ಕೆಲವೊಂದು ಘಟನೆಗಳನ್ನು ನೋಡಿದಾಗ ಪ್ರೀತಿಗೆ ಕಣ್ಣಿಲ್ಲ (Love is Blind) ಎಂಬ ಮಾತು ಖಂಡಿತವಾಗಿಯೂ ಸತ್ಯ ಎನಿಸುತ್ತದೆ. ಧರ್ಮ, ದೇಶ, ಭಾಷೆ, ವಯಸ್ಸಿನ ಮಿತಿಗಳನ್ನು ದಾಟಿ ಕೆಲವೊಂದು ಸಂಬಂಧಗಳು ಹುಟ್ಟಿಕೊಂಡು ಬಿಡುತ್ತವೆ. ಪಾಕಿಸ್ತಾನದ (Pakistan) 70 ವರ್ಷದ ವೃದ್ಧರೊಬ್ಬರು 19 ವರ್ಷದ ಯುವತಿಯನ್ನು ಪ್ರೀತಿಸಿ, ಹಠ ಹಿಡಿದು ಆಕೆಯನ್ನೇ ಮದುವೆಯಾಗಿದ್ದಾರೆ. ವಯಸ್ಸಿನ ಮಿತಿ ದಾಟಿ ಈ ಪ್ರೇಮಿಗಳು ಈಗ ದಂಪತಿಯಾಗಿದ್ದಾರೆ.
ಪಾಕಿಸ್ತಾನದ ಲಿಯಾಕತ್ ಅಲಿ ಎಂಬ 70 ವರ್ಷದ ವ್ಯಕ್ತಿ ಮತ್ತು ಶುಮೈಲಾ ಅಲಿ ಎಂಬ 19 ವರ್ಷದ ಯುವತಿ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ, ಅವರ ಪ್ರೀತಿಗೆ ವಯಸ್ಸು ದೊಡ್ಡ ಅಡ್ಡಿಯಾಗಿತ್ತು. ಪಾಕಿಸ್ತಾನಿ ಯೂಟ್ಯೂಬರ್ ಸೈಯದ್ ಬಸಿತ್ ಅಲಿ ಇವರಿಬ್ಬರ ಪ್ರೇಮಕತೆಯನ್ನು ಯೂಟ್ಯೂಬ್ನಲ್ಲಿ ಅಪ್ಲೋಡ್ ಮಾಡಿದ ನಂತರ ಈ ಜೋಡಿ ಸಾಮಾಜಿಕ ಮಾಧ್ಯಮದಲ್ಲಿ ಭಾರೀ ಗಮನ ಸೆಳೆದಿದ್ದಾರೆ.
ಇದನ್ನೂ ಓದಿ: Crime News: ಪ್ರೀತಿಯ ನಾಯಿಗೆ ಊಟ ಹಾಕದಿದ್ದಕ್ಕೆ ಕಸಿನ್ಗೆ ಹೊಡೆದು ಕೊಂದ ಯುವಕ!
