಿಗೆ ಅವರನ್ನು ಗುತ್ತಿಗೆ ನೌಕರರ ರೀತಿಯಲ್ಲಿ ನಡೆಸಿಕೊಳ್ಳುತ್ತಿದೆ. ಈಗ ಇಂಗ್ಲೆಂಡ್ ಕೋರ್ಟ್ ನೀಡಿದ ಹೊಸ ಆದೇಶದ ಅಡಿಯಲ್ಲಿ, ಊಬರ್ ಸಿಬ್ಬಂದಿಗೆ ಕನಿಷ್ಠ ವೇತನ, ರಜೆ, ಅನಾರೋಗ್ಯ ರಜೆಯ ಹಕ್ಕು ಹಾಗೂ ಉದ್ಯೋಗ ಭದ್ರತೆ ಒದಗಿಸುವುದು ಕಡ್ಡಾಯವಾಗಿದೆ.
ಊಬರ್ ಸಂಸ್ಥೆ ಚಾಲಕರು 2016ರಲ್ಲಿ ಪ್ರಕರಣವೊಂದನ್ನು ದಾಖಲು ಮಾಡಿದ್ದರು. ನಮ್ಮನ್ನು ಹೆಚ್ಚು ದುಡಿಸಿಕೊಳ್ಳುತ್ತಾರೆ ಮತ್ತು ಕಡಿಮೆ ವೇತನ ನೀಡುತ್ತಾರೆ. ಹೀಗಾಗಿ, ನಮ್ಮನ್ನು ನೌಕರರು ಎಂದು ಪರಿಗಣಿಸುವಂತೆ ಕೋರ್ಟ್ಗೆ ಅರ್ಜಿ ಸಲ್ಲಿಕೆ ಮಾಡಲಾಗಿತ್ತು. ಈಗ ಊಬರ್ ಸಂಸ್ಥೆಯ ಪರವಾಗಿ ತೀರ್ಪು ಹೊರ ಬಿದ್ದಿದೆ.
ಕೋರ್ಟ್ ತೀರ್ಪಿನ ಬಗ್ಗೆ ಊಬರ್ ಸಂಸ್ಥೆ ಪ್ರತಿಕ್ರಿಯೆ ನೀಡಿದೆ. ನಾವು ಕೋರ್ಟ್ ಆದೇಶವನ್ನು ಗೌರವಿಸುತ್ತೇವೆ ಎಂದು ಹೇಳಿದೆ. ಈ ಮೂಲಕ ಕೋರ್ಟ್ ಆದೇಶವನ್ನು ಅನ್ವಯ ಮಾಡಿಕೊಳ್ಳುವ ಸೂಚನೆ ನೀಡಿದೆ.
ಇಂಗ್ಲೆಂಡ್ನಲ್ಲಿ ಹೊರಡಿಸಿರುವ ಆದೇಶ ವಿಶ್ವಾದ್ಯಂತ ಪರಿಣಾಮ ಬೀರಲಿದೆ. ಭಾರತದಲ್ಲೂ ಸದ್ಯ ಚಾಲಕರನ್ನು ಊಬರ್ ಸಂಸ್ಥೆ ಗುತ್ತಿಗೆ ಆಧಾರದ ಮೇಲೆ ತೆಗೆದುಕೊಂಡಿದೆ. ಹೀಗಾಗಿ, ಭಾರತ ಸೇರಿ ದೇಶದ ಅನೇಕ ರಾಷ್ಟ್ರಗಳಲ್ಲಿ ಊಬರ್ ಚಾಲಕರು ಕೋರ್ಟ್ನಲ್ಲಿ ಇದೇ ಮಾದರಿಯ ಅರ್ಜಿ ಸಲ್ಲಿಕೆ ಮಾಡಿ ತಮ್ಮನ್ನು ಸಿಬ್ಬಂದಿ ಎಂದು ಪರಿಗಣಿಸುವಂತೆ ಕೋರಬಹುದಾಗಿದೆ. ಇತ್ತೀಚೆಗೆ ದೆಹಲಿಯಲ್ಲಿ ಊಬರ್-ಓಲಾ ಚಾಲಕರು ಪ್ರತಿಭಟನೆಗೆ ಇಳಿದಿದ್ದರು. ಪ್ರತಿ ಕಿ.ಮೀ.ಗೆ ಸಂಸ್ಥೆಗೆ ತೆಗೆದುಕೊಳ್ಳುತ್ತಿರುವ ಕಮಿಷನ್ ಹಣವನ್ನು ಕಡಿಮೆ ಮಾಡಬೇಕು ಎನ್ನುವುದು ಚಾಲಕರ ಆಗ್ರಹವಾಗಿತ್ತು.
ಇದನ್ನೂ ಓದಿ: ಇದೇನಿದು Koo.. ಏನಿದರ ವಿಶೇಷತೆ? ಕೇಂದ್ರ ಸರ್ಕಾರ ಈ ಆ್ಯಪ್ಗೆ ಮಹತ್ವ ಕೊಡ್ತಿರೋದೇಕೆ?