ತನಗಿಂತಲೂ ಸುಮಾರು 50 ವರ್ಷ ದೊಡ್ಡ ವ್ಯಕ್ತಿಯೊಂದಿಗೆ ಮದುವೆಯಾಗಿರುವ ಶುಮೈಲಾ ಅಲಿ ಇದೀಗ ಬಹಳ ಖುಷಿಯಾಗಿದ್ದಾರೆ. ಆಕೆಯ ಅಜ್ಜನ ವಯಸ್ಸಿನ ವ್ಯಕ್ತಿಯನ್ನು ಮದುವೆಯಾಗಲು ನಿರ್ಧರಿಸಿದ ಶುಮೈಲಾಳ ಮದುವೆಗೆ ಆಕೆಯ ಮನೆಯವರು ಒಪ್ಪಿರಲಿಲ್ಲ. ಆದರೂ ಹಠ ಬಿಡದ ಆಕೆ ಮದುವೆಯಾಗಿದ್ದಾಳೆ. ಅಂದಹಾಗೆ, ಇವರಿಬ್ಬರ ಪ್ರೇಮಕತೆ ಶುರುವಾಗಿದ್ದೇ ಒಂದು ರೋಚಕ. ಬೆಳಗ್ಗೆ ವಾಕಿಂಗ್ ಹೋಗುವಾಗ ಲಿಯಾಕತ್ ಅಲಿಯನ್ನು ಭೇಟಿಯಾದ ಶುಮೈಲಾ ಬಳಿಕ ಆತನನ್ನು ಭೇಟಿಯಾಗಲೆಂದೇ ವಾಕಿಂಗ್ಗೆ ಹೋಗುತ್ತಿದ್ದರು. ಆ ವಾಕಿಂಗ್ ಅವರಿಬ್ಬರ ಬದುಕಿಗೆ ಹೊಸ ತಿರುವು ನೀಡಿತು. ಪಾರ್ಕ್ನಲ್ಲಿ ಒಟ್ಟಿಗೇ ವಾಕಿಂಗ್ ಮಾಡುತ್ತಿದ್ದ ಅವರಿಬ್ಬರೂ ಇದೀಗ ಒಟ್ಟಿಜೇ ಜೀವನದ ಹೆಜ್ಜೆಗಳನ್ನು ಇಡುತ್ತಿದ್ದಾರೆ.
ಲಾಹೋರ್ ಮೂಲದ ಈ ದಂಪತಿ ತಮ್ಮ ವಯಸ್ಸಿನ ಮಿತಿಯ ನಡುವೆಯೂ ಸಂತೋಷದಿಂದ ಸಂಸಾರ ನಡೆಸುತ್ತಿದ್ದಾರೆ. ಶುಮೈಲಾಳನ್ನು ಇಷ್ಟಪಟ್ಟ ಲಿಯಾಕತ್ ಅಲಿ ಆಕೆಗೆ ಪ್ರೇಮ ನಿವೇದನೆ ಮಾಡಿದ್ದರು. ಅದಕ್ಕೆ ಆಕೆಯೂ ಒಪ್ಪಿಗೆ ನೀಡಿದ್ದಳು. ಪ್ರೀತಿ ಹೇಗೆ ಹುಟ್ಟುತ್ತದೆ ಎಂಬುದನ್ನು ಯಾರೂ ಹೇಳಲು ಸಾಧ್ಯವಿಲ್ಲ ಎಂಬುದು ಅವರ ಸ್ವಂತ ಅನುಭವದ ಮಾತು.
ಇದನ್ನೂ ಓದಿ: ನಾಗಾಲ್ಯಾಂಡ್ ಸಿಎಂ ಪುತ್ರಿಯ ಮದುವೆಯಲ್ಲಿ ಕುಣಿದ ಸಚಿವ ತೆಮ್ಜೆನ್ ಇಮ್ನಾ ಅಲೋಂಗ್, ವಿಡಿಯೊ ವೈರಲ್
ಮೊದಲು ಅವರಿಬ್ಬರ ಮದುವೆಯನ್ನು ವಿರೋಧಿಸಿದ್ದ ಪೋಷಕರು ಇದೀಗ ಒಪ್ಪಿ, ಹರಸಿದ್ದಾರೆ. ನಾನು ವಯಸ್ಸಿನಲ್ಲಿ ದೊಡ್ಡವನಾದರೂ ಹೃದಯದಲ್ಲಿ ಬಹಳ ಚಿಕ್ಕವನು ಎಂದು ಹೇಳುವ 70 ವರ್ಷದ ಲಿಯಾಕತ್ ತಮ್ಮ ಹೆಂಡತಿಯನ್ನು ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದಾರೆ. ಮದುವೆಗೆ ವಯಸ್ಸು ಮುಖ್ಯವಲ್ಲ, ಕಾನೂನುಬದ್ಧವಾಗಿ ಮದುವೆಯಾಗಲು ಅವಕಾಶವಿರುವ ಯಾರಾದರೂ ಮದುವೆಯಾಗಬಹುದು ಎಂಬುದು ಅವರ ಮಾತು.